ಈ ಟೀ ಕೆಟಲ್ ಬೆಲೆ ಕೇಳಿದ್ರೆ ಅಪ್ಪಿತಪ್ಪಿಯೂ ಅದ್ರೊಳಗೆ ಚಹಾ ಹಾಕಲ್ಲ!

Published : Aug 12, 2023, 02:24 PM IST
ಈ ಟೀ ಕೆಟಲ್ ಬೆಲೆ ಕೇಳಿದ್ರೆ ಅಪ್ಪಿತಪ್ಪಿಯೂ ಅದ್ರೊಳಗೆ ಚಹಾ ಹಾಕಲ್ಲ!

ಸಾರಾಂಶ

ಮಾರುಕಟ್ಟೆಯಲ್ಲಿ ಸಿಗುವ 500 ರೂಪಾಯಿ ಒಳಗಿನ ಟೀ ಕೆಟಲ್ ಖರೀದಿಗೆ ನಾವು ಚೌಕಾಸಿ ಮಾಡ್ತೇವೆ. ಬೆಲೆ ಹೆಚ್ಚಾದ್ರೆ ಅದ್ರಲ್ಲಿ ಟೀ ಬಿಸಿ ಮಾಡೋ ಮನಸ್ಸು ಬರೋದಿಲ್ಲ. ಇನ್ನು ವಿಶ್ವದ ದುಬಾರಿ ಕೆಟಲ್ ಕೈ ಸೇರಿದ್ರೆ….?  

ನಮ್ಮಲ್ಲಿ ಕೆಲವೊಬ್ಬರ ದಿನ ಶುರುವಾಗೋದು ಟೀನಿಂದ್ಲೇ, ಅಂತ್ಯವಾಗೋದು ಟೀನಿಂದ್ಲೆ. ಟೀ ಪ್ರೇಮಿಗಳ ಸಂಖ್ಯೆ ಸಾಕಷ್ಟಿದೆ. ಜನರು ಮನೆಯಲ್ಲಿ ಟೀ ಮಿಸ್ ಆದ್ರೆ ಹೊರಗೆ 10 ರೂಪಾಯಿ ನೀಡಿಯಾದ್ರೂ ಟೀ ಸೇವನೆ ಮಾಡ್ತಾರೆ. ಮಣ್ಣಿನ ಕಪ್ ನಲ್ಲಿ ಟೀ ಕುಡಿದ್ರೆ ಅದ್ರ ರುಚಿ ಡಬಲ್ ಆಗುತ್ತೆ. ಹಾಗಾಗಿ ಅದಕ್ಕೆ 20 ರೂಪಾಯಿ, 50 ರೂಪಾಯಿ ನೀಡಿ ಕೂಡ ಟೀ ಕುಡಿಯೋರಿದ್ದಾರೆ. ಇನ್ನು ಕೆಲವರು ಐಷಾರಾಮಿ ಹೊಟೇಲ್ ನಲ್ಲಿ ಹೆಚ್ಚಿನ ಬೆಲೆ ನೀಟಿ ಟೀ ಕುಡಿಯುತ್ತಾರೆ. ಟೀ ಎಲ್ಲೇ ಕುಡಿಲಿ ಟೀ ಸರ್ವ್ ಮಾಡೋಕೆ ಕೆಟಲ್ ಬಳಕೆ ಮಾಡ್ತಾರೆ. ಕೆಟಲ್ ಮುಖ್ಯ ಕೆಲಸವೆಂದ್ರೆ ಟೀ ಬಿಸಿ ಮಾಡೋದು. 
ನೀವು ಬೀದಿ ಬದಿ ಟೀ ಅಂಗಡಿಗಳಲ್ಲಿ ಕೆಟಲ್ ನೋಡಿರ್ತೀರಾ. ಕೆಲ ಕೆಟಲ್ ಬಣ್ಣ ಬಿಸಿ ಮಾಡಿ ಮಾಡಿ ಬದಲಾಗಿರುತ್ತದೆ. ಮತ್ತೆ ಕೆಲವರ ಕೆಟಲ್ ಆಕರ್ಷಕವಾಗಿರುತ್ತದೆ.  

