*ಎರಡು ಭಿನ್ನ ಮೂಲಗಳಿಂದ ಪಿಂಚಣಿ ಪಡೆಯಲು ಪಿಂಚಣಿದಾರನ ಕುಟುಂಬ ಸದಸ್ಯ ಅರ್ಹ
*ಮೇ 23ರ ಕಚೇರಿ ಜ್ಞಾಪಕ ಪತ್ರದಲ್ಲಿ ಮಾಹಿತಿ ನೀಡಿರುವ ಪಿಂಚಣಿ ಹಾಗೂ ಪಿಂಚಣಿದಾರರ ಕಲ್ಯಾಣ ಇಲಾಖೆ
*ಕುಟುಂಬ ಪಿಂಚಣಿಗೆ ಸಂಬಂಧಿಸಿದ ನಿಯಮಗಳಿಗೆ ತಿದ್ದುಪಡಿ
ನವದೆಹಲಿ (ಮೇ 28): ಕುಟುಂಬ ಪಿಂಚಣಿ (Family pension) ಪಡೆಯೋರಿಗೆ ಸದಾ ಕಾಡುವ ಪ್ರಶ್ನೆಯೊಂದಕ್ಕೆ ಕೇಂದ್ರ ಸರ್ಕಾರ (Central Government) ಇತ್ತೀಚೆಗೆ ಬಿಡುಗಡೆ ಮಾಡಿರುವ ಜ್ಞಾಪಕ ಪತ್ರದಲ್ಲಿ (memorandum) ಉತ್ತರ ನೀಡಿದೆ. ಸರ್ಕಾರದ ಒಬ್ಬನೇ ಪಿಂಚಣಿದಾರನ (Pensioner) ಎರಡು ಭಿನ್ನ ಮೂಲಗಳಿಂದ ಆತನ ಕುಟುಂಬ ಸದಸ್ಯ ಎರಡು ಕುಟುಂಬ ಪಿಂಚಣಿಗಳನ್ನು ಪಡೆಯಲು ಆರ್ಹನೇ? ಎಂಬ ವಿಚಾರಕ್ಕೆ ಸಂಬಂಧಿಸಿ ಆಗಾಗ ಗೊಂದಲ ಏರ್ಪಡುತ್ತಲೇ ಇರುತ್ತದೆ. ಹಾಗಾದ್ರೆ ಇದಕ್ಕೆ ಸಂಬಂಧಿಸಿ ಸರ್ಕಾರ ನೀಡಿರುವ ಸ್ಪಷ್ಟನೆ ಏನು? ಇಲ್ಲಿದೆ ಮಾಹಿತಿ.
ವೈಯಕ್ತಿಕ ಪಿಂಚಣಿ ಹಾಗೂ ಸಾರ್ವಜನಿಕ ಕೊಂದುಕೊರತೆ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುವ ಪಿಂಚಣಿ ಹಾಗೂ ಪಿಂಚಣಿದಾರರ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಒಬ್ಬನೇ ಪಿಂಚಣಿದಾರನ (Pensioner) ಎರಡು ಭಿನ್ನ ಮೂಲಗಳಿಂದ ಎರಡು ಕುಟುಂಬ ಪಿಂಚಣಿಗಳನ್ನು ಪಡೆಯಲು ಆತನ ಕುಟುಂಬ ಸದಸ್ಯ ಆರ್ಹನಾಗಿದ್ದಾನೆ. ಮೇ 23ರ ಕಚೇರಿ ಜ್ಞಾಪಕ ಪತ್ರದಲ್ಲಿ ಪಿಂಚಣಿ ಹಾಗೂ ಪಿಂಚಣಿದಾರರ ಕಲ್ಯಾಣ ಇಲಾಖೆ ಈ ಮಾಹಿತಿ ನೀಡಿದೆ. ಸೇನೆಯಲ್ಲಿ ಸೇವೆ ಹಾಗೂ ನಾಗರಿಕ ಸೇವೆ ಅಥವಾ ಸ್ವಯತ್ತ ಸಂಸ್ಥೆಯಲ್ಲಿ ಹಾಗೂ ಸರ್ಕಾರಿ ಇಲಾಖೆಯಲ್ಲಿ ಸಲ್ಲಿಸಿದ ಸೇವೆಗಳಿಗೆ ಇದು ಅನ್ವಯಿಸುತ್ತದೆ.
Dearness Relief Hike: ಕೇಂದ್ರ ಸರ್ಕಾರಿ ಪಿಂಚಣಿದಾರರ ಡಿಆರ್ ಹೆಚ್ಚಳ; ಯಾರಿಗೆಲ್ಲ ಸಿಗಲಿದೆ ಇದರ ಪ್ರಯೋಜನ?
