ಕೆಲಸದ ಅವಧಿಯ ಬಗ್ಗೆ ದೇಶದೆಲ್ಲೆಡೆ ವ್ಯಾಪಕವಾಗಿ ಚರ್ಚೆಗಳು ನಡೆಯುತ್ತಿವೆ. ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿಯವರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂಬ ಹೇಳಿಕೆ ನೀಡಿದ ಬೆನ್ನಲೇ ಆಗಾಗ ಈ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಹೀಗಿರುವಾಗ ಯಾವ ದೇಶದಲ್ಲಿ ಅತೀ ಕಡಿಮೆ ಕೆಲಸದ ಅವಧಿ ಇದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಸಮರ್ಪಕವಾದ ಕೆಲಸದ ಸಮಯವು ಯೋಗ್ಯ ಕೆಲಸದ ನಿರ್ಣಾಯಕ ಭಾಗವಾಗಿದೆ. ಇದು ಕೆಲಸದ ಪರಿಸ್ಥಿತಿಗಳ ಪ್ರಮುಖ ಅಂಶವನ್ನು ಪ್ರತಿನಿಧಿಸುತ್ತದೆ ಜೊತೆಗೆ ಕಾರ್ಮಿಕರ ಆದಾಯ, ಯೋಗಕ್ಷೇಮ ಮತ್ತು ಜೀವನ ಪರಿಸ್ಥಿತಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಕೈಗಾರಿಕಾ ಯುಗದ ಆರಂಭದಿಂದಲೂ ಕೆಲಸದ ಸಮಯದ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಲೇ ಬಂದಿವೆ. ಅತಿಯಾದ ಕೆಲಸದ ಸಮಯ ಮತ್ತು ಕೆಲಸದ ಸಮಯವನ್ನು ಸೀಮಿತಗೊಳಿಸುವ ಮೂಲಕ ಮತ್ತು ವಾರದ ವಿಶ್ರಾಂತಿ ಮತ್ತು ಪಾವತಿಸಿದ ವಾರ್ಷಿಕ ರಜೆ ಸೇರಿದಂತೆ ಸಾಕಷ್ಟು ವಿಶ್ರಾಂತಿ ಮತ್ತು ಚೇತರಿಕೆಯ ಅವಧಿಗಳನ್ನು ಒದಗಿಸುವ ಮೂಲಕ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸಬೇಕು ಎಂಬುದು ಅಂತರರಾಷ್ಟ್ರೀಯ ಕಾರ್ಮಿಕ ಮಾನದಂಡಗಳಲ್ಲಿ ಪ್ರತಿಪಾದಿಸಲ್ಪಟ್ಟಿವೆ. ಮತ್ತೊಂದೆಡೆ, ಸಾಕಷ್ಟು ಮಟ್ಟದ ಮಾಸಿಕ ಸಂಭಾವನೆಯನ್ನು ತಲುಪಲು, ಕಾರ್ಮಿಕರು ಕನಿಷ್ಠ ಬೇಕಾಗಿರುವ ಗಂಟೆಗಳ ಕೆಲಸದ ಸಮಯವನ್ನು ಪೂರ್ಣಗೊಳಿಸಬೇಕು, ಜೊತೆಗೆ ಕಂಪನಿ ನಿಗದಿ ಮಾಡಿದ ಕೆಲಸವನ್ನು ಪೂರ್ಣಗೊಳಿಸಲು ಸಮಯವನ್ನು ಮೀರಿ ಕೆಲಸ ಮಾಡಬೇಕಾಗುತ್ತದೆ. ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಕೆಲಸದ ಅವಧಿ ಇದ್ದು, ಯಾವ ದೇಶದಲ್ಲಿ ಕೆಲಸದ ಸಮಯ ಅತೀ ಕಡಿಮೆ ಇದೆ ಎಂಬ ಮಾಹಿತಿ ಇಲ್ಲಿದೆ.
