ನಿಮ್ಮ ಬಳಿ ಈ ಎಲ್ಲ ವಸ್ತು ಇದ್ಯಾ? ಈಗ್ಲೇ ರೇಷನ್ ಕಾರ್ಡ್ ಸರೆಂಡರ್ ಮಾಡಿ

Published : Nov 06, 2024, 11:10 AM ISTUpdated : Nov 06, 2024, 11:31 AM IST
ನಿಮ್ಮ ಬಳಿ ಈ ಎಲ್ಲ ವಸ್ತು ಇದ್ಯಾ? ಈಗ್ಲೇ ರೇಷನ್ ಕಾರ್ಡ್ ಸರೆಂಡರ್ ಮಾಡಿ

ಸಾರಾಂಶ

ರೇಷನ್ ಕಾರ್ಡ್ ಅಕ್ರಮ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಅನರ್ಹ ರೇಷನ್ ಕಾರ್ಡ್ ರದ್ದು ಮಾಡ್ತಿದೆ. ಈ ಅನರ್ಹ ರೇಷನ್ ಕಾರ್ಡ್ ಅಂದೇನು ಎಂಬ ವಿವರ ಇಲ್ಲಿದೆ.   

ನಿರ್ಗತಿಕರಿಗೆ ನೆರವಾಗಲು ಸರ್ಕಾರ ರೇಷನ್ ಕಾರ್ಡ್ (Ration Card) ವ್ಯವಸ್ಥೆ ಮಾಡಿದೆ. ಕಾರ್ಡ್ ಹೊಂದಿರುವ ಜನರಿಗೆ ಉಚಿತ ಪಡಿತರವನ್ನು ನೀಡ್ತಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಎಲ್ಲ ಸೌಲಭ್ಯವಿರುವ, ಉತ್ತಮ ಕೆಲಸದಲ್ಲಿರುವ ಜನರೂ ರೇಷನ್ ಕಾರ್ಡ್ ಮೂಲಕ ಸರ್ಕಾರ ಕಡಿಮೆ ಬೆಲೆಗೆ ನೀಡುವ ರೇಷನ್ ಸೌಲಭ್ಯದ ಲಾಭ ಪಡೆಯುತ್ತಿದ್ದಾರೆ.  ಕೇಂದ್ರ ಸರ್ಕಾರ (Central government) ಇದನ್ನು ಗಂಭೀರವಾಗಿ ಪರಿಗಣಿಸಿದೆ. ದೇಶಾದ್ಯಂತ ಪಡಿತರ ಚೀಟಿದಾರರ ಪರಿಶೀಲನೆ ನಡೆಯುತ್ತಿದೆ. ಒಂದ್ವೇಳೆ ನೀವು ರೇಷನ್ ಪಡೆಯಲು  ಅನರ್ಹರಾಗಿದ್ದರೆ ತಕ್ಷಣ ನಿಮ್ಮ ಪಡಿತರ ಚೀಟಿಯನ್ನು ಸರೆಂಡರ್ (Ration Card Surrender) ಮಾಡಿ. ಇಲ್ಲವಾದ್ರೆ  ದಂಡ ಮತ್ತು ಜೈಲು ಎರಡನ್ನೂ ಎದುರಿಸಬೇಕಾಗುತ್ತದೆ. 

ರೇಷನ್ ಕಾರ್ಡ್ ಅನರ್ಹತೆ ಎಂದರೇನು ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತದೆ. ರೇಷನ್ ಕಾರ್ಡ್ ಪಡೆಯಲು ಸರ್ಕಾರ ಕೆಲವೊಂದು ನಿಯಮಗಳನ್ನು ಮಾಡಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆಹಾರ ಪದಾರ್ಥಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ನೀಡುವುದು ಸರ್ಕಾರದ ಉದ್ದೇಶವಾಗಿದೆ.  ಕೋವಿಡ್ ಅವಧಿಯಿಂದ 80 ಕೋಟಿ ಪಡಿತರ ಚೀಟಿದಾರರಿಗೆ ಭಾರತ ಸರ್ಕಾರವು ಅಕ್ಕಿ ಮತ್ತು ಗೋಧಿಯಂತಹ ಉಚಿತ ಆಹಾರ ಪದಾರ್ಥಗಳನ್ನು ನೀಡುತ್ತಿದೆ. ಆದರೆ ದುರಾಸೆಯಿಂದಾಗಿ  ಅನೇಕ ಜನರು ಸುಳ್ಳು ಮಾಹಿತಿ ನೀಡಿ ಕಾರ್ಡ್‌ ಮಾಡಿಸಿ, ಆಹಾರ ಧಾನ್ಯಗಳ ಲಾಭವನ್ನು ಪಡೆಯುತ್ತಿದ್ದಾರೆ.  ಒಂದ್ವೇಳೆ ನೀವೂ ನಿಯಮಕ್ಕೆ ವಿರುದ್ಧವಾಗಿ ರೇಷನ್ ಕಾರ್ಡ್ ಮಾಡಿಸಿದ್ರೆ ಇಂದೇ ಅದನ್ನು ಸರೆಂಡರ್ಮಾಡಿ.

ಈ ₹1 ರೂಪಾಯಿ ಹಳೆಯ ನೋಟು ನಿಮ್ಮತ್ರ ಇದ್ರೆ ಲಕ್ಷಾಧಿಪತಿ ಆಗೋದು ಗ್ಯಾರಂಟಿ: ಹೇಗೆ ಗೊತ್ತಾ?

