
Petrol Diesel Price December 2nd 2022: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರಂತರವಾಗಿ ಇಳಿಕೆ ಆಗುತ್ತಿದೆ. ಹಣದುಬ್ಬರದ ಸಮಯದಲ್ಲಿ ಇದು ಒಳ್ಳೆಯ ಸುದ್ದಿ ಆಗಿದ್ದರೂ, ಇಂಧನ ಕಂಪನಿಗಳು ಈವರೆಗೂ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆ ಆಗುವ ಸಾಧ್ಯತೆಗಳೂ ಕಾಣುತ್ತಿವೆ. ಆದರೆ, ತತ 192ನೇ ದಿನ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎನ್ನುವುದು ಸಮಾಧಾನದ ವಿಚಾರ. ಕಳೆದ ಹಲವಾರು ದಿನಗಳಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಕಡಿಮೆ ಆಗುತ್ತಿದೆ. ಪ್ರಸ್ತುತ, WTI ಕಚ್ಚಾ ಬೆಲೆ ಪ್ರತಿ ಬ್ಯಾರೆಲ್‌ಗೆ 78 ಡಾಲರ್‌ಗೆ ಇಳಿದಿದೆ ಮತ್ತು ಬ್ರೆಂಟ್ ಕಚ್ಚಾ ಪ್ರತಿ ಬ್ಯಾರೆಲ್‌ಗೆ ಸುಮಾರು 85 ಡಾಲರ್ ಆಗಿದೆ. ಸರ್ಕಾರಿ ತೈಲ ಕಂಪನಿಗಳು ಶುಕ್ರವಾರದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬಿಡುಗಡೆ ಮಾಡಿದೆ. ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡದಿದ್ದು, ಸತತ 192ನೇ ದಿನವೂ ಜನ ಸಾಮಾನ್ಯರಿಗೆ ನೆಮ್ಮದಿ ನೀಡಿದೆ. ಅಂದರೆ ಇಂದೂ ಕೂಡ ಇಂಧ ಬೆಲೆಗಳು ಸ್ಥಿರವಾಗಿವೆ. ರಾಜ್ಯದಲ್ಲಿ ಪ್ರತಿದಿನ ಬೆಳಗ್ಗೆ 6 ಗಮಟೆಗೆ ಪೆಟ್ರೋಲ್ ಹಾಗೂ ಡೀಸೆಲ್ ದರದ ಬದಲಾವಣೆ ದಾಖಲಾಗುತ್ತದೆ. ಇಂದು ಆಯಾ ಜಿಲ್ಲೆಗಳಲ್ಲಿ ಆಗಿರುವ ಪೆಟ್ರೋಲ್ ಡೀಸೆಲ್ ಬೆಲೆ ಬದಲಾವಣೆಯ ವಿವರ ಇಲ್ಲಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
Q2 GDP Data: ಜಾಗತಿಕ ಸವಾಲುಗಳ ನಡುವೆ ರಿಲೀಫ್ ನೀಡಿದ ಭಾರತದ ಆರ್ಥಿಕತೆ, ಶೇ.6.3ಗೆ ಏರಿಕೆ!
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
ಹಣದುಬ್ಬರ ತಗ್ಗಿದ್ರೂ ಸಾಲಗಾರರಿಗೆ ತಪ್ಪಿಲ್ಲ ಟೆನ್ಷನ್; ರೆಪೋ ದರ 35 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ನಿರೀಕ್ಷೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.