50 ಪೈಸೆಗೆ ಟೀ ಮಾರಾಟ ಮಾಡುತ್ತಿದ್ದ ಮಹಿಳೆ ಈಗ ಕೋಟ್ಯಾಧಿಪತಿ; ಈಕೆ ದಿನದ ಆದಾಯವೇ 2ಲಕ್ಷ ರೂ.

By Suvarna News  |  First Published Dec 18, 2023, 12:56 PM IST

ಕಷ್ಟಗಳು ಎದುರಾದಾಗ ಎದೆಗುಂದದೆ ಮುನ್ನಡೆಯಬೇಕು ಎಂಬುದಕ್ಕೆ ಪೆಟ್ರಿಷಿಯಾ ನಾರಾಯಣ ಅತ್ಯುತ್ತಮ ನಿದರ್ಶನ. 50 ಪೈಸೆಗೆ ಚಹಾ ಮಾರಾಟ ಮಾಡಿ ಬದುಕು ಕಟ್ಟಿಕೊಂಡ ಆಕೆಯ ದಿನದ ಆದಾಯವೀಗ 2ಲಕ್ಷ ರೂ.
 


Business Desk: ಕಂಡ ಕನಸುಗಳನ್ನು ಬೆನ್ನಟ್ಟಿ ಹೋಗುವ ಛಲ, ಅದಕ್ಕೆ ತಕ್ಕ ಉತ್ಸಾಹ ನಿಮ್ಮಲ್ಲಿದ್ದರೆ ತಡವಾಗಿಯಾದರೂ ಯಶಸ್ಸು ನಿಮಗೆ ಸಿಕ್ಕೇಸಿಗುತ್ತದೆ. ಬದುಕಿನಲ್ಲಿ ಸವಾಲುಗಳು ಎದುರಾದಾಗ ಎದೆಗುಂದಬಾರದು. ಬದಲಿಗೆ ಧೈರ್ಯದಿಂದ ಮುನ್ನಡೆಯಬೇಕು. ಆಗ ಕಷ್ಟದಿಂದ ಹೊರಬರಲು ಸಾಧ್ಯವಾಗುವ ಜೊತೆಗೆ ಯಶಸ್ಸು ಕೂಡ ಸಿಗುತ್ತದೆ. ಇದಕ್ಕೆ ಯಶಸ್ವಿ ಮಹಿಳಾ ಉದ್ಯಮಿ ಪೆಟ್ರಿಷಿಯಾ ನಾರಾಯಣ ಅತ್ಯುತ್ತಮ ನಿದರ್ಶನ. ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿಯ ಬಲೆಗೆ ಬಿದ್ದು, ಹೆತ್ತವರಿಂದ ದೂರವಾದ ಈಕೆ ಕೈಯನ್ನು ಪತಿ ಕೂಡ ಹಿಡಿಯಲಿಲ್ಲ. 17ನೇ ವಯಸ್ಸಿನ ತನಕ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಈಕೆ ಬದುಕಿನಲ್ಲಿ ನಡೆದ ಈ ಒಂದು ಘಟನೆ ಆಕೆ ಜೀವನದ ದಿಕ್ಕನ್ನೇ ಬದಲಾಯಿಸಿತು. ಬದುಕು ಅಕ್ಷರಶಃ ಬೀದಿಗೆ ಬಿದ್ದಿತ್ತು. ತನ್ನವರು ಎನ್ನಲು ಯಾರೂ ಇರದ ಸಂದರ್ಭ ಅದು. ಆದರೆ, ಪೆಟ್ರಿಷಿಯಾ ನಾರಾಯಣ ದೃತಿಗೆಡಲಿಲ್ಲ. ಎರಡು ಮಕ್ಕಳೊಂದಿಗೆ ಒಂಟಿಯಾಗಿ ಬದುಕು ಕಟ್ಟಿಕೊಳ್ಳಲು ಮುಂದಾದರು ಚೆನ್ನೈ ಮರೀನಾ ಬೀಚ್ ನಲ್ಲಿ 50 ಪೈಸೆಗೆ ಚಹಾ ಮಾರಿದರು. ಬಜ್ಜಿ, ಬೋಂಡಾ ತಯಾರಿಸಿ ಪುಡಿಗಾಸು ಸಂಪಾದಿಸುತ್ತಿದ್ದ ಈಕೆ ನಿಧಾನವಾಗಿ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟರು. ಇಲ್ಲಿ ದೊಡ್ಡ ಯಶಸ್ಸು ಕಂಡರು. ಇಂದು ಅನೇಕ ರೆಸ್ಟೋರೆಂಟ್ ಗಳನ್ನು ಹೊಂದಿರುವ ಈಕೆ ದಿನದ ಆದಾಯ 2 ಲಕ್ಷ ರೂ.

