ಈ 5 ಸಣ್ಣ ವ್ಯವಹಾರಗಳಿಂದಲೇ ತಿಂಗಳಿಗೆ ಗಳಿಸಬಹುದು 30-40 ಸಾವಿರ ರೂಪಾಯಿ, ಇಲ್ಲಿ ನೀವೇ ರಾಜ!

Published : Feb 12, 2025, 11:29 AM ISTUpdated : Feb 12, 2025, 11:33 AM IST
ಈ 5 ಸಣ್ಣ ವ್ಯವಹಾರಗಳಿಂದಲೇ ತಿಂಗಳಿಗೆ ಗಳಿಸಬಹುದು 30-40 ಸಾವಿರ ರೂಪಾಯಿ, ಇಲ್ಲಿ ನೀವೇ ರಾಜ!

ಸಾರಾಂಶ

Local Business Ideas: ಕಡಿಮೆ ಬಂಡವಾಳದಲ್ಲಿ ತಿಂಗಳಿಗೆ 30 ರಿಂದ 40 ಸಾವಿರ ರೂ. ಗಳಿಸಲು ಬಯಸುವವರಿಗೆ 5 ಸಣ್ಣ ವ್ಯವಹಾರಗಳ ಪರಿಚಯ.ಈ ವ್ಯವಹಾರಗಳನ್ನು ನಿಮ್ಮೂರಿನಲ್ಲಿಯೇ ಆರಂಭಿಸಬಹುದು.

Traditional Business Idea: ನಿಮ್ಮೂರಿನಲ್ಲಿಯೇ ಸಣ್ಣ-ಪುಟ್ಟ ವ್ಯವಹಾರ ಆರಂಭಿಸಲು ಪ್ಲಾನ್ ಮಾಡಿಕೊಳ್ಳುತ್ತಿದ್ದೀರಾ? ಯಾವುದೇ  ವ್ಯವಹಾರ ಸೀಮಿತ ಅವಧಿಯ ನಂತರ ವ್ಯಾಪಾರದಲ್ಲಿ ಇಳಿಕೆಯಾಗುತ್ತದೆ.  ಹಾಗಾಗಿ ಸದ್ಯ ಚಾಲ್ತಿಯಲ್ಲಿರುವ ವ್ಯವಹಾರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ರೀತಿಯ ವ್ಯವಹಾರಗಳಿಂದ ಲಾಭದ ಪ್ರಮಾಣ ಹೆಚ್ಚಾಗಿರುತ್ತದೆ. ಇಂತಹ ಸಣ್ಣ ಪ್ರಮಾಣದ ವ್ಯವಹಾರಗಳನ್ನು ನೀವು ವಾಸಿಸುವ ಪ್ರದೇಶದ ಜನಸಂದಣಿ ಹೆಚ್ಚಿರೋ ಸ್ಥಳದಲ್ಲಿ ಆರಂಭಿಸಬೇಕು. ಕಡಿಮೆ ಬಂಡವಾಳ ಹೂಡಿಕೆ ಮಾಡಿ ತಿಂಗಳಿಗೆ 30  ರಿಂದ 40 ಸಾವಿರ ರೂ.ಗಳವರೆಗೆ ಹಣ ಸಂಪಾದಿಸಬಹುದು. 

1.ಮೊಮೋಸ್ 
ಇಂದು ಫಾಸ್ಟ್‌ಫುಡ್‌ಗಳಲ್ಲಿ ಮೊಮೋಸ್ ಟ್ರೆಂಡಿಂಗ್‌ನಲ್ಲಿದೆ. ಈ ವ್ಯವಹಾರ ಆರಂಭಿಸಲು 15 ರಿಂದ 20 ಸಾವಿರ ರೂ. ಹಣ ಹೂಡಿಕೆ ಮಾಡಬೇಕಾಗುತ್ತದೆ. ರಸ್ತೆ ಬದಿಯಲ್ಲಿ ಸಣ್ಣದಾಗಿ ಮೊಮೋಸ್ ಮಾರಾಟ ಮಾಡಿ ತಿಂಗಳಿಗೆ  30 ರಿಂದ 40 ಸಾವಿರ ರೂಪಾಯಿ ಹಣ ನಿಮ್ಮದಾಗುತ್ತದೆ. ಆಹಾರದ ರುಚಿ ಜೊತೆ ಶುದ್ಧತೆ ಕಾಯ್ದುಕೊಂಡ್ರೆ ಭವಿಷ್ಯದಲ್ಲಿ ನಿಮ್ಮ ವ್ಯಾಪಾರ ಸಹ ಹೆಚ್ಚಾಗುತ್ತದೆ. 

2.ಸಮೋಸಾ ಮತ್ತು ಚಾಟ್
ಸಂಜೆಯಾದ ಕೂಡಲೇ ಜನರಿಗೆ ಏನಾದರು ತಿಂಡಿ ಬೇಕೆನಿಸುತ್ತದೆ. ಅದರಲ್ಲಿ ಸಮೋಸಾ ಸಹ ಒಂದಾಗಿದೆ. ಇಂದಿನ ಮಕ್ಕಳು, ಯುವ  ಸಮುದಾಯ ಸಮೋಸಾ, ಕಚೋರಿ, ವಡಾಪಾವ್ ಅಂತಹ ತಿಂಡಿಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಹಾಗಾಗಿ ಸಮೋಸಾ ಸೇರಿದಂತೆ ವಿವಿಧ ಚಾಟ್ ಮಾರಾಟ ಮಾಡುವ ಮೂಲಕ ಈ ವ್ಯವಹಾರ ಆರಂಭಿಸಬಹುದು. ವರ್ಷದ 12 ತಿಂಗಳು ಈ ವ್ಯಾಪಾರ ನಡೆಯುತ್ತದೆ. 

