ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದು, 49 ರೂ.ಗೆ ಅನ್‌ಲಿಮಿಟೆಡ್ ಡೇಟಾ ನೀಡಿದೆ, ಇನ್ನೊಂದು ಕೊಡುಗೆಯಲ್ಲಿ ಯೂಟ್ಯೂಬ್ ಪ್ರೀಮಿಯಂ ಯೋಜನೆಯೂ ಲಭ್ಯವಿದೆ. ಡಿಟೇಲ್ಸ್ ಇಲ್ಲಿದೆ...
ಭಾರತದ ಪ್ರಮುಖ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಸದಾ ಸುದ್ದಿ ಮಾಡುತ್ತಲೇ ಇರುತ್ತದೆ. ರಾಷ್ಟ್ರವ್ಯಾಪಿ 490 ಮಿಲಿಯನ್ ಗ್ರಾಹಕರೊಂದಿಗೆ, ಜಿಯೋ ಆಗಾಗ್ಗೆ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಕಳೆದ ಜುಲೈನಲ್ಲಿ, ಜಿಯೋ ತನ್ನ ಕೆಲವು ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿತು ಮತ್ತು ಹಲವಾರು ಬಜೆಟ್ ಆಯ್ಕೆಗಳನ್ನು ತೆಗೆದುಹಾಕಿ ಜನರ ಆಕ್ರೋಶಕ್ಕೆ ಒಳಗಾಗಿತ್ತು. ನಂತರ ಅದರ ಲಾಭ ಪಡೆದ ಏರ್‌ಟೆಲ್ ಮತ್ತು ಬಿಎಸ್ಎನ್ಎಲ್ ಕೆಲವೊಂದು ಯೋಜನೆಗಳನ್ನು ಪ್ರಕಟಿಸಿತು. ಜಿಯೋಗೆ ಹೋಲಿಸಿದರೆ ಏರ್‌ಟೆಲ್ ಬೆಲೆಗಳು ತುಸು ದುಬಾರಿಯೇ ಎನ್ನುವುದು ಬಹುತೇಕ ಗ್ರಾಹಕರ ಮಾತು. ಆದರೂ ಹಲವರು ಜಿಯೋದಿಂದ ಬಿಎಸ್ಎನ್ಎಲ್ಗೆ ಪೋರ್ಟ್ ಆದರು. ಮತ್ತೆ ಕೆಲವರು ವಾಪಸ್ ಜಿಯೋಗೆ ಮರಳಿದರು.
ಅದೇನೇ ಇದ್ದರೂ, ಇದೀಗ ಜಿಯೋ ಮತ್ತೊಂದು ಯೋಜನೆಯನ್ನು ಗ್ರಾಹಕರಿಗಾಗಿ ತಂದಿದೆ. ಅದು ಕೇವಲ 49 ರೂಪಾಯಿಗಳಲ್ಲಿ ಅನ್‌ಲಿಮಿಟೆಡ್ ಡೇಟಾ ಪ್ಲ್ಯಾನ್. ಅಂದರೆ 25 ಜಿಬಿಯ ಡೇಟಾ ಇದಾಗಿದೆ. ನೀವು ಆ 25GB ಅನ್ನು ಬಳಸಿದರೆ, ನಿಮ್ಮ ಇಂಟರ್ನೆಟ್ ವೇಗವು 40Kbps ಗೆ ಕಡಿಮೆಯಾಗುತ್ತದೆ. ನಿಮ್ಮ ದೈನಂದಿನ ಡೇಟಾ ಮುಗಿದ ಬಳಿಕ ಅಗತ್ಯವಿದ್ದಲ್ಲಿ ಈ ಪ್ಲ್ಯಾನ್ ಉಪಯುಕ್ತವಾಗಿದೆ. ಆದರೆ ಇದು ಕೇವಲ 24 ಗಂಟೆ ಇರುವ ಪ್ಲ್ಯಾನ್ ಆಗಿದೆ. ಈ ಯೋಜನೆಯು ಕೇವಲ ಒಂದು ದಿನಕ್ಕೆ ಲಭ್ಯವಿದೆ, ಅಂದರೆ 24 ಗಂಟೆಗಳ ನಂತರ ಅದು ನಿಷ್ಕ್ರಿಯವಾಗುತ್ತದೆ.
