ಹೊಸ ವರ್ಷದಲ್ಲಿ ಖರ್ಚು ತಗ್ಗಿಸಿ, ಉಳಿತಾಯ ಹೆಚ್ಚಿಸಲು ನಿಮ್ಮ ಫೈನಾನ್ಷಿಯಲ್ ಪ್ಲ್ಯಾನಿಂಗ್ ಹೀಗಿರಲಿ

By Suvarna News  |  First Published Dec 18, 2023, 5:15 PM IST

ಹೊಸ ವರ್ಷದ ಆಗಮನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ 2024ನೇ ಸಾಲಿಗೆ ಹಣಕಾಸು ಯೋಜನೆಗಳನ್ನು ಈಗಲೇ ರೂಪಿಸೋದು ಉತ್ತಮ. ಸೂಕ್ತ ಯೋಜನೆಯಿಂದ ಖರ್ಚನ್ನು ತಗ್ಗಿಸಿ, ಉಳಿತಾಯ ಹೆಚ್ಚಿಸಲು ಸಾಧ್ಯವಾಗುತ್ತದೆ. 


Business Desk:ಮತ್ತೊಂದು ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತಿದ್ದೇವೆ. ಹೊಸ ವರ್ಷಕ್ಕೆ ಪ್ರತಿಯೊಬ್ಬರೂ ಹೊಸ ಕನಸುಗಳು, ಗುರಿಗಳು, ಯೋಜನೆಗಳನ್ನು ಮಾಡೋದು ಸಾಮಾನ್ಯ. ಹೀಗಾಗಿ ಹೊಸ ವರ್ಷದ ಆರಂಭಕ್ಕೂ ಮುನ್ನವೇ ಆ ಸಾಲಿನಲ್ಲಿ ಕೈಗೊಳ್ಳಬೇಕಾದ ರೆಸಲ್ಯೂಷನ್ ಗಳ ಬಗ್ಗೆ ಯೋಚಿಸೋದು ಅಗತ್ಯ. ಅದರಲ್ಲೂ ಹಣಕಾಸಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಪ್ಲ್ಯಾನ್ ಮಾಡಲು ಇದು ಸೂಕ್ತ ಸಮಯ. 2024ನೇ ಸಾಲಿನಲ್ಲಿ ನಿಮ್ಮ ಹಣಕಾಸಿನ ಗುರಿಗಳು ಏನು? ಎಷ್ಟು ಉಳಿತಾಯ ಮಾಡ್ಬೇಕು? ಎಷ್ಟು ಹೂಡಿಕೆ ಮಾಡ್ಬೇಕು? ಯಾವುದು ಖರೀದಿಸಬೇಕು? ಹೀಗೆ ಎಲ್ಲ ವಿಚಾರಗಳ ಬಗ್ಗೆ ಲೆಕ್ಕಾಚಾರ ಹಾಕೋದು ಅಗತ್ಯ. ಹೀಗೆ ಮುಂದಿನ ವರ್ಷದ ಬಗ್ಗೆ ಈಗಲೇ ಸೂಕ್ತ ಯೋಜನೆ ರೂಪಿಸೋದ್ರಿಂದ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ. ಹಾಗಾದ್ರೆ 2024ರಲ್ಲಿ ಜಾಣತನದ ಹಣಕಾಸು ನಿರ್ಧಾರಗಳನ್ನು ಕೈಗೊಳ್ಳೋದು ಹೇಗೆ? 

