ರತನ್ ಟಾಟಾಗೆ ಮುಕೇಶ್ ಅಂಬಾನಿ ಸವಾಲು; Zudioಗೆ ಟಕ್ಕರ್ ಕೊಡುತ್ತಾ ರಿಲಯನ್ಸ್ ?

Published : Aug 20, 2024, 07:22 PM IST
ರತನ್ ಟಾಟಾಗೆ ಮುಕೇಶ್ ಅಂಬಾನಿ ಸವಾಲು; Zudioಗೆ ಟಕ್ಕರ್ ಕೊಡುತ್ತಾ ರಿಲಯನ್ಸ್ ?

ಸಾರಾಂಶ

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಉದ್ಯಮ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ವ್ಯಾಪಾರವನ್ನು ವಿಸ್ತರಿಸಿಕೊಳ್ಳುತ್ತಿದೆ. ಇದೀಗ ಟಾಟಾ ಪ್ರಾಬಲ್ಯ ಹೊಂದಿರುವ ವಲಯಕ್ಕೆ ರಿಲಯನ್ಸ್ ಎಂಟ್ರಿ ಕೊಡಲು ಸಜ್ಜಾಗುತ್ತಿದೆ

ಮುಂಬೈ: ಏಷಿಯಾದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಫಾಸ್ಟ್ ಫ್ಯಾಶನ್ ಮಾರುಕಟ್ಟೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಆದ್ರೆ ಟಾಟಾ ಗ್ರೂಪ್ ಈಗಾಗಲೇ ಫ್ಯಾಶನ್ ಮಾರುಕಟ್ಟೆಯಲ್ಲಿ ಹಿಡಿತವನ್ನು ಹೊಂದಿದ್ದು, ಇದು ರಿಲಯನ್ಸ್ ಸಂಸ್ಥೆಗೆ ದೊಡ್ಡ ಸವಾಲು ಆಗಿದೆ. ತನ್ನದೇ ಸ್ಥಾಪಿತ ಮಾರುಕಟ್ಟೆ ಹೊಂದಿರುವ ಟಾಟಾಗೆ ಎದುರಾಗಿ ರಿಲಯನ್ಸ್ ನಿಲ್ಲಬೇಕಿದೆ. ಟಾಟಾ ಗ್ರೂಪ್‌ನ ಟ್ರೆಂಟ್ ಲಿಮಿಟೆಡ್ ಕೋವಿಡ್ ಸಮಯದಲ್ಲಿಯೂ ಉತ್ತಮ ವಹಿವಾಟು ನಡೆಸಿತ್ತು. ಕೋವಿಡ್ ಬಳಿಕ ಮಾರಾಟ ಮೂರುಪಟ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಒಟ್ಟಾರೆ ಲಾಭದ ಪ್ರಮಾಣ 12 ಪಟ್ಟು ಹೆಚ್ಚಾಗಿದೆ. ಫ್ಯಾಶನ್ ಲೋಕಕ್ಕೆ ಕಾಲಿಡಲು ಮುಂದಾಗುತ್ತಿರುವ ಅಂಬಾನಿ, ಟಾಟಾ ಇಂಡಸ್ಟ್ರಿಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.

ಟಾಟಾ ಇಂಡಸ್ಟ್ರೀಸ್ ಅವರ ಫ್ಯಾಶನ್ ಬ್ರಾಂಡ್ ಝುಡಿಯೋ ಮಧ್ಯಮ ವರ್ಗದ ಜನರ ನೆಚ್ಚಿನ ಶಾಪಿಂಗ್ ಸ್ಥಳವಾಗಿದೆ. ಜುಡಿಯೋ ಫ್ಯಾಶನ್ ತನ್ನ ಮಾರಾಟವನ್ನು ದಿನದಿಂದ ದಿನಕ್ಕೆ ಹೆಚ್ಚಳ ಮಾಡಿಕೊಳ್ಳುತ್ತಿದೆ. ಅದರಲ್ಲಿಯೂ ಯುವ ಸಮುದಾಯವನ್ನು ತನ್ನತ್ತ ಸೆಳೆಯುವಲ್ಲಿ ಝಡಿಯೋ ಯಶಸ್ವಿಯಾಗಿದೆ. ಇದೀಗ ಮುಕೇಶ್ ಅಂಬಾನಿ ಇದೇ ಮಾದರಿಯಲ್ಲಿ ಫ್ಯಾಶನ್ ಲೋಕಕ್ಕೆ ಕಾಲಿಡಲು ಮುಂದಾಗುತ್ತಿದ್ದಾರೆ ಎಂದು ವರದಿಯಾಗಿದೆ. 

