Latest Videos

Floating Rate Savings Bonds: RBI ಈ ಬಾಂಡ್ ನಲ್ಲಿ ಹೂಡಿಕೆ ಮಾಡಿದ್ರೆ ಅಪಾಯ ಕಡಿಮೆ, ಬಡ್ಡಿ ಅಧಿಕ!

By Suvarna NewsFirst Published Feb 11, 2022, 10:55 PM IST
Highlights

*ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಮುಕ್ತಾಯ ಅವಧಿ ಏಳು ವರ್ಷ
*ಅನಿವಾಸಿ ಭಾರತೀಯರಿಗೆ ಹೂಡಿಕೆಗೆ ಅವಕಾಶವಿಲ್ಲ
* ಪ್ರತಿ ಆರು ತಿಂಗಳಿಗೊಮ್ಮೆ ಬಡ್ಡಿ ಪಾವತಿ
*ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಗಳಲ್ಲಿ ಕನಿಷ್ಠ ಹೂಡಿಕೆ ಮಿತಿ 1000ರೂ.

Business Desk:ಆದಾಯದ (Income)ಒಂದು ಭಾಗವನ್ನು ಉಳಿತಾಯ (Saving) ಮಾಡಿ ಹೂಡಿಕೆ (Invest) ಮಾಡಬೇಕೆಂಬುದು ವೇತನ (Income) ಪಡೆಯೋ ವರ್ಗದ ಸಾಮಾನ್ಯ ಬಯಕೆ. ಆದ್ರೆ ಹೂಡಿಕೆ ಎಲ್ಲಿ ಮಾಡ್ಬೇಕು? ಯಾವುದ್ರಲ್ಲಿ ಮಾಡಿದ್ರೆ ಅಪಾಯ ಕಡಿಮೆ? ಉತ್ತಮ ರಿಟರ್ನ್ಸ್ (Returns) ನೀಡೋ ಹೂಡಿಕೆ ಯಾವುದು? ಮುಂತಾದ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಂತೂ ಉತ್ತಮ ಬಡ್ಡಿದರದ (Interest rate) ಜೊತೆಗೆ ಅಪಾಯ ಕಡಿಮೆಯಿರೋ ಹೂಡಿಕೆಗಳತ್ತ ಜನರು ಆಕರ್ಷಿತರಾಗುತ್ತಿದ್ದಾರೆ. ನೀವು ಕೂಡ ಮಾರುಕಟ್ಟೆ ಅಪಾಯ ಕಡಿಮೆಯಿರೋ ಕಡೆ ಹೂಡಿಕೆ (Investment) ಮಾಡಲು ಬಯಸಿದ್ರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಗಳಲ್ಲಿ ( Floating Rate Saving Bonds) ಹೂಡಿಕೆ (Invest) ಮಾಡಬಹುದು. 

ಏನಿದು ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್?
ಭಾರತ ಸರ್ಕಾರವು 2020ರ ಜುಲೈ 1ರಂದು ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ( Floating Rate Saving Bond)ಪ್ರಾರಂಭಿಸಿತು. ಭಾರತೀಯ ನಾಗರಿಕ ಇದರಲ್ಲಿ ಹೂಡಿಕೆ ಮಾಡಬಹುದು. ಜಂಟಿ ಹೂಡಿಕೆಗೂ ಅವಕಾಶವಿದೆ. ಹಿಂದೂ ಅವಿಭಜಿತ ಕುಟುಂಬ ಈ ಬಾಂಡ್ ನಲ್ಲಿ ಹೂಡಿಕೆ ಮಾಡಬಹುದು. ಆದ್ರೆ ಅನಿವಾಸಿ ಭಾರತೀಯರಿಗೆ (NRIs) ಮಾತ್ರ ಇದರಲ್ಲಿ ಹೂಡಿಕೆ ಮಾಡಲು ಅವಕಾಶವಿಲ್ಲ. 

ಮನೆ ಖರೀದಿ ವೇಳೆ ಡೌನ್ ಪೇಮೆಂಟ್ ಸಮಸ್ಯೆ ಕಾಡ್ತಿದ್ಯಾ? ಹೀಗೆ ಪ್ಲಾನ್ ಮಾಡಿ

ಎಷ್ಟು ಅವಧಿ?
ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಮುಕ್ತಾಯ ಅವಧಿ ಏಳು ವರ್ಷಗಳಾಗಿವೆ. ಆ ಬಳಿಕವಷ್ಟೇ ಬಾಂಡ್ ಗಳಲ್ಲಿ ಹೂಡಿಕೆ ಮಾಡಿದ ಹಣವನ್ನು ಮರುಪಾವತಿ ಮಾಡಲಾಗುತ್ತದೆ. ಅಲ್ಲದೆ, ಮೆಚ್ಯುರಿಟಿ ಅವಧಿ ಮುಗಿದ ಬಳಿಕ ಈ ಹೂಡಿಕೆಗೆ ಯಾವುದೇ ಬಡ್ಡಿ ಸಂದಾಯವಾಗೋದಿಲ್ಲ. ಆದ್ರೆ ನಿರ್ದಿಷ್ಟ ವರ್ಗಗಳ ಹಿರಿಯ ನಾಗರಿಕರಿಗೆ ಅವಧಿಗೂ ಮುನ್ನ ವಿತ್ ಡ್ರಾ ಮಾಡಲು ಅವಕಾಶ ನೀಡಲಾಗಿದೆ. 60-70  ವಯಸ್ಸಿನವರಿಗೆ  6  ವರ್ಷ, 70-80 ವರ್ಷದವರಿಗೆ  5 ವರ್ಷ ಹಾಗೂ 80 ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ 4 ವರ್ಷಗಳ ಅವಧಿಯಾದ ಬಳಿಕ ವಿತ್ ಡ್ರಾ ಮಾಡಲು ಅವಕಾಶವಿದೆ. 

