FTX ಸಹ ಸಂಸ್ಥಾಪಕ ಅಳುವಂತೆ ಮಾಡಿದ ಈ ಭಾರತೀಯ ಸಂಜಾತ ಯಾರು ಗೊತ್ತಾ?

By Anusha Kb  |  First Published Nov 13, 2022, 6:25 PM IST

ಕ್ರಿಫ್ಟೊ ಕರೆನ್ಸಿ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಿ ಉದ್ಯಮ ಲೋಕದ ಕಣ್ಣು ಕುಕ್ಕುವಂತೆ ಮಾಡಿ ಒಮ್ಮಿಂದೊಮ್ಮೆಲೇ ದಿವಾಳಿಯಾದ 30 ವರ್ಷದ ಉದ್ಯಮಿ ಸ್ಯಾಮ್‌ ಬ್ಯಾಂಕ್‌ಮನ್‌ ಫ್ರೀಡ್‌ ಮ್ಯಾನ್ ಸಂಪತ್ತು ಒಮ್ಮೆಲೆ ನೆಲಕಚ್ಚಲು ಕಾರಣ ಯಾರು ಗೊತ್ತಾ? ಅದರ ಹಿಂದಿರುವುದು ಕೂಡ ಓರ್ವ ಭಾರತೀಯ ಸಂಜಾತ.


ಅನಿವಾಸಿ ಭಾರತೀಯರು ಇಂದು ಎಲ್ಲಾ ದೇಶಗಳಲ್ಲೂ ತಮ್ಮ ಅಧಿಪತ್ಯ ಸ್ಥಾಪಿಸಿದ್ದಾರೆ. ಅಮೆರಿಕಾದ ಸಂಸತ್‌ನಲ್ಲಿ ಅನೇಕ ಭಾರತೀಯರು ಸ್ಥಾನ ಪಡೆದಿದ್ದರೆ ಮತ್ತೊಂದೆಡೆ ಒಂದು ಕಾಲದಲ್ಲಿ ಭಾರತೀಯರನ್ನು ನಾಯಿಗಳಿಗಿಂತಲೂ ಹೀನವಾಗಿ ಕಂಡ ಬ್ರಿಟಿಷರನ್ನೇ ಇಂದು ಆಳುವ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಈ ವಿಚಾರವೆಲ್ಲಾ ಈಗ್ಯಾಕೆ ಅಂತೀರಾ ಕಾರಣ ಇದೆ ಮುಂದೆ ಓದಿ.  ಕ್ರಿಫ್ಟೊ ಕರೆನ್ಸಿ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಿ ಉದ್ಯಮ ಲೋಕದ ಕಣ್ಣು ಕುಕ್ಕುವಂತೆ ಮಾಡಿ ಒಮ್ಮಿಂದೊಮ್ಮೆಲೇ ದಿವಾಳಿಯಾದ 30 ವರ್ಷದ ಉದ್ಯಮಿ ಸ್ಯಾಮ್‌ ಬ್ಯಾಂಕ್‌ಮನ್‌ ಫ್ರೀಡ್‌ ಮ್ಯಾನ್ ಸಂಪತ್ತು ಒಮ್ಮೆಲೆ ನೆಲಕಚ್ಚಲು ಕಾರಣ ಯಾರು ಗೊತ್ತಾ? ಅದರ ಹಿಂದಿರುವುದು ಕೂಡ ಓರ್ವ ಭಾರತೀಯ ಸಂಜಾತ. ಕೆಲ ದಿನಗಳ ಹಿಂದೆ 160 ಕೋಟಿಯ ಸಂಪತ್ತು ಹೊಂದಿದ್ದ ಬ್ಯಾಂಕ್‌ಮನ್‌ ಫ್ರೀಡ್‌ ಅವರು ಇಂದು ನಯಾಪೈಸೆ ಇಲ್ಲದೇ ದಿವಾಳಿಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದಕ್ಕೆ ಸಂಬಂಧಿಸಿದಂತೆ ಈಗ ಭಾರತೀಯ ಸಂಜಾತನೋರ್ವನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಆತನೇ ನಿಶಾದ್ ಸಿಂಗ್ (Nishad Singh)

