ರೊಟ್ಟಿ ತಟ್ಟೋದೇ ತಲೆ ನೋವಾಗಿರುವವರಿಗೆ ಸಹಾಯ 'ಜ್ಯೋತಿ'!

By Vinutha Perla  |  First Published Aug 10, 2023, 11:26 AM IST

ರೊಟ್ಟಿ ಮಾಡಲು ಈಗಿನ ಹೆಣ್ಣು ಮಕ್ಕಳಿಗೆ ಪುರುಸೊತ್ತೂ ಇರೋಲ್ಲ, ಬರೋದೂ ಇಲ್ಲ. ಬಂದರೂ ಮಾಡಲು ಮನಸ್ಸಿಲ್ಲ. ಹಾಗಾಗಿ ಹೊಟೇಲ್ ಉದ್ಯಮ ಬೃಹತ್ ಆಗಿ ಬೆಳೆಯುತ್ತಿದೆ. ಅಂಥವರಿಗೆ ರೊಟ್ಟಿ ಮಾಡಿ, ಮಾರಿ ಈ ಮಹಿಳೆ ಬದುಕು ಕಟ್ಟಿ ಕೊಂಡಿದ್ದಾರೆ. 


ವರದಿ : ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

ಧಾರವಾಡ: ಇತ್ತೀಚಿಗೆ ‌ಆಹಾರದ ಸಮಸ್ಯ ಅಂತ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಕಲಬರಕೆ ಆಹಾರವನ್ನ‌ು ತಿಂದವರೆಷ್ಟೋ ಜನರು ತಮ್ಮ ಆರೋಗ್ಯವನ್ನ‌ು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಳ್ಳಿಗಳಲ್ಲಿ ಮಾತ್ರಿ ಈಗಲೂ ಶುದ್ಧ ಆಹಾರವನ್ನು ಮನೆಯಲ್ಲಿಯೇ ಸಿದ್ಧಗೊಳಿಸಿ, ಜನರಿಗೆ ಮಾರುತ್ತಿದ್ದಾರೆ ಈ ದಿಟ್ಟ ಮಹಿಳೆ ಜ್ಯೋತಿ. 

Tap to resize

Latest Videos

undefined

ಈಗಿನ ಹೆಣ್ಣು ಮಕ್ಕಳಿಗೆ ರೊಟ್ಟಿ ತಟ್ಟೋ ಕಲೆಯೇ ಗೊತ್ತಿಲ್ಲ. ಇನ್ನು ಮಾಡೋದು ಎಲ್ಲಿಂದ. ಹೊರಗೆ ದುಡಿಯುವ ನೆಪದಲ್ಲಿ ಮನೆಯ ಕೆಲಸಗಳನ್ನು ಗಾಳಿಗೆ ತೂರಿದ್ದಾರೆ. ಅಂಥವರಿಗೆ ನೆರವಾದರೆ, ಅವರಿಗೂ ಅನಕೂಲ, ತಮಗೂ ಲಾಭ. ಜೊತೆಗೆ ಸರಕಾರ ನೀಡುವ ಸಾಲ ಸೌಲಭ್ಯ ಪಡೆದುಕೊಂಡು, ತಮ್ಮದೇ ಸ್ಟಾರ್ಟ್‌ಅಪ್ ಆರಂಭಿಸಿ, ಯಶಸ್ವಿಯಾಗಿದ್ದಾರೆ. ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಈ ಮಹಿಳೆ (Woman) ಹೊಸದಾಗಿ ಉದ್ಯೋಗ (Job)ವನ್ನು ಆರಂಭಿಸಿದ್ದಾರೆ.

