Bank Strike: ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಡಿ.16,17ರಂದು ಬ್ಯಾಂಕ್ ಬಂದ್

By Suvarna News  |  First Published Dec 3, 2021, 2:13 PM IST

ಸಾವರ್ಜನಿಕ ವಲಯದ ಎರಡು ಬ್ಯಾಂಕುಗಳ ಖಾಸಗೀಕರಣಕ್ಕೆ ಸಂಬಂಧಿಸಿ ಸರ್ಕಾರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಇಚ್ಛಿಸಿರೋ ಮಸೂದೆಯನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ಸ್ (UFBU) ಡಿಸೆಂಬರ್ 16 ಹಾಗೂ 17ರಂದು ಎರಡು ದಿನಗಳ ದೇಶವ್ಯಾಪ್ತಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. 


ನವದೆಹಲಿ (ಡಿ.3):ಸಾರ್ವಜನಿಕ ವಲಯದ (Public sector) 2 ಬ್ಯಾಂಕುಗಳ ಖಾಸಗೀಕರಣದ (Privatisation) ಪ್ರಸ್ತಾವನೆಯನ್ನು ವಿರೋಧಿಸಿ ಒಂಭತ್ತು ಬ್ಯಾಂಕ್  ಒಕ್ಕೂಟಗಳ(Bank unions) ಪ್ರಾತಿನಿಧಿಕ ಸಂಸ್ಥೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ಸ್ (UFBU) ಡಿಸೆಂಬರ್ 16 ಹಾಗೂ 17ರಂದು ಎರಡು ದಿನಗಳ ದೇಶವ್ಯಾಪ್ತಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಪ್ರಸ್ತುತ ನಡೆಯುತ್ತಿರೋ ಸಂಸತ್ತಿನ (Parliament) ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ(Bill) -2021 ಮಂಡಿಸೋ ನಿರೀಕ್ಷೆಯಿದೆ. ಸಾರ್ವಜನಿಕ ವಲಯದ ಎರಡು ಬ್ಯಾಂಕುಗಳನ್ನುಖಾಸಗೀಕರಣಗೊಳಿಸೋದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ.

ಬ್ಯಾಂಕ್ ನಿಷ್ಕ್ರಿಯ ಖಾತೆಗಳಲ್ಲಿ 26,697 ಕೋಟಿ ರೂ.: ನಿರ್ಮಲಾ ಸೀತಾರಾಮನ್

Tap to resize

Latest Videos

undefined

ಈ ವರ್ಷ ಫೆಬ್ರವರಿಯಲ್ಲಿ 2021-22ನೇ ಸಾಲಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಸಾರ್ವಜನಿಕ ವಲಯದ ಎರಡು ಬ್ಯಾಂಕ್ ಗಳ ಖಾಸಗೀಕರಣದ ಬಗ್ಗೆ ಪ್ರಸ್ತಾಪಿಸಿದ್ದರು.1.75ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸೋ ಉದ್ದೇಶದಿಂದ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಖಾಸಗೀಕರಣವನ್ನು ಘೋಷಿಸಿದ್ದರು. ಸರ್ಕಾರದ ಈ ಖಾಸಗೀಕರಣ ನೀತಿಯನ್ನು ವಿರೋಧಿಸಿ ಚಳವಳಿ ನಡೆಸಲು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ಸ್ (UFBU) ನಿರ್ಧರಿಸಿದೆ.ಈ ಬಗ್ಗೆ ಮಾಹಿತಿ ನೀಡಿರೋ UFBU ಸಂಚಾಲಕ ಮಹೇಶ್ ಮಿಶ್ರಾ, 'ಸರ್ಕಾರವು ಪ್ರಸಕ್ತ ನಡೆಯುತ್ತಿರೋ ಅಧಿವೇಶನದಲ್ಲಿ ಬ್ಯಾಂಕಿಂಗ್ ಸುಧಾರಣಾ ಮಸೂದೆಯನ್ನು ಮಂಡಿಸಲು ಬಯಸಿದೆ. ಈ ಮೂಲಕ ಬ್ಯಾಂಕ್ ಗಳ ಖಾಸಗೀಕರಣಕ್ಕೆ ನಾಂದಿ ಹಾಡಲಿದೆ. ಯುನೈಟೆಡ್ ಫೋರಂ ಈ ಮಸೂದೆ ವಿರುದ್ಧ ಶುಕ್ರವಾರ (ಡಿ.3) ದಿಂದಲೇ ಹೋರಾಟ ಪ್ರಾರಂಭಿಸಲಿದ್ದೇವೆ.ಇದರ ಭಾಗವಾಗಿಯೇ ಡಿಸೆಂಬರ್ 16 ಹಾಗೂ 17ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ನಡೆಯಲಿದೆ' ಎಂದರು. ಉದ್ಯೋಗಿಗಳ ಜೊತೆ ದೇಶದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡೋ ನೀತಿಗಳನ್ನು ಬ್ಯಾಂಕ್ ಯುನಿಯನ್ಸ್ ಬೆಂಬಲಿಸುತ್ತದೆಯೇ ಹೊರತು ಬ್ಯಾಂಕ್ ಗಳ ಖಾಸಗೀಕರಣವನ್ನಲ್ಲ ಎಂದು ಮಿಶ್ರಾ ಹೇಳಿದ್ದಾರೆ. ಮುಷ್ಕರಕ್ಕೆ ಸಂಬಂಧಿಸಿ ಭಾರತೀಯ ಬ್ಯಾಂಕ್ ಗಳ ಸಂಘಟನೆಗೆ ಯುನೈಟೆಡ್ ಫೋರಂ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ. ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (AIBEA), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AIBOC), ಭಾರತೀಯ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ (BEFI) ಸೇರಿದಂತೆ ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದ ಅನೇಕ ಸಂಘಟನೆಗಳು UFBU ಸದಸ್ಯರಾಗಿವೆ. 