ಈ ಭಾರತೀಯ ಮೂಲದ ನಿಶಾದ್ ಸಿಂಗ್ ಅವರು 30 ವರ್ಷ ವಯಸ್ಸಿನ ಎಫ್‌ಟಿಎಕ್ಸ್ ಸಂಸ್ಥಾಪಕ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಅವರ ಆಪ್ತ ವಲಯದಲ್ಲಿದ್ದರು. ನಿಶಾದ ಸಿಂಗ್ ಸೇರಿದಂತೆ 9 ಮಂದಿ  ಇತರರು ಎಫ್‌ಟಿಎಕ್ಸ್ ಸಂಸ್ಥಾಪಕನ ಆಪ್ತ ವಲಯದಲ್ಲಿದ್ದವರು ಆ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳಲ್ಲಿ ಒಂದಾದ ಎಫ್‌ಟಿಎಕ್ಸ್‌ನ ಆಘಾತಕಾರಿ ಕುಸಿತಕ್ಕೆ ಕಾರಣವಾದ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಭಾರತೀಯ ಮೂಲದ ನಿಶಾದ್ ಸಿಂಗ್ ಚರ್ಚೆಯಲ್ಲಿದ್ದಾರೆ. 

Tap to resize

Latest Videos

Sam Bankman Fried: ಒಂದೇ ವಾರದಲ್ಲಿ 160 ಕೋಟಿಯಿಂದ ಶೂನ್ಯಕ್ಕೆ ಇಳಿದ ಉದ್ಯಮಿ!

ನಿಶಾದ್ ಸಿಂಗ್ ಅವರು ಡಿಸೆಂಬರ್ 2017ರಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದ  FTX ನ ಸೋದರ ಸಂಸ್ಥೆಯಾದ ಅಲಮೇಡಾ ರಿಸರ್ಚ್‌ (Alameda Research) ಸೇರಿದರು. ಇದಕ್ಕೂ ಮೊದಲು, ಅವರು ಐದು ತಿಂಗಳ ಕಾಲ ಫೇಸ್‌ಬುಕ್‌ನಲ್ಲಿ (Facebook) ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಸಾಮಾಜಿಕ ಜಾಲತಾಣ ಸಂಸ್ಥೆಯಾದ ಫೇಸ್‌ಬುಕ್‌ನಲ್ಲಿ ಮೆಷಿನ್ ಲರ್ನಿಂಗ್‌ಗೆ ಸಂಬಂಧಿಸಿದಂತೆ ಕೆಲಸ ಮಾಡಿದ್ದರು ಎಂದು ಅವರ ಲಿಂಕ್ಡಿನ್ ಫ್ರೊಫೈಲ್‌ನಲ್ಲಿ ಉಲ್ಲೇಖಿಸಲಾಗಿದೆ.  ನಂತರ ಅಲಮೇಡಾ ಸಂಶೋಧನಾ ಸಂಸ್ಥೆ ಸೇರಿದ ನಿಶಾದ್ ಸಿಂಗ್ ಅಲ್ಲಿ 17 ತಿಂಗಳ ಕಾಲ ಇಂಜಿನಿಯರಿಂಗ್ ನಿರ್ದೇಶಕರಾಗಿದ್ದರು. ನಂತರ ಏಪ್ರಿಲ್ 2019 ರಲ್ಲಿ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ (cryptocurrency exchange)  ಎಫ್‌ಟಿಎಕ್ಸ್‌ (FTX) ಸಂಸ್ಥೆ ಸೇರಿಕೊಂಡ ಅವರು ಅಂದಿನಿಂದ ಅದೇ ಎಂಜಿನಿಯರಿಂಗ್ ಹುದ್ದೆಯಲ್ಲಿದ್ದಾರೆ.