- ಅಫ್ಘಾನಿಸ್ತಾನ 39.6
- ಅಲ್ಬೇನಿಯಾ 41.7
- ಅಲ್ಜೀರಿಯಾ 43.7
- ಅಂಗೋಲಾ 41.4
- ಅರ್ಜೆಂಟೀನಾ 37.0
- ಅರ್ಮೇನಿಯಾ 40.1
- ಅರುಬಾ 39.4
- ಆಸ್ಟ್ರೇಲಿಯಾ 32.3
- ಆಸ್ಟ್ರಿಯಾ 33.3
- ಅಜೆರ್ಬೈಜಾನ್ 34.4
- ಬಾಂಗ್ಲಾದೇಶ 46.9
- ಬೆಲಾರಸ್ 39.1
- ಬೆಲ್ಜಿಯಂ 35.0
- ಬೆಲೀಜ್ 39.0
- ಬೆನಿನ್ 40.4
- ಬರ್ಮುಡಾ 41.8
- ಭೂತಾನ್ 54.4
- ಬೊಲಿವಿಯಾ 38.0
- ಬೋಸ್ನಿಯಾ ಮತ್ತು ಹರ್ಜೆಗೋವಿನಾ 41.4
- ಬೋಟ್ಸ್ವಾನ 43.8
- ಬ್ರೆಜಿಲ್ 39.0
- ಬ್ರೂನಿ ದಾರುಸ್ಸಲಾಮ್ 46.0
- ಬಲ್ಗೇರಿಯಾ 39.2
- ಬುರ್ಕಿನಾ ಫಾಸೊ 46.3
- ಬುರುಂಡಿ 40.3
- ಕ್ಯಾಬೊ ವರ್ಡೆ 45.3
- ಕಾಂಬೋಡಿಯಾ 40.4
- ಕೆನಡಾ 32.1
- ಕೇಮನ್ ದ್ವೀಪಗಳು 42.0
- ಚಿಲಿ- 40.04
- ಚೀನಾ 46.1
- ಕೊಲಂಬಿಯಾ 44.2
- ಕೊಮೊರೊಸ್ 37.8
- ಕಾಂಗೋ 48.6
- ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ -6.03
- ಕುಕ್ ದ್ವೀಪ 37.0
- ಕೋಸ್ಟಾರಿಕಾ 42.5
- ಕೋಟ್ ಡಿ'ಐವೊಯಿರ್ 42.6
- ಕ್ರೊಯೇಷಿಯಾ 37.9
- ಕ್ಯೂಬಾ 41.0
- ಕುರಾಕೊ 36.6
- ಸೈಪ್ರಸ್ 37.6
- ಜೆಕಿಯಾ 37.7
- ಡೆನ್ಮಾರ್ಕ್ 33.9
- ಡೊಮಿನಿಕನ್ ರಿಪಬ್ಲಿಕ್- 40.8
- ಈಕ್ವೆಡಾರ್ 38.4
- ಈಜಿಪ್ಟ್ 43.0
- ಎಲ್ ಸಾಲ್ವಡಾರ್ 43.2
- ಎಸ್ಟೋನಿಯಾ 36.7
- ಎಸ್ವತಿನಿ 42.7
- ಇಥಿಯೋಪಿಯಾ 31.9
- ಫಾಕ್ಲ್ಯಾಂಡ್ ದ್ವೀಪಗಳು (ಮಾಲ್ವಿನಾಸ್) 44.7
- ಫಿನ್ಲ್ಯಾಂಡ್ 34.4
- ಫ್ರಾನ್ಸ್ 35.9
- ಗ್ಯಾಂಬಿಯಾ 41.6
- ಜಾರ್ಜಿಯಾ 40.5
- ಜರ್ಮನಿ 34.2
- ಘಾನಾ 38.5
- ಗ್ರೀಸ್ 39.7
- ಗ್ರೆನಡಾ 40.2
- ಗಯಾನಾ 44.7
- ಹೈಟಿ 42.0
- ಹೊಂಡುರಾಸ್ 43.6
- ಹಾಂಗ್ ಕಾಂಗ್, ಚೀನಾ 43.0
- ಹಂಗೇರಿ 38.5
- ಐಸ್ಲ್ಯಾಂಡ್ 36.3
- ಭಾರತ 46.7
- ಇಂಡೋನೇಷ್ಯಾ 40.0
- ಇರಾನ್, ಇಸ್ಲಾಮಿಕ್ ಗಣರಾಜ್ಯ 44.3
- ಇರಾಕ್ 31.7
- ಐರ್ಲೆಂಡ್ 35.6
- ಐಲ್ ಆಫ್ ಮ್ಯಾನ್ 35.0
- ಇಸ್ರೇಲ್ 38.5
- ಇಟಲಿ 36.3
- ಜಮೈಕಾ 42.7
- ಜಪಾನ್ 36.6
- ಜೆರ್ಸಿ 40.0
- ಜೋರ್ಡಾನ್ 47.0
- ಕಝಾಕಿಸ್ತಾನ್ 38.0
- ಕೀನ್ಯಾ 45.6
- ಕಿರಿಬಾಟಿ 27.3
- ಕೊರಿಯಾ, ಗಣರಾಜ್ಯ 38.6
- ಕೊಸೊವೊ 43.2
