World Economy : 2022ರಲ್ಲಿ ಮೊಟ್ಟಮೊದಲ ಬಾರಿಗೆ 100 ಲಕ್ಷ ಕೋಟಿ ಗಡಿ ಮುಟ್ಟಲಿದೆ ವಿಶ್ವದ ಆರ್ಥಿಕತೆ!

By Suvarna NewsFirst Published Dec 26, 2021, 6:34 PM IST
Highlights

ಬ್ರಿಟಿಷ್ ಸಲಹಾ ಸಂಸ್ಥೆ Cebr ನೀಡಿರುವ ವರದಿ
2022ರಲ್ಲಿ ಮೊಟ್ಟಮೊದಲ ಬಾರಿಗೆ 100 ಟ್ರಿಲಿಯನ್ ಯುಎಸ್ ಡಾಲರ್ ಗಡಿ ದಾಟಲಿದೆ ವಿಶ್ವದ ಆರ್ಥಿಕತೆ
2023ರ ವೇಳೆ ಭಾರತ ವಿಶ್ವದ 6ನೇ ಅತೀದೊಡ್ಡ ಆರ್ಥಿಕತೆ

ಲಂಡನ್ (ಡಿ. 26): ಕೋವಿಡ್-19 (Covid 19) ಸಾಂಕ್ರಾಮಿಕ ವೈರಸ್ ಆ ಬಳಿಕ ರೂಪಾಂತರ ವೈರಸ್ ಸುದ್ದಿಗಳಿಂದಲೇ ಕಳೆದ ಎರಡು ವರ್ಷಗಳಿಂದ ದಿನ ದೂಡುತ್ತಿರುವ ಜಗತ್ತಿಗೆ ಸಂತಸ ತುಂಬುವ ಸುದ್ದಿಯನ್ನು ಬ್ರಿಟನ್ ನ ಸಲಹಾ ಸಂಸ್ಥೆ ಸೆಬ್ರ್ (Cebr) ನೀಡಿದೆ. ವಿಶ್ವದ ಆರ್ಥಿಕ ಉತ್ಪಾದನೆಯ ಮುಂದಿನ ವರ್ಷ ಮೊಟ್ಟಮೊದಲ ಬಾರಿಗೆ 100 ಟ್ರಿಲಿಯನ್ ಯುಎಸ್ ಡಾಲರ್ (100 ಲಕ್ಷ ಕೋಟಿ ರೂಪಾಯಿ) ಗಡಿ ದಾಟಲಿದೆ ಎಂದು ವರದಿ ಮಾಡಿದೆ. ಅದರೊಂದಿಗೆ ಅಮೆರಿಕವನ್ನು (United States ) ಮಣಿಸಿ ವಿಶ್ವದ ಅತಿದೊಡ್ಡ ಆರ್ಥಿಕತೆ ಎನಿಸಿಕೊಳ್ಳಬೇಕು ಎನ್ನುವ ಹಂಬಲದಲ್ಲಿರುವ ಚೀನಾ (China), ಈ ಗುರಿಯನ್ನು ಎರಡು ವರ್ಷ ತಡವಾಗಿ ಅಂದರೆ 2030ರ ವೇಳೆಗ ತಲುಪಲಿದೆ ಎಂದು ವರದಿ ಮಾಡಿದೆ.

ಕಳೆದ ವರ್ಷ ನೀಡಿದ್ದ ವರ್ಲ್ಡ್ ಎಕನಾಮಿಕ್ ಲೀಗ್ ಟೇಬಲ್ ರಿಪೋರ್ಟ್ ನಲ್ಲಿ (World Economic League Table) ಚೀನಾ 2028ರ ವೇಳೆ ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಆರ್ಥಿಕತೆ ಎನಿಸಲಿದೆ ಎಂದು ವರದಿ ಮಾಡಿತ್ತು. ಆದರೆ, ಹೊಸ ಅಂದಾಜಿನ ಪ್ರಕಾರ, ಅಮೆರಿಕವನ್ನು ಹಿಂದಿಕ್ಕಿ ಡಾಲರ್ ಲೆಕ್ಕಾಚಾರದಲ್ಲಿ ವಿಶ್ವದ ಸಮಗ್ರ ಆರ್ಥಿಕತೆ ಎನಿಸಲು ಚೀನಾ 2030ರವರೆಗೂ ಸಮಯ ತೆಗೆದುಕೊಳ್ಳಲಿದೆ ಎಂದು ಸೆಬ್ರ್ ಅಂದಾಜು ಮಾಡಿದೆ. ಇನ್ನು ಭಾರತವು (India) 2023ರ ವೇಳೆ ಮತ್ತೊಮ್ಮೆ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಎನ್ನುವ ಪಟ್ಟವನ್ನು ಪಡೆಯಲಿದೆ ಫ್ರಾನ್ಸ್ (France) ದೇಶವನ್ನು ಹಿಂದಿಕ್ಕಿ 2022ರಲ್ಲಿ ಭಾರತ 7ನೇ ಸ್ಥಾನಕ್ಕೇರಲಿದ್ದು, 2023ರಲ್ಲಿ ಬ್ರಿಟನ್ (Britain ) ಅನ್ನು ಹಿಂದಿಕ್ಕಿ 6ನೇ ಸ್ಥಾನವನ್ನು ಮರಳಿ ಪಡೆಯಲಿದೆ. 2031ರ ವೇಳೆ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಎನಿಸಲಿದೆ ಅಂದಾಜಿಸಿದೆ.

