Latest Videos

ಹಾಲು ದುಬಾರಿ, ಪೆಟ್ರೋಲ್ ಡೀಸೆಲ್‌ನಿಂದ ಜೇಬಿಗೆ ಕತ್ತರಿ, ನಿಮ್ಮ ಜಿಲ್ಲೆಯಲ್ಲಿ ಇಂಧನ ದರ ಎಷ್ಟಿದೆ?

By Chethan KumarFirst Published Jun 26, 2024, 7:27 AM IST
Highlights

ಹಾಲಿನ ಬೆಲೆ ಹೆಚ್ಚಳವಾಗಿದೆ. ಈಗಾಗಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಲಾಗಿದೆ. ಸತತ ಬೆಲೆ ಏರಿಕೆಯಿಂದ ರಾಜ್ಯದ ಜನತೆಯ ಜೇಬಿಗೆ ಕತ್ತರಿ ಬಿದ್ದಿದೆ. ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟು? 
 

ಬೆಂಗಳೂರು(ಜೂ.26) ಕರ್ನಾಟಕದಲ್ಲಿ ಒಂದರ ಹಿಂದೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಹಾಲಿನ ಬೆಲೆ ಏರಿಕೆಯಾಗಿದೆ. ಇದರ ಬೆನ್ನಲ್ಲೆ ಕಾಫಿ, ತಿಂಡಿ, ಊಟ ಸೇರಿದಂತೆ ಹೊಟೆಲ್ ಉದ್ಯಮ ಬೆಲೆ ಏರಿಕೆ ಸೂಚನೆ ಸಿಕ್ಕಿದೆ. ಪರಿಣಾಮ ರಾಜ್ಯದ ಜನ ತತ್ತರಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಲಾಗಿದ್ದಾರೆ. ಇಂಧನದ ಮೇಲೆ ಮಾರಾಟ ತೆರಿಗೆ ಏರಿಸಿದ ಬಳಿಕ ಪೆಟ್ರೋಲ್ ಡೀಸೆಲ್ ಕೈಗೆಟುಕದ ದ್ರಾಕ್ಷಿಯಾಗಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 102.86 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 88.94 ರೂಪಾಯಿ ಆಗಿದೆ.

ದೆಹಲಿಯಲ್ಲಿ ಇಂಧನ ಸ್ಥಿರತೆ ಕಾಪಾಡಿಕೊಂಡಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.72 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 87.62 ರೂಪಾಯಿ ಆಗಿದೆ. ಇನ್ನು ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 100.85, ಡೀಸೆಲ್ ಬೆಲೆ 92.44 ರೂಪಾಯಿ ಆಗಿದೆ. ಒಂದೆಡೆ ದೆಹಲಿ ಸೇರಿದಂತೆ ಕೆಲ ರಾಜ್ಯಗಳು ಉರಿ ಬಿಸಿಲಿನಿಂದ ತತ್ತರಿಸಿದೆ. ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ದಕ್ಷಿಣ ಭಾರತದಲ್ಲಿ ಕೆಲ ರಾಜ್ಯದಲ್ಲಿ ಮಳೆ ಕೊರತೆ ಕಾಡುತ್ತಿದೆ. ಇದರ ಪರಿಣಾಮ ತರಕಾರಿ ಸೇರಿದಂತ ಇತರ ವಸ್ತುಗಳ ಬೆಲೆ ಗಗನಕ್ಕೇರಿದೆ. 

