
ನವದೆಹಲಿ: ಮಾರ್ಚ್ ತಿಂಗಳ ಸಗಟು ದರ ಆಧರಿತ ಹಣದುಬ್ಬರ ಸೂಚ್ಯಂಕವು ಶೇ.1.34ಕ್ಕೆ ಇಳಿಕೆಯಾಗಿದೆ. ಇದು ಕಳೆದ 29 ತಿಂಗಳಲ್ಲೇ ಕನಿಷ್ಠ ಪ್ರಮಾಣವಾಗಿದೆ. ಜೊತೆಗೆ ಸತತ 10ನೇ ತಿಂಗಳು ಹಣದುಬ್ಬರ ಇಳಿಕೆಯ ಹಾದಿಯಲ್ಲಿ ಸಾಗಿದಂತಾಗಿದೆ. ಈ ಮೂಲಕ ಭಾರೀ ಹಣದುಬ್ಬರದ ಆತಂಕದಿಂದ ಸರ್ಕಾರ ಪಾರಾಗುವಂತಾಗಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ (Central comerce and Industrial Ministry) ಸೋಮವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಅನ್ವಯ, ಮಾರ್ಚ್ ತಿಂಗಳ ಸಗಟುದರ ಆಧರಿತ ಹಣದುಬ್ಬರ (Inflation) ಸೂಚ್ಯಂಕ ಶೇ.1.34ರಷ್ಟಿತ್ತು. ಇದು 29 ತಿಂಗಳಲ್ಲೇ ಕನಿಷ್ಠ. 2023ರ ಫೆಬ್ರವರಿಯಲ್ಲಿ ಈ ಪ್ರಮಾಣವು ಶೇ.3.85ರಷ್ಟಿದ್ದರೆ, 2022ರ ಮಾರ್ಚ್ ಶೇ.14.63ರಷ್ಟಿತ್ತು.
ಆಹಾರೇತರ ವಸ್ತುಗಳು, ಜವಳಿ, ಖನಿಜ, ರಬ್ಬರ್ (Rubber), ಪ್ಲಾಸ್ಟಿಕ್ ವಸ್ತುಗಳು, ಕಚ್ಚಾ ಪೆಟ್ರೋಲಿಯಂ ಉತ್ಪನ್ನ, ನೈಸರ್ಗಿಕ ಅನಿಲ, ಪೇಪರ್, ವಿವಿಧ ಉತ್ಪಾದಿತ ವಸ್ತುಗಳ ಬೆಲೆ ಇಳಿಕೆಯು ಸಗಟು ಹಣದುಬ್ಬರ (Gross inflation Index) ಸೂಚ್ಯಂಕ ಇಳಿಕೆಗೆ ನೆರವಾಗಿದೆ. ಆಹಾರ ವಸ್ತುಗಳ ಪಟ್ಟಿ ಏರಿಕೆಯಾಗಿದ್ದರೂ, ಉಳಿದ ವಸ್ತುಗಳ ದರ ಗಮನಾರ್ಹ ಪ್ರಮಾಣದಲ್ಲಿ ಇಳಿದಿರುವುದು ಒಟ್ಟಾರೆ ಸೂಚ್ಯಂಕ ಇಳಿಕೆಗೆ ಕಾರಣವಾಗಿದೆ.
ಬಡ್ಡಿ ದರ ಏರಿಕೆಗೆ ರಿಸರ್ವ್ ಬ್ಯಾಂಕ್ ತಾತ್ಕಾಲಿಕ ತಡೆ: ಸಾಲಗಾರರು ಖುಷ್
ಹಣದುಬ್ಬರವಲ್ಲ, ಹೈಪರ್ ಹಣದುಬ್ಬರದತ್ತ ಪಾಕ್, ಸಾಲ ತೀರಿಸುವ ಅವಧಿ ವಿಸ್ತರಿಸಿದ ಚೀನಾ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.