
ನವದೆಹಲಿ: ನೆರೆಯ ದೇಶ ನೇಪಾಳದಲ್ಲಿ ಅರಾಜಕತೆ ಉಂಟಾಗಿದೆ. ಬೂದಿ ಮುಚ್ಚಿದ ಕೆಂಡದಂತಿರೋ ನೇಪಾಳ ಹಲವು ವಿಷಯಗಳಲ್ಲಿ ಭಾರತದ ಮೇಲೆ ಅವಲಂಬಿತವಾಗಿದೆ. ಸದ್ಯ ಭಾರತ ಮತ್ತು ನೇಪಾಳ ಗಡಿ ಮಾರ್ಗ ಮುಚ್ಚಲಾಗಿದ್ದು, ಎರಡೂ ದೇಶಗಳ ನಡುವಿನ ಸಂಚಾರ ಮತ್ತು ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಭಾರತದ ಮೇಲೆ ಅವಲಂಬನೆಯಾಗಿರುವ ನೇಪಾಳದ ಆರ್ಥಿಕತೆ ಬಹುತೇಕ ಪ್ರಮುಖ ವಸ್ತುಗಳನ್ನು ಇಂಡಿಯಾದಿಂದ ಆಮದು ಮಾಡಿಕೊಳ್ಳುತ್ತದೆ. ಇನ್ನು ನೇಪಾಳ ಭಾಗಶಃ ಪ್ರವಾಸೋದ್ಯಮದ ಮೇಲೆ ಅವಲಂಬನೆಯಾಗಿದ್ದು, ಆದಾಯದ ಪ್ರಮುಖ ಮೂಲವಾಗಿದೆ.
ಪೆಟ್ರೋಲಿಯಂ ಉತ್ಪನ್ನಗಳು, ವಿದ್ಯುತ್, ಔಷಧಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಭಾರತದಿಂದ ನೇಪಾಳ ಆಮದು ಮಾಡಿಕೊಳ್ಳುತ್ತದೆ. ಭಾರತದಿಂದಲೇ ತೈಲ ಖರೀದಿಸಿದ್ರೂ ನೇಪಾಳ ಮಾತ್ರ ತನ್ನ ಜನತೆಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತದೆ. ಭಾರತಕ್ಕಿಂತ ನೇಪಾಳದಲ್ಲಿ ಇಂಧನ ಮಾರಾಟವಾಗುತ್ತದೆ. ಯಾಕಿಷ್ಟು ದರ ಕಡಿಮೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ವರದಿಗಳ ಪ್ರಕಾರ, ನೇಪಾಳದ ಒಟ್ಟು ವ್ಯವಹಾರ ಪೈಕಿ ಶೇ.60ರಷ್ಟು ಹೆಚ್ಚು ಭಾರತದೊಂದಿಗೆ ನಡೆಯುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ತೈಲ, ಔಷಧಿಗಳು, ಯಂತ್ರೋಪಕರಣಗಳು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಭಾರತದಿಂದಲೇ ನೇಪಾಳ ಖರೀದಿ ಮಾಡುತ್ತದೆ. 2024 ರ ಅಂಕಿಅಂಶಗಳ ಪ್ರಕಾರ, ಭಾರತದಿಂದ ನೇಪಾಳ $2.19 ಬಿಲಿಯನ್ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಹಾಗಾಗಿ ತೈಲಕ್ಕಾಗಿ ಭಾರತದ ಮೇಲೆಯೇ ನೇಪಾಳ ಭಾಗಶಃ ಅವಲಂಬಿತವಾಗಿದೆ. ನೇಪಾಳಕ್ಕೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಅತ್ಯಧಿಕವಾಗಿ ಇಂಧನ ಪೂರೈಕೆ ಮಾಡುವ ಕೆಲಸವನ್ನು ಮಾಡುತ್ತದೆ.
ಭಾರತದಿಂದಲೇ ತೈಲ ಖರೀದಿಸಿದರೂ ನೇಪಾಳದಲ್ಲಿ ಗ್ರಾಹಕರಿಗೆ ಇಂಧನ ಅಗ್ಗವಾಗಿ ಸಿಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಭಾರತಕ್ಕಿಂತ ನೇಪಾಳದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ನೇಪಾಳದ ಕಡಿಮೆ ತೆರಿಗೆ ಮತ್ತು ಅಗ್ಗದ ಪೂರೈಕೆ ಸರಪಳಿಯಿಂದಾಗಿ ಇಲ್ಲಿನ ಜನತೆಗೆ ಭಾರತಕ್ಕಿಂತ ಕಡಿಮೆ ಬೆಲೆಯಲ್ಲಿ ಇಂಧನವನ್ನು ಪಡೆದುಕೊಳ್ಳುತ್ತಾರೆ. ಭಾರತದಲ್ಲಿ ಭಾರೀ ತೆರಿಗೆಯಿಂದಾಗಿ ದರ ಅಧಿಕವಾಗಿದೆ. ನೇಪಾಳದಲ್ಲಿ ತೈಲ ಭಾರತಕ್ಕಿಂತ 20-25 ರೂಪಾಯಿ ಅಗ್ಗವಾಗಿ ಲಭ್ಯವಿದೆ. ಇದರ ಲಾಭವನ್ನು ನೇಪಾಳದ ಗಡಿಯಲ್ಲಿ ವಾಸಿಸುವ ಭಾರತೀಯರು ಪಡೆದುಕೊಳ್ಳುತ್ತಾರೆ.
