ತಾಯಿಯ ಪ್ರೀತಿ, ಸಿರಿಧಾನ್ಯದ ಶಕ್ತಿ! ವರ್ಷಕ್ಕೆ ₹1 ಕೋಟಿ ಗಳಿಸುತ್ತಿದೆ ಮಾಜಿ ರಾಕೆಟ್ ಡಿಸೈನರ್ ಉದ್ಯಮ!

Published : Sep 11, 2026, 01:12 PM IST
Jyoti Srivastava - Successful Mompreneur

ಸಾರಾಂಶ

ಭಾರತೀಯ ಸೇನೆಗಾಗಿ ರಾಕೆಟ್ ವಿನ್ಯಾಸ ಮಾಡುತ್ತಿದ್ದ ಜ್ಯೋತಿ ಶ್ರೀವಾಸ್ತವ, ಮಕ್ಕಳಿಗೆ ಆರೋಗ್ಯಕರ ಆಹಾರ ಸಿಗದ ಕಾರಣ 2022ರಲ್ಲಿ Little Cherry Mom ಎಂಬ ಮಿಲೆಟ್ ಬೇಬಿ ಫುಡ್ ಬ್ರ್ಯಾಂಡ್ ಆರಂಭಿಸಿದರು. ಇಂದು ಸಂಸ್ಥೆ ₹1 ಕೋಟಿಗೂ ಅಧಿಕ ಆದಾಯ ಗಳಿಸಿದ್ದು, ದೇಶಾದ್ಯಂತ 70 ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ.

ಸೇನೆಯ ರಾಕೆಟ್ ವಿನ್ಯಾಸದಿಂದ ₹1 ಕೋಟಿ ಬೇಬಿ ಫುಡ್ ಉದ್ಯಮದವರೆಗೆ

ಕೆಲವೊಮ್ಮೆ ಬದುಕಿನಲ್ಲಿ ಎದುರಾಗುವ ಒಂದು ಸಣ್ಣ ಸಮಸ್ಯೆಯೇ ದೊಡ್ಡ ಯಶಸ್ಸಿನ ದಾರಿಗೆ ಕಾರಣವಾಗುತ್ತದೆ. ಮಕ್ಕಳಿಗೆ ಆರೋಗ್ಯಕರ ಹಾಗೂ ನಂಬಿಕೆಯಿಂದ ನೀಡಬಹುದಾದ ಆಹಾರ ಸಿಗುತ್ತಿಲ್ಲ ಎಂಬ ಚಿಂತೆ ತಾಯಿಯೊಬ್ಬರನ್ನು ಉದ್ಯಮಿಯಾಗಿ ರೂಪಿಸಿದೆ. ಭಾರತೀಯ ಸೇನೆಗಾಗಿ ರಾಕೆಟ್‌ಗಳನ್ನು ವಿನ್ಯಾಸಗೊಳಿಸುತ್ತಿದ್ದ ಎಂಜಿನಿಯರ್ ಜ್ಯೋತಿ ಶ್ರೀವಾಸ್ತವ ಅವರು ಇಂದು ಮಿಲೆಟ್ ಆಧಾರಿತ ಬೇಬಿ ಫುಡ್ ಬ್ರ್ಯಾಂಡ್ ಮೂಲಕ ಗಮನ ಸೆಳೆದಿದ್ದಾರೆ.

ಸೇನೆಗಾಗಿ ರಾಕೆಟ್ ವಿನ್ಯಾಸ ಮಾಡುತ್ತಿದ್ದ ಎಂಜಿನಿಯರ್

ಜ್ಯೋತಿ ಶ್ರೀವಾಸ್ತವ ಅವರು ಈ ಹಿಂದೆ ಭಾರತೀಯ ಸೇನೆಗಾಗಿ ರಾಕೆಟ್‌ಗಳ ವಿನ್ಯಾಸದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ತಾಯಿಯಾದ ಬಳಿಕ ಅವರ ಆದ್ಯತೆಗಳಲ್ಲಿ ಬದಲಾವಣೆಯಾಯಿತು. ಮಗುವಿಗೆ ಘನ ಆಹಾರ ನೀಡಲು ಆರಂಭಿಸುವ ಸಮಯದಲ್ಲಿ ಆರೋಗ್ಯಕರ ಹಾಗೂ ನಂಬಿಕೆಗೆ ಅರ್ಹವಾದ ಆಯ್ಕೆಗಳು ಸುಲಭವಾಗಿ ಸಿಗುತ್ತಿಲ್ಲ ಎಂಬುದು ಅವರಿಗೆ ಅರಿವಾಯಿತು.

