1 ವರ್ಷ ಫೋನ್ ಯೂಸ್ ಮಾಡ್ದಿದ್ರೆ 72 ಲಕ್ಷ ರೂ: ಚಾಲೆಂಜ್ ACCEPTED ಗುರು?

By Web DeskFirst Published Dec 15, 2018, 3:10 PM IST
Highlights

ಒಂದು ವರ್ಷ ಸ್ಮಾರ್ಟ್ ಫೋನ್ ಬಳಸದೇ ಇರಲು ಸಾಧ್ಯವೇ?| ಮೊಬೈಲ್ ಬಳಸದೇ ಇರುವ ಚಾಲೆಂಜ್ ಸ್ವೀಕರಿಸಲು ಸಿದ್ಧವೇ?| ಒಂದು ವರ್ಷ ಮೊಬೈಲ್ ಬಳಸದೇ ಹೋದರೆ 72 ಲಕ್ಷ ರೂ. ಬಹುಮಾನ| ಕೋಕಾಕೋಲಾದ Vitaminwater ಕಂಪನಿಯಿಂದ ಹೊಸ ಚಾಲೆಂಜ್| Vitaminwater ಸ್ಪರ್ಧೆಯ  ಸಂಪೂರ್ಣ ವಿವರ ಇಲ್ಲಿದೆ 

ಬೆಂಗಳೂರು(ಡಿ.15): 1 ನಿಮಿಷ ಮೊಬೈಲ್ ಫೋನ್ ಬಿಟ್ಟಿರಲಾರದ ಪರಿಸ್ಥಿತಿಯಲ್ಲಿ ಇಂದಿನ ಯುವ ಪೀಳಿಗೆ ಇದೆ. ಅಂತದ್ದರಲ್ಲಿ ಬರೋಬ್ಬರಿ 1 ವರ್ಷ ಫೋನ್ ಬಳಸಬೇಡ ಅಂದ್ರೆ ಏನಾಗಬೇಡ?.

ಆದರೂ ಇಂತದ್ದೊಂದು ಚಾಲೆಂಜ್ ವೊಂದು ಇದೀಗ ಯುವ ಸಮುದಾಯವನ್ನು ಕೆಣಕಿದೆ. ಚಾಲೆಂಜ್ ಸ್ವೀಕರಿಸುವ ಛಾತಿ ಇರುವವರಿಗಾಗಿಯೇ ವರದಿ.

ಕೋಕಾಕೋಲಾದ ವಿಟಮಿನ್ ವಾಟರ್ (Vitaminwater) ಒಂದು ವರ್ಷದ ಕಾಲ ಮೊಬೈಲ್ ಫೋನ್ ಬಳಕೆ ಮಾಡದಿದ್ದರೆ ಬರೋಬ್ಬರಿ 72 ಲಕ್ಷ ರೂ. ಬಹುಮಾನ ಘೋಷಿಸಿದೆ.

ಇದೇ ವೇಳೆ ಈ ಸವಾಲು ಸ್ವೀಕರಿಸುವವರಿಗೆ ಕಂಪನಿಯೇ 19996 ರಲ್ಲಿ ತಯಾರಿಸಲಾದ ಹ್ಯಾಂಡ್‌ಸೆಟ್‌ವೊಂದನ್ನು ಕೊಡುತ್ತಿದೆ. ಇದರ ಮೂಲಕವಷ್ಟೇ ವ್ಯಕ್ತಿ ಒಂದು ವರ್ಷ ಸಂಪರ್ಕದಲ್ಲಿರಬೇಕು. 

ಈ ಕುರಿತು ಮಾಹಿತಿ ನೀಡಿರುವ ವಿಟಮಿನ್ ವಾಟರ್ ಕಂಪನಿಯ ಬ್ರ್ಯಾಂಡ್ ಮ್ಯಾನೇಜರ್ ನಟಾಲಿಯಾ ಸೌರೇಜ್, ಸ್ಮಾರ್ಟ್ ಫೋನ್ ಬಿಟ್ಟಿರಲಾರದ ಇಂದಿನ ಪರಿಸ್ಥಿತಿಯಲ್ಲಿ ಒಂದು ವರ್ಷ ಫೋನ್ ಬಳಕೆ ಮಾಡದೇ ಇರಲು ಸಾಧ್ಯವೇ ಎಂಬುದನ್ನು ತಿಳಿಯಲು ನಾವು ಕುತೂಹಲ ಇದೆ ಎಂದು ತಿಳಿಸಿದ್ದಾರೆ.

ಚಾಲೆಂಜ್ ಏನು?:
ವಿಟಮಿನ್ ವಾಟರ್ ಕಂಪನಿಯ ಸ್ಪರ್ಧೆಯ ನಿಯಮದಂತೆ ಸ್ಪರ್ಧಿ ಒಂದು ವರ್ಷದ ಅವಧಿಯವರೆಗೆ ಸ್ಮಾರ್ಟ್ ಫೋನ್ ಮತ್ತು ಟಾಬ್ಲ್ಯಾಡ್ ಬಳಸುವಂತಿಲ್ಲ. ಆದರೆ ಈ ಅವಧಿಯಲ್ಲಿ ಆತ ಲ್ಯಾಪಟಾಪ್, ಡೆಸ್ಕಟಾಪ್ ಹಾಗೂ ಸ್ಮಾರ್ಟ್ ಡಿವೈಸ್ ಗಳನ್ನು ಬಳಸಬಹುದಾಗಿದೆ.

ಆದರೆ ಸಂಪರ್ಕಕ್ಕಾಗಿ ಕಂಒಪನಿ ನೀಡುವ 1996ರ ಹಳೆಯ ಹ್ಯಾಂಡಸೆಟ್ ನ್ನು ಸ್ಪರ್ಧಿ ಬಳಸಬೇಕಾಗುತ್ತದೆ.

ಸ್ಪರ್ಧೆ ಆರಂಭವಾಗುವ ದಿನಾಂಕ:
ನೋಂದಾವಣೆ: 8 ಜನೆವರಿ, 2019
ಅಭ್ಯರ್ಥಿಗಳ ಆಯ್ಕೆ: 22 ಜನೆವರಿ 2019

ಬಹುಮಾನ: 
ಹೀಗೆ ಬರೋಬ್ಬರಿ ಒಂದು ವರ್ಷ ಸ್ಮಾರ್ಟ್ ಫೋನ್ ಬಳಸದೇ ಇದ್ದರೆ ಕಂಪನಿ ಬರೋಬ್ಬರಿ 72 ಲಕ್ಷ ರೂ. ಬಹುಮಾನ ನೀಡಲಿದೆ. ಆದರೆ ಈ ಅವಧಿಯಲ್ಲಿ ಮೋಸ ಮಾಡಿ ಸ್ಮಾರ್ಟ್ ಫೊನ್ ಬಳಕೆ ಮಾಡುವಂತೆಯೂ ಇಲ್ಲ. ಕಾರಣ ಒಂದು ವರ್ಷದ ಬಳಿಕ ಪ್ರತಿಯೊಬ್ಬ ಸ್ಪರ್ಧಿಯೂ ಸುಳ್ಳು ಪರೀಕ್ಷಾ ಯಂತ್ರದ ಪರೀಕ್ಷೆಯನ್ನು ಎದುರಿಸಲೇಬೇಕು. 

click me!