
ಬೆಂಗಳೂರು (ಮಾ.7): ಜನವರಿ 25ರ ಕಾಮ್‌ಸ್ಕೋರ್ ವರದಿ ಹೊರಬಿದ್ದಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ನಂ.1 ಸ್ಥಾನದಲ್ಲಿದೆ. ಡೆಸ್ಕ್‌ಟಾಪ್ ಹಾಗೂ ಮೊಬೈಲ್ ಯೂನಿಕ್ ಯೂಸರ್ಸ್ ಬಗ್ಗೆ ಮಾಹಿತಿ ನೀಡುವ ಕಾಮ್‌ಸ್ಕೋರ್ ಎಂಎಂಎಕ್ಸ್ ಮಲ್ಟಿಪ್ಲ್ಯಾಟ್‌ಫಾರ್ಮ್ ವರದಿ ಪ್ರಕಾರ ಕರ್ನಾಟಕದ ಡಿಜಿಟಲ್ ಮಾರುಕಟ್ಟೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮೊದಲ ಸ್ಥಾನಕ್ಕೇರಿ, ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿ ತಾಣವಾಗಿದೆ.
ಕರ್ನಾಟಕದ ವಿವಿಧ ಭಾಗದ ಜನರಿಗೆ, ಹಾಗೂ ವಿವಿಧ ಆಸಕ್ತಿಯುಳ್ಳವರಿಗೆ ವೈವಿಧ್ಯಮಯವಾಗಿ ಸುದ್ದಿ ತಲುಪಿಸುವಲ್ಲಿ ಮುಂಚೂಣಿಯಲ್ಲಿರುವ ಏಷ್ಯಾನೆಟ್ ಸುವರ್ಣನ್ಯೂಸ್ ಜನವರಿ 2025ರ ಕಾಮ್‌ಸ್ಕೋರ್ ವರದಿಯಲ್ಲಿ ಮೊದಲ ಸ್ಥಾನದೊಂದಿಗೆ ಆರು ದಶಲಕ್ಷ ಯೂಸರ್ಸ್ ಹಾಗೂ 56 ದಶಲಕ್ಷ ಪೇಜ್ ವ್ಯೂಸ್ ಪಡೆದಿದೆ. ಆ ಮೂಲಕ ನಂಬಲರ್ಹ ಪತ್ರಿಕೋದ್ಯಮಕ್ಕೆ ಹೆಸರಾಗಿರುವ ಏಷ್ಯಾನೆಟ್ ಹೊಸ ಮೈಲಿಗಲ್ಲು ಸೃಷ್ಟಸಿದೆ.
ಈ ಹೊಸ ಮೈಲಿಗಲ್ಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಸಿಇಒ ನೀರಜ್ ಕೋಹ್ಲಿ, ‘ಹೊಸ ಮಾರುಕಟ್ಟೆ ತಂತ್ರಜ್ಞಾನದೊಂದಿಗೆ, ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಏಷ್ಯಾನೆಟ್ ನ್ಯೂಸ್ ಕನ್ನಡ ಹೊಸ ಅಧ್ಯಾಯ ಆರಂಭಿಸಿದ್ದು, ಇದೇ ಉಳಿದ ಭಾಷೆಗಳಲ್ಲಿಯೂ ಮುಂದುವರೆಯಲಿದೆ,’ ಎಂದಿದ್ದಾರೆ.
ಏಷ್ಯೂನೆಟ್ ಸವರ್ಣ ನ್ಯೂಸ್ ಮುಂಚೂಣಿಯಲ್ಲೇಕೆ?
