ಯುಗಾದಿ ಹಬ್ಬ ಹೊಸ್ತಿಲಲ್ಲಿಯೇ ಇರುವ ಹೊತ್ತಲ್ಲೇ ಚಿನ್ನ-ಬೆಳ್ಳಿ ದರದಲ್ಲಿ ಕುಸಿತವಾಗಿದ್ದು, ಎಲ್ಲೆಲ್ಲಿ ದರ ಎಷ್ಟೆಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ...
ಇನ್ನೇನು ಯುಗಾದಿ ಹೊಸ್ತಿಲಿಗೆ ಬಂದು ನಿಂತಿದೆ. ನವ ಯುಗದ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಹೊಸ ವರ್ಷವನ್ನು ಹೊಸ ಹರ್ಷದಿಂದ ಬರಮಾಡಿಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಹಬ್ಬ-ಹರಿದಿನ ಎಂದರೆ ಸಾಕು, ಹೊಸ ವಸ್ತ್ರ, ಚಿನ್ನಾಭರಣ, ಬೆಳ್ಳಿಯ ಪಾತ್ರೆಗಳಿಗೆ ಭಾರಿ ಬೇಡಿಕೆ. ಆದರೆ ಕೆಲವು ತಿಂಗಳುಗಳಿಂದ ಏರುತ್ತಿರುವ ಚಿನ್ನ-ಬೆಳ್ಳಿಯ ದರದಿಂದಾಗಿ ಇದರ ಸಹವಾಸವೇ ಬೇಡ ಎಂದುಕೊಂಡವರೇ ಹೆಚ್ಚು. ಆದರೆ ನಿಧಾನವಾಗಿ ದಿನದಿಂದ ದಿನಕ್ಕೆ ಚಿನ್ನ-ಬೆಳ್ಳಿಯ ದರದಲ್ಲಿ ಕಡಿತವಾಗುತ್ತಿದೆ. ಕೆಲವು ದಿನಗಳಿಂದ ಬೆಲೆ ಕುಸಿತ ಕಾಣಿಸುತ್ತಿದೆ. ಇದಕ್ಕೆ ಹಲವಾರು ರೀತಿಯ ಕಾರಣಗಳನ್ನು ಆರ್ಥಿಕ ತಜ್ಞರು ವ್ಯಾಖ್ಯಾನಿಸುತ್ತಿದ್ದಾರೆ.
ಆರ್ಥಿಕ ತಜ್ಞರ ಪ್ರಕಾರ, ಹಣದುಬ್ಬರಕ್ಕೂ ಚಿನ್ನದ ದರಕ್ಕೂ ನೇರ ಸಂಬಂಧವಿದೆ. ಯುಎಸ್ ಡಾಲರ್ ಇತರ ಕರೆನ್ಸಿಗಳ ಬೆಲೆ ಹೆಚ್ಚಾಗಿರುವ ಕಾರಣದಿಂದ ಚಿನ್ನದ ಕೊಳ್ಳುವಿಕೆ ದುಬಾರಿಯಾಗಿ, ಬೇಡಿಕೆ ತಗ್ಗಬಹುದು ಇಲ್ಲವೇ ಜಾಗತಿಕ ಮಾರುಕಟ್ಟೆ ಸ್ಥಿರತೆ ಮತ್ತು ಸುರಕ್ಷಿತ ಆಸ್ತಿಯಾಗಿ ಚಿನ್ನದ ಬೇಡಿಕೆ ಕಡಿಮೆಯಾಗುವುದು ಸಹ ಬೆಲೆ ಕುಸಿತಕ್ಕೆ ಕಾರಣವಾಗಬಹುದು. ಅದೇ ಇನ್ನೊಂದೆಡೆ, ಚಿನ್ನದ ಹೊರತಾಗಿ ಪರ್ಯಾಯ ಹೂಡಿಕೆಗಳು ಜನರನ್ನು ಹೆಚ್ಚು ಆಕರ್ಷಕವಾಗಿಸುವು ಕಾರಣ, ಬಂಡವಾಳವನ್ನು ಚಿನ್ನದಿಂದ ಬೇರೆಡೆಗೆ ತಿರುಗಿಸುವ ಸಾಧ್ಯತೆಯಿದೆ. ಜೊತೆಗೆ, ವಿತ್ತೀಯ ನೀತಿಗಳಲ್ಲಿನ ಬದಲಾವಣೆಗಳು, ವಿಶೇಷವಾಗಿ ಬಡ್ಡಿದರಗಳಿಗೆ ಸಂಬಂಧಿಸಿದವುಗಳು ಚಿನ್ನದ ಬೆಲೆಗಳ ಮೇಲೆ ಪ್ರಭಾವ ಬೀರುತ್ತವೆ. ಇವೆಲ್ಲಾ ಕಾರಣಗಳಿಂದಾಗಿ ಕಳೆದ ಕೆಲವು ದಿನಗಳಲ್ಲಿ ಚಿನ್ನ-ಬೆಳ್ಳಿಗಳ ಬೆಲೆಯಲ್ಲಿ ಕಡಿತವಾಗುತ್ತಿರುವ ಕಾರಣ, ಯುಗಾದಿಯ ಸಂದರ್ಭದಲ್ಲಿ ಆಭರಣ ಕೊಳ್ಳುವವರಿಗೆ ಇದು ಸುಸಮಯವಾಗಿದೆ. ಭಾರಿ ಪ್ರಮಾಣದಲ್ಲಿ ಕಡಿತವಾಗದಿದ್ದರೂ, ಹೆಚ್ಚೆಚ್ಚು ಚಿನ್ನ- ಬೆಳ್ಳಿ ಪಡೆಯುವವರಿಗೆ ಇದು ದೊಡ್ಡ ಪ್ರಮಾಣವೇ ಆಗಿರುತ್ತದೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಆಸೆ ಇದ್ಯಾ? ಸಂಪತ್ತು ವೃದ್ಧಿಸುವ ಆಸೆನಾ? ಹಾಗಿದ್ರೆ ಇದನ್ನು ತಿಳಿದುಕೊಳ್ಳಿ
