ನಲ್ಲೆಯ ಮುತ್ತು ಮರೆಸುವ ದುಬಾರಿ ಮುತ್ತು: ನೋಡಿದರೆ ಬರದಿರದು ಮತ್ತು!

By Web DeskFirst Published May 9, 2019, 12:19 PM IST
Highlights

ಈ ಮುತ್ತಿಗಾಗಿ ನಲ್ಲೆಯ ಮುತ್ತು ಮರೆತರೂ ಅಚ್ಚರಿಯಿಲ್ಲ| ಪತ್ತೆಯಾಯ್ತು ವಿಶ್ವದ ಅತ್ಯಂತ ದುಬಾರಿ ಮುತ್ತು| ಮಡಿಕೆಯಲ್ಲಿ ಭದ್ರವಾಗಿದ್ದ ಮುತ್ತಿಗೆ ಮುಗಿ ಬಿದ್ದ ವಿಶ್ವ| ಕೆನಡಾದ ಅಬ್ರಾಹಂ ರೆಯಿಸ್ ಮನೆಯಲ್ಲಿ ಪತ್ತೆಯಾದ ದುಬಾರಿ ಮುತ್ತು| ಬರೋಬ್ಬರಿ 27.65 ಕೆಜಿ ತೂಕದ 90 ಮಿಲಿಯನ್ ಯುಎಸ್ ಡಾಲರ್ ಬೆಲೆ ಬಾಳುವ ಮುತ್ತು|

ಓಟ್ಟವಾ(ಮೇ.09): ತನ್ನ ಅಸ್ತಿತ್ವದ ಗುಟ್ಟು ಬಿಡಕೊಡದಿರುವುದು ವಜ್ರ, ಮುತ್ತುಗಳ ಮೂಲ ಗುಣ. ತಾನೆಷ್ಟು ಬೆಲೆ ಬಾಳುತ್ತೇನೆ ಎಂಬುದಕ್ಕಿಂತ ತಾನೆಷ್ಟು ಗಟ್ಟಿಯಾಗಿ ಬಾಳುತ್ತೇನೆ ಎಂಬುದು ಮುಖ್ಯ ಎಂಬ ಸಂದೇಶ ಇದರಲ್ಲಿ ಅಡಗಿದೆ.

ಸಾವಿರಾರು ವರ್ಷಗಳಿಂದ ತನ್ನ ಅಸ್ತಿತ್ವ ಬಿಟ್ಟುಕೊಡದೇ ಮಡಿಕೆಯಲ್ಲಿ ಭದ್ರವಾಗಿದ್ದ, ವಿಶ್ವದ ಅತ್ಯಂತ ದುಬಾರಿ ಮುತ್ತೊಂದನ್ನು ಪತ್ತೆ ಹಚ್ಚಲಾಗಿದೆ.

ಕೆನಡಾದ ಅಬ್ರಾಹಂ ರೆಯಿಸ್ ಎಂಬಾತ ಆಸ್ತಿ ಹಂಚಿಕೆ ವೇಳೆ ತನ್ನ ಚಿಕ್ಕಮ್ಮಳಿಂದ ಮಡಿಕೆಯೊಂದನ್ನು ಬಳವಳಿಯಾಗಿ ಪಡೆದಿದ್ದ. ಈ ಮಡಿಕೆಯಲ್ಲಿ ಈ ವಿಶ್ವದ ಅತ್ಯಂತ ದುಬಾರಿ ಮುತ್ತು ಇರುವುದನ್ನು ಅಬ್ರಾಹಂ ಕುಟುಂಬಸ್ಥರಿಗೆ ಗೊತ್ತೇ ಇರಲಿಲ್ಲ.

Clam you believe it!

[tap to expand] pic.twitter.com/Zohuz0SzK6

— BBC News (World) (@BBCWorld)

ಈ ಮಡಿಕೆಯನ್ನು ಅಬ್ರಾಹಂ ತಾತ 1959ರಲ್ಲಿ ಮೀನುಗಾರನೋರ್ವನಿಂದ ಖರೀದಿಸಿ ತಮ್ಮ ಮಗಳಿಗೆ ಉಡುಗೊರೆಯಾಗಿ ನೀಡಿದ್ದರು. ಆಸ್ತಿ ಹಂಚಿಕೆ ವೇಳೆ ಈ ಮಡಿಕೆ ಅಬ್ರಾಹಂ ಪಾಲಿಗೆ ಬಂದಿತ್ತು.

ಇದರೊಳಗಿದ್ದ ಮುತ್ತು ಇದೀಗ ವಿಶ್ವದ ಅತ್ಯಂತ ದುಬಾರಿ ವಜ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಇದರ ಇಂದಿನ ಮಾರುಕಟ್ಟೆ ಬೆಲೆ 60 ರಿಂದ 90 ಮಿಲಿಯನ್ ಡಾಲರ್ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬರೋಬ್ಬರಿ 27.65 ಕೆಜಿ ತೂಕವಿರುವ ಈ ಬಿಳಿ ವಜ್ರ, ಇದುವರೆಗೂ ನಂಬಲಾಗಿದ್ದ ವಿಶ್ವದ ಅತ್ಯಂತ ದುಬಾರಿ ವಜ್ರ ಲಾವೋ-ಸು-ಪರ್ಲ್‌ಗಿಂತ ನಾಲ್ಕು ಪಟ್ಟು ಹೆಚ್ಚು ತೂಕವಿದೆ. 22 ಕ್ಯಾರೆಟ್‌ನ ಈ ವಜ್ರ ಇದೀಗ ಇಡೀ ವಿಶ್ವದ ಗಮನ ಸೆಳೆದಿದೆ.

click me!