ಇದನ್ನೂ ಓದಿ: 2 ವರ್ಷ ಮೊದಲೇ ನೇಪಾಳ ಪರಿಸ್ಥಿತಿ ಸ್ಫೋಟಕ ಭವಿಷ್ಯ ನುಡಿದಿದ್ದ ಭಾರತೀಯ ಜ್ಯೋತಿಷಿ
ಭಾರತದ ಉತ್ತರ ಪ್ರದೇಶ ಮತ್ತು ಬಿಹಾರದ ಗಡಿ ಪ್ರದೇಶಗಳ ಜನರು ಕಡಿಮೆ ಬೆಲೆಯಲ್ಲಿ ಇಂಧನ ಖರೀದಿಸಲು ನೇಪಾಳ ಹೋಗುವ ವರದಿಗಳು ಆಗಾಗ್ಗೆ ಪ್ರಕಟವಾಗುತ್ತಿರುತ್ತವೆ. ಕೆಲವೊಮ್ಮೆ ಗಡಿಯಲ್ಲಿ ಇಂಧನ ಕಳ್ಳಸಾಗಣೆ ನಡೆಯುತ್ತಿರುತ್ತದೆ. ನೇಪಾಳದ ಪೆಟ್ರೋಲ್ ಪಂಪ್‌ಗಳಲ್ಲಿ ಭಾರತದ ವಾಹನಗಳ ಸಂಖ್ಯೆ ಅಧಿಕವಾಗಿರುತ್ತದೆ. ಸಶಸ್ತ್ರ ಸೀಮಾ ಬಲ್ ಮತ್ತು ಪೊಲೀಸರು ಗಡಿಯಲ್ಲಿ ಕಳ್ಳಸಾಗಣೆ ನಿಲ್ಲಿಸಲು ಕ್ರಮಗಳನ್ನು ತೆಗೆದುಕೊಂಡಿದ್ದರೂ, ಮುಕ್ತ ಗಡಿಗಳಿಂದಾಗಿ ಈ ಸವಾಲು ಹಾಗೆಯೇ ಉಳಿದಿದೆ.
ನೇಪಾಳದಲ್ಲಿ ಭ್ರಷ್ಟಾಚಾರ ಮತ್ತು 26 ಸಾಮಾಜಿಕ ಜಾಲತಾಣ ವೇದಿಕೆಗಳ ನಿಷೇಧ ವಿರೋಧಿಸಿ ‘ಜೆನ್-ಝೀ’ ನಡೆಯುತ್ತಿದ್ದ ಯುವಕರ ಹಾಗೂ ಜನತೆಯ ಹಿಂಸಾತ್ಮಕ ಪ್ರತಿಭಟನೆ ಮಂಗಳವಾರ ಮತ್ತೊಂದು ದಿಕ್ಕಿಗೆ ಹೊರಳಿದೆ. ಪ್ರಧಾನಿ ಹಾಗೂ ಜನಪ್ರತಿನಿಧಿಗಳ ಮೇಲೆ ಸ್ವಜನಪಕ್ಷಪಾತ, ಭ್ರಷ್ಟಾಚಾರ ಹಾಗೂ ದುರಾಡಳಿತದ ಆರೋಪ ಹೊರಿಸಿದ ಜನತೆ ಸಂಸತ್ ಭವನ, ಅಧ್ಯಕ್ಷರ ಕಚೇರಿ, ಹಾಗೂ ಪ್ರಧಾನಿ ಖಾಸಗಿ ನಿವಾಸ, ಸಚಿವರ ಮನೆಗಳು, ಅಧ್ಯಕ್ಷೀಯ ಕಚೇರಿ- ಇತ್ಯಾದಿ ಮೇಲೆ ದಾಳಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಭಾಷಣ ಮಾಡುತ್ತಿದ್ದಾಗಲೇ ಟ್ರಂಪ್ ಅತ್ಯಾಪ್ತ ಚಾರ್ಲಿ ಕಿರ್ಕ್‌ಗೆ ಗುಂಡಿಕ್ಕಿ ಹ*ತ್ಯೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.