ಜಸ್ಟ್ 1 ಷೇರು, ಡೈರೆಕ್ಟ್ ಕೋಟ್ಯಧಿಪತಿ; ಖರೀದಿಗೆ ಜೀವಮಾನವೆಲ್ಲಾ ದುಡಿಬೇಕು!

By Mahmad Rafik  |  First Published Nov 6, 2024, 12:55 PM IST

ಇದು ಭಾರತದ ಅತಿ ದುಬಾರಿ ಶೇರ್ MRF ಗಿಂತ 475 ಪಟ್ಟು ಹೆಚ್ಚು. ಆರಂಭದಲ್ಲಿ ಇದರ ಬೆಲೆ ಕೇವಲ 20 ಡಾಲರ್ ಮಾತ್ರ ಇತ್ತು. ವಿಶ್ವದ ಅತಿ ದುಬಾರಿ ಸ್ಟಾಕ್ ಕುರಿತ ಮಾಹಿತಿ ಇಲ್ಲಿದೆ. 


ಮುಂಬೈ: ಭಾರತದ ಅತಿ ದುಬಾರಿ ಷೇರು ಬಗ್ಗೆ ಮಾತಾಡುವಾಗ, ಮೊದಲು ನೆನಪಾಗೋದು ಟೈರ್ ಕಂಪನಿ MRF. ಈಗಲೂ ಭಾರತದ ಅತಿ ದುಬಾರಿ ಸ್ಟಾಕ್ ಗಳಲ್ಲಿ ಒಂದಾಗಿರುವ ಎಂಆರ್‌ಎಫ್‌ ಒಂದು ಷೇರಿನ ಬೆಲೆ ಸುಮಾರು 1.21 ಲಕ್ಷ ರೂಪಾಯಿ ಆಗಿದೆ. ಆದ್ರೆ ವಿಶ್ವದ ಅತಿ ದುಬಾರಿ ಷೇರು ಯಾವುದು ಅಂತ ಗೊತ್ತಿದೆಯಾ? ಆ ಕಂಪನಿಯ ಒಂದು ಷೇರಿನ ಬೆಲೆ ಎಷ್ಟು ಅಂತ ತಿಳಿದಿದೆಯಾ? ವಿಶ್ವದ ಅತಿ ದುಬಾರಿ ಸ್ಟಾಕ್ ಕುರಿತ ಮಾಹಿತಿ ಇಲ್ಲಿದೆ. 

ವಾರೆನ್ ಬಫೆಟ್ ಕಂಪನಿ ಬರ್ಕ್‌ಶೈರ್ ಹ್ಯಾಥ್‌ವೇ ವಿಶ್ವದ ಅತಿ ದುಬಾರಿ ಷೇರು ಆಗಿದೆ. ಖ್ಯಾತ ಉದ್ಯಮಿ ಮತ್ತು ಹೂಡಿಕೆದಾರ ವಾರೆನ್ ಬಫೆಟ್ (Warren Buffett) ಕಂಪನಿ ಬರ್ಕ್‌ಶೈರ್ ಹ್ಯಾಥ್‌ವೇ (Berkshire Hathaway) ವಿಶ್ವದ ಅತಿ ದುಬಾರಿ ಶೇರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ಬರ್ಕ್‌ಶೈರ್ ಹ್ಯಾಥ್‌ವೇ ಕಂಪನಿಯ ಒಂದು ಷೇರಿನ ಬೆಲೆ 6,85,000 ಡಾಲರ್ ಅಂದರೆ ಬರೋಬ್ಬರಿ  5.75 ಕೋಟಿ ರೂಪಾಯಿ. ಬರ್ಕ್‌ಶೈರ್ ಹ್ಯಾಥ್‌ವೇ ಸ್ಟಾಕ್ ಭಾರತದ ಅತಿ ದುಬಾರಿ ಶೇರ್ MRF ಗಿಂತ 475 ಪಟ್ಟು ಹೆಚ್ಚು ದುಬಾರಿಯಾಗಿದೆ. MRFನ ಒಂದು ಷೇರಿನ ಬೆಲೆ ಸುಮಾರು 1.21 ಲಕ್ಷ, ಆದರೆ ಬರ್ಕ್‌ಶೈರ್ ಹ್ಯಾಥ್‌ವೇ 5.75 ಕೋಟಿ. ಅಂದರೆ MRF ಗಿಂತ ಈ ಸ್ಟಾಕ್ ಸುಮಾರು 475 ಪಟ್ಟು ಹೆಚ್ಚು ಆಗುತ್ತದೆ. 

