ಮದುವೆ, ಸಮಾರಂಭಕ್ಕೆ 10 ರೂಪಾಯಿ ನೋಟಿನ ಬಂಡಲ್ ಬೇಕಿದ್ರೆ ಹೀಗೆ ಮಾಡಿ

Published : Sep 15, 2026, 02:51 PM IST
bundle of notes

ಸಾರಾಂಶ

10 rupees notes : ಮದುವೆ, ಪೂಜೆ ಸಂದರ್ಭದಲ್ಲಿ ಚಿಲ್ಲರೆ ನೋಟಿನ ಅಗತ್ಯ ಹೆಚ್ಚಿರುತ್ತದೆ. ಒಂದು ರೂಪಾಯಿ ಕಾಯಿನ್ ಜೊತೆ ಹತ್ತು – 20 ರೂಪಾಯಿ ನೋಟಿನ ಕಂತೆಯ ಅಗತ್ಯ ಇರುತ್ತದೆ. ಆದ್ರೆ ಅಗತ್ಯವಿರುಷ್ಟು ನೋಟಿನ ಕಂತೆ ನಿಮ್ಮ ಬಳಿ ಇರೋದಿಲ್ಲ. ಆಗ ಏನು ಮಾಡ್ಬೇಕು ಗೊತ್ತಾ?

ಭಾರತೀಯ ಸಂಪ್ರದಾಯದಲ್ಲಿ ನೋಟಿನ ಅಗತ್ಯ ಹೆಚ್ಚಿದೆ. ಈಗ ಡಿಜಿಟಲ್ ಯುಗ ಶುರುವಾಗಿದೆಯಾದ್ರೂ ಅನೇಕ ಕಾರ್ಯಕ್ರಮಗಳಲ್ಲಿ ನೋಟಿನ ಬೆಲೆ ಕಡಿಮೆಯಾಗಿಲ್ಲ. ಮದುವೆಗಳಲ್ಲಿ, ಹಬ್ಬದ ಸಂದರ್ಭಗಳಲ್ಲಿ, ದಾನ ನೀಡಲು ಅನೇಕರು ಹತ್ತು – 20 ರೂಪಾಯಿ ನೋಟನ್ನು ಇಟ್ಟುಕೊಳ್ತಾರೆ. 10 ರೂಪಾಯಿ ನೋಟುಗಳನ್ನು ಒಟ್ಟಾಕಿಡಲು ಸಾಧ್ಯವಿಲ್ಲ. ನಿಮಗೆ ಬಂಡಲ್ ಗಟ್ಟಲೆ ಹಣ ಎಲ್ಲಿ ಸಿಗುತ್ತೆ? ಅದಕ್ಕಿರುವ ನಿಯಮ ಏನು ಎಂಬುದು ಇಲ್ಲಿದೆ.

10 ರೂಪಾಯಿ ನೋಟಿನ ಬಂಡಲ್ ಸಿಗೋದು ಎಲ್ಲಿ

ಮದುವೆ ಅಥವಾ ಇತರ ಕಾರ್ಯಕ್ರಮಕ್ಕಾಗಿ ನಿಮಗೆ 10 ರೂಪಾಯಿ ನೋಟುಗಳ ಬಂಡಲ್ ಬೇಕಾದರೆ, ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯಿಂದ ನೀವು ಒಂದನ್ನು ಪಡೆಯಬಹುದು. ಬ್ಯಾಂಕ್ ಶಾಖೆಯು 10 ರೂಪಾಯಿ ನೋಟುಗಳ ಬಂಡಲ್ಗಳನ್ನು ಹೊಂದಿದೆಯೇ ಎಂಬುದು ಅದರ ಸ್ಟಾಕ್ ಅನ್ನು ಅವಲಂಬಿಸಿರುತ್ತದೆ.

ದೊಡ್ಡ ಮೊತ್ತದಲ್ಲಿ ನಿಮಗೆ ಬಂಡಲ್ ಅಗತ್ಯವಿದ್ದರೆ ನೀವು ಮುಂಚಿತವಾಗಿ ಬ್ಯಾಂಕ್ ಅನ್ನು ಸಂಪರ್ಕಿಸುವುದು ಉತ್ತಮ. ಗ್ರಾಹಕರಾದ ನೀವು ಶಾಖೆಗೆ ನಿಮ್ಮ ಅಗತ್ಯವನ್ನು ವಿವರಿಸಬಹುದು. ಹಾಗೆಯೇ 10 ರೂಪಾಯಿ ನೋಟುಗಳು ಲಭ್ಯವಿದೆಯೇ ಎಂದು ಕೇಳಬಹುದು.

ಆರ್ಬಿಐ ನಿಯಮಗಳು ಏನು ಹೇಳುತ್ತವೆ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ನಿಯಮಗಳ ಅಡಿಯಲ್ಲಿ, ಗ್ರಾಹಕರಿಗೆ ಶುದ್ಧ ಮತ್ತು ಚಲಾವಣೆಯಲ್ಲಿರುವ ಓದಬಹುದಾದ ನೋಟುಗಳನ್ನು ಒದಗಿಸಲು ಬ್ಯಾಂಕುಗಳು ವ್ಯವಸ್ಥೆ ಮಾಡುತ್ತವೆ. ಒಂದು ಶಾಖೆಯಲ್ಲಿ 10 ರೂಪಾಯಿ ನೋಟುಗಳ ಬಂಡಲ್ ಸಿಗದಿದ್ದರೆ, ಇನ್ನೊಂದು ಶಾಖೆಯಲ್ಲಿ ಲಭ್ಯತೆಯ ಬಗ್ಗೆ ನೀವು ವಿಚಾರಿಸಬಹುದು. ಬ್ಯಾಂಕಿನಿಂದ ಸಣ್ಣ ನೋಟುಗಳನ್ನು ಪಡೆಯಲು ನಿಮಗೆ ಏಜೆಂಟ್ ಅಥವಾ ಮಧ್ಯವರ್ತಿ ಅಗತ್ಯವಿಲ್ಲ. ಸಣ್ಣ ನೋಟುಗಳ ಬಂಡಲ್ ಅನ್ನು ಖರೀದಿಸುವಾಗ, ನೋಟುಗಳ ಸಂಖ್ಯೆ ಮತ್ತು ಮೌಲ್ಯವನ್ನು ಪರೀಕ್ಷಿಸಬೇಕು. ನೋಟುಗಳು ಅಸಲಿಯೇ, ನಕಲಿಯೇ ಎಂಬುದನ್ನು ಪರೀಕ್ಷಿಸಬೇಕು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಚಹಾಗೆ 20ರೂ, ಚಾಟ್ಸ್ 100, ದಿನಸಿ 1000, ನಿಮ್ಮ ಪಾವತಿ ಮೇಲೆ ಯುಪಿಐ ₹2000 ನೀತಿ ಪರಿಣಾಮವೇನು?
ಗಣೇಶನ ಭಕ್ತಿಯಲ್ಲಿ ರಾಧಿಕಾ ಪರವಶ: ಅಂಬಾನಿ ಕಿರಿಯ ಸೊಸೆಯ ಡ್ಯಾನ್ಸ್ ಗೆ ಜನ ಫಿದಾ