ಯೆಸ್ ಬ್ಯಾಂಕ್ ಉದ್ಯೋಗ ಕಡಿತಕ್ಕೆ 500 ನೌಕರರು ಬೀದಿಪಾಲು, ಮತ್ತಷ್ಟು ಶೀಘ್ರದಲ್ಲಿ ಎನ್ನುತ್ತಿದೆ ಸಂಸ್ಥೆ!

By Chethan Kumar  |  First Published Jun 26, 2024, 11:50 AM IST

ಕೆಲ ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಕಡಿತದ ಆತಂಕದ ಬೆನ್ನಲ್ಲೇ ಇದೀಗ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಉದ್ಯೋಗ ಸಮಸ್ಯೆ ಎದುರಾಗಿದೆ. ಯೆಸ್ ಬ್ಯಾಂಕ್ ಇದೀಗ 500 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದೆ. ಇಷ್ಟೇ ಅಲ್ಲ ಮತ್ತಷ್ಟು ಉದ್ಯೋಗ ಕಡಿತಕ್ಕೆ ಮುಂದಾಗಿದೆ.
 


ಮುಂಬೈ(ಜೂ.26) ವಿದೇಶಗಳಲ್ಲಿನ ಆರ್ಥಿಕ ಹಿಂಜರಿತದ ಪರಿಣಾಮ ಹಲವು ಪ್ರತಿಷ್ಠಿತ ಕಂಪನಿಗಳು ವಿಶ್ವಾದ್ಯಂತ ಉದ್ಯೋಗ ಕಡಿತ ಮಾಡುತ್ತಿದೆ. ಇದೀಗ ಯೆಸ್ ಬ್ಯಾಂಕ್ ಉಗ್ಯೋಗ ಕಡಿತಕ್ಕೆ ನೌಕರರು ಬೀದಿಪಾಲಾಗಿದ್ದಾರೆ. ಯೆಸ್ ಬ್ಯಾಂಕ್ ಬರೋಬ್ಬರಿ 500 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಯೆಸ್ ಬ್ಯಾಂಕ್ ಇದೀಗ  ಉದ್ಯೋಗಿಗಳು, ಖರ್ಚು ವೆಚ್ಚಗಳನ್ನು ಪುನರ್ ರಚನೆ ಮಾಡುತ್ತಿದೆ.  ಇದರ ಭಾಗವಾಗಿ ಯೆಸ್ ಬ್ಯಾಂಕ್ ಉದ್ಯೋಗ ಕಡಿತ ಮಾಡುತ್ತಿದೆ. ಸದ್ಯ 500 ಮಂದಿ ಉದ್ಯೋಗ ಕಡಿತದಿಂದ ಕೆಲಸ ಕಳೆದುಕೊಂಡಿದ್ದಾರೆ. ಇದೀಗ ಮತ್ತಷ್ಟು ಉದ್ಯೋಗ ಕಡಿತ ಪ್ರಕ್ರಿಯೆ ನಡೆಯಲಿದೆ ಎಂದು ಕಂಪನಿ ಸೂಚ್ಯವಾಗಿ ಹೇಳಿದೆ.

ಎಕಾನಾಮಿಕ್ ಟೈಮ್ಸ್ ವರದಿ ಪ್ರಕಾರ, ಯೆಸ್ ಬ್ಯಾಂಕ್ ಈಗಾಗಲೇ 500 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದೆ.  ಬ್ಯಾಂಕಿಂಗ್ ಸೇರಿದಂತೆ ಹಲವು ವಿಭಾಗಗಳಿಂದ ಉದ್ಯೋಗ ಕಡಿತ ಮಾಡಲಾಗಿದೆ. ಉದ್ಯೋಗ ಕಡಿತ ಪಟ್ಟಿಯಲ್ಲಿ ಕಾಣಿಸಿಕೊಂಡ ಉದ್ಯೋಗಿಗಳಿಗೆ ನಿಯಮದ ಪ್ರಕಾರ 3 ತಿಂಗಳ ವೇತನ ನೀಡಲಾಗುತ್ತದೆ ಎಂದು ಯೆಸ್ ಬ್ಯಾಂಕ್ ವಕ್ತಾರರು ಹೇಳಿದ್ದಾರೆ.

