Work From Home ಮಾಡೋರಿಗೆ ಎಚ್ಚರಿಕೆ, ಕೆಲಸ ಮಾಡದೇ ಹೋದ್ರೆ ಕೆಲಸದಿಂದ ತೆಗೀಬಹುದು!

By Suvarna NewsFirst Published Aug 12, 2023, 12:02 PM IST
Highlights

ಮನೆಯಲ್ಲಿ ಕೆಲಸ ಮಾಡೋರನ್ನು ಕಂಪನಿ ಗಮನಿಸೋದಿಲ್ಲ ಎನ್ನುವ ಕಾರಣಕ್ಕೆ ನೀವು ಸರಿಯಾಗಿ ಕೆಲಸ ಮಾಡದೆ ಹೋದ್ರೆ ಕೆಲಸ ಕಳೆದುಕೊಳ್ತೀರಿ. ನಿಮ್ಮ ಕೆಲಸ ಟ್ರ್ಯಾಕ್ ಮಾಡಲು ಅನೇಕ ವಿಧಾನಗಳಿವೆ. ಈಗ ಆಸ್ಟ್ರೇಲಿಯಾ ಮಹಿಳೆ ಉದ್ಯೋಗ ಕಳೆದುಕೊಂಡು ಪರಿತಪಿಸ್ತಿದ್ದಾಳೆ.
 

ಆಸ್ಟ್ರೇಲಿಯಾದಿಂದ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ. 18 ವರ್ಷಗಳಿಂದ ದುಡಿಯುತ್ತಿರುವ ಮಹಿಳಾ ಉದ್ಯೋಗಿಗೆ ಇಲ್ಲಿನ ವಿಮಾ ಕಂಪನಿಯೊಂದು ದಿಢೀರ್ ಮನೆ ದಾರಿ ತೋರಿಸಿದೆ.  ಕೀಸ್ಟ್ರೋಕ್ ತಂತ್ರಜ್ಞಾನದ ಮೂಲಕ ಕಂಪನಿ ಮಹಿಳೆ ಕೆಲಸದ ಸಾಮರ್ಥ್ಯವನ್ನು ಪತ್ತೆ ಮಾಡಿದೆ. ಅದ್ರಲ್ಲಿ ಮನೆಯಿಂದ ಕೆಲಸ ಮಾಡುವ ಮಹಿಳೆ  ಸಾಕಷ್ಟು ಟೈಪ್ ಮಾಡುತ್ತಿಲ್ಲ ಎಂಬುದು ಗೊತ್ತಾಗಿದೆ. 

ಕೆಲಸ (Work) ದಿಂದ ತೆಗೆಯಲು ಇದು ಕಾರಣ:  ಕೀಬೋರ್ಡ್‌ (Keyboard) ನ ಕೀಗಳನ್ನು ಎಷ್ಟು ಬಾರಿ ಒತ್ತಲಾಗಿದೆ ಎಂದು ಕೀಸ್ಟ್ರೋಕ್ ತಂತ್ರಜ್ಞಾನದಿಂದ ಪತ್ತೆ ಮಾಡಬಹುದಾಗಿದೆ. ಮಹಿಳೆ ಇನ್ಶುರೆನ್ಸ್ ಆಸ್ಟ್ರೇಲಿಯಾ ಗ್ರೂಪ್ (IAG) ನಲ್ಲಿ ಕೆಲಸ ಮಾಡ್ತಿದ್ದಳು. ಈ ಕಂಪನಿಯ ಸಲಹೆಗಾರಳಾಗಿದ್ದ ಸುಜಿ ಶೇಖೋ ಮನೆಯಿಂದ ಕೆಲಸ ಮಾಡುತ್ತಿದ್ದಳು. ಆದ್ರೆ ಆಕೆ ಕಂಪನಿ ನಿರೀಕ್ಷೆ ಮಾಡಿದಷ್ಟು ಟೈಪಿಂಗ್ ಮಾಡುತ್ತಿರಲಿಲ್ಲ. ಹಾಗಾಗಿ ಕಂಪನಿ ಆಕೆಯನ್ನು ಕೆಲಸದಿಂದ ವಜಾಗೊಳಿಸಿದೆ. ಮಹಿಳೆ, ಕಂಪನಿ ನಿರ್ಧಾರವನ್ನು ಪ್ರಶ್ನಿಸಿ ಆಸ್ಟ್ರೇಲಿಯಾ (Australia) ದ ಫೇರ್ ವರ್ಕ್ ಕಮಿಷನ್‌ಗೆ ಮೇಲ್ಮನವಿ ಸಲ್ಲಿಸಿದ್ದಳು. ಆದ್ರೆ ಕಂಪನಿ ಸರಿಯಾದ ಕಾರಣಕ್ಕೆ ಸುಜಿಯನ್ನು ಕೆಲಸದಿಂದ ತೆಗೆದು ಹಾಕಿದೆ ಎನ್ನುವ ಉತ್ತರ ನೀಡಿ ಸುಜಿ ಅರ್ಜಿಯನ್ನು ಕಮಿಷನ್ ವಜಾ ಮಾಡಿದೆ.  