 ಎಫ್‌ಟಿಎಕ್ಸ್ ಸಂಸ್ಥಾಪಕ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಆಪ್ತ ವಲಯದಲ್ಲಿದ್ದ ನಿಶಾದ್ ಸಿಂಗ್, ಮುಖ್ಯ ತಂತ್ರಜ್ಞಾನ ಅಧಿಕಾರಿ ಗ್ಯಾರಿ ವಾಂಗ್ ಹಾಗೂ ಸ್ಯಾಮ್  ಎಫ್‌ಟಿಎಕ್ಸ್‌ನಲ್ಲಿ ಕೋಡ್ ನಿಯಂತ್ರಕರಾಗಿದ್ದು, ಹಣಕಾಸು ವಿನಿಮಯದ ಹೊಂದಾಣಿಕೆ, ಎಂಜಿನ್ ಹಾಗೂ ಹಣಕಾಸನ್ನು ನಿರ್ವಹಿಸುತ್ತಿದ್ದರು ಎಂದು ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರು ಕ್ರಿಪ್ಟೋಸುದ್ದಿ ವೆಬ್‌ಸೈಟ್‌ ಕಾಯಿನ್ ಡೆಸ್ಕ್‌ಗೆ ತಿಳಿಸಿದ್ದಾರೆ. ಈ ವ್ಯವಹಾರದಲ್ಲಿ ಅವರು ತಮ್ಮನ್ನು ಕೂಡ ಸೇರಿಸಿಕೊಂಡು ತಮ್ಮ ಸ್ವಂತದ ಸಂಖ್ಯೆಯನ್ನು ಸೇರಿಸಿದ್ದಲ್ಲಿ ಅದನ್ನು ಯಾರೂ ಗಮನಿಸುತ್ತಾರೆ ಎಂಬುದರ ಬಗ್ಗೆ ನನಗೆ ಖಚಿತತೆ ಇಲ್ಲ ಎಂಬುದನ್ನು ಈ ಅನಾಮಧೇಯ ವ್ಯಕ್ತಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. 

Crypto Market:ಮತ್ತೆ ಕುಸಿದ ಕ್ರಿಪ್ಟೋ ಮಾರುಕಟ್ಟೆ; ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ

ರಾಯಿಟರ್ಸ್(Reuters) ಶುಕ್ರವಾರ ಮಾಡಿದ ವರದಿ ಪ್ರಕಾರ, ಮಾಜಿ FTX ಸಿಇಒ ಸ್ಯಾಮ್ ಬ್ಯಾಂಕ್‌ಮನ್ ಫ್ರೈಡ್ (Sam Bankman-Fried) ಅವರು ಎಫ್‌ಟಿಎಕ್ಸ್‌ನಿಂದ ಸೋದರ ಸಂಸ್ಥೆ ಅಲಮೇಡಾಗೆ ಗ್ರಾಹಕರ (customer funds) 10 ಶತಕೋಟಿ ಡಾಲರ್ ಹಣವನ್ನು ರಹಸ್ಯವಾಗಿ ವರ್ಗಾಯಿಸಿದ್ದಾರೆ. ಹಾಗೆಯೇ ಮತ್ತೊಂದು ವ್ಯವಹಾರ ಉದ್ಯಮಕ್ಕೆ ಸಂಬಂಧಿಸಿದಂತೆ ವರದಿ ಮಾಡುವ ವಾಲ್‌ಸ್ಟ್ರೀಟ್ ಜರ್ನಲ್ (Wall Street Journal) ವರದಿ ಪ್ರಕಾರ, ಅಲ್ಮೇಡಾ (Alameda) ರಿಸರ್ಚ್‌ನ ಸಿಇಒ ಕ್ಯಾರೋಲಿನ್ ಎಲಿಸನ್  ನವಂಬರ್ 9 ರಂದು ಬುಧವಾರ, ವಿಡಿಯೋ ಕಾನ್ಫರೆನ್ಸ್‌ನಲ್ಲಿ ಉದ್ಯೋಗಿಗಳಿಗೆ ಸ್ಯಾಮ್ ಬ್ಯಾಂಕ್ಮನ್ ಫ್ರೈಡ್ ಮತ್ತು ಇತರ ಇಬ್ಬರು ಕಾರ್ಯನಿರ್ವಾಹಕರಾದ ನಿಶಾದ್ ಸಿಂಗ್ (Nishad Singh) ಮತ್ತು ಗ್ಯಾರಿ ವಾಂಗ್ (Gary Wang) ಅವರು ಗ್ರಾಹಕರ ಹಣವನ್ನು ಅಲಮೇಡಾಗೆ ವರ್ಗಾಯಿಸುವ ನಿರ್ಧಾರದ ಬಗ್ಗೆ ತಿಳಿದಿದ್ದರು ಎಂದು ವರದಿ ಮಾಡಿದೆ.