ಕೆಲಸವಿಲ್ಲದ ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ ಶೇಂಗಾ ಚಿಕ್ಕಿ

ರೊಟ್ಟಿ ಮಾಡೋ ಯಂತ್ರದ ಮೂಲಕ ದಿನಕ್ಕೆ  400ಕ್ಕೂ ಹೆಚ್ಚು ರೊಟ್ಟಿ ಪೂರೈಕೆ
ಜ್ಯೋತಿ ಪತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಇವರು  ಮನೆಯಲ್ಲಿ ನಾನೇಕೆ ಸುಮ್ಮನೆ ಕೂರಲೆಂದು ಸ್ವಯಂ ಉದ್ಯೋಗಕ್ಕೆ ಕೈ ಹಾಕಿದ್ದಾರೆ. ಲಕ್ಷಾಂತರ ವ್ಯಯಿಸಿ  ಹಣ ಖರ್ಚು ಮಾಡಿ ರೊಟ್ಟಿ ಮಾಡೋ ಯಂತ್ರವನ್ನ‌ು ಖರೀದಿಸಿದ್ದಾರೆ. ಸೋಲಾರ್ ಮೂಲಕ ಯಂತ್ರ ಕಾರ್ಯ ನಿರ್ವಹಿಸುತ್ತದೆ. ಪ್ರತಿ ದಿನ ಮೂನ್ನೂರಿಂದ 400 ವರೆಗೆ ರೊಟ್ಟಿ ಮಾಡಿ, ಹೋಟೆಲ್‌ಗಳಿಗೆ, ಮೆಸ್‌ಗಳಿಗೆ, ಕ‌್ಯಾಂಟಿನ್‌ಗಳಿಗೆ ರೊಟ್ಟಿ ಪೂರೈಸುತ್ತಿದ್ದಾರೆ.

ಪ್ರತಿ ತಿಂಗಳು ಸುಮಾರು 25,000 ಆದಾಯ
ಸದ್ಯ ಮನೆಯಲ್ಲಿಯೇ ಇದ್ದುಕ್ಕೊಂಡು ಪ್ರತಿ ತಿಂಗಳು ಸುಮಾರು 25,000 ಆದಾಯದ ದಾರಿ ಹುಡುಕಿಕೊಂಡಿದ್ದಾರೆ. ಇವರು ಮಾಡುವ ಕೆಲಸಕ್ಕೆ ಇಡಿ ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆ. ಈ ಸ್ವಾವಲಂಬಿ ಜೀವನ ನೂರಾರು ಮಹಿಳೆಯರಿಗೆ ಮಾದರಿಯಾಗಿದೆ. ಕೇವಲ ರೊಟ್ಟಿ ಉದ್ಯೂಗವಲ್ಲದೇ ಸಂಡಿಗೆ, ಹಪ್ಪಳ ಮಾಡಿ ಮಾರುತ್ತಾರೆ. ತಮ್ಮ ಗಂಡನಿಗೆ ಆರ್ಥಿಕತೆಗೆ ಕೈ ಜೋಡಿಸಿದ್ಧಾಳೆ. ಮಹಿಳೆಯಾಗಿ ತಾವು ಸ್ವಯಂ ಉದ್ಯೋಗವನ್ನು ಮಾಡಲೇಬೇಕು ಎಂಬ ಕಾರಣಕ್ಕೆ ಈ ಉದ್ಯೂಗ ಮಾಡಿ ಮಹಿಳೆಯರಿಗೆ ಮಾದರಿಯಾಗಿದ್ದಾಳೆ.

ಮಹಿಳಾ ಸಮ್ಮಾನ್ ಉಳಿತಾಯ ಖಾತೆ ತೆರೆದ ಒಂದೇ ಕುಟುಂಬದ 5 ತಲೆಮಾರಿನ ಮಹಿಳೆಯರು;ಅಪೂರ್ವ ಕ್ಷಣಕ್ಕೆ ಅಂಚೆ ಇಲಾಖೆ ಸಾಕ್ಷಿ

ವಿಷೇಷ ಅಂದರೆ ಇತ್ತಿಚಿಗೆ ದಿನಗಳಲ್ಲಿ ವಿದ್ಯುತ್ ಸಮಸ್ಯಯಿಂದ ಉದ್ಯೂಗ ನಡೆಸೋದು ಕಷ್ಟ. ಆದರೆ ಇವರು ಸೋಲಾರ್‌ನಿಂದ ತಮ್ಮ ಯಂತ್ರೋಪಕರಣಗಳು ಕೆಲಸ ಮಾಡುವಂತೆ ಮಾಡಿಕೊಂಡಿದ್ದು, ವಿದ್ಯುತ್ ಖರ್ಚು ಕಡಿಮೆಯಾಗುವಂತೆ ಮಾಡಿದೆ. ಹೀಗೆ ತಮಗೆ ಬರೋ ಅಡುಗೆಯನ್ನು ಕಸುಬನ್ನಾಗಿಸಿ, ಏನು ಬೇಕಾದರೂ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

click me!