ಸೆಪ್ಟೆಂಬರ್ ನಲ್ಲಿ ಶೇ.10.7ಕ್ಕೆ ಇಳಿಕೆಯಾದ ಸಗಟು ಹಣದುಬ್ಬರ, ಕಾರಣವೇನು?

Published : Oct 14, 2022, 06:10 PM ISTUpdated : Oct 14, 2022, 06:29 PM IST
ಸೆಪ್ಟೆಂಬರ್ ನಲ್ಲಿ ಶೇ.10.7ಕ್ಕೆ ಇಳಿಕೆಯಾದ ಸಗಟು ಹಣದುಬ್ಬರ, ಕಾರಣವೇನು?

ಸಾರಾಂಶ

*ಸೆಪ್ಟೆಂಬರ್ ನಲ್ಲಿ ಶೇ.7.41ಕ್ಕೆ ಹೆಚ್ಚಳವಾದ ಚಿಲ್ಲರೆ ಹಣದುಬ್ಬರ *ಡಬ್ಲ್ಯುಪಿಐ ಹಣದುಬ್ಬರ ಎರಡಂಕಿಯಲ್ಲಿರೋದು ಇದು ಸತತ 18ನೇ ತಿಂಗಳು *ಆಗಸ್ಟ್ ನಲ್ಲಿ ಶೇ.12.41ರಷ್ಟಿದ್ದ ಚಿಲ್ಲರೆ ಹಣದುಬ್ಬರ

ನವದೆಹಲಿ (ಅ.14): ದೇಶದಲ್ಲಿ ಒಂದೆಡೆ ಚಿಲ್ಲರೆ ಹಣದುಬ್ಬರ ಏರಿಕೆಯಾಗುತ್ತಿದ್ರೆ, ಸಗಟು ಹಣದುಬ್ಬರ ಇಳಿಕೆ ಹಾದಿಯಲ್ಲಿದೆ. ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರ ಸೆಪ್ಟೆಂಬರ್ ನಲ್ಲಿ ಶೇ.10.7ಕ್ಕೆ ಇಳಿಕೆಯಾಗಿದೆ. ಆಗಸ್ಟ್ ನಲ್ಲಿ ಇದು ಶೇ.12.41ರಷ್ಟಿತ್ತು. ಡಬ್ಲ್ಯುಪಿಐ ಹಣದುಬ್ಬರ ಎರಡಂಕಿಯಲ್ಲಿರೋದು ಇದು ಸತತ 18ನೇ ತಿಂಗಳು. ಹೈ ಸ್ಪೀಡ್ ಡೀಸೆಲ್ ಹಣದುಬ್ಬರ ಶೇ. 65.96ರಷ್ಟಿದೆ. ಇನ್ನು ಆಲೂಗಡ್ಡೆ ಶೇ.49.79 ಹಾಗೂ ಕಚ್ಚಾ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲದ ಹಣದುಬ್ಬರ ಶೇ.44.72ರಷ್ಟಿದೆ. ಸೆಪ್ಟೆಂಬರ್ ನಲ್ಲಿ ಆಹಾರ ಹಣದುಬ್ಬರ ಆಗಸ್ಟ್ ನಲ್ಲಿ ಶೇ12.37ರಷ್ಟಿದ್ದು, ಸೆಪ್ಟೆಂಬರ್ ನಲ್ಲಿ ಶೇ.11.03ಕ್ಕೆ ಇಳಿಕೆಯಾಗಿದೆ. ಇನ್ನೊಂದೆಡೆ ತರಕಾರಿಗಳ ಹಣದುಬ್ಬರ ಶೇ.39.66ಕ್ಕೆ ಏರಿಕೆಯಾಗಿದ್ದು, ಆಗಸ್ಟ್ ನಲ್ಲಿ ಶೇ.22.29ರಷ್ಟಿತ್ತು. ಇಂಧನ ಹಾಗೂ ವಿದ್ಯುತ್ ಹಣದುಬ್ಬರ ಸೆಪ್ಟೆಂಬರ್ ನಲ್ಲಿ ಶೇ.22.29ಕ್ಕೆ ಇಳಿಕೆಯಾಗಿತ್ತು. ಆಗಸ್ಟ್ ನಲ್ಲಿ ಇದು ಶೇ.33.67ರಷ್ಟಿತ್ತು. ಖನಿಜ ತೈಲಗಳು, ಆಹಾರ ಪದಾರ್ಥಗಳು, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ, ಕೆಮಿಕಲ್ಸ್ ಹಾಗೂ ಕೆಮಿಕಲ್ಸ್ ಉತ್ಪನ್ನಗಳು, ಮೂಲ ಧಾತುಗಳು, ವಿದ್ಯುತ್ ಹಾಗೂ ಜವಳಿ ವಲಯದಲ್ಲಿನ ಬೆಲೆಗಳ ಏರಿಕೆಯಿಂದ ಸೆಪ್ಟೆಂಬರ್ ನಲ್ಲಿ ಹಣದುಬ್ಬರ ಹೆಚ್ಚಳವಾಗಿದೆ ಎಂದು ಸರ್ಕಾರ ತಿಳಿಸಿದೆ.

