
ನವದೆಹಲಿ(ಮಾ.07) ಮಹಿಳಾ ದಿನಾಚರಣೆಗೆ L&T ಕಂಪನಿ ಗುಡ್ ನ್ಯೂಸ್ ನೀಡಿದೆ. ಇತ್ತೀಚೆಗೆ ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಅನ್ನೋ ಹೇಳಿಕೆಯಿಂದ L&T ಮುಖ್ಯಸ್ಥ ಎಸ್ಎನ್ ಸುಬ್ರಹ್ಮಣ್ಯನ್ ಇದೀಗ ತಮ್ಮ ಕಂಪನಿಗಳ ಉದ್ಯೋಗಿಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. L&T ಉದ್ಯೋಗಿಗಳಿಗೆ ಕಂಪನಿ ತೆಗೆದುಕೊಂಡ ನಿರ್ಧಾರ ನೆರವಾಗಿದೆ. ಪ್ರಮುಖವಾಗಿ 5000 ಮಹಿಳಾ ಉದ್ಯೋಗಿಗಳಿಗೆ ಕಂಪನಿಯ ಹೊಸ ನಿಯಮ ನೆರವಾಗಲಿದೆ. ಹೌದು, ಇದೀಗ L&T ಕಂಪನಿ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಒಂದು ದಿನ ಮುಟ್ಟಿನ ರಜೆ ನೀಡುವುದಾಗಿ ಘೋಷಿಸಿದೆ. ಈ ಬಾರಿ ಮಹಿಳಾ ದಿನಾಚರಣೆಗೆ ಕಂಪನಿ ಮಹತ್ವದ ಘೋಷಣೆ ಮಾಡಿದೆ.
L&T ಮಾತೃ ಸಂಸ್ಥೆಯ ಉದ್ಯೋಗಗಳಿಗೆ ಈ ನಿಯಮ ಅನ್ವಯಿಸಲಿದೆ. L&T ಜೊತೆ ಆಸೋಸಿಯೇಟ್ ಆಗಿರುವ,ಒಪ್ಪಂದ ಮಾಡಿಕೊಂಡಿರುವ ಸಂಸ್ಥೆಗಳ ಉದ್ಯೋಗಿಗಳಿಗೆ ಅನ್ವಯಿಸುವುದಿಲ್ಲ. L&T ಮಾತೃ ಸಂಸ್ಥೆಯಲ್ಲಿ ಬರೋಬ್ಬರಿ 60,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಶೇಕಡಾ 9 ರಷ್ಟು ಅಂದರೆ 5,000 ಮಹಿಳಾ ಉದ್ಯೋಗಿಗಳಿದ್ದಾರೆ. ಇದೀಗ ಈ ಉದ್ಯೋಗಿಳಿಗೆ ಕಂಪನಿ ವೇತನ ಸಹಿತ ಮುಟ್ಟಿನ ರಜೆ ನೀಡುವುದಾಗಿ ಘೋಷಿಸಿದೆ.
ಮಹಿಳೆಯರ ದಿನದಂದು ಸುಧಾ ಮೂರ್ತಿಯವರ 10 ಯಶಸ್ವಿ ಮಂತ್ರಗಳು, ತಪ್ಪದೇ ತಿಳ್ಕೊಳ್ಳಿ!
ಮುಟ್ಟಿನ ರಜೆ ಕಡ್ಡಾಯವಾಗಿ ನೀಡಬೇಕು ಎಂದು ಇತ್ತೀಚೆಗೆ ನಡೆದ ಕಂಪನಿಯ ಮಹತ್ವದ ಸಭೆಯಲ್ಲಿ ಎಸ್ಎನ್ ಸುಬ್ರಹ್ಮಣ್ಯನ್ ಸೂಚಿಸಿದ್ದರು. ಇದರಂತೆ ಕಂಪನಿ L&T ಕಂಪನಿ ಇದೀಗ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಮೂಲಕ ಮಹಿಳಾ ಉದ್ಯೋಗಿಗಳಿಗೆ ಮಹಿಳಾ ದಿನಾಚರಣೆಗೆ ಭರ್ಜರಿ ಉಡುಗೊರೆ ನೀಡಿದೆ.
ಭಾರತದಲ್ಲಿ ಹಲವು ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ನೀಡಿದೆ. ಕೆಲ ಸರ್ಕಾರಿ ಸಂಸ್ಥೆಗಳು ಮುಟ್ಟಿನ ರಜೆ ನೀಡುತ್ತಿದೆ. ವಿಶೇಷ ಅಂದರೆ ಮುಟ್ಟಿನ ರಜೆಗೆ ಸುದೀರ್ಘ ಇತಿಹಾಸವಿದೆ. ಮೊಟ್ಟ ಮೊದಲ ಬಾರಿಗೆ ಮುಟ್ಟಿನ ರಜೆ ನೀಡಿದ ಹಗ್ಗಳಿಕೆಗೆ ರಷ್ಯಾ ಪಾತ್ರವಾಗಿದೆ. 20ನೇ ಶತಮಾನದ ಆರಂಭದಲ್ಲೇ ರಷ್ಯಾ ಈ ನಿಯಮ ಜಾರಿಗೆ ತಂದಿತ್ತು. ಆದರೆ ಇದು ಪುರುಷರ ವಿರುದ್ಧ ಹಾಗೂ ಸಮಾನತೆಗೆ ವಿರುದ್ಧ ಅನ್ನೋ ಕಾರಣದಿಂದ 1927ರಲ್ಲಿ ಹಿಂತೆಗೆಯಲಾಗಿತ್ತು.
ಭಾರತದಲ್ಲಿ ಮುಟ್ಟಿನ ರಜೆ ಪರಿಕಲ್ಪನೆ 1912ರಲ್ಲೇ ಇತ್ತು. ಕೇರಳದ ಕೆಲ ಶಾಳೆಗಳಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಲಾಗಿತ್ತು. 1920ರಲ್ಲಿ ಜಪಾನ್‌ನಲ್ಲಿ ಕಾರ್ಮಿಕರ ಸಂಘಟನೆ ಮುಟ್ಟಿನ ರಜೆಗೆ ಆಗ್ರಹಿಸಿತ್ತು. 25 ವರ್ಷಕ್ಕೂ ಹೆಚ್ಚು ಕಾಲ ಇದ್ಕಾಗಿ ಹೋರಾಟ ನಡೆದಿತ್ತು. 1947ರಲ್ಲಿ ನಿಯಮವಾಗಿ ಜಪಾನ್‌ನಲ್ಲಿ ಜಾರಿಗೆ ಬಂದಿತ್ತು. 2003ರಲ್ಲಿ ಇಂಡೋನೇಷಿಯಾ ಪ್ರತಿ ತಿಂಗಳು 2 ದಿನವನ್ನು ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆಯಾಗಿ ನೀಡಲು ಘೋಷಿಸಿದೆ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಸವಾರಿ ಮಾಡಿ ವಿಶ್ವ ದಾಖಲೆ ಬರೆದ 71ರ ಮಹಿಳೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.