Tap to resize

Latest Videos

ಬರ್ಕ್‌ಶೈರ್ ಹ್ಯಾಥ್‌ವೇನ ಒಂದೇ ಒಂದು ಶೇರ್ ಬೆಲೆ ಎಷ್ಟು ಜಾಸ್ತಿ ಅಂದ್ರೆ, ಅದನ್ನು ಖರೀದಿಸೋಕೆ ಅನೇಕ ಜನರ ಜೀವಮಾನದ ದುಡಿಮೆಯೂ ಸಾಕಾಗಲ್ಲ. ವಾರೆನ್ ಬಫೆಟ್ ಅವರು 1839 ರಲ್ಲಿ ಜವಳಿ ತಯಾರಿಕಾ ಕಂಪನಿಯಾಗಿ ಆರಂಭವಾಯಿತು. 1956ರಲ್ಲಿ ವಾರೆನ್ 'ಬಫೆಟ್ ಪಾರ್ಟ್‌ನರ್‌ಶಿಪ್ ಲಿಮಿಟೆಡ್' ಸ್ಥಾಪಿಸಿದರು. ನಂತರ ಅವರು ತಮ್ಮ ಸ್ನೇಹಿತ ಚಾರ್ಲಿ ಮುಂಗರ್ ಜೊತೆ ಸೇರಿ 1965 ರಲ್ಲಿ ಜವಳಿ ತಯಾರಿಕಾ ಕಂಪನಿ ಬರ್ಕ್‌ಶೈರ್ ಹ್ಯಾಥ್‌ವೇನ ಖರೀದಿಸಿದರು.

ಇದನ್ನೂ ಓದಿ: 15 ಗ್ರಾಮೀಣ ಬ್ಯಾಂಕ್‌ ಮುಚ್ಚಲು ಮುಂದಾಯ್ತಾ ಸರ್ಕಾರ? ಇಲ್ಲಿ ನಿಮ್ಮ ಖಾತೆ ಇದೆಯಾ?

ಆರಂಭದಲ್ಲಿ ಬರ್ಕ್‌ಶೈರ್ ಹ್ಯಾಥ್‌ವೇನ ಒಂದು ಶೇರ್ ಬೆಲೆ ಕೇವಲ 20 ಡಾಲರ್ ಆಗಿತ್ತು. ಆದರೆ, ಇಂದು ಬರ್ಕ್‌ಶೈರ್ ಹ್ಯಾಥ್‌ವೇ S&P 500 ಸೂಚ್ಯಂಕದ ಟಾಪ್-10 ಕಂಪನಿಗಳಲ್ಲಿ ಒಂದು. ಕಂಪನಿಯ ಮಂಡಳಿ ಷೇರುಗಳನ್ನು ವಿಭಜಿಸುವುದರ ವಿರುದ್ಧವಾಗಿದೆ. ಇದೇ ಕಾರಣಕ್ಕೆ ಇದು ವಿಶ್ವದ ಅತಿ ದುಬಾರಿ ಷೇರು ಆಗಿದೆ. ಅದೇ ರೀತಿ ಭಾರತದ MRF ಅನ್ನು ಕೂಡ ಇಲ್ಲಿಯವರೆಗೆ ಷೇರುಗಳನ್ನು ಒಮ್ಮೆಯೂ ವಿಭಜಿಸಿಲ್ಲ. ಹಾಗಾಗಿ ಅದರ ಬೆಲೆಯೂ ಸಾಕಷ್ಟು ಹೆಚ್ಚಾಗಿದೆ.

ಯಾರು ಈ ವಾರೆನ್ ಬಫೆಟ್?
ವಾರೆನ್ ಬಫೆಟ್ ವಿಶ್ವದ ಪ್ರಸಿದ್ಧ ಹೂಡಿಕೆದಾರರಲ್ಲದೆ, ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರು ಯಾವ ಕಂಪನಿಯ ಶೇರಿನಲ್ಲಿ ಹಣ ಹೂಡುತ್ತಾರೋ, ಆ ಕಂಪನಿಯ ಭವಿಷ್ಯ ಉಜ್ವಲವಾಗುತ್ತದೆ ಎಂಬ ಮಾತಿದೆ. 30 ಆಗಸ್ಟ್, 1930 ರಂದು ಅಮೆರಿಕದ ನೆಬ್ರಾಸ್ಕಾದಲ್ಲಿ ಜನಿಸಿದ ವಾರೆನ್ ಬಫೆಟ್ ವಿಶ್ವದ ಶ್ರೀಮಂತ ಹೂಡಿಕೆದಾರರಲ್ಲಿ ಒಬ್ಬರು.

ಇದನ್ನೂ ಓದಿ: 71 ಪೈಸೆಯ ಷೇರು ₹174, 1 ಲಕ್ಷ ಈಗ 2.5 ಕೋಟಿ ರೂಪಾಯಿ ಆಯ್ತು; ಝಣ ಝಣ ಕಾಂಚಾಣ

click me!