Tata Sons : ಸತತ 2ನೇ ಅವಧಿಗೆ ಚೇರ್ಮನ್ ಆಗಿ ಎನ್.ಚಂದ್ರಶೇಖರನ್ ನೇಮಕ

Suvarna News   | Asianet News
Published : Feb 11, 2022, 04:07 PM IST
Tata Sons : ಸತತ 2ನೇ ಅವಧಿಗೆ ಚೇರ್ಮನ್ ಆಗಿ ಎನ್.ಚಂದ್ರಶೇಖರನ್ ನೇಮಕ

ಸಾರಾಂಶ

ಟಾಟಾ ಸನ್ಸ್ ಚೇರ್ಮನ್ ಹುದ್ದೆಗೆ ಎನ್ ಚಂದ್ರಶೇಖರನ್ ಮರು ನೇಮಕ ಮತ್ತೆ ಐದು ವರ್ಷಗಳ ಕಾಲ ಚಂದ್ರಶೇಖರನ್ ಅಧಿಕಾರ 2017ರ ಜನವರಿಯಲ್ಲಿ ಮೊದಲ ಬಾರಿಗೆ ಈ ಹುದ್ದೆಗೆ ಏರಿದ್ದರು

ನವದೆಹಲಿ (ಫೆ. 11): ಟಾಟಾ ಸನ್ಸ್ ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷ (Tata Sons Executive Chairman N Chandrasekaran)  ಹುದ್ದೆಗೆ 58 ವರ್ಷದ ಎನ್.ಚಂದ್ರಶೇಖರನ್ ಅವರನ್ನು ಮರು ನೇಮಕ ಮಾಡಲಾಗಿದೆ. ಶುಕ್ರವಾರ ನಡೆದ ಟಾಟಾ ಸನ್ಸ್ (Tata Sons)ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಮತ್ತೆ ಐದು ವರ್ಷಗಳ ಅವಧಿಗೆ ಚಂದ್ರಶೇಖರನ್ ಅವರನ್ನು ಕಾರ್ಯಕಾರಿ ಅಧ್ಯಕ್ಷರನ್ನಾಗಿ ಮಾಡುವ ನಿರ್ಧಾರಕ್ಕೆ ಅನುಮೋದನೆ ನೀಡಲಾಯಿತು ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ ಇರುವ ಚಂದ್ರಶೇಖರನ್ ಅವರ ಅವಧಿ ಫೆಬ್ರವರಿ 20ರಂದು ಕೊನೆಯಾಗಲಿದೆ.

ಈ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿದ್ದ ರತನ್ ಟಾಟಾ (Ratan Tata), ಚಂದ್ರಶೇಖರನ್ ಅವರ ನೇತೃತ್ವದಲ್ಲಿ ಟಾಟಾ ಗ್ರೂಪ್‌ನ ಪ್ರಗತಿ ಮತ್ತು ಕಾರ್ಯಕ್ಷಮತೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಮತ್ತು ಅವರ ಅವಧಿಯನ್ನು ಇನ್ನೂ ಐದು ವರ್ಷಗಳ ಅವಧಿಗೆ ವಿಸ್ತರಣೆ ಮಾಡಲು ಶಿಫಾರಸು ಮಾಡಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಂಡಳಿಯು ಚಂದ್ರಶೇಖರನ್ ಅವರ ಕಾರ್ಯವೈಖರಿಯನ್ನು ಶ್ಲಾಘನೆ ಮಾಡಿದ್ದಲ್ಲದೆ. ಐದು ವರ್ಷಗಳ ಕಾಲ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮರುನೇಮಕವನ್ನು ಸರ್ವಾನುಮತದಿಂದ ಅನುಮೋದಿಸಿತು. ಕೆಲವು ಖಾಲಿ ಇರುವ ಮಂಡಳಿಯ ಸ್ಥಾನಗಳಿಗೆ ಹೊಸ ನೇಮಕಾತಿಗಳ ಬಗ್ಗೆ ಮಂಡಳಿಯ ಸದಸ್ಯರು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

"ಕಳೆದ ಐದು ವರ್ಷಗಳಿಂದ ಟಾಟಾ ಗ್ರೂಪ್ (Tata Group) ಅನ್ನು ಮುನ್ನಡೆಸುವುದು ನನ್ನ ಅದೃಷ್ಟವಾಗಿತ್ತು ಮತ್ತು ಮುಂದಿನ ಹಂತದಲ್ಲಿ ಟಾಟಾ ಗ್ರೂಪ್ ಅನ್ನು ಇನ್ನೂ ಐದು ವರ್ಷಗಳ ಕಾಲ ಮುನ್ನಡೆಸುವ ಅವಕಾಶಕ್ಕಾಗಿ ನಾನು ಸಂತಸವಾಗಿದ್ದೇನೆ' ಎಂದು ಚಂದ್ರಶೇಖರನ್ ಹೇಳಿದ್ದಾರೆ. 2016ರ ಅಕ್ಟೋಬರ್ ನಲ್ಲಿ ಟಾಟಾ ಸನ್ಸ್ ಮಂಡಳಿಗೆ ಸೇರಿದ್ದ ಎನ್.ಚಂದ್ರಶೇಖರನ್ ಅವರು 2017ರ ಜನವರಿಯಲ್ಲಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಟಾಟಾ ಸಮೂಹವು ಮಾರ್ಚ್ 31, 2021 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಸುಮಾರು $103 ಬಿಲಿಯನ್ (ರೂ. 7.7 ಲಕ್ಷ ಕೋಟಿ) ಆದಾಯವನ್ನು ಹೊಂದಿದೆ.
 


