ATM Transactions: ಜ.1ರಿಂದ ಎಟಿಎಂ ಹಣ ವಿತ್ ಡ್ರಾ ಶುಲ್ಕ ಹೆಚ್ಚಳ

By Suvarna News  |  First Published Dec 3, 2021, 3:59 PM IST

ಹೊಸ ವರ್ಷದ ಮೊದಲ ದಿನದಿಂದ ಬ್ಯಾಂಕ್ ಗ್ರಾಹಕರು ಎಟಿಎಂ ಮಾಸಿಕ ಉಚಿತ ವಹಿವಾಟುಗಳ ಮಿತಿ ಮೀರಿದ್ರೆ ಪ್ರಸ್ತುತವಿರೋದಕ್ಕಿಂತ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್  ಈಗಾಗಲೇ ಅಧಿಸೂಚನೆ ಹೊರಡಿಸಿದ್ದು,ಕೆಲವು ಬ್ಯಾಂಕ್ ಗಳು ಕೂಡ ಗ್ರಾಹಕರಿಗೆ ಮಾಹಿತಿ ರವಾನಿಸಿವೆ.


ಬ್ಯಾಂಕ್  (Bank) ಗ್ರಾಹಕರು ಮುಂದಿನ ತಿಂಗಳಿಂದ (ಜನವರಿ1)  ಎಟಿಎಂ(ATM) ಮಾಸಿಕ ಉಚಿತ ವಹಿವಾಟುಗಳನ್ನು(Transaction) ಮೀರಿದ್ರೆ ಪ್ರಸ್ತುತವಿರೋದಕ್ಕಿಂತ 1ರೂ. ಹೆಚ್ಚುವರಿ ಶುಲ್ಕ (Fees) ಪಾವತಿಸಬೇಕಿದೆ. ಏಕೆಂದ್ರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) 2022ರ ಜನವರಿ 1ರಿಂದ ನಗದು ಹಾಗೂ ನಗದುರಹಿತ ಎಟಿಎಂ ವ್ಯವಹಾರಗಳು ನಿಗದಿತ ಮಾಸಿಕ ಮಿತಿಯನ್ನು (limit) ಮೀರಿದ್ರೆ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕುಗಳಿಗೆ ಅವಕಾಶ ನೀಡಿದೆ. ಪ್ರಸ್ತುತ ಎಟಿಎಂಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚುವರಿ ವ್ಯವಹಾರ ನಡೆಸಿದ್ರೆ ಗ್ರಾಹಕ ಪ್ರತಿ ವ್ಯವಹಾರಕ್ಕೆ 20ರೂ. ಶುಲ್ಕ ಪಾವತಿಸಬೇಕಿದೆ. ಆದ್ರೆ ಮುಂದಿನ ತಿಂಗಳಿಂದ ಪ್ರತಿ  ಹೆಚ್ಚುವರಿ ವ್ಯವಹಾರದ ಮೇಲಿನ ಶುಲ್ಕವನ್ನು ಒಂದು ರೂ. ಹೆಚ್ಚಿಸಿ 22ರೂ. ಮಾಡಲು ಆರ್ ಬಿಐ ಜೂನ್ 10ರಂದು ಪ್ರಕಟಿಸಿರೋ ಅಧಿಸೂಚನೆಯಲ್ಲಿ ಬ್ಯಾಂಕುಗಳಿಗೆ ಅನುಮತಿ ನೀಡಿದೆ. 

ಮಾಸಿಕ ಎಷ್ಟು ಉಚಿತ ವ್ಯವಹಾರ?
ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮದ ಪ್ರಕಾರ ನಿಮ್ಮ ಬ್ಯಾಂಕ್  ಎಟಿಎಂನಲ್ಲಿ ಆರಂಭಿಕ 5 ಟ್ರಾನ್ಸಾಕ್ಷನ್ ಉಚಿತವಾಗಿದೆ. ಇನ್ನು ನಿಮ್ಮ ಬ್ಯಾಂಕ್ ಹೊರತುಪಡಿಸಿ ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ಮೆಟ್ರೋ ನಗರಗಳಲ್ಲಿ ಮೂರು ಬಾರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಐದು ಬಾರಿ ಉಚಿತ ಟ್ರಾನ್ಸಾಕ್ಷನ್ ಮಾಡಬಹುದು. ಇದ್ರಲ್ಲಿ ಹಣಕಾಸು ಹಾಗೂ ಹಣಕಾಸೇತರ ವ್ಯವಹಾರ ಎರಡೂ ಸೇರಿದೆ. ಈ ಮಿತಿಗಳನ್ನು ಮೀರಿದ್ರೆ ಪ್ರತಿ ಹೆಚ್ಚುವರಿ ಟ್ರಾನ್ಸಾಕ್ಷನ್  ಮೇಲೆ ಪ್ರಸ್ತುತ 20 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ. ಈ ಶುಲ್ಕ ಜನವರಿಯಿಂದ 21ರೂ. ಆಗಲಿದೆ.

