ಕಡಿಮೆ ಬಂಡವಾಳದಲ್ಲಿ ಶುರು ಮಾಡಿ, ತಿಂಗಳಿಗೆ 1.5 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

By Mahmad Rafik  |  First Published Jan 2, 2025, 12:18 PM IST

ಕಡಿಮೆ ಬಂಡವಾಳದಲ್ಲಿ ಫ್ರಾಂಚೈಸಿ ವ್ಯವಹಾರ ಆರಂಭಿಸಿ ತಿಂಗಳಿಗೆ 1.5 ಲಕ್ಷ ರೂ.ವರೆಗೆ ಸಂಪಾದಿಸಿ. ಕಂಪನಿಯು ವ್ಯವಹಾರ ಆರಂಭಕ್ಕೆ ಮಾರ್ಗದರ್ಶನ ಮತ್ತು ತರಬೇತಿ ನೀಡುತ್ತದೆ. ನಿಮಗೆ ಪ್ರಮೋಷನ್ ಮಾಡುವ ಅವಶ್ಯಕತೆ ಕಡಿಮೆ ಇರುತ್ತದೆ.


Franchise Business Ideas: ಇಂದು ಪ್ರತಿಯೊಬ್ಬ ವ್ಯಕ್ತಿಯೂ ಬ್ಯುಸಿನೆಸ್ ಮಾಡಬೇಕೆಂದು ಯೋಚಿಸುತ್ತಾರೆ. ಒಂದು ವೇಳೆ ನೀವು ಸಹ ಬ್ಯುಸಿನೆಸ್ ಶುರು ಮಾಡಲು ಪ್ಲಾನ್ ಮಾಡಿಕೊಳ್ಳುತ್ತಿದ್ದು, ಯಾವ ವ್ಯವಹಾರ ಅನ್ನೋ ಗೊಂದಲದಲ್ಲಿದ್ದಾರೆ. ಈ ಲೇಖನದಲ್ಲಿ ಫ್ರಾಂಚೈಸಿ ಬ್ಯುಸಿನೆಸ್ ಐಡಿಯಾ ಹೇಳುತ್ತಿದ್ದೇವೆ. ಈ ವ್ಯವಹಾರ ಕಡಿಮೆ ಬಂಡವಾಳದಲ್ಲಿ ಆರಂಭಿಸಿದ್ರೆ ಪ್ರತಿ ತಿಂಗಳು ಲಕ್ಷ ಲಕ್ಷ ಹಣವನ್ನು ಎಣಿಸಬಹುದು. ಫ್ರಾಂಚೈಸಿ ಬ್ಯುಸಿನೆಸ್‌ನಲ್ಲಿ ಕಂಪನಿ ನಿಮಗೆ ವ್ಯವಹಾರ ಆರಂಭಕ್ಕೆ ಮಾಡಬೇಕಾದ ಎಲ್ಲಾ ಸಹಾಯವನ್ನು ಮಾಡುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ವಿಶ್ವಾಸರ್ಹತೆ ಪಡೆದುಕೊಂಡಿದ್ದರಿಂದ ನಿಮಗೆ ಪ್ರಮೋಷನ್ ಮಾಡುವ ಅವಶ್ಯಕತೆ ಕಡಿಮೆ ಇರುತ್ತದೆ.

Zepto Franchise Business Idea
Zepto ಜನಪ್ರಿಯ ಇ-ಕಾಮರ್ಸ್ ಕಂಪನಿಯಾಗಿದೆ. ಆಹಾರ ಸೇರಿದಂತೆ ಇನ್ನಿತರ ಅವಶ್ಯಕ ಸಾಮಾಗ್ರಿಗಳನ್ನು ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಮಾಡುತ್ತದೆ. ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿರುವ Zepto ಗ್ರಾಹಕರ ವಿಶ್ವಾಸರ್ಹತೆಯನ್ನು ಪಡೆದುಕೊಂಡಿದೆ. ಸ್ವಂತ ವ್ಯವಹಾರ ಆರಂಭಿಸಲು ಯೋಚಿಸುತ್ತಿರೋರಿಗೆ Zepto Franchise Business ಒಳ್ಳೆಯ ಆಯ್ಕೆಯಾಗಲಿದೆ. ಫ್ರಾಂಚೈಸಿ ಪಡೆದುಕೊಂಡು ಕಂಪನಿ ಜೊತೆ ನಿಮ್ಮ ವೃತ್ತಿಜೀವನವೂ ಸಹ ಬೆಳವಣಿಗೆಯಾಗುತ್ತದೆ. 