ಇತ್ತೀಚೆಗೆ, ಟಾಟಾ ಗ್ರೂಪ್ 69 ವರ್ಷಗಳ ನಂತರ ಏರ್ ಇಂಡಿಯಾದ (Air India) ನಿಯಂತ್ರಣವನ್ನು ಮರಳಿ ಪಡೆದುಕೊಂಡಿದೆ. ಇದರಲ್ಲಿ ಎನ್.ಚಂದ್ರಶೇಖರನ್ ಅವರ ನಿರ್ಧಾರಗಳೇ ಮಹತ್ವದ ಸ್ಥಾನ ಪಡೆದುಕೊಂಡಿದ್ದವು. "ಟಾಟಾ ಗ್ರೂಪ್‌ನಲ್ಲಿ ಏರ್ ಇಂಡಿಯಾ ಮರಳಿ ಸೇರಿದ್ದಕ್ಕೆ ನಾವು ಸಂತೋಷಪಡುತ್ತೇವೆ ಮತ್ತು ಇದನ್ನು ವಿಶ್ವ ದರ್ಜೆಯ ವಿಮಾನಯಾನ ಸಂಸ್ಥೆಯನ್ನಾಗಿಸಲು ನಾವು ಬದ್ಧರಾಗಿದ್ದೇವೆ" ಎಂದು ಚಂದ್ರಶೇಖರನ್ ಹೇಳಿದ್ದರು.

Air India Takeover ಮರಳಿ ಅರಮನೆಗೆ ಬಂದ ಮಹಾರಾಜ, 69 ವರ್ಷಗಳ ಬಳಿಕ ಟಾಟಾ ಗ್ರೂಪ್‌ಗೆ ಏರ್ ಇಂಡಿಯಾ ಅಧಿಕೃತ ಹಸ್ತಾಂತರ!
ಅಧಿಕೃತ ಹಸ್ತಾಂತರಕ್ಕೂ ಮುನ್ನ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ದೇಶದ ಹೆಮ್ಮೆಯ ಕಂಪನಿ ಎನಿಸಿಕೊಂಡಿರುವ ಟಾಟಾ ಗ್ರೂಪ್ ನಲ್ಲಿ ಒಟ್ಟಾರೆಯಾಗಿ 8,00,000 ಜನರು ಉದ್ಯೋಗದಲ್ಲಿದ್ದಾರೆ.  ಪ್ರಸ್ತುತ,$314 ಶತಕೋಟಿಯ ಸಂಯೋಜಿತ ಮಾರುಕಟ್ಟೆ ಬಂಡವಾಳ ಹೊಂದಿರುವ ಟಾಟಾ ಗ್ರೂಪ್, ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ 29 ಉದ್ಯಮಗಳನ್ನು ಹೊಂದಿದೆ.

Air India Takeover : ಏರಿಂಡಿಯಾ ಹಳೇ ಸಾಲ ತೀರಿಸಲು ಎಸ್ ಬಿಐ ಸಹಾಯ ಕೇಳಿದ ಟಾಟಾ!
ನಟರಾಜನ್ ಚಂದ್ರಶೇಖರನ್ ಬಗ್ಗೆ ಮಾಹಿತಿ:
ತಮಿಳುನಾಡಿನ (Tamil Nawu) ಬಡ ಕುಟುಂಬದ ಹಿನ್ನಲೆಯಿಂದ ಬಂದ ನಟರಾಜನ್ ಚಂದ್ರಶೇಖರನ್, ಚಿಕ್ಕಂದಿನಲ್ಲಿ ಮೂರು ಕಿಲೋಮೀಟರ್ ದೂರದ ಶಾಲೆ ನಡೆದುಕೊಂಡೇ ಹೋಗುತ್ತಿದ್ದರು.  1987 ರಲ್ಲಿ ಟಿಸಿಎಸ್ ಗೆ (TCS) ಸೇರುವ ಮುನ್ನ ತ್ರಿಚಿಯಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಲ್ಲದೆ, ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರು.  ಟಿಸಿಎಸ್ ಗೆ  ಇಂಟರ್ನ್ ಸಾಫ್ಟ್‌ವೇರ್ ಪ್ರೋಗ್ರಾಮರ್ ಆಗಿ ಸೇರಿಕೊಂಡಿದ್ದ ಅವರು. 46 ನೇ ವಯಸ್ಸಿನಲ್ಲಿ ಟಾಟಾ ಗುಂಪಿನ ಕಿರಿಯ ಸಿಇಒಗಳಲ್ಲಿ ಒಬ್ಬರಾಗಿದ್ದರು.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!