ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಯಾಗ್ತಿರುತ್ತವೆ. ಆದ್ರೆ ಜನರಿಗೆ ಸರಿಯಾದ ಮಾಹಿತಿ ಇರೋದಿಲ್ಲ. ಇದ್ರಿಂದಾಗಿ ಯೋಜನೆ ಲಾಭ ಫಲಾನುಭವಿಗಳಿಗೆ ಸಿಗೋದಿಲ್ಲ. ಸ್ವಂತ ಉದ್ಯೋಗ ಮಾಡ್ಬೇಕು, ಹಣವಿಲ್ಲ ಎನ್ನುವವರು ಸರ್ಕಾರದ ಈ ಯೋಜನೆ ಬಗ್ಗೆ ತಿಳಿದ್ಕೊಳ್ಳಿ.
ಜನ ಸಾಮಾನ್ಯರ ಅನುಕೂಲಕ್ಕಾಗಿ ಭಾರತ ಸರ್ಕಾರ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ. ಬಡ ಜನರಿಗೆ ನೆರವಾಗಲು ಸರ್ಕಾರ ಕೆಲ ವಿಶೇಷ ಯೋಜನೆಗಳನ್ನು ಶುರು ಮಾಡಿದೆ. ಸರ್ಕಾರ ತನ್ನ ಯೋಜನೆಗಳ ಮೂಲಕ ಗ್ರಾಮೀಣ ಬಡವರಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಭಾರತ ಸರ್ಕಾರ ಶುರು ಮಾಡಿದ ಯೋಜನೆಗಳಲ್ಲಿ ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆ ಕೂಡ ಒಂದು. ಸ್ವರೋಜ್ಗಾರ್ ಯೋಜನೆ ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಕುಟುಂಬಗಳಿಗೆ ಆರ್ಥಿಕ ಸಹಾಯ ಒದಗಿಸುತ್ತದೆ. ಇದ್ರ ಜೊತೆಗೆ ಸ್ವಯಂ ಉದ್ಯೋಗ ಮಾಡಲು ಉತ್ತೇಜನ ನೀಡುತ್ತದೆ. ನಾವಿಂದು ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಸ್ವರ್ಣ ಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆ (Swarna Jayanti Gram Swarozgar Yojana) ಎಂದರೇನು? : ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ಏತನ್ಮಧ್ಯೆ ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗ (Employment) ಮತ್ತು ದೇಶೀಯ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರದಿಂದ ಪ್ರಯತ್ನ ನಡೆಯುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಕಾರ್ಮಿಕ (Labor) ರ ಜೀವನ ನಿರ್ವಹಣೆಗೆ ಕೆಲಸ ಸಿಕ್ಕಂತಾಗುತ್ತದೆ. ಸ್ವಯಂ ಉದ್ಯೋಗಅಭಿವೃದ್ಧಿಪಡಿಸಲು ಭಾರತ ಸರ್ಕಾರದಿಂದ ಸಾಲವನ್ನು ನೀಡಲಾಗುತ್ತಿದೆ. ಇದರಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಸ್ವರ್ಣ ಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆ ಕೂಡ ಜನರಿಗೆ ಸ್ವಯಂ ಉದ್ಯೋಗ ಶುರು ಮಾಡಲು ನೆರವಾಗಲಿದೆ. ಈ ಯೋಜನೆಯನ್ನು ಭಾರತ ಸರ್ಕಾರ 2022 ರಲ್ಲಿ ಪ್ರಾರಂಭಿಸಿದೆ. ಸ್ವ ಉದ್ಯೋಗ ಮಾಡುವ ಜನರಿಗೆ ಬ್ಯಾಂಕ್ ಸಾಲದ ಮೇಲೆ ಸರ್ಕಾರದಿಂದ ಸಹಾಯಧನ ಸಿಗುತ್ತದೆ. ಜನರನ್ನು ಸ್ವಾವಲಂಭಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಒಂದು. ಜೊತೆಗೆ ಜನರ ಕೌಶಲ್ಯಾಭಿವೃದ್ಧಿಗೂ ಗಮನ ನೀಡಲಾಗುವುದು. ಈ ಯೋಜನೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಸಾಲ ಸಿಗಲಿದೆ. ಈ ಯೋಜನೆಯಡಿ ಕೆಲ ಗುಂಪುಗಳನ್ನು ರಚನೆ ಮಾಡಲಾಗಿದೆ. ಹತ್ತಕ್ಕಿಂತ ಹೆಚ್ಚು ಸದಸ್ಯರಿರುವ ಗುಂಪುಗಳನ್ನು ರಚಿಸಲಾಗ್ತಿದೆ. ಹೆಚ್ಚಿನ ಜನರು ಅದರಲ್ಲೂ ಮಹಿಳೆಯರು ಈ ಯೋಜನೆ ಲಾಭ ಪಡೆಯುಂತೆ ಮಾಡುವುದು ಈ ಗುಂಪಿನ ಉದ್ದೇಶವಾಗಿರುತ್ತದೆ.