ಗಾಣದಿಂದ ಎಣ್ಣೆ ತಯಾರಿಕೆ: ಕೊಪ್ಪಳದ ಸಾಮಾನ್ಯ ಮಹಿಳೆ ಉದ್ಯಮಿಯಾಗಿದ್ದು ಹೇಗೆ ?

ಕಂಪನಿ ಮೇಲೆ ಆರೋಪ ಮಾಡಿದ ಮಹಿಳೆ:  ಸುಜಿ, ಕಂಪನಿ ಡೆಡ್‌ಲೈನ್‌ಗಳನ್ನು ಪೂರ್ಣಗೊಳಿಸುತ್ತಿರಲಿಲ್ಲ, ಸಭೆಗಳಿಗೆ ಗೈರಾಗುತ್ತಿದ್ದರು, ಸರಿಯಾದ ಸಮಯಕ್ಕೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಆದ್ರೆ ಕಂಪನಿ ತನ್ನನ್ನು ಕೆಲಸದಿಂದ ತೆಗೆಯಲು ಮೊದಲೇ ತೀರ್ಮಾನಿಸಿತ್ತು. ಒಂದು ತಿಂಗಳಿಂದ ನನ್ನನ್ನು ಕೆಲಸದಿಂದ ತೆಗೆದು ಹಾಕಲು ಯೋಜಿಸಲಾಗಿತ್ತು ಎಂದು ಕಂಪನಿ ವಿರುದ್ಧ ಮಹಿಳೆ ಆರೋಪಿಸಿದ್ದಾಳೆ.  

ಮೊದಲೇ ಎಚ್ಚರಿಕೆ (Warn) ನೀಡಲಾಗಿತ್ತು : ಕಂಪನಿ ಏಕಾಏಕಿ ಕೆಲಸದಿಂದ ತೆಗೆದಿಲ್ಲವೆಂದು ಎಫ್‌ಡಬ್ಲ್ಯೂಸಿ ಹೇಳಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮಾಜಿ ಮಹಿಳಾ ಉದ್ಯೋಗಿಗೆ ತನ್ನ ಕೆಲಸದ ಬಗ್ಗೆ ಔಪಚಾರಿಕ ಎಚ್ಚರಿಕೆ ನೀಡಲಾಗಿತ್ತು. ನಂತ್ರ ಕೆಲಸದ ಮೇಲೆ ಕಣ್ಣಿಡಲು ಯೋಜನೆ ರೂಪಿಸಲಾಯ್ತು. ಕೀಸ್ಟ್ರೋಕ್ ತಂತ್ರಜ್ಞಾನವನ್ನು (Key Stroke Technology) ಬಳಸಲಾಯ್ತು. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ 49 ಕೆಲಸದ ದಿನಗಳಲ್ಲಿ ಶೇಖೋ ತನ್ನ ಕೀಬೋರ್ಡ್‌ನಲ್ಲಿ ಎಷ್ಟು ಬಾರಿ ಕೀಲಿಗಳನ್ನು ಒತ್ತಿದ್ದಾಳೆಂದು ಟ್ರ್ಯಾಕ್ ಮಾಡಲಾಯ್ತು. ಮಹಿಳೆಯ 47 ದಿನಗಳೂ ತಡವಾಗಿ ತನ್ನ ಕೆಲಸವನ್ನು ಪ್ರಾರಂಭಿಸಿದ್ದಳು. 44 ದಿನ ತನ್ನ ನಿಗದಿತ ಸಮಯದಲ್ಲಿ ಕೆಲಸ ಮಾಡಲಿಲ್ಲ. 29 ದಿನ ತನ್ನ ಕೆಲಸವನ್ನು ಬೇಗ ಮುಗಿಸಿದ್ದಳು. ನಾಲ್ಕು ದಿನ ಕೆಲಸವನ್ನೇ ಮಾಡಲಿಲ್ಲ ಎಂಬುದು ಇದ್ರಿಂದ ಬಹಿರಂಗವಾಗಿತ್ತು.  