ಹಂತ 1: ಆರೋಗ್ಯ ವಿಮೆ ಮಾಡಲು ಮರೆಯಬೇಡಿ
ಮೊಟ್ಟ ಮೊದಲು ನೀವು ಮಾಡಬೇಕಾದ ಕೆಲಸವೇನೆಂದರೆ  ಆರೋಗ್ಯ ವಿಮೆ ಮಾಡಿಸೋದು. ನೀವಿನ್ನು ಆರೋಗ್ಯ ವಿಮೆ ಮಾಡಿಸದಿದ್ರೆ ತಕ್ಷಣ ಅದನ್ನು ಮಾಡಿ. ಇದರಿಂದ ನೀವು ಹಾಗೂ ನಿಮ್ಮ ಕುಟುಂಬ ಸದಸ್ಯರಿಗೆ ಅನಾರೋಗ್ಯದ ಸಂದರ್ಭದಲ್ಲಿ ಆರ್ಥಿಕ ಸುರಕ್ಷತೆ ಸಿಗುತ್ತದೆ. ಆರೋಗ್ಯ ವಿಮೆ ಪಡೆಯುವಾಗ ನಿಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಕವರ್ ಆಗುವಂತೆ ನೋಡಿಕೊಳ್ಳಿ. ನಿಮ್ಮ ಆರೋಗ್ಯ ವಿಮೆ ಕವರೇಜ್ ನಿಮ್ಮ ವಾರ್ಷಿಕ ಅಗತ್ಯ ವೆಚ್ಚಗಳ ಮೂರು ಪಟ್ಟು ಇರುವಂತೆ ನೋಡಿಕೊಳ್ಳಿ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸೇವಾ ವೆಚ್ಚಗಳು ದುಬಾರಿಯಾಗಿವೆ. ಹೀಗಾಗಿ ವಿಮೆ ಮಾಡಿಸುವ ಮೂಲಕ ದೊಡ್ಡ ಮಟ್ಟದ ಖರ್ಚನ್ನು ನಿಭಾಯಿಸಲು ಸಾಧ್ಯವಾಗುತ್ತದೆ.

Tap to resize

Latest Videos

ಮತ್ತೆ ಸೆನ್ಸೆಕ್ಸ್‌ ಧಮಾಕಾ; 3 ದಿನದಲ್ಲಿ ಹೂಡಿಕೆದಾರರಿಗೆ 8.11 ಲಕ್ಷ ಕೋಟಿ ರೂ. ಲಾಭ!

ಹಂತ 2: ಇಎಂಐ ನಿರ್ವಹಣೆ -ಶೇ.40 ನಿಯಮ
ಸಾಲದ ಹೊರೆ ನಿಮ್ಮ ಮೇಲಿದ್ದರೆ ಪ್ರತಿ ಹಣಕಾಸಿನ ನಿರ್ಧಾರವನ್ನು ಅತ್ಯಂತ ಜಾಣ್ಮೆಯಿಂದ ತೆಗೆದುಕೊಳ್ಳುವುದು ಅಗತ್ಯ. ಸಾಲದ ಇಎಂಐ ನಿಮ್ಮ ಅದಾಯದ ಬಹುಪಾಲನ್ನು ನುಂಗಿ ಹಾಕುತ್ತದೆ. ಹೀಗಾಗಿ ಶೇ.40 ಇಎಂಐ ನಿಯಮವನ್ನು ನೀವು ಪಾಲಿಸೋದು ಅಗತ್ಯ. ಅಂದರೆ ನಿಮ್ಮ ಒಟ್ಟು ಮಾಸಿಕ ಇಎಂಐ ಮೊತ್ತ ನಿಮ್ಮ ಆದಾಯದ ಶೇ.40ರಷ್ಟನ್ನು ಮೀರದಂತೆ ಎಚ್ಚರ ವಹಿಸಿ. ಇದು ನಿಮ್ಮ ಸಾಲವನ್ನು ನಿರ್ವಹಣೆ ಮಾಡಲು ಹಾಗೂ ಆರ್ಥಿಕ ಒತ್ತಡದ ಮಟ್ಟ ತಗ್ಗಿಸಲು ನೆರವು ನೀಡುತ್ತದೆ. 

ಹಂತ 3: ತುರ್ತುನಿಧಿ
ಜೀವನದಲ್ಲಿ ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ತುರ್ತುನಿಧಿ ನಿರ್ವಹಣೆ ಮಾಡೋದು ಅಗತ್ಯ. ಇದು ತುರ್ತು ಸಂದರ್ಭಗಳಲ್ಲಿ ನಮಗೆ ನೆರವಾಗುತ್ತದೆ. ಈ ಹಣದಿಂದ ತುರ್ತು ಸಂದರ್ಭಗಳಲ್ಲಿ ಸಾಲ ಮಾಡುವ ಅನಿವಾರ್ಯತೆ ಕೂಡ ಎದುರಾಗೋದಿಲ್ಲ.

