ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು

Published : Dec 06, 2025, 01:29 PM IST
anil ambani

ಸಾರಾಂಶ

Yes Bank loan fraud investigation: ಜಾರಿ ನಿರ್ದೇಶನಾಲಯವು ಉದ್ಯಮಿ ಅನಿಲ್ ಅಂಬಾನಿಯವರ ₹1,120 ಕೋಟಿ ಮೌಲ್ಯದ ಹೆಚ್ಚುವರಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರೊಂದಿಗೆ, ಯೆಸ್ ಬ್ಯಾಂಕ್ ಸಾಲ ವಂಚನೆಗೆ ಕೇಸಲ್ಲಿ ಮುಟ್ಟುಗೋಲು ಹಾಕಿಕೊಂಡ ಒಟ್ಟು ಆಸ್ತಿಗಳ ಮೌಲ್ಯ ₹10,117 ಕೋಟಿಗೆ ಏರಿದೆ. 

ಮತ್ತೊಮ್ಮೆ ಅನಿಲ್ ಅಂಬಾನಿ ಆಸ್ತಿ ಮುಟ್ಟುಗೋಲು:

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವೂ ಮತ್ತೊಮ್ಮೆ ಉದ್ಯಮಿ ಅನಿಲ್ ಅಂಬಾನಿಯವರ 1,120 ಕೋಟಿ ಮೌಲ್ಯದ ಹೆಚ್ಚುವರಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರೊಂದಿಗೆ ಅಧಿಕಾರಿಗಳು ಈಗ ಅನಿಲ್ ಅಂಬಾನಿ ಅವರ ಒಟ್ಟು 10,117 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಂತಾಗಿದೆ. ಜಾರಿ ನಿರ್ದೇಶನಾಲಯ(ED)ವೂ ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸುತ್ತಿದ್ದು, ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಗೆ ಸೇರಿದ 1,120 ಕೋಟಿ ಮೌಲ್ಯದ ಹೆಚ್ಚುವರಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರೊಂದಿಗೆ ಇಡಿಯೂ ಇಲ್ಲಿಯವರೆಗೆ ಮುಟ್ಟುಗೋಲು ಹಾಕಿಕೊಂಡ ಅನಿಲ್ ಅಂಬಾನಿಯವರ ಒಟ್ಟು ಆಸ್ತಿಗಳ ಮೌಲ್ಯ 10,117 ಕೋಟಿಗೆ ತಲುಪಿದೆ.

ಇದನ್ನೂ ಓದಿ: ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ

ಇತ್ತೀಚಿಗೆ ನಡೆಸಿದ ಮುಟ್ಟುಗೋಲಿನಲ್ಲಿ ಜಾರಿ ನಿರ್ದೇಶನಾಲಯವು ಮುಂಬೈನ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ರಿಲಯನ್ಸ್ ಸೆಂಟರ್, ರಿಲಯನ್ಸ್ ವೆಂಚರ್ ಅಸೆಟ್ ಎಂಜಿಟಿ ಪ್ರೈವೇಟ್ ಲಿಮಿಟೆಡ್ ಮತ್ತು ಫಿ ಮ್ಯಾನೇಜ್‌ಮೆಂಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಸ್ಥಿರ ಠೇವಣಿಗಳು (ಎಫ್‌ಡಿಗಳು), ಹಲವಾರು ಬ್ಯಾಂಕ್ ಖಾತೆ ಠೇವಣಿಗಳು ಮತ್ತು ಇತರ ಹೂಡಿಕೆಗಳು ಸೇರಿದಂತೆ ಸುಮಾರು 18 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಹೆಚ್ಚುವರಿಯಾಗಿ, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ಗೆ ಸೇರಿದ 7 ಆಸ್ತಿಗಳು, ರಿಲಯನ್ಸ್ ಪವರ್ ಹೊಂದಿರುವ 2 ಆಸ್ತಿಗಳು ಮತ್ತು ರಿಲಯನ್ಸ್ ವ್ಯಾಲ್ಯೂ ಸರ್ವೀಸಸ್ ಒಡೆತನದ 9 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಈ ಹಿಂದೆ ಜಪ್ತಿ ಮಾಡಲಾದ ಅನಿಲ್ ಅಂಬಾನಿ ಆಸ್ತಿಗಳು