Tap to resize

Latest Videos

ಅಣ್ಣನಿಗೆ ಸಂಪತ್ತಿನ ಸಿರಿ: ತಮ್ಮನಿಗೆ ಸಂಕಷ್ಟದ ಹೊಳೆ: ಇಡಿ ಮುಂದೆ ಹಾಜರಾದ ಅನಿಲ್ ಅಂಬಾನಿ ಪತ್ನಿ ಟೀನಾ

ಯೆಸ್ ಬ್ಯಾಂಕ್ ಇದೀಗ ಡಿಜಿಟಲ್ ಬ್ಯಾಂಕಿಂಗ್‌ಗೆ ಹೆಚ್ಚು ಒತ್ತು ನೀಡುತ್ತಿದೆ. ಹೀಗಾಗಿ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಯೆಸ್ ಬ್ಯಾಂಕ್ ಮುಂದಾಗಿದೆ. ಬ್ಯಾಂಕ್ ಉದ್ಯೋಗಿಗಳ ವೇತನ, ಇತರ ಖರ್ಚು ವೆಚ್ಚಗಳು ಯೆಸ್ ಬ್ಯಾಂಕ್‌ಗೆ ಹೊರೆಯಾಗುತ್ತಿದೆ.  2023ರಿಂದ 2024ಕ್ಕೆ ಶೇಕಡಾ 12ರಷ್ಟು ಖರ್ಚು ವೆಚ್ಚ ಹೆಚ್ಚಳವಾಗಿದೆ. 2023ರಲ್ಲಿ ಯೆಸ್ ಬ್ಯಾಂಕ್ ಒಟ್ಟು ಖರ್ಚು 3,363 ಕೋಟಿ ರೂಪಾಯಿ. ಇದು 2024ರ ವೇಳೆಗೆ 3,774 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಯೆಸ್ ಬ್ಯಾಂಕ್ ಹೇಳಿದೆ. 

ಡಿಜಿಟಲ್ ಬ್ಯಾಂಕಿಂಗ್‌ನಿಂದ ಕಚೇರಿಯಲ್ಲಿನ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡುತ್ತಿದ್ದೇವೆ. ಯೆಸ್ ಬ್ಯಾಂಕ್ ಗ್ರಾಹಕರಿಗೆ ಸುಲಭ ಹಾಗೂ ಸರಳ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ನೀಡಲಾಗಿದೆ. ಬ್ಯಾಂಕಿಂಗ್, ಸಾಲ, ಡೆಪಾಸಿಟ್ ಸೇರಿದಂತೆ ಯಾವುದೇ ವಿಚಾರಕ್ಕೂ ಡಿಜಿಟಲ್ ಬ್ಯಾಂಕಿಂಗ್ ಮೂಲಕ ವ್ಯವಹರಿಸಲು ಉತ್ತೇಜನ ನೀಡಲಾಗುತ್ತಿದೆ. ಇದರ ಜೊತೆ ಜೊತೆಗೆ ಉದ್ಯೋಗ ಕಡಿತ ಮಾಡುತ್ತಾ, ಖರ್ಚು ವೆಚ್ಚ ತಗ್ಗಿಸುವ ಪ್ರಯತ್ನ ಮಾಡುತ್ತಿದೆ.

ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಕೇಂದ್ರ ಬಜೆಟ್‌ನಲ್ಲಿ ಆದಾಯ ಮಿತಿ ಏರಿಕೆ?

ಯೆಸ್ ಬ್ಯಾಂಕ್ 2020ರಲ್ಲಿ ಇದೇ ರೀತಿ ಉದ್ಯೋಗ ಕಡಿತ ಮಾಡಿತ್ತು. ಕೊರೋನಾ ವಕ್ಕರಿಸಿದ ಬಳಿಕ ಡಿಜಿಟಲ್ ಬ್ಯಾಂಕಿಂಗ್ ಏಕಾಏಕಿ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಇತ್ತ ಬ್ಯಾಂಕ್ ಕಾರ್ಯನಿರ್ವಹಣೆಗಳು ಬಂದ್ ಆಗಿತ್ತು. ಲಾಕ್ ಡೌನ್ ಕಾರಣದಿಂದ ಅಗತ್ಯ ಸೇವೆ ಹೊರತುಪಡಿಸಿ ಇತರ ಎಲ್ಲಾ ಸೇವೆಗಳು ಬಂದ್ ಆಗಿತ್ತು. ಈ ವೇಳೆ ಬ್ಯಾಂಕ್ ಕೂಡ ನಷ್ಟ ಅನುಭವಿಸಿತ್ತು. ಇದರ ಬೆನ್ನಲ್ಲೇ ಉದ್ಯೋಗ ಕಡಿತ ಮಾಡಲಾಗಿತ್ತು.
 

click me!