ಹಂತ 4: ಸಂಪತ್ತು ವೃದ್ಧಿಸಿಕೊಳ್ಳುವ ಬಗ್ಗೆ ಯೋಚಿಸಿ
ನೀವು ಗಳಿಸಿದ ಆದಾಯದಲ್ಲಿ ಒಂದಿಷ್ಟು ಭಾಗವನ್ನು ಹೂಡಿಕೆ ಮಾಡೋದು ಕೂಡ ಅಗತ್ಯ. ಇದರಿಂದ ನಿಮ್ಮ ಸಂಪತ್ತಿನಲ್ಲಿ ಹೆಚ್ಚಳವಾಗುತ್ತದೆ. ಹೀಗಾಗಿ ನಿಮ್ಮ ಆದಾಯದ ಶೇ.10ರಷ್ಟನ್ನು ಹೂಡಿಕೆ ಮಾಡಿ. ಆದ್ರೆ ಈ ಎಲ್ಲ ಹಣವನ್ನು ಒಂದೇ ಕಡೆ ಹೂಡಿಕೆ ಮಾಡ್ಬೇಡಿ. ಬದಲಿಗೆ ಈಕ್ವಿಟಿ, ಚಿನ್ನ ಹಾಗೂ ಸ್ಥಿರ ಠೇವಣಿ ಮುಂತಾದ ಕಡೆ ಹೂಡಿಕೆ ಮಾಡಿ. ಹೀಗೆ ಎಲ್ಲ ವಲಯಗಳಲ್ಲಿ ಹೂಡಿಕೆ ಮಾಡೋದ್ರಿಂದ ರಿಸ್ಕ್ ಕೂಡ ತಗ್ಗುತ್ತದೆ.

ಹಂತ 5:  ಹೂಡಿಕೆ ಪ್ರಾರಂಭಿಸಿ
ನೀವು ಇನ್ನೂ ಹೂಡಿಕೆ ಪ್ರಾರಂಭಿಸದೇ ಇದ್ದರೆ ಅದನ್ನು ಆರಂಭಿಸಲು ಇದು ಸೂಕ್ತ ಸಮಯ. ಬರೀ ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಿದರೆ ಮಾತ್ರ ಪ್ರಯೋಜನವಿಲ್ಲ. ಬದಲಿಗೆ ಸ್ವಲ್ಪ ರಿಸ್ಕ್ ತೆಗೆದುಕೊಂಡು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬೇಕು. 

ಸ್ವಂತ ಉದ್ಯಮ ಪ್ರಾರಂಭಿಸೋರಿಗೆ ಸರ್ಕಾರದ ಈ ಯೋಜನೆಯಡಿ ಸಿಗುತ್ತೆ 10 ಲಕ್ಷ ರೂ. ಸಾಲ

ಹಂತ 6: ಹೂಡಿಕೆ ಪ್ರಾರಂಭಿಸಲು ಮ್ಯೂಚುವಲ್ ಫಂಡ್ ಬೆಸ್ಟ್
ಹೂಡಿಕೆ ಮಾಡಬೇಕು ಎಂದು ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬದಲು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡೋದು ಉತ್ತಮ

ಹಂತ 7: ತೆರಿಗೆ ಪ್ಲ್ಯಾನಿಂಗ್
ಸಮರ್ಪಕವಾದ ತೆರಿಗೆ ಯೋಜನೆ ನಿಮ್ಮ ಆದಾಯದಲ್ಲಿ ದೊಡ್ಡ ಮೊತ್ತವನ್ನು ಉಳಿತಾಯ ಮಾಡಲು ನೆರವು ನೀಡುತ್ತದೆ. ತೆರಿಗೆ ತಜ್ಞರನ್ನು ಸಂಪರ್ಕಿಸುವ ಮೂಲಕ ನೀವು ಸೂಕ್ತವಾದ ತೆರಿಗೆ ಯೋಜನೆ ರೂಪಿಸಬಹುದು. 


 

click me!