ಗಂಡನ ಆದಾಯ ಎಷ್ಟೆಂದು ತಿಳಿಯುವ ಹಕ್ಕು ಹೆಂಡತಿಗಿದೆ: RTI ಅರ್ಜಿಗೂ ಅವಕಾಶ!

Published : Nov 18, 2020, 04:00 PM ISTUpdated : Nov 18, 2020, 04:17 PM IST
ಗಂಡನ ಆದಾಯ ಎಷ್ಟೆಂದು ತಿಳಿಯುವ ಹಕ್ಕು ಹೆಂಡತಿಗಿದೆ: RTI ಅರ್ಜಿಗೂ ಅವಕಾಶ!

ಸಾರಾಂಶ

ಮಹಿಳೆಗೆ ತನ್ನ ಗಂಡನ ಒಟ್ಟಾರೆ ಆದಾಯ ಎಷ್ಟಿದೆ ಎಂಬುವುದನ್ನು ತಿಳಿದುಕೊಳ್ಳುವ ಹಕ್ಕು ಇದೆ| ಆರ್‌ಟಿಐ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದು|

ಜೋಧ್‌ಪುರ(ನ.18): ಕೇಂದ್ರ ಮಾಹಿತಿ ಆಯೋಗ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಹೆಂಡತಿಗೆ ತನ್ನ ಗಂಡನ ಆದಾಯ ಎಷ್ಟೆಂದು ತಿಳಿಯುವ ಹಕ್ಕು ಇದೆ. ಆರ್‌ಟಿಐ ಅರ್ಜಿ ಮೂಲಕ ಆಕೆ ತನ್ನ ಗಂಡನ ಒಟ್ಟಾರೆ ಆದಾಯ ಎಷ್ಟಿದೆ ಎಂಬುವುದನ್ನು ತಿಳಿದುಕೊಳ್ಳಬಹುದು ಎಂದಿದೆ.

ಹಳ್ಳಿ ಜನರ ಜೇಬಿಗೆ ಕತ್ತರಿ ಹಾಕಲು ಹೊರಟ ಸರ್ಕಾರ

ಮಹಿಳೆಯೊಬ್ಬರು ಆರ್‌ಟಟಿಐ ಕಾಯ್ದೆಯಡಿ ತನ್ನ ಗಂಡನ ಆದಾಯ ಎಷ್ಟು ಎಂಬುವುದನ್ನು ಕೇಳಿದ್ದಳು. ಆದರೆ ಇಲಾಖೆ ಆಕೆಗೆ ಉತ್ತರ ನೀಡಲು ನಿರಾಕರಿಸಿತ್ತು. ಈ ಬಗ್ಗೆ ಆಕೆ ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದಳು. ಸದ್ಯ ಈ ವಿಚಾರವಾಗಿ ಜೋಧ್‌ಪುರ್‌ನ ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿರುವ ಕೇಂದ್ರ ಮಾಹಿತಿ ಆಯೋಗ ಇನ್ನು ಹದಿನೈದು ದಿನದೊಳಗೆ ಮಹಿಳೆ ಕೇಳಿದ ಮಾಹಿತಿಯನ್ನು ರವಾನಿಸುವಂತೆ ಆದೇಶಿಸಿದೆ.

ಅಲ್ಲದೇ ಕೇಂದ್ರ ಮಾಹಿತಿ ಆಯೋಗ ಈ ಮಾಹಿತಿಯು ಮೂರನೇ ವ್ಯಕ್ತಿಗೆ ಸಂಬಂಧಿಸಿದೆ ಮತ್ತು ಆರ್‌ಟಿಐ ಅಡಿಯಲ್ಲಿ ಮಾಹಿತಿಯ ವ್ಯಾಖ್ಯಾನಕ್ಕೆ ಬರುವುದಿಲ್ಲ ಎಂಬ ಆರ್‌ಟಿಐ ವಾದವನ್ನೂ ಸಹ ತಿರಸ್ಕರಿಸಿದೆ.

ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆ ದಿನಾಂಕ ವಿಸ್ತರಿಸಿದ ಕೇಂದ್ರ ಸರ್ಕಾರ!

ಜೋಧ್‌ಪುರದ ಮಹಿಳೆ, ರಹ್ಮತ್ ಬಾನು ಎಂಬ ಮಹಿಳೆ ಆರ್‌ಟಟಿಐನಡಿ ತನ್ನ ಗಂಡನಿಗೆ ಬರುತ್ತಿರುವ ಒಟ್ಟಾರೆ ಆದಾಯವೆಷ್ಟಟು ಎಂಬ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿದ್ದಳು. ಆದರೆ ಆದಾಯ ತೆರಿಗೆ ಈ ಮಾಹಿತಿಯು ಮೂರನೇ ವ್ಯಕ್ತಿಗೆ ಸೇರಿದೆ ಹೀಗಾಗಿ ನೀಡಲು ಸಾಧ್ಯವಿಲ್ಲ ಎಂದಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!