3.ತಿಂಡಿ 
ಸಾಂಪ್ರದಾಯಿಕ ತಿಂಡಿಗಳಿಗೆ ಮಾರುಕಟ್ಟೆಯಲ್ಲಿ ಸದಾ ಡಿಮ್ಯಾಂಡ್ ಇರುತ್ತದೆ. ಇಡ್ಲಿ, ವಡೆ, ದೋಸೆ, ಪಡ್ಡು, ಅವಲಕ್ಕಿ, ಉಪ್ಪಿಟ್ಟು ಸೇರಿದಂತೆ ಸ್ಥಳೀಯ ತಿಂಡಿಗಳನ್ನು ಮಾರಾಟ ಮಾಡುವ ಮೂಲಕ ಕೈ ತುಂಬಾ ಹಣ ಸಂಪಾದನೆ ಮಾಡಬಹುದು. ಜನಸಂದಣಿ ಹೆಚ್ಚಾಗಿರುವ ಬಸ್ ನಿಲ್ದಾಣ, ಆಸ್ಪತ್ರೆ, ಶಾಲಾ-ಕಾಲೇಜು ಸುತ್ತಮುತ್ತ ಈ ವ್ಯಾಪಾರ ಆರಂಭಿಸಬಹುದು. ಈ ವ್ಯವಹಾರವನ್ನು 15-20 ಸಾವಿರ ರೂ.ಗಳಲ್ಲಿ ಆರಂಭಿಸಿ ತಿಂಗಳಿಗೆ 30-40 ಸಾವಿರ ರೂ.ವರೆಗೂ ಹಣ ಸೇವ್ ಮಾಡಬಹುದು. 

ಇದನ್ನೂ ಓದಿ: ಕೇವಲ 5 ಸಾವಿರ ಬಂಡವಾಳ ಹಾಕಿದ್ರೆ, ತಿಂಗಳಿಗೆ 30 ಸಾವಿರ ಸಂಪಾದನೆ; ಸರ್ಕಾರದಿಂದಲೂ ಸಿಗುತ್ತೆ ಹಣ

4.ಪಾನಿಪುರಿ
ದಿನಕ್ಕೆ 4 ರಿಂದ 5 ಗಂಟೆ ಕೆಲಸ ಮಾಡಿ ತಿಂಗಳಿಗೆ 30 ರಿಂದ 40 ಸಾವಿರ ರೂ.ಗಳವರೆಗೆ ಹಣ ಸಂಪದಾನೆ ಮಾಡುವ ವ್ಯವಹಾರಗಳಲ್ಲಿ ಪಾನಿಪುರಿಯೂ ಸಹ ಒಂದಾಗಿದೆ. ಮನೆಯಲ್ಲಿ ಎಲ್ಲ ಮಸಾಲೆ ಮತ್ತು ಪುರಿಯನ್ನು ಸಿದ್ಧಪಡಿಸಿಕೊಂಡರೆ ಲಾಭದ ಪ್ರ,ಮಾಣ ಅಧಿಕವಾಗಿರುತ್ತದೆ.   ಸದ್ಯ 30 ರೂಪಾಯಿಗೆ  6 ಪಾನಿಪುರಿ ನೀಡಲಾಗುತ್ತದೆ.  ಪಾನಿಪುರಿ ಎಲ್ಲಾ ವರ್ಗದವರ ನೆಚ್ಚಿನ ತಿಂಡಿಗಳಲ್ಲಿ ಒಂದಾಗಿದೆ. 

5.ಟೀ ಮಾರಾಟ
ನೀವಿರುವ ಪ್ರದೇಶದಲ್ಲಿ ಟೀ ಮಾರಾಟ ಮಾಡಿಯೂ ಹಣ ಸಂಪಾದನೆ ಮಾಡಬಹುದು. ವಿವಿಧ ರೀತಿಯ ಟೀ ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯಬಹುದು. ಹಾಗೆಯೇ ಟೀ ಶಾಪ್‌ನಲ್ಲಿ ಬಳಕೆ ಮಾಡುವ ಕಪ್ ಸಹ  ಮಾರಾಟವನ್ನು ಹೆಚ್ಚಿಸುತ್ತದೆ. ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ  ಬ್ಯುಸಿನೆಸ್‌ಗಳಲ್ಲಿ ಸಹ ಇದು ಒಂದಾಗಿದೆ. 

ಇದನ್ನೂ ಓದಿ: 5 ರಿಂದ 6 ರೂ.ಗೆ ಮಾರಾಟವಾಗೋ ಈ ಬ್ಯುಸಿನೆಸ್‌ನಿಂದ ತಿಂಗಳಿಗೆ ಸಂಪಾದಿಸಿ 40-50 ಸಾವಿರ ರೂಪಾಯಿ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!