ಕೇವಲ ವಿಸ್ತೃತ ಸುದ್ದಿಯಿಂದ ಮಾತ್ರವಲ್ಲ, ಸಂಪಾದಕೀಯ ಸಮಗ್ರತೆಯಿಂದಲೂ ಏಷ್ಯಾನೆಟ್ ನ್ಯೂಸ್ ಕನ್ನಡ-ಸುವರ್ಣ ನ್ಯೂಸ್ ಕನ್ನಡ ಪತ್ರಿಕೋದ್ಯಮದಲ್ಲಿ ಮುಂಚೂಣಿಯಲ್ಲಿದೆ, ಸುದ್ದಿಗಳ 360 ಡಿಗ್ರಿ ಕವರೇಜ್, ನಿರ್ಭಯ ವರದಿಗಾರಿಕೆ ಮತ್ತು ನಿಖರ ಸುದ್ದಿ ನೀಡುವ ಬದ್ಧತೆಯಿಂದಲೇ ಕನ್ನಡ ಸುದ್ದಿಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಓದುಗರಿಗೆ ಅಗತ್ಯವಿರುವ ಸುದ್ದಿಗಳನ್ನೇ ಕೊಡುವ ಮೂಲಕ ಡಿಜಿಟಲ್ ಮಾಧ್ಯಮದಲ್ಲಿ ತನ್ನ ವೀಕ್ಷಕರು, ಓದುಗರೊಂದಿಗಿನ ಬಂಧವನ್ನು ಗಟ್ಟಿಗೊಳಿಸಿಕೊಂಡಿದೆ.
ಈ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಏಷ್ಯಾನೆಟ್ ನ್ಯೂಸ್ ಸಿಒಒ ತಪನ್ ಶರ್ಮಾ, ‘ಅತ್ಯದ್ಭುತ ಬೆಳವಣಿಗೆಯಿಂದ ಏಷ್ಯಾನೆಟ್ ನ್ಯೂಸ್ ರಾಷ್ಟ್ರೀಯ ಡಿಜಿಜಿಟಲ್ ಮಾಧ್ಯಮವಾಗಿ ರೂಪುಗೊಳ್ಳುವಂತಾಗಿದೆ. ನೇರ, ನಿರ್ಭಯ ಪತ್ರಿಕೋದ್ಯಮವೇ ಈ ಯಶಸ್ಸಿಗೆ ಕಾರಣ. ಕನ್ನಡದ ಈ ಗಮನಾರ್ಹ ಸಾಧನೆ ದಕ್ಷಿಣ ಭಾರತೀಯ ಭಾಷೆಗಳಲ್ಲಿ ತನ್ನ ಪ್ರಭಾವ ತೋರಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ.’ ಎಂದಿದ್ದಾರೆ.
ಭವಿಷ್ಯದ ನೋಟ
ಡಿಜಿಟಲ್ ಪತ್ರಿಕೋದ್ಯಮದಲ್ಲಿ ಏಷ್ಯಾನೆಟ್ ಕನ್ನಡ-ಸುವರ್ಣ ನ್ಯೂಸ್ ಹೊಸ ಮೈಲಿಗಲ್ಲು ಸ್ಥಾಪಿಸುವ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜಕೀಯ, ಮನೋರಂಜನೆ, ಜೀವನಶೈಲಿ ಸುದ್ದಿಗಳ ಮೂಲಕ ಭಿನ್ನ ರುಚಿಯ ಓದುಗರಿಗೆ ವೈವಿಧ್ಯಮಯ ಸುದ್ದಿಗಳನ್ನು ನೀಡಲು ಬದ್ಧವಾಗಿದೆ. ಅಲ್ಲದೇ ಬ್ರೇಕಿಂಗ್ ಸುದ್ದಿಗಳು ಹಾಗೂ ಆಳವಾದ ವರದಿಗಾರಿಕೆಯಿಂದಲೂ ಓದುಗರ ಮನಸೂರೆಗೊಂಡಿದ್ದು, ವರ್ಣರಂಜಿತ ಸುದ್ದಿಗಳಿಂದಲೂ ಮನೆ ಮಾತಾಗಿದೆ. ಸಿನಿಮಾ, ಜ್ಯೋತಿಷ್ಯ, ಶಾಂಪಿಂಗ್, ಆಹಾರ, ಕ್ರೀಡೆ ಸೇರಿ ಹತ್ತು ಹಲವು ವೈವಿಧ್ಯಮಯ ಸುದ್ದಿ ನೀಡುವಲ್ಲಿಯೂ ಮುಂದಿದೆ. ಇದರಿಂದಾನೇ ಹಲವು ವರ್ಷಗಳ ಕಾಲ ಏಷ್ಯಾನೆಟ್ ನ್ಯೂಸ್ ಕನ್ನಡ ಸುವರ್ಣ ನ್ಯೂಸ್ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ತಾರೆಯಂತೆ ಮಿನುಗಲಿದೆ.