ಮಗುವಿಗಾಗಿ ಹುಡುಕಿದ್ದು ಉದ್ಯಮದ ದಾರಿ

ಮಾರುಕಟ್ಟೆಯಲ್ಲಿ ‘ನ್ಯಾಚುರಲ್’ ಮತ್ತು ‘ಹೆಲ್ದಿ’ ಎಂದು ಹೇಳಿಕೊಳ್ಳುವ ಹಲವು ಉತ್ಪನ್ನಗಳಿದ್ದರೂ, ಅವುಗಳ ಪದಾರ್ಥಗಳ ಪಟ್ಟಿಯನ್ನು ಗಮನಿಸಿದಾಗ ತಮಗೆ ತೃಪ್ತಿ ಇರಲಿಲ್ಲ ಎಂದು ಜ್ಯೋತಿ ಹೇಳಿದ್ದಾರೆ. ಮಕ್ಕಳ ಆಹಾರದಲ್ಲಿ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಅವರು ಉತ್ತರ ಪ್ರದೇಶದ ಮೀರತ್‌ನಲ್ಲಿ ತಮ್ಮದೇ ಉದ್ಯಮ ಆರಂಭಿಸಿದರು.

ಮಿಲೆಟ್ ಆಧಾರಿತ ಆಹಾರಕ್ಕೆ ಒತ್ತು

2022ರಲ್ಲಿ ಆರಂಭವಾದ Little Cherry Mom ಬ್ರ್ಯಾಂಡ್ ಮಿಲೆಟ್ ಹಿಟ್ಟು, ಇನ್‌ಸ್ಟಂಟ್ ದೋಸೆ ಮಿಕ್ಸ್, ಸಕ್ಕರೆ ಮತ್ತು ಬೆಲ್ಲವಿಲ್ಲದ ಲಡ್ಡುಗಳು ಹಾಗೂ ಮಕ್ಕಳಿಗಾಗಿ ಆರೋಗ್ಯಕರ ಸ್ನ್ಯಾಕ್ಸ್ ಸೇರಿದಂತೆ ಹಲವು ಉತ್ಪನ್ನಗಳನ್ನು ನೀಡುತ್ತದೆ.

ತಾಯಿಯ ಕಾಳಜಿಯಿಂದ ಕೋಟಿ ರೂಪಾಯಿ ಉದ್ಯಮ

ಉದ್ಯಮ ಆರಂಭಿಸುವ ದಾರಿ ಸುಲಭವಾಗಿರಲಿಲ್ಲ. ಮಾತೃತ್ವದ ನಂತರ ವೃತ್ತಿಜೀವನಕ್ಕೆ ಮರಳುವುದು, ವ್ಯವಹಾರ ಕಟ್ಟುವುದು ಮತ್ತು ಹಣಕಾಸಿನ ಸವಾಲುಗಳನ್ನು ಎದುರಿಸುವುದು ಜ್ಯೋತಿಗೆ ಸವಾಲಾಗಿತ್ತು. ಮಕ್ಕಳ ಪೌಷ್ಟಿಕಾಂಶದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅವರು UNICEFನ Infant and Young Child Feeding ಪ್ರಮಾಣಪತ್ರವನ್ನೂ ಪಡೆದರು. ಆಯುರ್ವೇದದ ಗ್ರಂಥಗಳನ್ನೂ ಅಧ್ಯಯನ ಮಾಡಿದರು.

70 ಸಾವಿರಕ್ಕೂ ಹೆಚ್ಚು ಗ್ರಾಹಕರು

ಜ್ಯೋತಿಯ ಪ್ರಯತ್ನ ಇಂದು ದೊಡ್ಡ ಯಶಸ್ಸಾಗಿ ಬೆಳೆದಿದೆ. ಅವರ ಕಂಪನಿ ದೇಶಾದ್ಯಂತ 70,000ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ₹1 ಕೋಟಿಗೂ ಅಧಿಕ ಆದಾಯ ಗಳಿಸಿದೆ. ಅವರು Shark Tank India ಸೀಸನ್ 5ರಲ್ಲೂ ಕಾಣಿಸಿಕೊಂಡಿದ್ದಾರೆ.

ಮಗುವಿನ ಆರೋಗ್ಯದ ಬಗ್ಗೆ ಒಬ್ಬ ತಾಯಿಗೆ ಮೂಡಿದ ಕಾಳಜಿ, ಸರಿಯಾದ ಯೋಜನೆ ಮತ್ತು ಪರಿಶ್ರಮದೊಂದಿಗೆ ಸಾವಿರಾರು ಕುಟುಂಬಗಳಿಗೆ ತಲುಪುವ ಉದ್ಯಮವಾಗಿ ಬೆಳೆದಿರುವುದು ನಿಜಕ್ಕೂ ಸ್ಫೂರ್ತಿದಾಯಕ ಯಶೋಗಾಥೆಯಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

"ನನಗಾದ ಅನ್ಯಾಯಕ್ಕೆ ನಾನೂ ಜಿರಳೆಯಾಗಬೇಕಿತ್ತೇ?" ಭಾರತ ಸರ್ಕಾರದ ವಿರುದ್ಧ ಕಟು ವ್ಯಂಗ್ಯವಾಡಿದ ವಿಜಯ್ ಮಲ್ಯ!
'ಎಟಿಎಂನಲ್ಲಿ ಹಣ ಬರಲಿಲ್ಲ, ಆದರೂ ಖಾತೆಯಿಂದ ಕಟ್': ₹10,000 ಕಳೆದುಕೊಂಡ ವ್ಯಕ್ತಿಗೆ ₹70,000 ಪರಿಹಾರ ನೀಡುವಂತೆ ಬ್ಯಾಂಕ್‌ಗೆ ಆದೇಶ!