ಇದಕ್ಕೂ ಮೊದಲು ಜಾರಿ ನಿರ್ದೇಶನಾಲಯವೂ ಬ್ಯಾಂಕ್ ಸಾಲ ವಂಚನೆ ಪ್ರಕರಣದ ತನಿಖೆಯ ಭಾಗವಾಗಿ ಅನಿಲ್ ಅಂಬಾನಿ ಅವರಿಗೆ ಸೇರಿದ ರಿಲಯನ್ಸ್ ಕಮ್ಯುನಿಕೇಷನ್ಸ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಮತ್ತು ರಿಲಯನ್ಸ್ ಹೋಮ್ ಫೈನಾನ್ಸ್‌ಗೆ ಸೇರಿದ ₹8,997 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಇದಲ್ಲದೆ, ಈ ವರ್ಷ ನವೆಂಬರ್ 20 ರಂದು ಜಾರಿ ನಿರ್ದೇಶನಾಲಯವೂ ಅನಿಲ್ ಅಂಬಾನಿಗೆ ಸಂಬಂಧಿಸಿದ ವಿವಿಧ ನಗರಳಾದ ನವಿಮುಂಬೈ, ಚೆನ್ನೈ, ಪುಣೆ ಮತ್ತು ಭುವನೇಶ್ವರದಲ್ಲಿದ್ದ ಸುಮಾರು ₹1,400 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅದಕ್ಕೂ ಮೊದಲು ನವೆಂಬರ್ 3 ರಂದು, ನಿಧಿಯನ್ನು ಬೇರೆಡೆ ತಿರುಗಿಸಿದ ಪ್ರಕರಣದಲ್ಲಿ(fund diversion case), ಅನಿಲ್ ಅಂಬಾನಿಯವರ ರಿಲಯನ್ಸ್ ಗ್ರೂಪ್‌ಗೆ ಸಂಬಂಧಿಸಿದ 132 ಎಕರೆ ಭೂಮಿಯ ಪಾರ್ಸೆಲ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಭೂಮಿಯೂ ನವಿ ಮುಂಬೈನ ಧೀರೂಭಾಯಿ ಅಂಬಾನಿ ನಾಲೆಡ್ಜ್ ಸಿಟಿ (ಡಿಎಕೆಸಿ) ಯಲ್ಲಿದ್ದು, ಈ ಆಸ್ತಿಯ ಮೌಲ್ಯ ₹4,462.81 ಕೋಟಿ. ಇದರ ಜೊತೆಗೆ, ಅನಿಲ್ ಅಂಬಾನಿಯವರ ಪಾಲಿ ಹಿಲ್‌ನಲ್ಲಿರುವ ಮನೆ ಸೇರಿದಂತೆ ಸಮೂಹಕ್ಕೆ ಸೇರಿದ ಸುಮಾರು ₹3,084 ಕೋಟಿ ಮೌಲ್ಯದ 40 ಕ್ಕೂ ಹೆಚ್ಚು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಇಡಿ ತನಿಖೆಯಲ್ಲಿ ಹಣ ದುರುಪಯೋಗ ಬೆಳಕಿಗೆ

