ಐಟಿ ಅಧಿಕಾರಿಗಳ ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದ ಸಿ.ಜೆ ರಾಯ್ ಆತ್ಮ*ಹತ್ಯೆ ಮಾಡಿಕೊಂಡದ್ದೇಕೆ? ಕೊನೆ ಕ್ಷಣದಲ್ಲಿ ಆಗಿದ್ದೇನು?

Published : Jan 31, 2026, 11:56 AM IST
CJ Roy

ಸಾರಾಂಶ

ಬೆಂಗಳೂರಿನ ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ. ರಾಯ್, ಐಟಿ ದಾಳಿ ನಡೆಯುತ್ತಿದ್ದ ವೇಳೆ ತಮ್ಮ ಕಚೇರಿಯಲ್ಲೇ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದರೂ, ಅವರು ಈ ಅಂತಿಮ ನಿರ್ಧಾರ ತೆಗೆದುಕೊಂಡಿದ್ದು ಉದ್ಯಮ ವಲಯದಲ್ಲಿ ಆಘಾತ ಮೂಡಿಸಿದೆ.

ಬೆಂಗಳೂರಲ್ಲಿ ಕಾನ್ಪಿಡೆಂಟ್​ ಗ್ರೂಪ್​ನ ಸಿಜೆ ರಾಯ್​ ಆತ್ಮ*ಹತ್ಯೆ ಮಾಡಿಕೊಂಡಿರುವುದು ಉದ್ಯಮ ವಲಯದಲ್ಲಿ ತಲ್ಲಣ ಮೂಡಿಸಿದೆ. ಐಟಿ ದಾಳಿಗೆ ಬೇಸತ್ತು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕಾನ್ಫಿಡೆಂಟ್ ಗ್ರೂಪ್‌ನ ಮಾಲೀಕ ಪ್ರಧಾನ ಕಚೇರಿಯಲ್ಲಿ ಪಿಸ್ತೂಲ್‌ನಿಂದ ತಮ್ಮ ಎದೆಗೆ ಗುಂಡು ಹಾರಿಸಿಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ.

10 ದಿನಗಳ ಹಿಂದೆಯೇ ಐಟಿ ದಾಳಿ-ಪರಿಶೀಲನೆ

10 ದಿನಗಳ ಹಿಂದೆಯೇ ಸಿಜೆ ರಾಯ್ ಮನೆ ಮೇಲೆ ಕೇರಳ ಮೂಲದ ಐಟಿ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದರು. ಶುಕ್ರವಾರ ಐಟಿ ಅಧಿಕಾರಿಗಳು ಅಂತಿಮ ಹಂತದ ಕಾರ್ಯಾಚರಣೆ ನಡೆಸುತ್ತಿದ್ದರು. ಇಲ್ಲಿನ ರಿಚ್ಮಂಡ್ ಟೌನ್‌ನಲ್ಲಿರುವ ಕಾನ್ಫಿಡೆಂಟ್ ಗ್ರೂಪ್‌ನ ಪ್ರಧಾನ ಕಚೇರಿನ ದಾಖಲೆಗಳು, ಕಂಪ್ಯೂಟರ್‌ಗಳನ್ನು ಒಂದು ಕೋಣೆಯಲ್ಲಿಟ್ಟು, ಐಟಿ ಅಧಿಕಾರಿಗಳು ಒಂದು ಕೋಣೆಯಲ್ಲಿಟ್ಟು ಸೀಜ್ ಮಾಡಿದ್ದರು. ಇವುಗಳನ್ನು ಯಾರೂ ಮುಟ್ಟದಂತೆ ಐಟಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.

ಪ್ರಾಹಿಬಿಟರಿ ಆರ್ಡರ್‌ ನೀಡಿದ್ದ ಅಧಿಕಾರಿಗಳು

ಸಿಜೆ ರಾಯ್‌ಗೆ ಈ ದಾಖಲೆಗಳನ್ನು ಮುಟ್ಟದಂತೆ ಐಟಿ ಅಧಿಕಾರಿಗಳು ಪ್ರಾಹಿಬಿಟರಿ ಆರ್ಡರ್‌ ನೀಡಿದ್ದರು. ಇನ್ನು ಐಟಿ ಅಧಿಕಾರಿಗಳ ತನಿಖೆಗೆ ಕಾನ್ಫಿಡೆಂಟ್ ಗ್ರೂಪ್‌ನ ಮಾಲೀಕ ಸಿ.ಜೆ. ರಾಯ್ ಸಂಪೂರ್ಣ ಸಹಕಾರ ನೀಡಿದ್ದರು. ಇನ್ನು ಸಂಪೂರ್ಣ ವಿಚಾರಣೆ ಮುಗಿದ ಬಳಿಕ ಐಟಿ ಅಧಿಕಾರಿಗಳ ಅನುಮತಿ ಪಡೆದ ಸಿಜೆ ರಾಯ್, ಮೇಲ್ಮಹಡಿಯ ರೂಮ್‌ಗೆ ತೆರಳಿದ್ದರು.

ಇನ್ನು ಮೇಲ್ಮಹಡಿಯ ರೂಮ್‌ಗೆ ತೆರಳುತ್ತಿದ್ದಂತೆಯೇ ಏಕಾಏಕಿ ಬುಲೆಟ್ ಫೈರಿಂಗ್ ಶಬ್ಧ ಕೇಳಿ ಬಂದಿದೆ. ಬುಲೆಟ್ ಫೈರಿಂಗ್ ಶಬ್ದ ಕೇಳುತ್ತಿದ್ದಂತೆಯೇ ಕಾನ್ಫಿಡೆಂಟ್ ಗ್ರೂಪ್‌ನ ಸಿಬ್ಬಂದಿ ಮೇಲ್ಮಹಡಿಗೆ ಓಡಿದ್ದಾರೆ. ಅಲ್ಲಿ ರಾಯ್ ತಮ್ಮ ಎದೆಗೆ ಶೂಟ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಸಿಬ್ಬಂದಿಗಳು ರಾಯ್ ಅವರನ್ನು ಆಸ್ಪತ್ರೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಉದ್ಯಮಿ ರಾಯ್ ಕೊನೆಯುಸಿರೆಳೆದಿದ್ದಾರೆ. ಅಷ್ಟಕ್ಕೂ ಐಟಿ ಅಧಿಕಾರಿಗಳ ಎಲ್ಲಾ ತನಿಖೆಗೆ ಸಹಕಾರ ನೀಡಿದ್ದ ಸಿ.ಜೆ ರಾಯ್ ಕೊನೆಯ ಕ್ಷಣದಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದೇಕೆ ಎನ್ನುವುದನ್ನು ನೋಡೋಣ ಬನ್ನಿ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಹಳೆ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿದ 'ವೈಟ್ ಮೆಟಲ್'! ಬೆಳ್ಳಿ ಬೆಲೆಯಲ್ಲಿ ಏರಿಳಿತ.. ಖರೀದಿಗೆ ಸರಿಯಾದ ಸಮಯನಾ?
CJ Roy Tragedy: ಸಾವಿಗೆ ಶರಣಾದ ಸಿಜೆ ರಾಯ್ ಇನ್‌ಸ್ಟಾಗ್ರಾಂ ಪೋಸ್ಟ್ ಈಗ ಭಾರೀ ವೈರಲ್; ಏನಿದೆ ಅಂತದ್ದು ಅದ್ರಲ್ಲಿ..?