
Foxconn investment in India: ಒಪ್ಪಂದದ ಪ್ರಕಾರ ಐಫೋನ್ ಉತ್ಪದನಾ ಘಟಕ ಭಾರತದಲ್ಲಿ ಬೃಹತ್ ಸ್ಥಾವರ ನಿರ್ಮಿಸಲಿದೆ. ಐಫೋನ್ ಜೋಡಣೆಯ ಘಟಕ ನಿರ್ಮಾಣದ ಸಿದ್ಧತೆಯಲ್ಲಿದೆ. ಈ ಸಂಬಂಧ ಫಾಕ್ಸ್‌ಕಾನ್ ಸಿಇಓ ಯಂಗ್ ಲಿಯೂ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಫಾಕ್ಸ್‌ಕಾನ್ ಭಾರತದಲ್ಲಿ ಐಫೋನ್ ಅಸೆಂಬ್ಲಿ ಪ್ಲಾಂಟ್ ನಿರ್ಮಾಣಕ್ಕಾಗ 22,000 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಲು ಮುಂದಾಗಿದೆ. ಈ ಹೂಡಿಕೆಯಿಂದ ದೇಶದಲ್ಲಿ 40,000ಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಲಾಗುತ್ತಿದೆ. 2024ರ ಅಂತ್ಯಕ್ಕೆ ಭಾರತದಲ್ಲಿ ಫಾಕ್ಸ್‌ಕಾನ್ ಕಂಪನಿಯ ಹೂಡಿಕೆ 10 ಬಿಲಿಯನ್ ಗೂ ಅಧಿಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಫಾಕ್ಸ್‌ಕಾನ್ ಹೇಳಿಕೆಯ ಪ್ರಕಾರ, ಇದುವರೆಗೂ ಭಾರತದಲ್ಲಿ 1.4 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ನಾವು ಕಳೆದ ವರ್ಷ ಭಾರತದಲ್ಲಿ 10 ಬಿಲಿಯನ್ ಡಾಲರ್‌ಗೂ ಅಧಿಕ ವ್ಯವಹಾರ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಇದಕ್ಕಿಂತ ಹೆಚ್ಚು ವ್ಯವಹಾರ ನಡೆಸುವ ಗುರಿಯನ್ನು ಹೊಂದಲಾಗಿದೆ ಎಂದು ಫಾಕ್ಸ್‌ಕಾನ್ ಸಿಇಓ ಯಂಗ್ ಲಿಯೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏಕಾಏಕಿ ಹೆಚ್ಚಾಯ್ತು ಪುರುಷರ ಒಳಉಡುಪು ಮಾರಾಟ; ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಚಡ್ಡಿ ಸೇಲ್!
ಕಳೆದ ಕೆಲವು ತಿಂಗಳಿನಿಂದ ಯಂಗ್ ಲಿಯೂ ದೇಶದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳ ಜೊತೆ ಸಾಲು ಸಾಲು ಸಭೆ ನಡೆಸುತ್ತಿದ್ದಾರೆ. ಫಾಕ್ಸ್‌ಕಾನ್ ಸಿಇಓ ಯಂಗ್ ಲಿಯೂ ಅವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದ ನಂತರ ಲಿಯೂ ಅವರ ಮೊದಲ ಭೇಟಿಯಾಗಿದೆ. ಒಂದು ವಾರ ಭಾರತದ ಪ್ರವಾಸದಲ್ಲಿದ್ದಾರೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗದ್ದ ಯಂಗ್ ಲಿಯೂ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ, ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳ ಜೊತೆಯಲ್ಲಿ ಹೂಡಿಕೆ ಸಂಬಂಧ ಚರ್ಚೆ ನಡೆಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭಾನುವಾರ ಫಾಕ್ಸ್‌ಕಾನ್‌ನ ಮಹಿಳಾ ವಸತಿ ಸಂಕೀರ್ಣವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಲಿಯ ಕಂಪನಿಯು ಪುರುಷ ಮತ್ತು ಮಹಿಳೆ ಎಂಬ ಭೇದವಿಲ್ಲದೇ ಅವಕಾಶಗಳನ್ನು ನೀಡುತ್ತದೆ. ಭಾರತದಲ್ಲಿ ಮಹಿಳೆಯರು ವಿಶೇಷವಾಗಿ ವಿವಾಹಿತೆಯರು ನೀಡಿರುವ ಕೊಡುಗೆಗಳು ಮತ್ತು ಅವರ ಕಾರ್ಯಕ್ಷಮತೆ ಬಗ್ಗೆ ಲಿಯೂ ಮಾತನಾಡಿದ್ದರು.
ಮುಕೇಶ್ ಅಂಬಾನಿ ರಚಿಸಿದ ರಣವ್ಯೂಹದಲ್ಲಿ ಏರ್‌ಟೈಲ್? ತನ್ನ ಎದುರಾಳಿಗೆ ಟಕ್ಕರ್ ಕೊಟ್ಟ ಜಿಯೋ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.