Tap to resize

Latest Videos

undefined

ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಡಿ.17,18ರಂದು ಬ್ಯಾಂಕ್ ಬಂದ್

ಶುಲ್ಕ ಏರಿಕೆ ಮಾಹಿತಿ ನೀಡಿರೋ ಬ್ಯಾಂಕ್ ಗಳು
ಜನವರಿ 1ರಿಂದ ಹೆಚ್ಚುವರಿ ಎಟಿಎಂ ವ್ಯವಹಾರಗಳ ಮೇಲಿನ ಶುಲ್ಕ ಹೆಚ್ಚಳದ ಕುರಿತು ಕೆಲವು ಬ್ಯಾಂಕ್ ಗಳು ಈಗಲೇ ಗ್ರಾಹಕರಿಗೆ ಮಾಹಿತಿ ರವಾನಿಸಲು ಪ್ರಾರಂಭಿಸಿವೆ. ಎಚ್ ಡಿಎಫ್ ಸಿ ಬ್ಯಾಂಕ್ ತನ್ನ ವೆಬ್ ಸೈಟ್ ನಲ್ಲಿ ಈಗಾಗಲೇ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಅಲ್ಲದೆ, ಈ ಶುಲ್ಕಕ್ಕೆ ಹಣಕಾಸು ವ್ಯವಹಾರವನ್ನು ಮಾತ್ರ ಪರಿಗಣಿಸೋದಾಗಿ ಮಾಹಿತಿ ನೀಡಿದೆ. ಇನ್ನು ಎಕ್ಸಿಸ್ ಬ್ಯಾಂಕ್ ಬ್ಯಾಂಕ್ ತನ್ನ ವೆಬ್ ಸೈಟ್ ನಲ್ಲಿ ಹೊಸ ಶುಲ್ಕವು 2022ರ ಜನವರಿ 1ರಿಂದ ಜಾರಿಗೆ ಬರಲಿದ್ದು, ಎಕ್ಸಿಸ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್ ಗಳ ಎಟಿಎಂನಲ್ಲಿ ನಿಗದಿತ ಮಿತಿ ಮೀರಿದ ಪ್ರತಿ ಹಣಕಾಸು ವ್ಯವಹಾರದ ಮೇಲೆ 21ರೂ+ಜಿಎಸ್ಟಿ (GST) ವಿಧಿಸಲಾಗೋದು ಎಂಬ ಮಾಹಿತಿಯನ್ನು ನೀಡಿದೆ. ಇನ್ನು ಬ್ಯಾಂಕುಗಳಿಗೆ ಪ್ರತಿ ವ್ಯವಹಾರದ ಮೇಲೆ ಇಂಟರ್ಚೇಂಜ್ ಶುಲ್ಕ ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಆಗಸ್ಟ್ 1ರಿಂದಲೇ ಜಾರಿಗೆ ಬರುವಂತೆ ಅನುಮತಿ ನೀಡಿದೆ. ಈ ಶುಲ್ಕವನ್ನು ಹಣಕಾಸು ವಹಿವಾಟಿಗೆ 15ರೂ.ನಿಂದ 17ರೂ.ಗೆ ಹೆಚ್ಚಿಸಲಾಗಿತ್ತು. ಇನ್ನು ಹಣಕಾಸೇತರ ವಹಿವಾಟಿಗೆ 5 ರೂಪಾಯಿಂದ 6 ರೂಪಾಯಿಗೆ ಹೆಚ್ಚಿಸಲಾಗಿತ್ತು. 

10 ಸಾವಿರ ರೂ.ಗಿಂತ ಅಧಿಕ ನಗದು ಡ್ರಾಗೆ ಒಟಿಪಿ ಕಡ್ಡಾಯ, ಸಮಸ್ಯೆಯಾದ್ರೆ ಬ್ಯಾಂಕ್ ಸಂಪರ್ಕಿಸಲು SBI ಸೂಚನೆ

ಹಣ ವಿತ್ ಡ್ರಾ ಮಾಡಲು ಒಟಿಪಿ ಕಡ್ಡಾಯ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಎಟಿಎಂಗಳಲ್ಲಿ(ATM) 10ಸಾವಿರ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಹಣ ವಿತ್ ಡ್ರಾ ಮಾಡಲು ಈಗಾಗಲೇ ಒಟಿಪಿ ಕಡ್ಡಾಯಗೊಳಿಸಿದೆ.ಇತ್ತೀಚಿನ ದಿನಗಳಲ್ಲಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡೋ ವಿಚಾರದಲ್ಲಿ ಸಾಕಷ್ಟು ವಂಚನೆ ಪ್ರಕರಣಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ತನ್ನ ಗ್ರಾಹಕರು ಇಂಥ ವಂಚನೆಗೊಳಗಾಗದಂತೆ ತಡೆಯಲು SBI ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿ ಕಡ್ಡಾಯ ಮಾಡಿದೆ. ಆದ್ರೆ ಕೆಲವು ಗ್ರಾಹಕರಿಗೆ ಈ ಬಗ್ಗೆ ಮಾಹಿತಿಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೂ ಕೆಲವರು ಹಣ ವಿತ್ ಡ್ರಾ ಮಾಡಲು ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ. OTP ಬರುತ್ತಿಲ್ಲ ಎಂಬ ದೂರನ್ನು ಕೆಲವು ಗ್ರಾಹಕರು ನೀಡಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿರೋದಾಗಿ ತಿಳಿಸಿರೋ SBI, ಏನೇ ಸಮಸ್ಯೆಯಾದ್ರೂ ಬ್ಯಾಂಕ್ ಅನ್ನು ಸಂಪರ್ಕಿಸುವಂತೆ ಗ್ರಾಹಕರನ್ನು ಕೋರಿದೆ. 
 

click me!