10 ಸಾವಿರ ರೂ.ಗಿಂತ ಅಧಿಕ ನಗದು ಡ್ರಾಗೆ ಒಟಿಪಿ ಕಡ್ಡಾಯ, ಸಮಸ್ಯೆಯಾದ್ರೆ ಬ್ಯಾಂಕ್ ಸಂಪರ್ಕಿಸಲು SBI ಸೂಚನೆ

14 ಬ್ಯಾಂಕ್ ಗಳ ವಿಲೀನ
ಸರ್ಕಾರ ಈಗಾಗಲೇ IDBI ಬ್ಯಾಂಕ್ ಅನ್ನು ಖಾಸಗೀಕರಣಗೊಳಿಸಿದ್ದು, ಇದರ ಬಹುತೇಕ ಷೇರುಗಳನ್ನು ಭಾರತೀಯ ಜೀವವಿಮಾ ನಿಗಮಕ್ಕೆ (LIC) 2019ರಲ್ಲೇ ಮಾರಾಟ ಮಾಡಿದೆ. ಕಳೆದ 4 ವರ್ಷಗಳಲ್ಲಿ ಸಾರ್ವಜನಿಕ ವಲಯದ 14 ಬ್ಯಾಂಕ್ ಗಳನ್ನು ವಿಲೀನಗೊಳಿಸಿದೆ.

ಯಾವ ಎರಡು ಬ್ಯಾಂಕ್ ಗಳು?
ಸಾರ್ವ​ಜನಿಕ ವಲ​ಯದ ಬ್ಯಾಂಕು​ಗಳ ಖಾಸ​ಗೀ​ಕ​ರ​ಣದ ಅಂಗ​ವಾಗಿ ಕೇಂದ್ರ ಸರ್ಕಾರ ಪ್ರಸಕ್ತ ಹಣ​ಕಾಸು ವರ್ಷ​ದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿ​ಯನ್ ಓವ​ರ್​ಸೀಸ್ ಬ್ಯಾಂಕು​ಗ​ಳನ್ನು ಖಾಸ​ಗೀ​ಕ​ರ​ಣ​ಗೊ​ಳಿಸೋದಾಗಿ ತಿಳಿಸಿತ್ತು. ಬಂಡ​ವಾಳ ಹಿಂಪ​ಡೆ​ಯು​ವಿ​ಕೆಗೆ ಸಂಬಂಧಿ​ಸಿ​ದ ಕಾರ್ಯ​ದ​ರ್ಶಿ​ಗಳ ಸಮಿ​ತಿ ಈ ಹಣ​ಕಾಸು ವರ್ಷ​ದಲ್ಲಿ ಖಾಸ​ಗೀ​ಕ​ರ​ಣ​ಗೊ​ಳ್ಳ​ಬೇ​ಕಿ​ರುವ ಎರಡು ಬ್ಯಾಂಕು​ಗಳ ಹೆಸ​ರನ್ನು ಕೇಂದ್ರ ಸರ್ಕಾ​ರ​ಕ್ಕೆ ಶಿಫಾ​ರಸು ಮಾಡಿತ್ತು.ಈ ಪ್ರಸ್ತಾ​ವ​ನೆ​ಯನ್ನು ಹೂಡಿಕೆ ಹಾಗೂ ಸಾರ್ವ​ಜ​ನಿಕ ಆಸ್ತಿ ನಿರ್ವ​ಹಣಾ ಇಲಾಖೆ ಮತ್ತು ಹಣ​ಕಾಸು ಸೇವೆ​ಗಳ ಇಲಾಖೆ ಪರಿ​ಶೀ​ಲನೆ ನಡೆ​ಸಿ, ಬ್ಯಾಂಕು​ಗಳ ಖಾಸ​ಗೀ​ಕ​ರ​ಣಕ್ಕೆ ಅಗ​ತ್ಯ​ವಿ​ರುವ ಕಾನೂ​ನಾ​ತ್ಮ​ಕ ಬದ​ಲಾ​ವ​ಣೆಯ ಕುರಿ​ತು ಚರ್ಚಿಸುತ್ತದೆ. ಆ ಬಳಿಕ ಸಂಪುಟ ಕಾರ್ಯ​ದರ್ಶಿ ನೇತೃ​ತ್ವದ ಸಮಿತಿ ಬ್ಯಾಂಕು​ಗಳ ಹೆಸ​ರನ್ನು ಅಂತಿ​ಮ​ಗೊ​ಳಿ​ಸಿ​ ಸಂಪುಟ ಸಭೆಯ ಅನು​ಮೋ​ದ​ನೆಗೆ ಕಳು​ಹಿ​ಸಿ​ಕೊ​ಡು​ತ್ತದೆ. ಆದಾ​ಯನ್ನು ಹೆಚ್ಚಿಸುವ ನಿಟ್ಟಿ​ನಿಂದ ಕೇಂದ್ರ ಸರ್ಕಾರ 4 ಮಧ್ಯಮ ಗಾತ್ರದ ಬ್ಯಾಂಕು​ಗ​ಳನ್ನು ಖಾಸ​ಗೀ​ಕ​ರ​ಣಗೊಳಿಸಲು ಉದ್ದೇಶಿಸಿದೆ ಎಂದು ಹೇಳಲಾಗಿದೆ. 

click me!