ಪ್ರೀತಿಗಾಗಿ ಮನೆ ತೊರೆದರು
ಪೆಟ್ರಿಷಿಯಾ ನಾರಾಯಣ ತಮಿಳುನಾಡಿನ ನಗೆರ್ ಕೊಯಿಲ್ ಸಾಂಪ್ರದಾಯಿಕ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ್ದರು. ಅವರ ತಂದೆ ಹಾಗೂ ತಾಯಿ ಇಬ್ಬರೂ ಸರ್ಕಾರಿ ಉದ್ಯೋಗದಲ್ಲಿದ್ದ ಕಾರಣ ಅವರ ಜೀವನದಲ್ಲಿ ಯಾವುದೇ ಕಷ್ಟಗಳು ಎದುರಾಗಿರಲಿಲ್ಲ. ಆದರೆ, 17ನೇ ವಯಸ್ಸಿನಲ್ಲಿ ಅವರು ಮನೆ ಬಿಟ್ಟು ಬಂದು ತಾನು ಪ್ರೀತಿಸಿದ ಹಿಂದೂ ಬ್ರಾಹ್ಮಿಣ್ ಸಮುದಾಯದ ನಾರಾಯಣ್ ಎಂಬ ಯುವಕನನ್ನು ವಿವಾಹವಾಗುತ್ತಾರೆ. ಈ ಮದುವೆಗೆ ಅವರ ಕುಟುಂಬ ವರ್ಗದವರ ಸಮ್ಮತಿ ಇರಲಿಲ್ಲ. ಮದುವೆಯಾಗಿ ಕೆಲವು ತಿಂಗಳ ಬಳಿಕ ಆಕೆಯ ಪತಿ ಮಾದಕದ್ರವ್ಯಗಳ ವ್ಯಸನಿ ಎಂಬ ಸತ್ಯ ತಿಳಿಯಿತು. ಹೀಗಾಗಿ ದಾಂಪತ್ಯ ಬದುಕನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಅವರು ಬರುತ್ತಾರೆ. ಪೆಟ್ರಿಷಿಯಾ ನಾರಾಯಣ ಅವರ ತಂದೆ ಮಗಳನ್ನು ಮತ್ತೆ ಮನೆಗೆ ಸೇರಿಸಿಕೊಳ್ಳುತ್ತಾರೆ. ಆದರೆ, ಆಕೆಗೆ ಸ್ವತಂತ್ರವಾಗಿ ಬದುಕುವ ಇಚ್ಛೆಯಿತ್ತು. ಯಾರಿಗೂ ತಾನು ಹೊರೆಯಾಗಬಾರದು ಎಂಬ ನಿರ್ಧಾರ ಕೈಗೊಂಡರು. ಹೀಗಾಗಿ ಎರಡು ಮಕ್ಕಳು ಹಾಗೂ ತನ್ನ ಜೀವನ ನಿರ್ವಹಣೆಗೆ ಪುಟ್ಟ ಹೋಟೆಲ್ ವೊಂದನ್ನು ತೆರೆಯುವ ನಿರ್ಧಾರ ಕೈಗೊಳ್ಳುತ್ತಾರೆ.

Tap to resize

Latest Videos

ಬರೀ 20 ಸಾವಿರ ಬಂಡವಾಳದೊಂದಿಗೆ ಮನೆಯಿಂದಲೇ ಉದ್ಯಮ ಪ್ರಾರಂಭಿಸಿದ ಈಕೆ, ಇಂದು 6000 ಕೋಟಿ ರೂ. ಕಂಪನಿ ಒಡತಿ