42,000 ಉದ್ಯೋಗಿಗಳಿಗೆ ಗೇಟ್‌ ಪಾಸ್ ಕೊಟ್ಟ ರಿಲಯನ್ಸ್ ಉದ್ಯಮ

ಫ್ಯಾಶನ್ ಮಾರುಕಟ್ಟೆಯನ್ನು ಆಕ್ರಮಣಕಾರಿಯಾಗಿ ಪ್ರವೇಶ ಮಾಡಬೇಕು ಎಂಬ ಉದ್ದೇಶದಿಂದ  ಚೀನಾದ ಇ-ಕಾಮರ್ಸ್ ಶಿನ್ ಭಾರತಕ್ಕೆ ಮರಳಿ ತಂದಿದ್ದಾರೆ. 2020ರಲ್ಲಿ ಭಾರತ-ಚೀನಾ ನಡುವೆ ಗಡಿ ವಿವಾದ ಉಂಟಾಗಿದ್ದರಿಂದ ನಮ್ಮ ದೇಶದಲ್ಲಿ ಶಿನ್ ಬ್ಯಾನ್ ಆಗಿತ್ತು. ಶಿನ್ ಐಪಿಓ ತರಲು ಮುಂದಾಗಿದ್ದು, ಈ ಕಾರಣದಿಂದಲೂ ಮುಕೇಶ್ ಅಂಬಾನಿ ಇದರ ಜೊತೆ ವ್ಯವಹಾರಿಕ ಒಪ್ಪಂದಕ್ಕೆ ಮುಂದಾಗಿದ್ದಾರೆ. 

ಝುಡಿಯೋಗೆ ಟಕ್ಕರ್ ಕೊಡಲು ಅಂಬಾನಿ 'ಯೂಸ್ಟ್' ಹೆಸರಿನ  ಸ್ಟೋರ್ ಶುರು ಮಾಡಿದ್ದರು. ಯೂಸ್ಟ್ ಸ್ಟೋರ್‌ನಲ್ಲಿ ಎಲ್ಲಾ  ವಸ್ತುಗಳು 999 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಆದ್ರೆ ಇದು ಸಕ್ಸಸ್ ಆಗಲಿಲ್ಲ. ಜೂನ್ ತ್ರೈಮಾಸಿಕದಲ್ಲಿ ರಿಲಯನ್ಸ್ ರಿಟೇಲ್‌ನ ವರ್ಷದಿಂದ ವರ್ಷಕ್ಕೆ ಮಾರಾಟವು ಕೇವಲ 8% ರಷ್ಟು ಮಾತ್ರ ಬೆಳೆದಿದೆ. ಈ ಬಾರಿ ರಿಲಯನ್ಸ್ ರೀಟೈಲ್‌ನಲ್ಲಿ ಹೆಚ್ಚು ಉದ್ಯೋಗ ಕಡಿತವಾಗಿದೆ. ಇಷ್ಟು ಮಾತ್ರವಲ್ಲದೇ ರಿಲಯನ್ಸ್ ಟ್ರೆಂಡ್ ಎಂಬ ಶಾಪಿಂಗ್ ಮಾಲ್‌ಗಳನ್ನು ಹೊಂದಿದೆ. ಮಹಾನಗರಗಳ ಜೊತೆಯಲ್ಲಿ ಮೂರನೇ ದರ್ಜೆಯ ಪಟ್ಟಣಗಳಿಗೂ ರಿಲಯನ್ಸ್ ಟ್ರೆಂಡ್ ಕಾಲಿಟ್ಟಿದೆ. ಆಜಿಯೋ ಆನ್‌ಲೈನ್ ಪ್ಲಾಟ್‌ಫಾರಂನ್ನ ಸಹ ರಿಲಯನ್ಸ್ ಹೊಂದಿದೆ.

ಭಾರತದಲ್ಲಿ ಹೆಚ್ಚು ಟ್ಯಾಕ್ಸ್ ಪಾವತಿದಾರರು ಯಾರು? ಅಂಬಾನಿ, ಅದಾನಿ ಇವರಲ್ಲಿ ಭಾರತ ಸರ್ಕಾರದ ಖಜಾನೆ ತುಂಬಿಸೋರು ಯಾರು? 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!