ಏಷ್ಯಾನೆಟ್‌ನ್ಯೂಸ್.ಕಾಮ್ ಬಗ್ಗೆ
ಏಷ್ಯಾನೆಕ್ಸ್ಟ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್ ಮಾಲೀಕತ್ವದ ಏಷ್ಯಾನೆಟ್‌ನ್ಯೂಸ್.ಕಾಮ್ (ಮುಂಚೆ ಏಷ್ಯಾನೆಟ್ ನ್ಯೂಸ್ ಮೀಡಿಯಾ & ಎಂಟರ್‌ಟೈನ್‌ಮೆಂಟ್ ಲಿಮಿಟೆಡ್ ಎಂದಿತ್ತು) ಮಲಯಾಳಂ, ಕನ್ನಡ, ತಮಿಳು, ತೆಲಗು, ಹಿಂದಿ, ಇಂಗ್ಲಿಷ್, ಬಾಂಗ್ಲಾ ಮತ್ತು ಮರಾಠಿಯಲ್ಲಿ ವೆಬ್‌ಸೈಟ್ಸ್ ಹೊಂದಿದೆ. ಪೇಜ್‌ವ್ಯೂಸ್ ಮತ್ತು ಯೂಸರ್ಸ್ ಮೂಲಕ ಭಾರತದಲ್ಲಿ ತನ್ನದೇ ಓದುಗರನ್ನು ಹೊಂದಿದ್ದು, ಪ್ರಗತಿಯಲ್ಲಿ ಟಾಪ್ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ಕೈ ಬೆರಳಲ್ಲಿ ಮಾಹಿತಿ ಪಡೆಯುವ ಈ ಯುಗದಲ್ಲಿ, ಏಷ್ಯಾನೆಟ್ ನ್ಯೂಸ್ ಡಿಜಿಟಲ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ವಿಶ್ವಾಸರ್ಹ ಸುದ್ದಿಯನ್ನು ಭಿತ್ತರಿಸುವ ಮೂಲಕ ಓದುಗರನ್ನು ಆಕರ್ಷಿಸುತ್ತಿದೆ, ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸಲು ಉತ್ಸುಕವಾಗಿದೆ. ಮುಂಬರುವ ದಿನಗಳಲ್ಲಿ ಕೇವಲ ತನ್ನ ಸ್ಥಾನ ಉಳಿಸಿಕೊಳ್ಳುವುದು ಮಾತ್ರವಲ್ಲ, ಡಿಜಿಟಲ್ ಮಾಹಿತಿ ತಂತ್ರಜ್ಞಾನದಲ್ಲಿ ಏಷ್ಯಾನೆಟ್ ನ್ಯೂಸ್ ಮುಂದಾಳತ್ವ ವಹಿಸಲಿದೆ.
ಸೋರ್ಸ್: ಕಾಮ್‌ಸ್ಕೋರ್ ಎಂಎಂಎಕ್ಸ್ ಮಲ್ಟಿ ಪ್ಲಾಟ್‌ಫಾರ್ಮ್, ಯೂನಿಕ್ ವಿಸಿಟರ್ಕ್ ಮತ್ತು ಎಂಎಂಪಿ; ಪೇಜ್ ವ್ಯೂಸ್, ಕನ್ನಡ ಸುದ್ದಿ ಮತ್ತು ಮಾಹಿತಿ ಪಟ್ಟಿಯ Ranking ಪಟ್ಟಿ (ಏಷ್ಯಾನೆಟ್ ಕನ್ನಡ-ಸುವರ್ಣ ನ್ಯೂಸ್, ನ್ಯೂಸ್ 18 ಕನ್ನಡ, ವಿಜಯ ಕರ್ನಾಟಕ, ಟಿವಿ9 ಕನ್ನಡ.ಕಾಮ್, ಒನ್ಇಂಡಿಯಾ.ಕಾಮ್ ಕನ್ನಡ, ಜೀನ್ಯೂಸ್ ಕನ್ನಡ, ಎಚ್‌ಟಿ ಕನ್ನಡ, ವಿಜಯವಾಣಿ.ನೆಟ್, ಪ್ರಜಾವಣಿ.ನೆಟ್, ಕನ್ನಡಪ್ರಭ.ಕಾಮ್, ಉದಯವಾಣಿ.ಕಾಮ್), ಟೋಟಲ್ ಆಡಿಯನ್ಸ್, ಜನವರಿ 25, ಭಾರತ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.