ಬ್ಯಾಂಕ್‌ಮನ್‌ ಫ್ರೀಡ್‌ ಬಗ್ಗೆ ಒಂದಿಷ್ಟು

 ಕ್ರಿಪ್ಟೋಕರೆನ್ಸಿಯ ವಂಡರ್‌ ಕಿಡ್‌ ಎನಿಸಿಕೊಂಡಿದ್ದ ಬ್ಯಾಂಕ್‌ಮನ್‌ ಫ್ರೀಡ್‌ ವಿಶ್ವದ ಮೂರನೇ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ ಎಫ್‌ಟಿಎಕ್ಸ್‌ನ ಸಹ ಸಂಸ್ಥಾಪಕರಾಗಿದ್ದರು. ಕೇವಲ ಮೂರು ವರ್ಷಗಳ ಅವಧಿಯಲ್ಲಿ ತನ್ನ ಮಾಜಿ ಹೂಡಿಕೆದಾರರೂ ಆಗಿದ್ದ ಬಿನಾನ್ಸೆಯನ್ನೂ ಸಹ ಹಿಂದಿಕ್ಕಿದ್ದರು. ಆದರೆ, ಎಫ್‌ಟಿಎಕ್ಸ್‌ನ ಮಾಜಿ ಸಹ ಸಂಸ್ಥಾಪಕ ಸ್ಯಾಮ್‌ ಬ್ಯಾಂಕ್‌ಮನ್‌ ಫ್ರೀಡ್‌ ಅವರ ಸಂಪೂರ್ಣ ಕ್ರಿಪ್ಟೋಕರೆನ್ಸಿ ಆಸ್ತಿ ಶುಕ್ರವಾರದ ವೇಳೆಗೆ ಶೂನ್ಯಕ್ಕೆ ಇಳಿದಿದೆ. ಇದು ಇತಿಹಾಸದಲ್ಲಿಯೇ ಸಂಪತ್ತಿನ  ಅತಿದೊಡ್ಡ ನಿರ್ನಾಮಗಳಲ್ಲಿ ಒಂದಾಗಿದೆ. ಶುಕ್ರವಾರ ಅವರ ರಾಜೀನಾಮೆ ಹಾಗೂ ದಿವಾಳಿತನದ ಅರ್ಜಿಯೊಂದಿಗೆ ಅವರ ಕ್ರಿಪ್ಟೋ ಸಾಮ್ರಾಜ್ಯ ಸಂಪೂರ್ಣ ಬರಿದಾಗಿದೆ. ಜಾನ್ ಪಿಯರ್‌ಪಾಂಟ್ ಮಾರ್ಗನ್‌ರಿಂದಲೇ ಮೆಚ್ಚುಗೆ ಪಡೆದುಕೊಂಡಿದ್ದ ಶ್ರೀಮಂತನ ಒಟ್ಟಾರೆ ಕ್ರಿಪ್ಟೋ ಆಸ್ತಿಗಳೀಗ ನಿಷ್ಪ್ರಯೋಜಕವಾಗಿವೆ ಎನ್ನುವ ಅರ್ಥ ಇದಾಗಿದೆ.
 

click me!