ಮಾರುಕಟ್ಟೆ (Market) ಯಲ್ಲಿ ಸಾಕಷ್ಟು ಭಿನ್ನ ಟೀ ಕೆಟಲ್ (Tea Kettle)  ಗಳು ಲಭ್ಯವಿದೆ. ಕೆಲವೊಂದು ತನ್ನ ಸೌಂದರ್ಯದಿಂದ ಎಲ್ಲರ ಗಮನ ಸೆಳೆಯುತ್ತದೆ. ದುಬಾರಿ ಬೆಲೆ ಕೊಟ್ಟು ಕೆಟಲ್ ಖರೀದಿ ಮಾಡಿದ ಜನರು ಅದನ್ನು ಬಳಸದೆ ಶೋ ಕೇಸ್ ನಲ್ಲಿ ಇಡ್ತಾರೆ. ಹತ್ತು – ಹದಿನೈದು ಸಾವಿರದ ಕೆಟಲ್ ಗಳನ್ನು ನೀವು ನೋಡಿರಬಹುದು. ಇಷ್ಟೆಲ್ಲ ಹಣ ನೀಡಿ ಖರೀದಿ ಮಾಡಿದ ಕೆಟಲ್ ನಲ್ಲಿ ಟೀ ಹಾಕಿ ಹಾಳು ಮಾಡೋಕೆ ಇಷ್ಟವಾಗಲ್ಲ. ನೀವು ಈಗ ನಾವು ಹೇಳುವ ಟೀ ಕೆಟಲ್ ಬಗ್ಗೆ ಕೇಳಿದ್ರೆ ಅಚ್ಚರಿಗೊಳಗಾಗ್ತೀರಾ. ಟೀ ಮಾಡೋದು, ಶೋ ಕೇಸ್ ನಲ್ಲಿ ಇಡೋದಿರಲಿ, ಅದು ನಿಮ್ಮ ಕೈಗೆ ಎಟಕೋದೇ ಇಲ್ಲ. ಸಿಕ್ಕಿದ್ರೂ ಕಪಾಟಿನಲ್ಲಿ ಬಚ್ಚಿಡೋದು ಬಿಟ್ರೆ ಬೇರೆ ಉಪಾಯ ಇರೋದಿಲ್ಲ. ಯಾಕೆಂದ್ರೆ ಇದು ಅಂತಿಂತದ್ದಲ್ಲ.  ಕೆಟಲ್ ಬೆಲೆ 24 ಕೋಟಿಗಿಂತಲೂ ಹೆಚ್ಚಿದೆ. ಯಸ್, ಕೆಟಲ್ ವಿಶೇಷವೇನು, ಅದು ಎಲ್ಲಿದೆ ಎಂಬುದನ್ನು ನಾವು ವಿವರಿಸ್ತೇವೆ.

WORK FROM HOME ಮಾಡೋರಿಗೆ ಎಚ್ಚರಿಕೆ, ಕೆಲಸ ಮಾಡದೇ ಹೋದ್ರೆ ಕೆಲಸದಿಂದ ತೆಗೀಬಹುದು!

ಗಿನ್ನಿಸ್ (Guinness0 ವರ್ಲ್ಡ್ ರೆಕಾರ್ಡ್ಸ್ (@GWR) ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ  ಈ ಐಷಾರಾಮಿ ಕೆಟಲ್ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಇದು ವಿಶ್ವದ ಅತ್ಯಂತ ಬೆಲೆಬಾಳುವ ಕೆಟಲ್ ಆಗಿದೆ ಎಂದು ಶೀರ್ಷಿಕೆ ಹಾಕಲಾಗಿದೆ. ನಂತ್ರ ಈ ಕೆಟಲ್ ವಿಶೇಷತೆ ಬಗ್ಗೆ ವಿವರಿಸಲಾಗಿದೆ. ಕೆಟಲ್ ಫೋಟೋ ಪೋಸ್ಟ್ ಆದ್ಮೇಲೆ ಸಾಮಾಜಿಕ ಜಾಲತಾಣದಲ್ಲಿ ಇದ್ರ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. 

