ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಕೆಲಸ ಮಾಡಲು ಬಿಲಿಯನೇರ್‌ ಮುಕೇಶ್ ಅಂಬಾನಿ ಪಡೆಯೋ ಸ್ಯಾಲರಿ ಎಷ್ಟ್ ಗೊತ್ತಾ?

By Vinutha PerlaFirst Published Nov 6, 2023, 9:16 AM IST
Highlights

90 ಶತಕೋಟಿಗೂ ಹೆಚ್ಚು ಆಸ್ತಿಯನ್ನು ಹೊಂದಿರುವ ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಭಾರತದ ಅತಿದೊಡ್ಡ ಕಂಪನಿಗಳಲ್ಲಿ ಒಂದನ್ನು ಮುನ್ನಡೆಸುತ್ತಿದ್ದರೂ ಅಂಬಾನಿ ತಮ್ಮ ಕೆಲಸಕ್ಕೆ ಪ್ರತ್ಯೇಕ ಸಂಬಳ ತೆಗೆದುಕೊಳ್ಳುತ್ತಾರೆ. ಬಿಲಿಯನೇರ್ ವಾರ್ಷಿಕವಾಗಿ ಪಡೆದುಕೊಳ್ಳೋ ಸ್ಯಾಲರಿ ಎಷ್ಟು? ಇಲ್ಲಿದೆ ಮಾಹಿತಿ.

90 ಶತಕೋಟಿಗೂ ಹೆಚ್ಚು ಆಸ್ತಿಯನ್ನು ಹೊಂದಿರುವ ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 15.69 ಟ್ರಿಲಿಯನ್‌ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿದ್ದಾರೆ. ಮುಕೇಶ್ ಅಂಬಾನಿ ಭಾರತದ ಅತಿದೊಡ್ಡ ಕಂಪನಿಗಳಲ್ಲಿ ಒಂದನ್ನು ಮುನ್ನಡೆಸುತ್ತಿದ್ದರೂ, ಅವರು ತಮ್ಮ ಕೆಲಸಕ್ಕೆ ಪ್ರತ್ಯೇಕ ಸಂಬಳವನ್ನು ತೆಗೆದುಕೊಳ್ಳುತ್ತಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲು, ಬಿಲಿಯನೇರ್ ವಾರ್ಷಿಕವಾಗಿ 15 ಕೋಟಿ ರೂಪಾಯಿ ಸಂಬಳವನ್ನು ಪಡೆಯುತ್ತಿದ್ದರು. 

ರಿಲಯನ್ಸ್‌ನ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿ (Employee) ಇದಕ್ಕಿಂತ ನಂತರದ ಸ್ಥಾನದಲ್ಲಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿಗಳಾದ ನಿಖಿಲ್ ಮೆಸ್ವಾನಿ ಮತ್ತು ಅವರ ಸಹೋದರ (Brother) ತಲಾ 24 ಕೋಟಿ ರೂ. ಪಡೆಯುತ್ತಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ ಮೀಟಿಂಗ್‌ ಹಾಜರಾಗಲು ನೀತಾ ಅಂಬಾನಿ ಪಡೆಯೋ ಸ್ಯಾಲರಿ ಎಷ್ಟು ಗೊತ್ತಾ?

2022-23 ಹಣಕಾಸು ವರ್ಷದಲ್ಲಿ ಮುಕೇಶ್ ಅಂಬಾನಿ ಸಂಭಾವನೆ ಶೂನ್ಯ
ರಿಲಯನ್ಸ್ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ, 2022-23 ರ ಹಣಕಾಸು ವರ್ಷದಲ್ಲಿ ಮುಕೇಶ್ ಅಂಬಾನಿ ಅವರ ಸಂಭಾವನೆ ಶೂನ್ಯ ಎಂದು ಹೇಳಿದೆ. 2008-09ರ ಹಣಕಾಸು ವರ್ಷದಿಂದ (ಏಪ್ರಿಲ್ 2008 ರಿಂದ ಮಾರ್ಚ್ 2009) 2020ರ ವರೆಗೆ ಅವರ ವಾರ್ಷಿಕ ಸಂಭಾವನೆಯನ್ನು ರೂ 15 ಕೋಟಿಗೆ ಮುಕೇಶ್ ಅಂಬಾನಿ ಮಿತಿಗೊಳಿಸಿದರು. 2021ರಿಂದ ಸತತವಾಗಿ ಮೂರು ವರ್ಷಗಳ ವರೆಗೆ ಯಾವುದೇ ಸಂಬಳ ಮತ್ತು ಲಾಭ-ಆಧಾರಿತ ಕಮಿಷನ್‌ನ್ನು ಪಡೆದಿಲ್ಲ. COVID-19 ಸಾಂಕ್ರಾಮಿಕ ರೋಗದಿಂದಾಗಿ, ಕಂಪನಿ ಮತ್ತು ಅದರ ಎಲ್ಲಾ ವ್ಯವಹಾರಗಳು ತಮ್ಮ ಗಳಿಕೆಯ ಸಾಮರ್ಥ್ಯಕ್ಕೆ ಸಂಪೂರ್ಣವಾಗಿ ಹಿಂತಿರುಗುವವರೆಗೆ ಸಂಬಳ ತೆಗೆದುಕೊಳ್ಳದಿರಲು ನಿರ್ಧರಿಸಿದ್ದರು.