Personal Finance : ಕ್ರೆಡಿಟ್ ಕಾರ್ಡ್ ಮೂಲಕ ನಗದು ವಿತ್ ಡ್ರಾ ಮಾಡ್ತೀರಾ? ಎಚ್ಚರ..
ಸ್ವರ್ಣ ಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆಯ ಲಾಭ ಸಿಗೋದು ಯಾರಿಗೆ ? : ಸ್ವ ಉದ್ಯೋಗಿಗೆ ಸರ್ಕಾರ ಗರಿಷ್ಠ 7500 ರೂಪಾಯಿ ಸಬ್ಸಿಡಿಯನ್ನು ನೀಡಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರದಿಂದ ಗರಿಷ್ಠ 10000 ರೂಪಾಯಿವರೆಗೆ ಸಹಾಯಧನ ಸಿಗಲಿದೆ. ಸ್ವಯಂ ಉದ್ಯೋಗಿಗಳ ಗುಂಪಿನ ಪ್ರತಿ ವ್ಯಕ್ತಿಗೆ 10000 ರೂಪಾಯಿ ಸಹಾಯ ಧನ ಸಿಗಲಿದೆ. ಬಡವರಿಗೆ ಈ ಯೋಜನೆಯಿಂದ ಸಾಕಷ್ಟು ಲಾಭವಿದೆ.
ದೀಪಾವಳಿಗೆ ಏನಾದ್ರೂ ಖರೀದಿಸುವ ಪ್ಲ್ಯಾನ್ ಇದೆಯಾ? ಹಾಗಾದ್ರೆ ನೋ ಕಾಸ್ಟ್ ಇಎಂಐ ಬಗ್ಗೆ ನಿಮ್ಗೆ ತಿಳಿದಿರಲಿ
ಸ್ವರ್ಣ ಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? : ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಸುಲಭ. ಮನೆಯಲ್ಲಿಯೇ ಆನ್ಲೈನ್ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ಮೊದಲು ನೀವು ಈ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. ಇದರ ನಂತರ ನೀವು ಹೋಮ್ ಪೇಜ್ ನಲ್ಲಿ ಅರ್ಜಿ ಸಲ್ಲಿಸು ಆಯ್ಕೆ ನೋಡುತ್ತೀರಿ. ಅದ್ರ ಮೇಲೆ ಕ್ಲಿಕ್ ಮಾಡಬೇಕು. ನೀವು ಅಲ್ಲಿಯೇ ಅರ್ಜಿ ಸಲ್ಲಿಕೆ ಮಾಡಬೇಕು. ಅರ್ಜಿಯಲ್ಲಿರುವ ಎಲ್ಲ ಮಾಹಿತಿ ಭರ್ತಿ ಮಾಡಿದ ನಂತ್ರ ನೀವು ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ನಂತ್ರ ಸಲ್ಲಿಸು ಬಟನ್ ಕ್ಲಿಕ್ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ಅರ್ಜಿ ಪರಿಶೀಲನೆ ನಡೆಸುತ್ತಾರೆ. ನೀವು ಸ್ವರ್ಣ ಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆಗೆ ಅರ್ಹರಾಗಿದ್ದರೆ ಸರ್ಕಾರ ನಿಮಗೆ ಹಣವನ್ನು ಮಂಜೂರು ಮಾಡುತ್ತದೆ.