Tap to resize

Latest Videos

ಝೆಪ್ಟೋ ಫ್ರಾಂಚೈಸಿ ಪಡೆದು ವ್ಯವಹಾರ ಆರಂಭಿಸಲು 10 ರಿಂದ 12 ಲಕ್ಷ ರೂಪಾಯಿಯ ಬಂಡವಾಳ ಅಗತ್ಯವಿದೆ. ಅಧಿಕೃತ ವೆಬ್‌ಸೈಟ್‌ಗೆ ತೆರಳಿ ಫ್ರಾಂಚೈಸಿ ಪಡೆಯಲು ನೋಂದಣಿ ಮಾಡಬೇಕು. ಈ ವೇಳೆ ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಯನ್ನು  ಭರ್ತಿ ಮಾಡಬೇಕು. ನೋಂದಣಿ ಪೂರ್ಣವಾದ ನಂತರ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. 

ಇದನ್ನೂ ಓದಿ: ಯಾವುದೇ ಡಿಗ್ರಿ ಬೇಡ, ಮನೆಯಂಗಳದಲ್ಲಿಯೇ ವ್ಯವಹಾರ ಆರಂಭಿಸಿ, ವಾರಕ್ಕೆ ₹9 ಸಾವಿರ ಲಾಭ ಸಂಪಾದಿಸಿ

ಇದಾದ ಬಳಿ ನಿಮ್ಮ ಹೂಡಿಕೆಯ ಸಂಪೂರ್ಣ ವಿವರ ನೀಡಬೇಕಾಗುತ್ತದೆ. ವ್ಯವಹಾರ ಪ್ರಾರಂಭಿಸಲು ಯೋಚಿಸುತ್ತಿರುವ ಸ್ಥಳ ಸೂಚಿಸಬೇಕು. ನೀವು ಆಯ್ಕೆ ಮಾಡುವ ಸ್ಥಳ ವಸತಿ ಪ್ರದೇಶಕ್ಕೆ ಸಮೀಪದಲ್ಲಿರಬೇಕಾಗುತ್ತದೆ. ಆ ಭಾಗದ ವಾಸಿಗಳೇ ಗ್ರಾಹಕರಾಗಿದ್ದು, ಆನ್‌ಲೈನ್ ಮುಖಾಂತರವೇ ವಸ್ತುಗಳನ್ನು ಆರ್ಡರ್ ಮಾಡುತ್ತಾರೆ. ಸ್ಥಳ ಅಂತಿಮವಾದ ಬಳಿಕ ಕನಿಷ್ಠ 5 ರಿಂದ 7 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ನಂತರ Zepto ವ್ಯವಹಾರ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ನಿಮಗೆ ಮಾರುಕಟ್ಟೆ ತಜ್ಞರಿಂದ ತರಬೇತಿ ಕೊಡಲಾಗುತ್ತದೆ. ನಿಮಗೆ ಅಗತ್ಯವಿರುವ ಎಲ್ಲಾ ಸಹಾಯಗಳನ್ನು ಇಲ್ಲಿ ಮಾಡಲಾಗುತ್ತದೆ. ಇದರಿಂದ ಬಂಡವಾಳ ಹೂಡಿಕೆ ಮಾಡಿದ ಕಡಿಮೆ ಸಮಯದಲ್ಲಿ ವ್ಯವಹಾರ ಆರಂಭಿಸಲು ಸಹಾಯವಾಗುತ್ತದೆ. 

Zepto ಫ್ರಾಂಚೈಸಿ ಲಾಭ
ಒಂದು ಉತ್ಪನ್ನವನ್ನು ತಲುಪಿಸಲು ಕಂಪನಿಯು ನಿಮಗೆ 50 ರೂಪಾಯಿ ಕಮಿಷನ್ ನೀಡುತ್ತದೆ. ನೀವು ಪ್ರತಿದಿನ 100 ಆರ್ಡರ್‌ಗಳನ್ನು ಸ್ವೀಕರಿಸಿದರೆ, ನಿಮ್ಮ 1 ದಿನದ ಗಳಿಕೆಯು 5000 ರೂ. ಗಳಷ್ಟು ಹಣ ಸಂಪಾದಿಸಬಹುದು. ಹಾಗಾಗಿ ಈ ವ್ಯವಹಾರದಿಂದ ತಿಂಗಳಿಗೆ 1 ರಿಂದ 1.5 ಲಕ್ಷ  ರುಪಾಯಿವರೆಗೂ ಹಣ ಸಂಪಾದಿಸಬಹುದು. ನೀವು ಪ್ರತಿ ದಿನ ಎಷ್ಟು ಉತ್ಪನ್ನ ವಿತರಣೆಗಳನ್ನು ಸ್ವೀಕರಿಸುತ್ತೀರಿ ಎಂಬುದರ ಮೇಲೆ ಲಾಭದ ಪ್ರಮಾಣ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ: ನೀವೇ ಆರಂಭಿಸಬಹುದು TATA ZUDIO, ಬಂಡವಾಳ, ಲಾಭದ ಪ್ರಮಾಣ ಎಷ್ಟು? 

click me!