ಆನ್ಲೈನ್ನಲ್ಲಿ ಮೊಬೈಲ್ ರೀಚಾರ್ಜ್ ಮಾಡ್ತೀರಾ? ಈ ಹೊಸ ವಂಚನೆ ಬಗ್ಗೆ ಇರಲಿ ಎಚ್ಚರ!
49 ರೂಪಾಯಿ ಒಂದು ದಿನದ ಮಟ್ಟಿಗೆ ಹಾಕಿಸಿಕೊಂಡು, ನಿಮಗೆ ಅಗತ್ಯ ಇರುವುದನ್ನೆಲ್ಲಾ ಡೌನ್ಲೋಡ್ ಮಾಡಿಟ್ಟುಕೊಳ್ಳಲು ಇದು ಪ್ರಯೋಜನಕಾರಿ ಎಂದಿದೆ ಜಿಯೊ. ಈ ಹೊಸ ಕೊಡುಗೆಯು ಏರ್‌ಟೆಲ್, VI ಮತ್ತು BSNL ನಂತಹ ಸ್ಪರ್ಧಿಗಳಿಗೆ ಸ್ವಲ್ಪ ದುಬಾರಿ ಬೀಳಲಿದೆ. ಅವರ ಮೇಲೆ ಒತ್ತಡ ಸಹಜವಾಗಿ ಹೆಚ್ಚಾಗಲಿದೆ.
ಇದೇ ವೇಳೆ ಜಿಯೊ ತನ್ನ Jio Fiber ಮತ್ತು Jio Air Fiber ಗ್ರಾಹಕರಿಗೆ ಅದ್ಭುತವಾದ ಹೊಸ ಕೊಡುಗೆಗಳನ್ನೂ ನೀಡಿದೆ. YouTube Premium ಗೆ ಎರಡು ವರ್ಷಗಳ ಉಚಿತ ಚಂದಾದಾರಿಕೆ ಅದಾಗಿದೆ. ಈ ಅತ್ಯಾಕರ್ಷಕ ಒಪ್ಪಂದವು ಜನವರಿ 11, 2025 ರಂದು ಪ್ರಾರಂಭವಾಗಿದೆ. ನೀವು ಅರ್ಹ ಗ್ರಾಹಕರಾಗಿದ್ದರೆ, ನೀವು YouTube ನಲ್ಲಿ ವಿಡಿಯೋಗಳ ಜಾಹೀರಾತು-ಮುಕ್ತ ಸ್ಟ್ರೀಮಿಂಗ್ ಅನ್ನು ಆನಂದಿಸಬಹುದು, ಜೊತೆಗೆ ವಿಶೇಷ YouTube Originals ಗೆ ವಿಶೇಷ ಪ್ರವೇಶವನ್ನು ಎರಡು ವರ್ಷಗಳವರೆಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆನಂದಿಸಬಹುದು. ಯೂಟ್ಯೂಬ್ ಪ್ರೀಮಿಯಂ ಸಾಮಾನ್ಯವಾಗಿ ಭಾರತದಲ್ಲಿ ಪ್ರತಿ ತಿಂಗಳು ರೂ 149 ವೆಚ್ಚವಾಗುತ್ತದೆ. ಆದ್ದರಿಂದ ಇದು ಹೆಚ್ಚು ಪ್ರಯೋಜನ ಆಗಲಿದೆ.
ಇನ್ಮುಂದೆ ಈ 20ಕ್ಕೂ ಅಧಿಕ ಫೋನ್ಗಳಲ್ಲಿ ವಾಟ್ಸ್ಆ್ಯಪ್ ವರ್ಕ್ ಆಗಲ್ಲ: ನಿಮ್ಮ ಫೋನ್ ಇದ್ಯಾ ಚೆಕ್ ಮಾಡಿಕೊಳ್ಳಿ...