ಇಂದಿನ (ಮಾರ್ಚ್ 25) ದರ ನೋಡುವುದಾದರೆ, ಇಂದಿನ ಚಿಲ್ಲರೆ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಮ್ಗೆ 8,929 ರೂ, 22 ಕ್ಯಾರೆಟ್ ಚಿನ್ನದ ಬೆಲೆ 8,185 ರೂ. 18 ಕ್ಯಾರೆಟ್ ಚಿನ್ನದ ಬೆಲೆ 6,697 ರೂ. ಆಗಿದೆ. ನಿನ್ನೆಗೆ ಹೋಲಿಸಿದರೆ ಸ್ವಲ್ಪ ಪ್ರಮಾಣದಲ್ಲಿ ಚಿನ್ನದ ದರ ಕಡಿಮೆಯಾಗಿದೆ. ಇದು ಕ್ರಮವಾಗಿ, 30 ರೂ, 33 ರೂ. ಮತ್ತು 25 ರೂ. ಕಡಿಮೆಯಾಗಿದೆ. ಇದೇ ರೀತಿ ಮುಂದೆಯೂ ಕೆಲವು ದಿನಗಳವರೆಗೆ ಮುಂದುವರೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಯುಗಾದಿಗೆ ಚಿನ್ನಾಭರಣ ಕೊಳ್ಳುವವರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ನಿನ್ನೆ (ಮಾರ್ಚ್ 24) 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 8,962 ರೂ, ಆಗಿದ್ದರೆ, ಮೊನ್ನೆ ಅಂದರೆ ಮಾರ್ಚ್ 23ರಂದು 8,978 ರೂ. ಆಗಿತ್ತು. ಅದರ ಅರ್ಥ 16 ರೂಪಾಯಿ ಕುಸಿತ ಕಂಡಿತ್ತು. ಅದರಂತೆಯೇ, 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಕುಸಿತವಾಗಿದ್ದು, 24 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯಲ್ಲಿ 1,600 ರೂ.ಇಳಿಕೆಯಾಗಿತ್ತು.
ಹಾಗಿದ್ದರೆ ಎಲ್ಲೆಲ್ಲಿ, ಎಷ್ಟೆಷ್ಟು ಚಿನ್ನ-ಬೆಳ್ಳಿ ಬೆಲೆ ಇದೆ ಎಂದು ನೋಡುವುದಾದರೆ; ಬೆಂಗಳೂರಿನಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ: 81,850 ರೂಪಾಯಿ ಇದ್ದು, 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ: 89,290 ರೂಪಾಯಿ ಇದೆ. ಇನ್ನು ಬೆಳ್ಳಿ ಬೆಲೆ ಹೇಳುವುದಾದರೆ, 10 ಗ್ರಾಂಗೆ: 1,010 ರೂಪಾಯಿ ಇದೆ. ಅದೇ ರೀತಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್ಗೆ- ಬೇರೆ ಬೇರೆ ನಗರಗಳಲ್ಲಿ ಈ ರೀತಿಯಾಗಿವೆ. ಚೆನ್ನೈ: 81,850 ರೂ; ಮುಂಬೈ: 81,850 ರೂ; ದೆಹಲಿ: 82,000 ರೂ; ಕೋಲ್ಕತಾ: 81,850 ರೂ; ಕೇರಳ: 81,850 ರೂ; ಅಹ್ಮದಾಬಾದ್: 81,900 ರೂ; ಜೈಪುರ್: 82,000 ರೂ; ಲಖನೌ: 82,000 ರೂ; ಭುವನೇಶ್ವರ್: 81,850 ರೂ.
ಎಮಿರೇಟ್ಸ್ ಡ್ರಾ: AED 100 ಮಿಲಿಯನ್ ಜಾಗತಿಕ ಜಾಕ್‌ಪಾಟ್- ವಿಶ್ವದ ಅತಿದೊಡ್ಡ ಲಾಟರಿಯಲ್ಲಿ ಇತಿಹಾಸ ಸೃಷ್ಟಿ