Business : ಮದುವೆಗೆ ಹಣ ಖರ್ಚು ಮಾಡೋದ್ರಲ್ಲಿ ಭಾರತೀಯರು ಮುಂದೆ

ಕರ್ನಾಟಕದ ಜಿಲ್ಲೆಗಳಲ್ಲಿ ಇಂಧನ ದರದ ಪಟ್ಟಿ ಇಲ್ಲಿದೆ.  
ಬಾಗಲಕೋಟೆ: ಪೆಟ್ರೋಲ್ ದರ:  103.44 ರೂ  
ಬೆಳಗಾವಿ: ಪೆಟ್ರೋಲ್ ದರ: 102.90 ರೂ     
ಧಾರವಾಡ: ಪೆಟ್ರೋಲ್ ದರ: 102.63 ರೂ  
ಗದಗ: ಪೆಟ್ರೋಲ್ ದರ: 103.19 ರೂ   
ಹಾವೇರಿ: ಪೆಟ್ರೋಲ್ ದರ: 103.35 ರೂ
ಉತ್ತರ ಕನ್ನಡ: ಪೆಟ್ರೋಲ್ ದರ: 103.91 ರೂ
ವಿಜಯಪುರ: ಪೆಟ್ರೋಲ್ ದರ:  103.05 ರೂ
ಬೆಂಗಳೂರು ಗ್ರಾಮಾಂತರ: ಪೆಟ್ರೋಲ್ ದರ: 102.98 
ಬೆಂಗಳೂರು ನಗರ: ಪೆಟ್ರೋಲ್ ದರ:102.86 ರೂ 
ಚಿಕ್ಕಬಳ್ಳಾಪುರ: ಪೆಟ್ರೋಲ್ ದರ: 102.86 ರೂ
ಚಿತ್ರದುರ್ಗ: ಪೆಟ್ರೋಲ್ ದರ: 104.30  ರೂ
ದಾವಣಗೆರೆ: ಪೆಟ್ರೋಲ್ ದರ:  104.18 ರೂ
ಕೋಲಾರ: ಪೆಟ್ರೋಲ್ ದರ:  103.03 ರೂ
ರಾಮನಗರ: ಪೆಟ್ರೋಲ್ ದರ: 103.18 ರೂ 
ಶಿವಮೊಗ್ಗ: ಪೆಟ್ರೋಲ್ ದರ:  104.25 ರೂ
ತುಮಕೂರು: ಪೆಟ್ರೋಲ್ ದರ: 103.40 ರೂ  
ಬಳ್ಳಾರಿ: ಪೆಟ್ರೋಲ್ ದರ:   104.89 ರೂ
ಬೀದರ್: ಪೆಟ್ರೋಲ್ ದರ:  103.47 ರೂ 
ಕಲಬುರಗಿ: ಪೆಟ್ರೋಲ್ ದರ: 102.95 ರೂ 
ಕೊಪ್ಪಳ: ಪೆಟ್ರೋಲ್ ದರ: 104.09 ರೂ
ರಾಯಚೂರು: ಪೆಟ್ರೋಲ್ ದರ:  103.75 ರೂ
ವಿಜಯನಗರ: ಪೆಟ್ರೋಲ್ ದರ: 105.01 ರೂ
ಯಾದಗಿರಿ: ಪೆಟ್ರೋಲ್ ದರ:  104.03 ರೂ
ಚಾಮರಾಜನಗರ: ಪೆಟ್ರೋಲ್ ದರ:  103 ರೂ
ಚಿಕ್ಕಮಗಳೂರು: ಪೆಟ್ರೋಲ್ ದರ:  104.17 ರೂ
ದಕ್ಷಿಣ ಕನ್ನಡ: ಪೆಟ್ರೋಲ್ ದರ:  102.38 ರೂ
ಹಾಸನ: ಪೆಟ್ರೋಲ್ ದರ:  102.58 ರೂ 
ಕೊಡಗು: ಪೆಟ್ರೋಲ್ ದರ: 104.32 ರೂ 
ಮಂಡ್ಯ: ಪೆಟ್ರೋಲ್ ದರ: 102.70 ರೂ   
ಮೈಸೂರು : ಪೆಟ್ರೋಲ್ ದರ: 102.41 ರೂ
ಉಡುಪಿ: ಪೆಟ್ರೋಲ್ ದರ: 102.43 ರೂ  
2024ರ ಹಣಕಾಸು ವರ್ಷದಲ್ಲಿ ಭಾರತದ ಟಾಪ್‌ 10 ಲಾಭದಾಯಕ ಕಂಪನಿಗಳಿವು!

click me!