ಆಗಸ್ಟ್ ಗೆ ಹೋಲಿಸಿದರೆ ಸೆಪ್ಟೆಂಬರ್ ನಲ್ಲಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಶೇ.0.28 ಹೆಚ್ಚಳವಾಗಿದೆ. ಇನ್ನು ಆಗಸ್ಟ್ ಗೆ ಹೋಲಿಸಿದರೆ ಆಹಾರೇತರ ಉತ್ಪನ್ನಗಳು, ಕಚ್ಚಾ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಹಾಗೂ ಖನಿಜಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಇನ್ನು ಸೆಪ್ಟೆಂಬರ್ ನಲ್ಲಿ ಭಾರತದ ಚಿಲ್ಲರೆ ಹಣದುಬ್ಬರ (Retail Inflation) ಶೇ.7.41ಕ್ಕೆ ಹೆಚ್ಚಳವಾಗಿದೆ. ಆಗಸ್ಟ್  ತಿಂಗಳಲ್ಲಿ ಇದು ಶೇ.7ರಷ್ಟಿತ್ತು.ಆಹಾರ ಪದಾರ್ಥಗಳ ಬೆಲೆಯೇರಿಕೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಐದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಇನ್ನು ಕೈಗಾರಿಕ ಉತ್ಪಾದನೆ ಸೂಚ್ಯಂಕ (ಐಐಪಿ) ಆಗಸ್ಟ್ ನಲ್ಲಿ ಶೇ. 0.8 ಕ್ಕೆ ಇಳಿಕೆಯಾಗಿದೆ. ಜುಲೈನಲ್ಲಿ ಇದು ಶೇ. 2.4ರಷ್ಟು ಪ್ರಗತಿ ದಾಖಲಿಸಿತ್ತು. ಸೆಪ್ಟೆಂಬರ್ ನಲ್ಲಿ ಗ್ರಾಮೀಣ ಪ್ರದೇಶದಲ್ಲಿ (Rural areas) ಹಣದುಬ್ಬರ ಶೇ.7.56ಕ್ಕೆ ಏರಿಕೆಯಾಗಿದೆ. ಇನ್ನು ನಗರ ಪ್ರದೇಶದಲ್ಲಿ (urban areas) ಶೇ.7.27ಕ್ಕೆ ಹೆಚ್ಚಳವಾಗಿದೆ.

1.29 ಲಕ್ಷ ಕೋಟಿ ಮೊತ್ತದ ಕೆಟ್ಟ ಸಾಲ ರೈಟ್‌ ಆಫ್‌ ಮಾಡಿದ ಕೆನರಾ ಬ್ಯಾಂಕ್‌!

ಆರ್ ಬಿಐ (RBI) ಚಿಲ್ಲರೆ ಹಣದುಬ್ಬರ (Retail inflation) ಸಹನ ಮಿತಿಯನ್ನು ಗರಿಷ್ಠ ಶೇ.6ಕ್ಕೆ ನಿಗದಿಪಡಿಸಿದೆ. ಆದ್ರೆ ಸತತ 9 ತಿಂಗಳಿಂದ ಚಿಲ್ಲರೆ ಹಣದುಬ್ಬರ ಈ ಮಿತಿಯನ್ನು ಮೀರಿದೆ. ಹೀಗಾಗಿ ಸೆಪ್ಟೆಂಬರ್ ನಲ್ಲಿ ಕೂಡ ಆರ್ ಬಿಐ (RBI)ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದೆ.  ಈ ಹಿನ್ನೆಲೆ ಸದ್ಯದ ರೆಪೋ ದರವು ಶೇಕಡಾ 5.40 ಕ್ಕೆ ಏರಿಕೆಯಾಗಿದೆ. 2019 ರಲ್ಲಿ ಅಂದರೆ ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ ಇದ್ದ ರೆಪೋ ದರದ  (Repo rate)ಮಟ್ಟಕ್ಕೆ ಹೆಚ್ಚಳವಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್ ಬಿಐ (RBI) ಈ ವರ್ಷದ ಪ್ರಾರಂಭದಿಂದ ಈ ತನಕ ಮೂರು ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದೆ. ಆದರೂ ಹಣದುಬ್ಬರ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಆರ್ ಬಿಐ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ. 

IMF on Indian Economy: ಭಾರತದ ಆರ್ಥಿಕ ಪರಿಸ್ಥಿತಿ ಬಗ್ಗೆ ಐಎಂಎಫ್‌ ಮೆಚ್ಚುಗೆ

ಕೆಲವು ಮಾಧ್ಯಮ ವರದಿಗಳ ಪ್ರಕಾರ ಆಹಾರ ಸಚಿವಾಲಯದ ಉನ್ನತ ಮಟ್ಟದ ಸಮಿತಿ ಮುಂದಿನ ವಾರ ಸಭೆ ಸೇರಲಿದ್ದು, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ. ಈ ಸಭೆಯಲ್ಲಿ ರಫ್ತುಗಳ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆಯಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