ಬಡ್ಡಿದರ ಎಷ್ಟು?
ಈ ಬಾಂಡ್ ಗಳ ಮೇಲಿನ ಫ್ಲೋಟಿಂಗ್ ರೇಟ್ ಬಡ್ಡಿ ಪ್ರತಿವರ್ಷ ಜನವರಿ ಹಾಗೂ ಜುಲೈಯಲ್ಲಿ ಬದಲಾಗುತ್ತದೆ. ಪ್ರಸ್ತುತ ಈ ಬಾಂಡ್ ಮೇಲಿನ ಬಡ್ಡಿದರ ಶೇ.7.15 ಇದೆ. ಪ್ರತಿ ಆರು ತಿಂಗಳಿಗೊಮ್ಮೆ ಬಡ್ಡಿ ಪಾವತಿಸಲಾಗುತ್ತದೆ. ಆರ್ ಬಿಐ ಫ್ಲೋಟಿಂಗ್ ರೇಟ್ ಬಾಂಡ್ ಗಳ ಬಡ್ಡಿದರ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರಕ್ಕೆ (NSC) ಲಿಂಕ್ ಆಗಿರುತ್ತದೆ. ಎನ್ ಎಸ್ ಸಿ ಬಡ್ಡಿದರದಲ್ಲಿ ಬದಲಾವಣೆಯಾದಾಗ ಬಾಂಡ್ ಗಳ ಬಡ್ಡಿದರಲ್ಲೂ ಬದಲಾವಣೆಯಾಗುತ್ತದೆ. ಎನ್ ಎಸ್ ಸಿ ಬಡ್ಡಿಗಿಂತ ಈ ಬಾಂಡ್ ಗಳ ಬಡ್ಡಿದರ ಯಾವಾಗಲೂ 35 ಬೇಸಿಕ್ ಪಾಯಿಂಟ್ ಗಳಷ್ಟು ಹೆಚ್ಚಿರುತ್ತದೆ.

ಎಷ್ಟು ಹೂಡಿಕೆ ಮಾಡಬಹುದು?
ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಗಳಲ್ಲಿ ಕನಿಷ್ಠ ಹೂಡಿಕೆ 1000ರೂ. ಆಗಿದ್ದು, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ನಗದು ರೂಪದಲ್ಲಿ ಈ ಬಾಂಡ್ ಖರೀದಿಗೆ  20 ಸಾವಿರ ರೂ. ಮಿತಿ ನಿಗದಿಪಡಿಸಲಾಗಿದೆ. ಡ್ರಾಫ್ಟ್, ಚೆಕ್ ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ರೂಪದಲ್ಲಿ ಬಾಂಡ್ ಖರೀದಿಸಲು ಅವಕಾಶವಿದೆ.  ಎಸ್ ಬಿಐ ಸೇರಿದಂತೆ ಸರ್ಕಾರಿ ಬ್ಯಾಂಕುಗಳು, ಐಡಿಬಿಐ (IDBI), ಐಸಿಐಸಿಐ (ICICI), ಎಚ್ ಡಿಎಫ್ ಸಿ(HDFC), ಎಕ್ಸಿಸ್ ( Axis) ಮುಂತಾದ ಖಾಸಗಿ ಬ್ಯಾಂಕುಗಳಲ್ಲಿ ಆರ್ ಬಿಐ  ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಖರೀದಿಸಬಹುದು.

LIC Lapsed Insurance Revival: ಮಾ.25 ವರೆಗೆ ಪಾಲಿಸಿ ವಿಶೇಷ ಪುನಶ್ಚೇತನ ಅಭಿಯಾನ!

ತೆರಿಗೆ ಇದೆಯಾ?
ಬಾಂಡ್ ಮೇಲಿನ ಬಡ್ಡಿಗೆ ಆದಾಯ ತೆರಿಗೆ ಕಾಯ್ದೆ 1961ರ ಅನ್ವಯ ತೆರಿಗೆ ವಿಧಿಸಲಾಗುತ್ತದೆ. ಆದಾಯ ತೆರಿಗೆ ನಿಯಮಗಳಿಗೆ ಅನುಗುಣವಾಗಿ ಬಡ್ಡಿ ಪಾವತಿ ಸಮಯದಲ್ಲಿ ಟಿಡಿಎಸ್ ಕಡಿತ ಮಾಡಲಾಗುತ್ತದೆ.

ಗಮನಿಸಬೇಕಾದ ಅಂಶಗಳು
*ಹೂಡಿಕೆದಾರ ನಾಮಿನಿ ಸೇರ್ಪಡೆ ಮಾಡಲು ಅವಕಾಶವಿದೆ. ಹೂಡಿಕೆದಾರ ಮರಣ ಹೊಂದಿದ ಸಂದರ್ಭದಲ್ಲಿ ಈ ಹಣ ನಾಮಿನಿಗೆ ವರ್ಗಾವಣೆಯಾಗುತ್ತದೆ.
*ಷೇರುಮಾರುಕಟ್ಟೆಯಲ್ಲಿ ಈ ಬಾಂಡ್ ಗಳನ್ನು ಟ್ರೇಡ್ ಮಾಡಲು ಅವಕಾಶವಿಲ್ಲ. 
* ಈ ಬಾಂಡ್ ಗಳನ್ನು ಆಧಾರವಾಗಿರಿಸಿ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಂದ (NBFC) ಸಾಲ ಪಡೆಯಲು ಅವಕಾಶವಿಲ್ಲ. 

click me!