ರಿಲಯನ್ಸ್ ಹೋಮ್ ಫೈನಾನ್ಸ್ (RHFL) ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ (RCFL) ನಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ದುರುಪಯೋಗವಾಗಿದೆ ಎಂದು ಇಡಿ ತನಿಖೆಯಲ್ಲಿ ಕಂಡು ಬಂದಿತ್ತು. 2017 ಮತ್ತು 2019 ರ ನಡುವೆ, ಯೆಸ್ ಬ್ಯಾಂಕ್ ಆರ್‌ಹೆಚ್‌ಎಫ್‌ಎಲ್‌ನಲ್ಲಿ 2,965 ಕೋಟಿ ಮತ್ತು ಆರ್‌ಸಿಎಫ್‌ಎಲ್‌ನಲ್ಲಿ 2,045 ಕೋಟಿ ಹೂಡಿಕೆ ಮಾಡಿತು. ಆದರೆ ಡಿಸೆಂಬರ್ 2019 ರ ಹೊತ್ತಿಗೆ, ಈ ಮೊತ್ತಗಳು ಅನುತ್ಪಾದಕ ಆಸ್ತಿಗಳು (Non Performing Assets)ಆಗಿ ಬದಲಾಗಿದ್ದವು. ಆರ್‌ಹೆಚ್‌ಎಫ್‌ಎಲ್‌ 1,353 ಕೋಟಿ ಮತ್ತು ಆರ್‌ಸಿಎಫ್‌ಎಲ್‌ನ ₹1,984 ಕೋಟಿ ಇನ್ನೂ ಬಾಕಿ ಉಳಿದಿವೆ. ಒಟ್ಟಾರೆಯಾಗಿ, ಈ ಎರಡು ಕಡೆ ಹೂಡಿಕೆ ಮಾಡಿದ್ದರಿಂದ ಯೆಸ್ ಬ್ಯಾಂಕ್ 2,700 ಕೋಟಿಗೂ ಹೆಚ್ಚು ನಷ್ಟವನ್ನು ಅನುಭವಿಸಿದೆ. ಇಡಿ ಪ್ರಕಾರ ರಿಲಯನ್ಸ್ ಗ್ರೂಪ್‌ ಈ ಹಣವನ್ನು ಇತರ ಕಂಪನಿಗಳಿಗೆ ತಿರುಗಿಸಿದೆ.

ಇದನ್ನೂ ಓದಿ:  ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌

ಇದಲ್ಲದೇ ಸಾಲ ಅನುಮೋದನೆ ಪ್ರಕ್ರಿಯೆಯಲ್ಲಿಯೂ ಹಲವಾರು ಅಕ್ರಮಗಳು ಕಂಡುಬಂದಿವೆ, ಉದಾಹರಣೆಗೆ ಕೆಲವು ಸಾಲಗಳಿಗೆ ಒಂದೇ ದಿನದಲ್ಲಿ ಅರ್ಜಿ ಸಲ್ಲಿಸಲಾಗಿದೆ, ಅನುಮೋದಿಸಲಾಗಿದೆ ಮತ್ತು ವಿತರಿಸಲಾಗಿದೆ. ಸಾಲ ಅನುಮೋದನೆ ವೇಳೆ ಕ್ಷೇತ್ರ ಪರಿಶೀಲನೆಗಳು ಮತ್ತು ಸಭೆಗಳನ್ನು ಮಾಡದೇ ಬಿಟ್ಟುಬಿಡಲಾಗಿದೆ. ಅಲ್ಲದೆ, ಅನೇಕ ದಾಖಲೆಗಳು ಖಾಲಿಯಾಗಿ ಅಥವಾ ದಿನಾಂಕವಿಲ್ಲದೆ ಕಂಡು ಬಂದಿವೆ ಎಂಬುದು ಇಡಿ ತನಿಖೆಯಿಂದ ಬಯಲಾಗಿದೆ. ಈ ಲೋಪಗಳನ್ನು ಇಡಿಯೂ ಉದ್ದೇಶಪೂರ್ವಕ ನಿಯಂತ್ರಣ ವೈಫಲ್ಯ ಎಂದು ಕರೆದಿದ್ದು, ಈ ಹಗರಣವನ್ನು ಬಯಲಿಗೆಳೆಯಲು, ಅದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 5(1) ಅಡಿಯಲ್ಲಿ ತನಿಖೆ ಪ್ರಾರಂಭಿಸಿ. ಅಕ್ಟೋಬರ್ 31ರಂದೇ ಆಸ್ತಿ ಜಪ್ತಿ ಆದೇಶಗಳನ್ನು ಹೊರಡಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಬ್ಯಾಂಕ್‌ನಿಂದ ರೈತರವರೆಗೆ: ಜನವರಿ 2026ರಿಂದ ಬದಲಾಗುತ್ತಿರುವ ಪ್ರಮುಖ ನಿಯಮಗಳು
₹1.50 ಲಕ್ಷದತ್ತ ಚಿನ್ನದರ ನಾಗಾಲೋಟ!