ಈ ಬ್ಯಾಂಕ್‌ನ ಎಟಿಎಂಗಳು ಬಂದ್‌ ಆಗಲ್ಲ: ಕೇಂದ್ರ

By Web DeskFirst Published Dec 15, 2018, 8:59 AM IST
Highlights
ದೇಶದಲ್ಲಿರುವ ಅರ್ಧದಷ್ಟು ಎಂಟಿಎಂಗಳು ಮುಚ್ಚಲ್ಪಡುತ್ತದೆ ಎಂಬ ಸುದ್ದಿ ಬಂದ ಬೆನ್ನಲ್ಲೇ ಸಾರ್ವಾಜನಿಕ ವಲಯದ ಬ್ಯಾಂಕ್‌ಗಳಿಗೆ ಸೇರಿರುವ ಎಟಿಎಂಗಳು ಮುಚ್ಚುವುದಿಲ್ಲವೆಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

ನವದೆಹಲಿ: ವಿವಿಧ ಕಾರಣಗಳಿಗಾಗಿ ದೇಶಾದ್ಯಂತ ಇರುವ 2.38 ಲಕ್ಷ ಎಟಿಎಂಗಳ ಪೈಕಿ ಅರ್ಧದಷ್ಟುಎಟಿಎಂಗಳನ್ನು ಮುಂದಿನ ವರ್ಷದ ಮಾಚ್‌ರ್‍ ಅಂತ್ಯದ ವೇಳೆಗೆ ಮುಚ್ಚಲಾಗುತ್ತದೆ ಎಂಬ ವರದಿಗಳ ಬೆನ್ನಲ್ಲೇ, ಸಾರ್ವಜನಿಕ ವಲಯದ ಯಾವುದೇ ಬ್ಯಾಂಕ್‌ಗಳು ಎಟಿಎಂಗಳನ್ನು ಮುಚ್ಚಬೇಕೆಂಬ ಚಿಂತನೆ ಹೊಂದಿಲ್ಲ ಎಂದು ವಿತ್ತ ಸಚಿವಾಲಯದ ರಾಜ್ಯ ಸಚಿವ ಶಿವ ಪ್ರತಾಪ್‌ ಶುಕ್ಲಾ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

ಬ್ಯಾಂಕ್ ಖಾತೆದಾರರಿಗೆ ಕಹಿ ಸುದ್ದಿ, ಇನ್ನು ಮುಂದೆ ಈ ಸೇವೆಗಳಿಗೂ ಶುಲ್ಕ

ಶುಕ್ರವಾರದ ಲೋಕಸಭಾ ಕಲಾಪದಲ್ಲಿ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವ ಶುಕ್ಲಾ, ‘ಸಣ್ಣ ಆರ್ಥಿಕ ಬ್ಯಾಂಕ್‌ಗಳು, ಪಾವತಿ ಬ್ಯಾಂಕ್‌ಗಳು, ವಾಣಿಜ್ಯಾತ್ಮಕ ಬ್ಯಾಂಕ್‌ಗಳು ಸೇರಿ ದೇಶಾದ್ಯಂತ ಒಟ್ಟು 2.21 ಲಕ್ಷ ಎಟಿಎಂಗಳನ್ನು ಸ್ಥಾಪಿಸಿವೆ,’ ಎಂದರು.

ಇನ್ನು ಹೆಚ್ಚು ದಿನ 2 ಸಾವಿರ ರೂ. ನೋಟು ಬಾಳುವುದಿಲ್ಲ

ಜ.1ರಿಂದ ಈ ಎಟಿಎಂ ಕಾರ್ಡ್‌ಗಳು ಕೆಲಸ ಮಾಡುವುದಿಲ್ಲ

click me!