5 ದಿನ ಬ್ಯಾಂಕ್ ಇರಲ್ಲ: ಡೇಟ್ಸ್ ನೋಡ್ಕೊಂಡ್ ಬಿಡಿ!

By Web DeskFirst Published Dec 15, 2018, 2:17 PM IST
Highlights

ಡಿಸೆಂಬರ್‌ನಲ್ಲಿ ಐದು ದಿನ ಬ್ಯಾಂಕ್‌ಗಳಿಗೆ ರಜೆ| ಮುಷ್ಕರ, ಹಬ್ಬ, ವಾರಾಂತ್ಯ ರಜೆಗಳ ಪರಿಣಾಮ| ಡಿ.21, 22,23, 25,26 ರಂದು ಬ್ಯಾಂಕ್ ಸೇವೆ ಇರುವುದಿಲ್ಲ| ಡಿ.24 ಹೊರತುಪಡಿಸಿ ಒಟ್ಟು 5 ದಿನಗಳ ಕಾಲ ಬ್ಯಾಂಕ್ ಬಂದ್| ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರು ಪ್ರತ್ಯೇಕ ಮುಷ್ಕರ| ವಾರಾಂತ್ಯ, ಕ್ರಿಸಮಸ್ ಹಬ್ಬಗಳ ಸಡಗರದಲ್ಲಿ ಬ್ಯಾಂಕ್ ಬಂದ್

ನವದೆಹಲಿ(ಡಿ.15): ದೇಶದ ರಾಜಕೀಯ ಕ್ಷೇತ್ರದಲ್ಲಿ ಏನೇ ಬದಲಾವಣೆಗಳಾದರೂ ಜನಸಾಮಾನ್ಯ ತಡೆದುಕೊಳ್ಳಬಲ್ಲ. ಅದು ಅವನ ಜೀವನಕ್ಕೆ ಪರೋಕ್ಷವಾಗಿ ಸಂಬಂಧಿಸಿದ ವಿಷಯವಾಗಿದ್ದರಿಂದ ಅದರ ಕುರಿತು ಆತ ಸ್ವಲ್ಪ ಮಾತ್ರ ತಡೆದುಕೊಳ್ಳಬಲ್ಲ.

ಆದರೆ ತನ್ನ ಜೀವನಕ್ಕೆ ನೇರವಾಗಿ ಸಂಬಂಧಿಸಿದ ಸಾರಿಗೆ ಕ್ಷೇತ್ರ, ವೈದ್ಯಕೀಯ, ಬ್ಯಾಂಕ್, ಜೀವನಾವಶ್ಯಕ ವಸ್ತುಗಳ ಅಲಭ್ಯತೆ ಆತನನ್ನು ನೇರವಾಗಿ ಬಾಧಿಸುತ್ತದೆ.

ಅದರಂತೆ ಸಾಮಾನ್ಯನ ಜೀವನದ ಪ್ರಮುಖ ಅಂಗವಾದ ಬ್ಯಾಂಕ್‌ಗಳು ಕಾರಣಾಂತರಗಳಿಂದ ಕಾರ್ಯಸ್ಥಗಿತಗೊಳಿಸಿದರೆ ಅದು ಖಂಡಿತ ಆತನಿಗೆ ಬಿಸಿ ಮುಟ್ಟಿಸಿರಲಿಕ್ಕೆ ಸಾಕು.

ಡಿಸೆಂಬರ್ ತಿಂಗಳಲ್ಲಿ ಒಟ್ಟು ಐದು 5 ಬ್ಯಾಂಕ್‌ಗಳು ಮುಚ್ಚಲ್ಪಡಲಿವೆ ಎಂಬ ಸುದ್ದಿ ಇದೀಗ ಚರ್ಚೆಯಾಗುತ್ತಿದೆ. ಮುಷ್ಕರ, ಹಬ್ಬ, ವಾರಾಂತ್ಯ ರಜೆಗಳ ಪರಿಣಾಮವಾಗಿ ಒಟ್ಟು 5 ದಿನ ಬ್ಯಾಂಕ್ ಬಂದ್ ಆಗಿರಲಿವೆ ಎನ್ನಲಾಗಿದೆ.

ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರು ಪ್ರತ್ಯೇಕವಾಗಿ ಎರಡು ದಿನ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಉದ್ದೇಶಿಸಿದ್ದು, ಡಿ.21ಕ್ಕೆ ಬ್ಯಾಂಕ್ ಆಫೀಸರ್ಸ್ ಯೂನಿಯನ್ ಮುಷ್ಕರಕ್ಕೆ ಕರೆ ನೀಡಿದೆ. 

ಡಿ.22ಕ್ಕೆ ನಾಲ್ಕನೇ ಶನಿವಾರವಾದ ಕಾರಣ ಬ್ಯಾಂಕ್​ಗೆ ರಜೆ ಇದ್ದು, ಡಿ.23 ಭಾನುವಾರ ಮತ್ತು ಡಿ.25ಕ್ಕೆ ಕ್ರಿಸ್​ವುಸ್ ರಜೆ ಇದೆ. 

ಬ್ಯಾಂಕ್ ಒಕ್ಕೂಟಗಳ ಮಹಾವೇದಿಕೆ (ಯುಎಫ್​ಬಿಯು) ಡಿ.26ರಂದು ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ ಡಿ.24 ಹೊರತುಪಡಿಸಿ ಉಳಿದ ಐದು ದಿನ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ ಎನ್ನಲಾಗಿದೆ.

ಈ ಬ್ಯಾಂಕ್‌ನ ಎಟಿಎಂಗಳು ಬಂದ್‌ ಆಗಲ್ಲ: ಕೇಂದ್ರ

click me!