ಸ್ಟಾರ್ಟ್ ಅಪ್ ಗಳ ನೆರವಿಗೆ ಒಂದು ಸಾವಿರ ಕೋಟಿ ರೂ. ಮೀಸಲಿಟ್ಟ ಝೆರೋಧಾ; ರೈನ್ ಮ್ಯಾಟರ್ ಮೂಲಕ ಹೂಡಿಕೆ

ಇಷ್ಟೇ ಅಲ್ಲ ಮಹಿಳೆ ಲಾಗಿನ್ ಆಗುವಷ್ಟು ದಿನಗಳು ಟೈಪಿಂಗ್ ಸರಿಯಾಗಿ ಮಾಡಿಲ್ಲ. ಬಹಳ ಕಡಿಮೆ ಸಮಯವನ್ನು ಟೈಪಿಂಗ್‌ಗೆ ವ್ಯಯಿಸಿದ್ದಾಳೆ. ಅಕ್ಟೋಬರ್‌ನಲ್ಲಿ 117 ಗಂಟೆಗಳು, ನವೆಂಬರ್‌ನಲ್ಲಿ 143 ಗಂಟೆಗಳು ಮತ್ತು ಡಿಸೆಂಬರ್‌ನಲ್ಲಿ 60 ಗಂಟೆಗಳ ಕಾಲ ಮಹಿಳೆ ಯಾವುದೇ ಟೈಪಿಂಗ್ ಮಾಡಿಲ್ಲ ಎಂದು ತಂತ್ರಜ್ಞಾನದಿಂದ ಪತ್ತೆಯಾಗಿದೆ. ಆದ್ರೆ ಮಹಿಳೆ ಇದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಕೆಲವೊಮ್ಮೆ ಸಿಸ್ಟಮ್ ಸಮಸ್ಯೆಗಳಿದ್ದಾಗ, ಲಾಗ್ ಇನ್ ಮಾಡಲು ತನ್ನ ಲ್ಯಾಪ್‌ಟಾಪ್ ಹೊರತುಪಡಿಸಿ ಇತರೆ ಸಾಧನಗಳನ್ನು ಬಳಸುತ್ತಿದ್ದೆ. ಬೇರೆ ಲ್ಯಾಪ್ ಟಾಪ್ ನಲ್ಲಿ ನಾನು ಟೈಪಿಂಗ್ ಮಾಡಿದ್ದೆ ಎಂದು ಮಹಿಳೆ ಹೇಳಿದ್ದಾಳೆ. ಎಫ್‌ಡಬ್ಲ್ಯೂಸಿಯ ಉಪಾಧ್ಯಕ್ಷ ಥಾಮಸ್ ರಾಬರ್ಟ್ಸ್ ಮಹಿಳಾ ವಾದವನ್ನು ಅಲ್ಲಗಳೆದಿದ್ದಾರೆ. ಸಾಕ್ಷ್ಯಗಳು ನಮ್ಮ ಮುಂದಿದೆ. ಮಹಿಳೆಯನ್ನು ಕೆಲಸದಿಂದ ತೆಗೆದುಹಾಕುವ ಹಿಂದೆ ಬೇರೆಯದೇ ಕಾರಣವಿದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದು ಎಫ್‌ಡಬ್ಲ್ಯೂಸಿ ಹೇಳಿದೆ. 
 

click me!