ಹೂಡಿಕೆದಾರರು ಸಿಗದೇ ಇದ್ದರೆ, 6 ತಿಂಗಳಲ್ಲಿ ಏರಿಂಡಿಯಾ ಬಂದ್‌!

By Suvarna News  |  First Published Dec 31, 2019, 9:59 AM IST

ಹೂಡಿಕೆದಾರರು ಸಿಗದಿದೇ ಇದ್ದರೆ, 6 ತಿಂಗಳಲ್ಲಿ ಏರಿಂಡಿಯಾ ಬಂದ್‌!| ಏರಿಂಡಿಯಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರ ಆತಂಕ


ಮುಂಬೈ[ಡಿ.31]: ಸುಮಾರು 60 ಸಾವಿರ ಕೋಟಿ ರು. ಸಾಲದೊಂದಿಗೆ ಭಾರೀ ನಷ್ಟದ ಸುಳಿಗೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ವಿಮಾನ ಸಂಸ್ಥೆ ಮಾರಾಟಕ್ಕಾಗಿ ಕೇಂದ್ರ ಸರ್ಕಾರ ಹೆಣಗಾಡುತ್ತಿರುವ ಬೆನ್ನಲ್ಲೇ, ಯಾವುದೇ ಹೂಡಿಕೆದಾರರು ವಿಮಾನ ಸಂಸ್ಥೆ ಖರೀದಿಗೆ ಮುಂದೆ ಬಾರದೇ ಇದ್ದಲ್ಲಿ, ಇನ್ನಾರು ತಿಂಗಳಲ್ಲಿ ಏರಿಂಡಿಯಾ ಸಂಸ್ಥೆ ಯುಗಾಂತ್ಯವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

ಸುಮಾರು 60 ಸಾವಿರ ಕೋಟಿ ರು. ನಷ್ಟದ ಸುಳಿಗೆ ಸಿಲುಕಿರುವ ಏರಿಂಡಿಯಾ ವಿಮಾನ ಮಾರಾಟಕ್ಕೆ ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಆದರೆ, ಈ ವಿಮಾನ ಸಂಸ್ಥೆಗೆ ಮತ್ತಷ್ಟುಧನ ಸಹಾಯ ಮಾಡುವ ನಿರ್ಧಾರಕ್ಕೆ ಮುಂದಾಗುತ್ತಿಲ್ಲ. ಮತ್ತೊಂದೆಡೆ, ವಿಮಾನ ಖರೀದಿಗೆ ಯಾವುದೇ ಹೂಡಿಕೆದಾರರು ಮುಂದೆ ಬರುತ್ತಿಲ್ಲ. 2020ರ ಜೂನ್‌ವರೆಗೂ ಇದೇ ಪರಿಸ್ಥಿತಿ ಮುಂದುವರಿದರೆ, ಭಾರತ ಮೂಲದ ಅಂತಾರಾಷ್ಟ್ರೀಯ ವಿಮಾನ ಸಂಸ್ಥೆ ಜೆಟ್‌ ಏರ್‌ವೇಸ್‌(ಹಣಕಾಸು ಕೊರತೆಯಿಂದ 2019ರ ಏ.17ರಂದು ವಿಮಾನಗಳ ಹಾರಾಟ ತಾತ್ಕಾಲಿಕ ರದ್ದು) ಗತಿಯೇ ಏರಿಂಡಿಯಾಗೂ ಬರಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Latest Videos

2011-12ನೇ ಸಾಲಿನ ಆರ್ಥಿಕ ವರ್ಷದಲ್ಲಿ ಡಿಸೆಂಬರ್‌ವರೆಗೂ ಸರ್ಕಾರದಿಂದ ಏರಿಂಡಿಯಾ ವಿಮಾನ ಸಂಸ್ಥೆಗೆ 30,520.21 ಕೋಟಿ ರು. ಪೂರೈಕೆಯಾಗಿತ್ತು. ಇನ್ನು ವಿಮಾನಗಳ ಕಾರ್ಯಾಚರಣೆ ಅಗತ್ಯವಿರುವ ವೆಚ್ಚಕ್ಕಾಗಿ 2400 ಕೋಟಿ ರು. ಸಾಲ ಪಡೆಯಲು ಸರ್ಕಾರದ ಖಾತ್ರಿ ಕೇಳಿದ್ದೆವು. ಆದರೆ, 500 ಕೋಟಿ ರು. ಸಾಲಕ್ಕೆ ಕೇಂದ್ರ ಸರ್ಕಾರ ಖಾತ್ರಿ ನೀಡಿತ್ತು. ಹಣಕಾಸಿನ ಕೊರತೆ ಹೊರತಾಗಿಯೂ, ಜೂನ್‌ವರೆಗೂ ಪರಿಸ್ಥಿತಿಯನ್ನು ಹೇಗೋ ನಿಭಾಯಿಸುತ್ತೇವೆ. ಆದರೆ, ಆ ನಂತರ ಸಂಸ್ಥೆಯನ್ನು ಮುಚ್ಚುವ ಅನಿವಾರ್ಯತೆಗೆ ಸಿಲುಕುತ್ತೇವೆ ಎಂದು ಹೇಳಿದ್ದಾರೆ.

click me!