ಕುಟುಂಬ ಪಿಂಚಣಿಗೆ ಸಂಬಂಧಿಸಿದ ನಿಯಮಗಳು ಹಾಗೂ ಕಾನೂನುಗಳು ಈ ಹಿಂದೆ ಬೇರೆಯಾಗಿದ್ದವು. ಆದ್ರೆ ನಂತರದ ದಿನಗಳಲ್ಲಿ ಹಾಗೂ ಈಗ ಬದಲಾಗಿವೆ. ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು 2021 ಅಡಿಯಲ್ಲಿ ಸರ್ಕಾರದ ಒಬ್ಬನೇ ಪಿಂಚಣಿದಾರನಿಗೆ ಸಂಬಂಧಿಸಿ ಎರಡು ವಿಭಿನ್ನ ಮೂಲಗಳಿಂದ ಒಬ್ಬ ಕುಟುಂಬ ಸದಸ್ಯನಿಗೆ ಕುಟುಂಬ ಪಿಂಚಣಿ ನೀಡಲು ಯಾವುದೇ ನಿರ್ಬಂಧವಿಲ್ಲ.
ಸರ್ಕಾರದ ಜ್ಞಾಪಕ ಪತ್ರದಲ್ಲಿ ಏನಿದೆ?
-ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು 1972 ಡಿಸೆಂಬರ್ 27, 2012ರಂದು ತಿದ್ದುಪಡಿಗೊಳಪಡುವ ಮುನ್ನ ನಿಯಮ 54ರ ಉಪ ನಿಯಮ 13-A ಸೇನೆ ಪಿಂಚಣಿ ಪಡೆಯುತ್ತಿರುವ ಉದ್ಯೋಗಿ ನಾಗರಿಕ ಸೇವೆಗೆ ಸೇರ್ಪಡೆಗೊಂಡಿದ್ದು, ಆತ ಸೇನಾ ಸೇವೆಗೆ ಕುಟುಂಬ ಪಿಂಚಣಿ ಪಡೆಯುತ್ತಿದ್ದರೆ, ಆಗ ಆತನಿಗೆ ನಾಗರಿಕ ಸೇವೆ ಅಡಿಯಲ್ಲಿ ಕುಟುಂಬ ಪಿಂಚಣಿ ನೀಡುವುದನ್ನು ನಿರ್ಬಂಧಿಸಿತ್ತು.
-ನಿಯಮ 54ರ ಉಪ ನಿಯಮ 13-B ಕೂಡ ಈಗಾಗಲೇ ಕುಟುಂಬ ಪಿಂಚಣಿ ಪಡೆಯುತ್ತಿರುವ ವ್ಯಕ್ತಿ ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಸಾರ್ವಜನಿಕ ವಲಯದ ಸಂಸ್ಥೆ ಅಥವಾ ಸ್ವಾಯತ್ತ ಸಂಸ್ಥೆ ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ಥಳೀಯ ಸಂಸ್ಥೆ ನಿಯಮಗಳಡಿಯಲ್ಲಿ ಪಿಂಚಣಿಗೆ ಆರ್ಹತೆ ಪಡೆದ ವ್ಯಕ್ತಿಗೆ ಎರಡು ಕುಟುಂಬ ಪಿಂಚಣಿಗಳನ್ನು ನೀಡುವುದನ್ನು ನಿರ್ಬಂಧಿಸಿತ್ತು.
ಜುಲೈನಲ್ಲಿ ಹೆಚ್ಚಾಗಲಿದೆ ಡಿಎ? ಕೇಂದ್ರ ಸರ್ಕಾರಿ ನೌಕರರ ಸಂಬಳ ಮತ್ತೆ ಏರಿಕೆ..!
-ಒಬ್ಬನೇ ಸರ್ಕಾರಿ ನೌಕರ ಅಥವಾ ಪಿಂಚಣಿದಾರ ಎರಡು ಭಿನ್ನ ಮೂಲಗಳಿಂದ ಕುಟುಂಬ ಪಿಂಚಣಿ ಪಡೆಯಲು ವಿಧಿಸಿರುವ ನಿರ್ಬಂಧವನ್ನು ತಿದ್ದುಪಡಿ ಮೂಲಕ ತೆಗೆಯಲಾಗಿದೆ. ಈ ಬಗ್ಗೆ 2013ರ ಜನವರಿಯ ಕಚೇರಿ ಜ್ಞಾಪಕ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
-ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು 1972 ರ ಬದಲಿಗೆ ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 2021 ಡಿಸೆಂಬರ್ 20, 2021ರಿಂದ ಜಾರಿಗೆ ಬಂದಿದೆ. ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 2021ರ ನಿಯಮ 50 ಕೂಡ ಕುಟುಂಬ ಪಿಂಚಣಿಗೆ ಸಂಬಂಧಿಸಿದ್ದಾಗಿದೆ.
-ಆದರೆ, ಇಬ್ಬರು ಸರ್ಕಾರಿ ಉದ್ಯೋಗಿಗಳು ಅಥವಾ ಪಿಂಚಣಿದಾರರ ನಿಧನದಿಂದ ಕುಟುಂಬದ ಒಬ್ಬ ಸದಸ್ಯ ಎರಡು ಕುಟುಂಬ ಪಿಂಚಣಿ ಪಡೆಯೋದಕ್ಕೆ ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 2021ರ ಉಪನಿಯಮ 12(a) ಹಾಗೂ 13ರ ಅಡಿಯಲ್ಲಿರುವ ನಿರ್ಬಂಧ ಮಾತ್ರ ಇನ್ನೂ ಇದೆ.