- ಕಿರ್ಗಿಸ್ತಾನ್ 38.0
- ಲಾವೋ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ 41.5
- ಲಾಟ್ವಿಯಾ 38.9
- ಲೆಬನಾನ್ 47.6
- ಲೆಸೊಥೊ 50.4
- ಲೈಬೀರಿಯಾ 47.7
- ಲಿಥುವೇನಿಯಾ 38.6
- ಲಕ್ಸೆಂಬರ್ಗ್ 35.6
- ಮಕಾವು, ಚೀನಾ 46.0
- ಮಡಗಾಸ್ಕರ್ 34.5
- ಮಲೇಷ್ಯಾ 44.7
- ಮಾಲ್ಡೀವ್ಸ್ 46.5
- ಮಾಲಿ 41.9
- ಮಾಲ್ಟಾ 36.8
- ಮಾರ್ಷಲ್ ದ್ವೀಪಗಳು 37.9
- ಮಾರಿಟೇನಿಯಾ 47.6
- ಮಾರಿಷಸ್ 40.1
- ಮೆಕ್ಸಿಕೋ 43.7
- ಮೈಕ್ರೋನೇಷಿಯಾ, 30.4
- ರಿಪಬ್ಲಿಕ್ ಆಫ್ ಮೊಲ್ಡೊವಾ, 39.7
- ಮಂಗೋಲಿಯಾ 47.3
- ಮಾಂಟೆನೆಗ್ರೊ 43.3
- ಮಾಂಟ್ಸೆರಾಟ್ 39.0
- ಮೊರಾಕೊ 44.9
- ಮೊಜಾಂಬಿಕ್ 36.4
- ಮ್ಯಾನ್ಮಾರ್ 44.7
- ನಮೀಬಿಯಾ 44.9
- ನೌರು 37.4
- ನೇಪಾಳ 41.0
- ನೆದರ್ಲ್ಯಾಂಡ್ಸ್ 31.6
- ನ್ಯೂ ಕ್ಯಾಲೆಡೋನಿಯಾ 37.2
- ನ್ಯೂಜಿಲೆಂಡ್ 33.0
- ನಿಕರಾಗುವಾ 36.5
- ನೈಜರ್ 39.7
- ನಿಯು 38.6
- ಉತ್ತರ ಮ್ಯಾಸಿಡೋನಿಯಾ 39.7
- ನಾರ್ವೆ 33.7
- ಪ್ಯಾಲೆಸ್ಟೀನಿಯನ್ ಪ್ರದೇಶ 41.5
- ಪಾಕಿಸ್ತಾನ 46.9
- ಪಲಾವ್ 39.9
- ಪನಾಮ 36.2
- ಪೆರು 43.1
- ಫಿಲಿಪೈನ್ಸ್ 40.6
- ಪೋಲೆಂಡ್ 39.8
- ಪೋರ್ಚುಗಲ್ 38.2
- ಕತಾರ್ 48.0
- ರಿಯೂನಿಯನ್ 33.0
- ರೊಮೇನಿಯಾ 39.7
- ರಷ್ಯನ್ ಒಕ್ಕೂಟ 39.2
- ರುವಾಂಡಾ 30.4
- ಸೇಂಟ್ ಲೂಸಿಯಾ 39.9
- ಸಮೋವಾ 44.5
- ಸೆನೆಗಲ್ 45.5
- ಸೆರ್ಬಿಯಾ 42.0
- ಸೀಶೆಲ್ಸ್ 40.7
- ಸಿಯೆರಾ ಲಿಯೋನ್ 42.7
- ಸಿಂಗಾಪುರ 42.6
- ಸ್ಲೋವಾಕಿಯಾ 37.7
- ಸ್ಲೊವೇನಿಯಾ 38.7
- ಸೊಲೊಮನ್ ದ್ವೀಪಗಳು 34.6
ಈ ದೇಶಗಳ ಪೈಕಿ ವನವಾಟು ವಾರದಲ್ಲಿ 24.7 ಗಂಟೆ ಕೆಲಸದ ಅವಧಿಯನ್ನು ಹೊಂದುವ ಮೂಲಕ ಅತ್ಯಂತ ಕಡಿಮೆ ಕೆಲಸದ ಅವಧಿಯನ್ನು ಹೊಂದಿರುವ ದೇಶ ಎನಿಸಿದೆ. ಹಾಗೆಯೇ ಕಿರಿಬಾತಿ 27.3 ಗಂಟೆಗಳನ್ನು ಹೊಂದುವ ಮೂಲಕ 2ನೇ ಸ್ಥಾನದಲ್ಲಿದೆ. ಮತ್ತುಳಿದಂತೆ ಮೈಕ್ರೋನೇಷಿಯ ಹಾಗೂ ರ್ವಾಂಡ 30.4, ಸೋಮಾಲಿಯಾ 31.4, ನೆದರ್ಲ್ಯಾಂಡ್ 31.6, ಇರಾಕ್ 31.7, ವಾಲಿಸ್ & ಫುಟುನಾ 31.8, ಇಥಿಯೋಪಿಯಾ 31.9, ಕೆನಡಾ 32.1 ಕೆಲಸದ ಗಂಟೆಗಳನ್ನು ಹೊಂದುವ ಮೂಲಕ ಅತೀ ಕಡಿಮೆ ಕೆಲಸದ ಅವಧಿಯನ್ನು ಹೊಂದಿರುವ ದೇಶಗಳೆನಿಸಿವೆ.