ಈ ಎಲ್ಲ ವಸ್ತು ಮನೆಯಲ್ಲಿದ್ದರೆ ರೇಷನ್ ಕಾರ್ಡ್ ಸರೆಂಡರ್ ಮಾಡಿ : 
1. ನಿಮ್ಮ ಮನೆಯಲ್ಲಿ ಕಾರು ಅಥವಾ ಟ್ರ್ಯಾಕ್ಟರ್‌ನಂತಹ ನಾಲ್ಕು ಚಕ್ರದ ವಾಹನಗಳಿದ್ದರೆ ನೀವು ಪಡಿತರ ಚೀಟಿ ಪಡೆಯಲು ಅನರ್ಹರು.
2. ನಿಮ್ಮ ಮನೆಯಲ್ಲಿ ರೆಫ್ರಿಜರೇಟರ್ ಅಥವಾ ಏರ್ ಕಂಡಿಷನರ್ ಇದ್ದರೂ, ನೀವು ಪಡಿತರ ಚೀಟಿಗೆ ಅರ್ಹರಲ್ಲ. ನೀವು ಅರ್ಜಿ ಸಲ್ಲಿಸಲೂ ಸಾಧ್ಯವಿಲ್ಲ.
3. ನಿಮ್ಮ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ 2 ಲಕ್ಷ ರೂಪಾಯಿ ಹಾಗೂ ನಗರ ಪ್ರದೇಶದಲ್ಲಿ 3 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೂ, ನೀವು ಪಡಿತರ ಚೀಟಿ ಹೊಂದುವಂತಿಲ್ಲ.
4.  ನಿಮ್ಮ ಮನೆಯಲ್ಲಿ ಪರವಾನಗಿ ಪಡೆದ ಆಯುಧ ಇದ್ದರೆ ಅಥವಾ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದರೂ ನಿಮಗೆ ಪಡಿತರ ಚೀಟಿ ನೀಡುವುದಿಲ್ಲ.
5. ಮನೆಯಲ್ಲಿ ಯಾರಿಗಾದರೂ ಸರ್ಕಾರಿ ನೌಕರಿ ಇದ್ದರೆ ಆ ಇಡೀ ಕುಟುಂಬವನ್ನು ಪಡಿತರ ಚೀಟಿಗೆ ಅನರ್ಹರೆಂದು ಪರಿಗಣಿಸಲಾಗುತ್ತದೆ. ಅಂತಹ ಕುಟುಂಬಗಳಿಗೆ ಪಡಿತರ ಚೀಟಿ ನೀಡಲಾಗುವುದಿಲ್ಲ.
6.  100 ಗಜಗಳಿಗಿಂತ ಹೆಚ್ಚಿನ ಜಾಗದಲ್ಲಿ ಮನೆ, ಭೂಮಿಯಿದ್ದರೆ ನೀವು ಪಡಿತರ ಚೀಟಿಗೆ ಅರ್ಹರಲ್ಲ. ಇವುಗಳಲ್ಲಿ ಯಾವುದಾದ್ರೂ ನಿಮ್ಮ ಬಳಿ ಇದ್ದರೆ ರೇಷನ್ ಕಾರ್ಡ್ ಸೆರೆಂಡರ್ ಮಾಡೋದು ಉತ್ತಮ. 

ರೇಷನ್ ಕಾರ್ಡ್ ಎಲ್ಲಿ ಸರೆಂಡರ್ ಮಾಡಬೇಕು? :  ಮೇಲಿನ ಯಾವುದೇ ವಸ್ತು ಅಥವಾ ಸೌಲಭ್ಯ ನಿಮ್ಮ ಮನೆಯಲ್ಲಿದ್ದರೆ ನೀವು ರೇಷನ್ ಕಾರ್ಡ್ ಸೆರೆಂಡರ್ ಮಾಡುವುದು ಉತ್ತಮ. ನೀವು ಲಾಜಿಸ್ಟಿಕ್ಸ್ ಇಲಾಖೆಗೆ ಇದನ್ನು ಸಲ್ಲಿಸಬೇಕು. ಸರ್ಕಾರದ ತನಿಖೆ ವೇಳೆ ನಿಮ್ಮ ಅನರ್ಹತೆ ಪತ್ತೆಯಾದ್ರೆ ದಂಡ ಹಾಗೂ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.  

ಟಿಕೆಟ್ ಬುಕಿಂಗ್, ಟ್ರ್ಯಾಕಿಂಗ್‌ಗಾಗಿ ಮುಂದಿನ ತಿಂಗಳಿಂದ IRCTC ಸೂಪರ್ ಆ್ಯಪ್: ಎಲ್ಲವೂ

ರೇಷನ್ ಕಾರ್ಡ್ ಪಡೆಯಲು  ಅರ್ಹತೆ : ಅರ್ಜಿದಾರರು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. ಅವರ ವಯಸ್ಸು 18 ವರ್ಷಕ್ಕಿಂತ ಕಡಿಮೆಯಿದ್ದರೆ ಪಡಿತರ ಚೀಟಿಯಲ್ಲಿ ಪೋಷಕರ ಹೆಸರನ್ನು ನಮೂದಿಸಬಹುದು. ಯಾವುದೇ ಶಾಶ್ವತ ಆದಾಯದ ಮೂಲವನ್ನು ಹೊಂದಿರದ ಜನರಿಗೆ ಮಾತ್ರ ಪಡಿತರ ಚೀಟಿಗಳನ್ನು ಮಾಡಲಾಗುವುದು.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