ಐಎಂಎಫ್ ಸಲಹಾ ಮಂಡಳಿಗೆ ರಘುರಾಂ ರಾಜನ್| ಕೊರೋನಾ ವೈರಸ್ ವಿಶ್ವವ್ಯಾಪಿ ಆರ್ಥಿಕತೆಯ ಮೇಲೆ ಪರಿಣಾಮ
ನವದೆಹಲಿ(ಏ.13): ಕೊರೋನಾ ವೈರಸ್ ವಿಶ್ವವ್ಯಾಪಿ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾರಣ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯು ಭಾರತದ ರಿಸವ್‌ರ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಂ ರಾಜನ್ ಸೇರಿದಂತೆ 12 ಜನರ ಸಲಹಾ ಮಂಡಳಿ ರಚಿಸಿದೆ.
ಇದ್ದಕ್ಕಿದ್ದಂತೆ HDFCಯ ಬಹುಕೋಟಿ ಷೇರು ಖರೀದಿಸಿದ ಚೀನಾ, ಕಾರಣ ಏನಣ್ಣ?
ಈ ಮಂಡಳಿಯು ಕೊರೋನಾ ವೈರಸ್ ಹರಡುವಿಕೆಯಿಂದ ಜಗತ್ತಿನ ವಿವಿಧ ದೇಶಗಳಲ್ಲಿ ಉದ್ಭವಿಸಿರುವ ಸವಾಲುಗಳು, ಅಲ್ಲಿನ ಪರಿಸ್ಥಿತಿ, ಮಹತ್ವದ ವಿದ್ಯಮಾನ, ನೀತಿ ಕುರಿತ ವಿಚಾರಗಳು ಇತ್ಯಾದಿಗಳನ್ನು ಐಎಂಎಫ್‌ಗೆ ನೀಡಲಿದೆ.
ಇದರಿಂದ ಭವಿಷ್ಯದ ಯೋಜನೆ ರೂಪಿಸಲು ಐಎಂಎಫ್‌ಗೆ ನೆರವಾಗಲಿದೆ. ರಾಜನ್ 2016ರ ಸೆಪ್ಟೆಂಬರ್‌ವರೆಗೆ ಆರ್‌ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು.