4 ಅಂಕೆಯ ಎಟಿಎಂ ಪಿನ್ ಹುಟ್ಟಿನ ಹಿಂದಿದೆ ಪತ್ನಿಯ ಮರೆವಿನ ಕಥೆ!

By Suvarna News  |  First Published May 28, 2022, 8:02 PM IST

ಎಟಿಎಂ ಕಾರ್ಡ್ ಇಂದು ಬಹುತೇಕ ಎಲ್ಲರ ಬಳಿಯೂ ಇದೆ. ಹೀಗಿರುವಾಗ ನೀವು ಎಂದಾದರೂ ಎಟಿಎಂ ಪಿನ್ 4 ಅಂಕೆಗಳನ್ನು ಹೊಂದಿರುವ ಬಗ್ಗೆ ಯೋಚಿಸಿದ್ದೀರಾ? ಇದರ ಹಿಂದಿದೆ ಒಂದು ರೋಚಕ ಕಥೆ. ಏನದು? 


Business Desk: ಇಂದು ನಗದು (Cash) ಬೇಕೆಂದ್ರೆ ಬ್ಯಾಂಕಿಗೆ (Bank) ಭೇಟಿ ನೀಡಿ ಗಂಟೆಗಟ್ಟಲೆ ಕಾಯಬೇಕಾದ ಅಗತ್ಯವಿಲ್ಲ.  ಎಲ್ಲೆಂದರಲ್ಲಿ ಎಟಿಎಂ (ATM) ಕೇಂದ್ರಗಳಿವೆ. ನಮ್ಮ ಬಳಿಯಿರುವ ಡೆಬಿಟ್ ಕಾರ್ಡ್ (Debit card) ಅಥವಾ ಎಟಿಎಂ ಕಾರ್ಡ್ (ATM card) ಬಳಸಿ ಗೌಪ್ಯ ಪಿನ್ ಸಂಖ್ಯೆ (Pin Code) ನಮೂದಿಸಿ ಎಷ್ಟು ಹಣ ಬೇಕೋ ಅಷ್ಟನ್ನು  ಕ್ಷಣಾರ್ಧದಲ್ಲಿ ಎಟಿಎಂ ಯಂತ್ರದಿಂದ ಪಡೆಯಬಹುದು. ಆದ್ರೆ, ನೀವು ಎಂದಾದರೂ ಎಟಿಎಂ ಪಿನ್ ಸಂಖ್ಯೆ ಬಗ್ಗೆ ಯೋಚಿಸಿದ್ದೀರಾ? ಅದ್ಯಾಕೆ ಎಟಿಎಂ ಪಿನ್ ಬರೀ ನಾಲ್ಕು ಸಂಖ್ಯೆಗಳನ್ನು ಹೊಂದಿದೆ? ಏಕೆ 6 ಸಂಖ್ಯೆಗಳನ್ನು ಹೊಂದಿಲ್ಲ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ.

ಪತ್ನಿ ಮರೆವು  4 ಅಂಕೆಗಳ ಪಿನ್ ಗೆ ಮೂಲ
ಎಟಿಎಂ (ATM) ಅಥವಾ ಅಟೋಮ್ಯಾಟಿಕ್ ಟೆಲ್ಲರ್ ಮೆಷಿನ್ ಅನ್ನು ಸ್ಕಾಟ್ಲೆಂಡ್ (Scotlad) ವಿಜ್ಞಾನಿ ಜಾನ್ ಅಡ್ರಿಯನ್ ಶೆಫರ್ಡ್ ಬರ್ರನ್  (John Adrian Shepherd Barron) 1969ರಲ್ಲಿ ಅನ್ವೇಷಿಸಿದ್ದರು. ಪ್ರಾರಂಭದಲ್ಲಿ ಈ ಮೆಷಿನ್ ಗೆ ಕೋಡಿಂಗ್  (Coding) ವ್ಯವಸ್ಥೆ ಅಳವಡಿಸುವ ಸಮಯದಲ್ಲಿ ಜಾನ್ 6 ಅಂಕೆಗಳನ್ನು ಬಳಸಲು ಬಯಸಿದ್ದರು. ಆದ್ರೆ ಇದಕ್ಕೂ ಮೊದಲು ಜಾನ್ ಇದನ್ನು ಪರೀಕ್ಷಿಸಿ ನೋಡಲು ಬಯಸಿದ್ದರು. ಅವರು ಈ ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡಿದ್ದು ಬೇರೆ ಯಾರನ್ನೂ ಅಲ್ಲ, ಸ್ವತಃ ತಮ್ಮ ಪತ್ನಿಯನ್ನೇ. ಹೌದು, ಜಾನ್ ತಮ್ಮ ಪತ್ನಿ ಕರೋಲಿನ್ (Caroline) ಕೈಗೆ ಎಟಿಎಂ ಕಾರ್ಡ್ ಕೊಟ್ಟು ಬಳಸುವಂತೆ ತಿಳಿಸಿದರು. ಆದ್ರೆ ಕರೋಲಿನ್ ಗೆ ಆರು ಸಂಖ್ಯೆಗಳ ಪಿನ್ ನಲ್ಲಿ ಎರಡು ಸಂಖ್ಯೆಗಳು ಪದೇಪದೆ ಮರೆತು ಹೋಗುತ್ತಿದ್ದವು. ಹೀಗಾಗಿ ಆಕೆ ಬರೀ 4 ಸಂಖ್ಯೆಗಳನ್ನಷ್ಟೇ ನೆನಪಿಟ್ಟುಕೊಳ್ಳುತ್ತಿದ್ದಳು. ಹೀಗೆ ಪತ್ನಿ ಪದೇಪದೆ ಎರಡು ಸಂಖ್ಯೆಗಳನ್ನು ಮರೆಯುವುದು ಮಾನವನ ಮಿದುಳು 4 ಸಂಖ್ಯೆಗಳನ್ನು ಮಾತ್ರ ನೆನಪಿಟ್ಟುಕೊಳ್ಳುತ್ತದೆ ಎಂಬುದರ ಸೂಚನೆಯಾಗಿದೆ ಎಂಬುದನ್ನು ಜಾನ್ ಗಮನಿಸಿದರು. ಇದೇ ಸಂಗತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಎಟಿಎಂ ಪಿನ್ ಅನ್ನು 4 ಸಂಖ್ಯೆಗಳಿಗೆ ಸೀಮಿತಗೊಳಿಸಲು ಜಾನ್ ನಿರ್ಧರಿಸಿದರು. 

Tap to resize

Latest Videos

Pension New Rule:ಒಬ್ಬ ವ್ಯಕ್ತಿ ಎರಡು ಕುಟುಂಬ ಪಿಂಚಣಿ ಪಡೆಯಬಹುದಾ? ಹೊಸ ನಿಯಮ ಏನ್ ಹೇಳುತ್ತೆ?

6 ಅಂಕೆ ಹೆಚ್ಚು ಸುರಕ್ಷಿತ
ಇನ್ನು ಸುರಕ್ಷತೆಯ ವಿಚಾರಕ್ಕೆ ಬಂದರೆ 4 ಅಂಕೆಗಳಿಗಿಂತ 6 ಅಂಕೆಗಳ ಪಿನ್ ಹೆಚ್ಚು ಸುರಕ್ಷಿತ. ಜಾನ್ ಪ್ರಾರಂಭದಲ್ಲಿ 6 ಅಂಕೆಗಳ ಕೋಡ್ ಇಡಲು ಕೂಡ ಇದೇ ಕಾರಣ. 4 ಅಂಕೆಗಳ ಎಟಿಎಂ ಪಿನ್ 0000 ಹಾಗೂ 9999ರ ನಡುವೆ ಇರುತ್ತದೆ.  0000 ಹಾಗೂ 9999ರ ನಡುವಿನ ಸಂಖ್ಯೆಗಳನ್ನು ಬಳಸಿ ಒಟ್ಟು  10,000 ಕಾಂಬೀನೇಷನ್ ಗಳನ್ನು ಮಾಡಬಹುದು. ಇದರಲ್ಲಿ ಕನಿಷ್ಠ ಶೇ.20ರಷ್ಟು ಕಾಂಬಿನೇಷನ್ ಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು. ಹಾಗಂತ 4 ಅಂಕೆಗಳ ಎಟಿಎಂ ಪಿನ್ ಸುರಕ್ಷಿತವಲ್ಲ ಎಂದಲ್ಲ. ಆದ್ರೆ, 6 ಅಂಕೆಗಳ ಪಿನ್ ಕೋಡ್ ಗಳಿಗೆ ಹೋಲಿಸಿದ್ರೆ ಕಡಿಮೆ ಸುರಕ್ಷಿತ. ಭಾರತದಲ್ಲಿ 4 ಅಂಕೆಗಳ ಎಟಿಎಂ ಪಿನ್ ವ್ಯವಸ್ಥೆ ಜಾರಿಯಿದೆ. ಆದ್ರೆ ಅನೇಕ ರಾಷ್ಟ್ರಗಳಲ್ಲಿ ಇಂದಿಗೂ 6 ಅಂಕೆಗಳ ಪಿನ್ ಬಳಕೆಯಲ್ಲಿದೆ. 

ಇನ್ಮುಂದೆ ವೈಯಕ್ತಿಕ ಸಾಲ ಪಡೆಯಲು SBI ಶಾಖೆಗೆ ಭೇಟಿ ನೀಡಬೇಕಾಗಿಲ್ಲ,YONO App ಇದ್ರೆ ಸಾಕು

ಜಾನ್ ಗೂ ಭಾರತಕ್ಕೂ ನಂಟು
ಇನ್ನೊಂದು ಆಸಕ್ತಿಕಾರ ಸಂಗತಿಯೆಂದ್ರೆ ಎಟಿಎಂ ಅನ್ವೇಷಕ ಜಾನ್ ಅಡ್ರಿಯನ್ ಗೆ ಭಾರತದೊಂದಿಗೆ ವಿಶೇಷ ನಂಟಿದೆ. ಜಾನ್ ಜನಿಸಿದ್ದು ಮೇಘಾಲಯದ ಶಿಲ್ಲಾಂಗ್ ನಲ್ಲಿ. ಇದೇ ಕಾರಣಕ್ಕೂ ಏನೋ ಭಾರತ ಜಾನ್ ರೂಪಿಸಿದ 4 ಅಂಕೆಗಳ ಪಿನ್ ವ್ಯವಸ್ಥೆಯನ್ನೇ ಬಳಸುತ್ತಿದೆ!
ಅದೇನೇ ಇರಲಿ, 4 ಅಂಕೆಗಳ ಪಿನ್ ಅನ್ನೇ ಅನೇಕರು ಎಷ್ಟೋ ಬಾರಿ ಮರೆತು ಎಟಿಎಂ ಕೇಂದ್ರದಿಂದ ಬರಿಗೈಲಿ ಬಂದಿದ್ದು ಇದೆ. ಹೀಗಿರುವಾಗ 6 ಅಂಕೆಗಳ ಪಿನ್ ಕೋಡ್ ನೀಡಿದ್ರೆ ಎಷ್ಟು ಜನರು ನೆನಪಿಟ್ಟುಕೊಳ್ಳಬಹುದು? 

click me!