"2020 ರ ಪ್ರಮುಖ ವಿಷಯವೆಂದರೆ ವಿಶ್ವ ಆರ್ಥಿಕತೆಗಳು ಹಣದುಬ್ಬರವನ್ನು ಹೇಗೆ ನಿಭಾಯಿಸುತ್ತವೆ ಎನ್ನುವುದಾಗಿದೆ. ಪ್ರಸ್ತುತ ಅಮೆರಿಕದಲ್ಲಿ ಶೇ.6.8 ರಷ್ಟು ತಲುಪಿದೆ" ಎಂದು ಸೆಬ್ರ್ ಉಪಾಧ್ಯಕ್ಷ ಡೌಗ್ಲಾಸ್ ಮೆಕ್‌ವಿಲಿಯಮ್ಸ್ (Cebr Deputy Chairman Douglas McWilliams) ಹೇಳಿದ್ದಾರೆ. "ಟಿಲ್ಲರ್‌ಗೆ ತುಲನಾತ್ಮಕವಾಗಿ ಸಾಧಾರಣ ಹೊಂದಾಣಿಕೆಯು ಟ್ರಾನ್ಸಿಟರಿ ಅಲ್ಲದ ಅಂಶಗಳನ್ನು ನಿಯಂತ್ರಣಕ್ಕೆ ತರುತ್ತದೆ ಎಂದು ನಾವು ಭಾವಿಸುತ್ತೇವೆ. ಇಲ್ಲದಿದ್ದರೆ, 2023 ಅಥವಾ 2024 ರ ವೇಳೆಗೆ ಪ್ರಪಂಚವು ಆರ್ಥಿಕ ಹಿಂಜರಿತಕ್ಕೆ ಒಳಗಾಗಬೇಕಾಗುತ್ತದೆ" ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

2033 ರ ವೇಳೆಗೆ ಜರ್ಮನಿಯು ಆರ್ಥಿಕ ಉತ್ಪಾದನೆಯಲ್ಲಿ ಜಪಾನ್ ಅನ್ನು(Japan) ಹಿಂದಿಕ್ಕುವ ಹಾದಿಯಲ್ಲಿದೆ ಎಂದು ವರದಿ ಬಹಿರಂಗ ಮಾಡಿದೆ. ರಷ್ಯಾ (Russia ) 2036 ರ ವೇಳೆಗೆ ಟಾಪ್ 10 ಆರ್ಥಿಕತೆಯಾಗಬಹುದು ಮತ್ತು ಇಂಡೋನೇಷ್ಯಾ (Indonesia ) 2034ರ ವೇಳೆಗೆ ವಿಶ್ವದ 9ನೇ ಅತಿದೊಡ್ಡ ಆರ್ಥಿಕತೆ ಎನಿಸುವ ಹಾದಿಯಲ್ಲಿದೆ ಎಂದು ತಿಳಿಸಿದೆ. ಬ್ರೆಕ್ಸಿಟ್ ನ (Brexit)ಹೊರತಾಗಿಯೂ 2036ರ ವೇಳೆಗೆ ಫ್ರಾನ್ಸ್ ಆರ್ಥಿಕತೆಗಿಂತ ಶೇ.16ರಷ್ಟು ದೊಡ್ಡದಾಗಿ ಇಂಗ್ಲೆಂಡ್ ನ ಆರ್ಥಿಕತೆ ಬೆಳೆಯಲಿದೆ ಎಂದೂ ತಿಳಿಸಿದ್ದು, 2036ರ ವೇಳೆಗೆ ಹವಾಮಾನ ಬದಲಾವಣೆಯ ಕಾರಣದಿಂದಾಗಿ ಗ್ರಾಹಕರ ಬೇಡಿಕೆ ಅಂದಾಜು 2 ಟ್ರಿಲಿಯನ್ ಯುಎಸ್ ಡಾಲರ್ ನಷ್ಟು ಕುಸಿಯಲಿದೆ ಎಂದು ವರದಿ ಮಾಡಿದೆ. 

Banking Sector : 2022 ರಲ್ಲಿ ಆಗಲು ಸಿದ್ಧವಾಗಿರುವ ಬದಲಾವಣೆಗಳೇನು?
ಕೋವಿಡ್-19 ನಂಥ ಸಾಂಕ್ರಾಮಿಕ ವೈರಸ್ ಜಗತ್ತನ್ನು ಹೆದರಿಸಿದ ನಡುವೆಯೂ ನಿರಂತರವಾದ ಚೇತರಿಕೆಯಿಂದಾಗಿ ಜಾಗತಿಕ ಜಿಡಿಪಿ ಏರಿಕೆ ಕಂಡಿದೆ. ಆದರೆ, ಹಣದುಬ್ಬರವೂ ಹೀಗೆ ಉಳಿದಲ್ಲಿ ಸರ್ಕಾರಗಳಿಗೆ ತಮ್ಮ ಆರ್ಥಿಕತೆಯನ್ನು ಜಾಗತಿಕ ಆರ್ಥಿಕ ಕುಸಿತದಿಂದ ಪಾರು ಮಾಡುವುದು ಕಷ್ಟವಾಗಬಹುದು ಎಂದು ಲಂಡನ್ ಮೂಲದ ಥಿಂಕ್ ಟ್ಯಾಂಕ್ ಅಭಿಪ್ರಾಯ ವ್ಯಕ್ತಪಡಿಸಿದೆ.

click me!