ಈ ಕೆಟಲ್ ದುಬಾರಿಯಾಗಿರಲು ಕಾರಣವೇನು ಗೊತ್ತಾ? : ಈ ದುಬಾರಿ ಕೆಟಲ್ ಯುಕೆಯ ಎನ್ ಸೆಥಿಯಾ ಫೌಂಡೇಶನ್ ಒಡೆತನದಲ್ಲಿದೆ. ಕೆಟಲ್ 18-ಕ್ಯಾರಟ್ ಹಳದಿ ಚಿನ್ನದಿಂದ ಮಾಡಲ್ಪಟ್ಟಿದೆ. ಕೆಟಲ್ ಮೇಲೆ ವಜ್ರ ಮತ್ತು ಮಧ್ಯದಲ್ಲಿ 6.67 ಕ್ಯಾರೆಟ್ ಮಾಣಿಕ್ಯವನ್ನು ಕಾಣಬಹುದಾಗಿದೆ.  ಕೆಟಲ್‌ನ ಹ್ಯಾಂಡಲ್ ಮ್ಯಾಮತ್ ದಂತದಿಂದ  ಮಾಡಲ್ಪಟ್ಟಿದೆ. 2016 ರಲ್ಲಿ ಅದರ ಮೌಲ್ಯವನ್ನು 30,00,000  ಮಿಲಿಯನ್ ಡಾಲರ್ ಅಂದ್ರೆ  ಸುಮಾರು 248,008,418.15 ಎಂದು ಅಂದಾಜಿಸಲಾಗಿದೆ. 

ಟ್ರಾಫಿಕ್‌ನಲ್ಲಿ, ಗಾಡಿಯಲ್ಲಿ ಹುಡುಗಿ ಬ್ಯಾಗಿನೊಳಗೆ ಮುದ್ದು ಮುದ್ದಾದ ಬೆಕ್ಕು, ವಿಡಿಯೋ ವೈರಲ್

ಈ ಟ್ವೀಟನ್ನು ಈವರೆಗೆ 76 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.  ಐದು ನೂರಕ್ಕೂ ಹೆಚ್ಚು ಲೈಕ್‌ ಸಿಕ್ಕಿದೆ. ಅನೇಕರು ಇದ್ರ ಬಗ್ಗೆ ಕಮೆಂಟ್ ಮಾಡಿದ್ದಾರೆ. ವ್ಯಕ್ತಿಯೊಬ್ಬ ಇದು ಉಗಾಂಡಾದಲ್ಲಿ ಮಾಡಲ್ಪಟ್ಟ ಕೆಟಲ್.  ವಸಾಹತುಶಾಹಿ ಕಾಲದಲ್ಲಿ ಇದನ್ನು ಕದ್ದಿದ್ದಾರೆ. ಅದು ನಮ್ಮ ಚಿನ್ನವೆಂದು ಸ್ಪಷ್ಟವಾಗ್ತಿದೆ. ದಯವಿಟ್ಟು ಅದನ್ನು ವಾಪಸ್ ತನ್ನಿ ಎಂದು ಕಮೆಂಟ್ ಮಾಡಿದ್ದಾನೆ. ಮತ್ತೆ ಕೆಲವರು ಇದು ನಮ್ಮದೇಶದ್ದು, ಇದನ್ನು ಕದಿಯಲಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಕೆಲವರು ನಾವಿದನ್ನು ಖರೀದಿ ಮಾಡ್ತೇವೆ ಅಂದ್ರೆ ಮತ್ತೆ ಕೆಲವರು ಟೀ ಅಂದ್ರೆ ಟೀ, ಇದ್ರಲ್ಲಿ ಟೀ ಕುಡಿದ್ರೆ ದರ ಹೆಚ್ಚಾಗುತ್ತೆ ಎಂದು ಬರೆದಿದ್ದಾರೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!