50 ಪೈಸೆಗೆ ಚಹಾ ಮಾರಾಟ
ಪುಟ್ಟ ಮಕ್ಕಳೆರಡನ್ನು ಬಗಲಿಗೆ ಕಟ್ಟಿಕೊಂಡ ಪೆಟ್ರಿಷಿಯಾ ನಾರಾಯಣ ಚೆನ್ನೈ ಮರೀನಾ ಬೀಚ್ ನಲ್ಲಿ ಚಹಾ, ಬಜ್ಜಿ, ಬೋಂಡಾ ಮಾರಾಟ ಮಾಡಲು ಪ್ರಾರಂಭಿಸಿದರು. 50 ಪೈಸೆಗೆ ಇವರು ಚಹಾ ಮಾರಾಟ ಮಾಡುತ್ತಿದ್ದರು. ನಿಧಾನವಾಗಿ ಇವರ ವ್ಯಾಪಾರ ಚೇತರಿಸಿಕೊಳ್ಳಲು ಪ್ರಾರಂಭಿಸಿತು. ಸಾಕಷ್ಟು ಸಂಖ್ಯೆಯಲ್ಲಿ ಗ್ರಾಹಕರು ಬರಲು ಪ್ರಾರಂಭಿಸಿದರು. ಇಬ್ಬರು ವಿಶೇಷ ಚೇತನರನ್ನು ಉದ್ಯೋಗಕ್ಕೆ ನೇಮಿಸಿಕೊಂಡ ಪೆಟ್ರಿಷಿಯಾ ಹೋಟೆಲ್ ಅನ್ನು ಚೆನ್ನಾಗಿ ನಿಭಾಯಿಸುತ್ತಿದ್ದರು. ಇನ್ನು ಮನೆಯಲ್ಲೇ ಜಾಮ್, ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದರು ಕೂಡ.1982ರಿಂದ 2003ರ ತನಕ ಈಕೆ ಈ ಉದ್ಯದಿಂದ ಸಾಕಷ್ಟು ಹಣ ಗಳಿಸುತ್ತಾರೆ.

ಬದುಕು ಬದಲಿಸಿದ ಅವಕಾಶ
ಒಮ್ಮೆ ಕೊಳಚೆ ನಿರ್ಮೂಲನಾ ಮಂಡಳಿ ಮುಖ್ಯಸ್ಥರು ಈಕೆಯ ಹೋಟೆಲ್  ತಿನಿಸುಗಳ ರುಚಿ ನೋಡಿ ಮೆಚ್ಚುತ್ತಾರೆ. ಅಲ್ಲದೆ, ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಯಲ್ಲಿ ಕ್ಯಾಂಟೀನ್ ತೆರೆಯಲು ಅವಕಾಶ ನೀಡುತ್ತಾರೆ. ಇದು ಪೆಟ್ರಿಷಿಯಾ ಬದುಕಿಗೆ ಹೊಸ ತಿರುವು ನೀಡಿತು. ಆಕೆ ಚೆನ್ನೈ ಪ್ರತಿ ಕಚೇರಿಯಲ್ಲಿ ಹೊಸ ಶಾಖೆಗಳನ್ನು ತೆರೆಯುತ್ತಾರೆ. 1998ರಲ್ಲಿ ಪೆಟ್ರಿಷಿಯಾ 'ಸಂಗೀತಾ ರೆಸ್ಟೋರೆಂಟ್' ಉದ್ಯಮದಲ್ಲಿ ಪಾಲುದಾರರಾಗುತ್ತಾರೆ.

ಕೂಲಿ ಕೆಲಸಕ್ಕೆ ಹೋಗಿ ದಿನಕ್ಕೆ ಕೇವಲ 5 ರೂ. ಸಂಪಾದಿಸ್ತಿದ್ದ ಮಹಿಳೆ, ಈಗ ಕೋಟ್ಯಾಧಿಪತಿ!

ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ರಸ್ತೆ ಅಪಘಾತದಲ್ಲಿ ಪೆಟ್ರಿಷಿಯಾ ತಮ್ಮ ಮಗಳು ಹಾಗೂ ಅಳಿಯನನ್ನು ಕಳೆದುಕೊಳ್ಳುತ್ತಾರೆ. ಈ ನೋವಿನಿಂದ ಹೊರಬರಲು 2006ರಲ್ಲಿ ಪೆಟ್ರಿಷಿಯಾ ಹಾಗೂ ಅವರ ಮಗ ಜೊತೆಯಾಗಿ ಮಗಳ ಹೆಸರಿನಲ್ಲಿ 'ಸಂದೀಪ' ಎಂಬ ರೆಸ್ಟೋರೆಂಟ್ ತೆರೆಯುತ್ತಾರೆ. ಈ ರೆಸ್ಟೋರೆಂಟ್ ಚೈನ್ ಸಾಕಷ್ಟು ಜನಪ್ರಿಯತೆ ಗಳಿಸುತ್ತದೆ. ಮಗಳು ಮರಣ ಹೊಂದಿದ ಅಚರಪಕ್ಕಂ ಎಂಬ ನಗರದಲ್ಲಿ ಪೆಟ್ರಿಷಿಯಾ ಅಂಬ್ಯುಲೆನ್ಸ್ ಸೇವೆ ಕೂಡ ಪ್ರಾರಂಭಿಸಿದ್ದಾರೆ. 

click me!