1977ರಿಂದ ಕಂಪನಿಯ ಮಂಡಳಿಯಲ್ಲಿದ್ದ ಮುಕೇಶ್‌ ಅಂಬಾನಿ, ಜುಲೈ 2002ರಲ್ಲಿ ಅವರ ತಂದೆ ಧೀರೂಬಾಯಿ ಅಂಬಾನಿ ಅವರ ಮರಣದ ನಂತರ ಕಂಪನಿಯ ಅಧ್ಯಕ್ಷ ಸ್ಥಾನಕ್ಕೇರಿದರು. ಕಂಪನಿಯ ಕಾನೂನಿನ ಪ್ರಕಾರ, 70 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕರಿಗೆ ಆ ವಯಸ್ಸಿನ ಮಿತಿಯನ್ನು ಮೀರಿ ನೇಮಕಗೊಳ್ಳಲು ಷೇರುದಾರರಿಂದ ವಿಶೇಷ ನಿರ್ಣಯದ ಅಗತ್ಯವಿದೆ.

ಮೂರೇ ತಿಂಗಳಲ್ಲಿ 7000 ಕೋಟಿ ನಷ್ಟಕ್ಕೊಳಗಾದ ಕಂಪೆನಿ, ಮುಕೇಶ್ ಅಂಬಾನಿ ಖರೀದಿಸಲು ಮುಂದಾಗಿದ್ಯಾಕೆ?

ವಿಶೇಷ ನಿರ್ಣಯದಲ್ಲಿ, ರಿಲಯನ್ಸ್ ಏಪ್ರಿಲ್ 2029ರ ವರೆಗೆ ಅಂಬಾನಿಯನ್ನು ಕಂಪನಿಯ ಮುಖ್ಯಸ್ಥರನ್ನಾಗಿ ನೇಮಿಸಲು ಷೇರುದಾರರ ಒಪ್ಪಿಗೆಯನ್ನು ಕೋರಲಾಯಿತು. ವಿಶೇಷ ನಿರ್ಣಯದಲ್ಲಿ, ರಿಲಯನ್ಸ್ ನಿರ್ದೇಶಕರ ಮಂಡಳಿಯು ಜುಲೈ 21, 2023ರಂದು, ಮುಕೇಶ್ ಡಿ. ಅಂಬಾನಿಯನ್ನು ಅವರ ಪ್ರಸ್ತುತ ಅವಧಿಯ ಮುಕ್ತಾಯದಿಂದ 5 ವರ್ಷಗಳ ಅವಧಿಗೆ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಮರು-ನೇಮಕ ಮಾಡಿದೆ.

ಜೂನ್ 2020ರಲ್ಲಿ ಮುಕೇಶ್‌ ಅಂಬಾನಿ, ಅವರು ಸ್ವಯಂಪ್ರೇರಣೆಯಿಂದ 2020-21 ನೇ ವರ್ಷಕ್ಕೆ ತಮ್ಮ ಸಂಬಳವನ್ನು ತ್ಯಜಿಸಲು ನಿರ್ಧರಿಸಿದರು. ನಂತರ 2021-22 ರಲ್ಲಿ ಮತ್ತು ಈಗ 2022-23 ರಲ್ಲಿ ತಮ್ಮ ಸಂಬಳವನ್ನು ತೆಗೆದುಕೊಳ್ಲದೇ ಇರುವುದನ್ನು ಮುಂದುವರಿಸಿದ್ದಾರೆ. ಈ ಮೂರು ವರ್ಷಗಳಲ್ಲಿ, ಅಂಬಾನಿ ಅವರು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ತಮ್ಮ ಪಾತ್ರಕ್ಕಾಗಿ ರಿಲಯನ್ಸ್‌ನಿಂದ ಯಾವುದೇ ಭತ್ಯೆಗಳು, ಪರ್ಕ್ವಿಸೈಟ್‌ಗಳು, ನಿವೃತ್ತಿ ಪ್ರಯೋಜನಗಳು, ಕಮಿಷನ್ ಅಥವಾ ಸ್ಟಾಕ್ ಆಯ್ಕೆಗಳನ್ನು ಪಡೆದಿಲ್ಲ.

click me!