ಕೋವಿಡ್ ಕಾಲಘಟ್ಟ ಅದೆಷ್ಟೋ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ಹಲವರು ಜಾಬ್ ಕಳೆದುಕೊಂಡರೆ ಇನ್ನು ಕೆಲವರು ಬಿಸಿನೆಸ್‌ನಲ್ಲಿ ನಷ್ಟ ಅನುಭವಿಸಿದರು. ಹಾಗೆಯೇ ಈ ಕಂಪೆನಿ, ಮೂರು ತಿಂಗಳಲ್ಲಿ 7,000 ಕೋಟಿ ರೂಪಾಯಿಗಳ ವ್ಯವಹಾರವನ್ನು ಕಳೆದುಕೊಂಡಿತ್ತು. ಅಂಬಾನಿ ಈ ಸಂಸ್ಥೆಯನ್ನು ಖರೀದಿಸಲು ಮುಂದಾಗಿತ್ತು.
ಫ್ಯೂಚರ್ ಗ್ರೂಪ್‌ನ ಸಂಸ್ಥಾಪಕ ಮತ್ತು ಸಿಇಒ, ಭಾರತೀಯ ಚಿಲ್ಲರೆ ವ್ಯಾಪಾರದ ರಾಜ ಎಂದೂ ಕರೆಯಲ್ಪಡುವ ಕಿಶೋರ್ ಬಿಯಾನಿ ಇತ್ತೀಚೆಗೆ ಯೂಟ್ಯೂಬರ್ ರಾಜ್ ಶಾಮಾನಿ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ 3 ತಿಂಗಳಲ್ಲಿ 7000 ಕೋಟಿ ರೂಪಾಯಿಗಳ ವ್ಯವಹಾರವನ್ನು ಕಳೆದುಕೊಂಡಿದ್ದಾಗಿ ತಿಳಿಸಿದ್ದರು. ಫ್ಯೂಚರ್ ಗ್ರೂಪ್‌ನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಜೆಫ್ ಬೆಜೋಸ್ ಅವರ ಅಮೆಜಾನ್ ನಡುವಿನ ಜಗಳದ ಬಗ್ಗೆಯೂ ಕಿಶೋರ್ ಬಿಯಾನಿ ಮಾತನಾಡಿದ್ದರು.
ಫ್ಯೂಚರ್ ಗ್ರೂಪ್ ತನ್ನ ಸ್ವತ್ತುಗಳನ್ನು 2020ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ ಮಾರಾಟ (Sale) ಮಾಡಲು ನಿರ್ಧರಿಸಿತ್ತು. ಆದರೆ ಅಮೆಜಾನ್ ಇದಕ್ಕೆ ವಿರುದ್ಧವಾಗಿ ಪ್ರಕರಣವನ್ನು ದಾಖಲಿಸಿತ್ತು. ಇದು ಫ್ಯೂಚರ್ ಗ್ರೂಪ್‌ನ 3.4 ಶತಕೋಟಿ ಡಾಲರ್ ಮೌಲ್ಯದ ಫ್ಯೂಚರ್ ಗ್ರೂಪ್‌ನ ಆಸ್ತಿಯನ್ನು ಮುಕೇಶ್ ಅಂಬಾನಿಗೆ ಮಾರಾಟ ಮಾಡುವ ಕಿಶೋರ್ ಬಯಾನಿಯ ಯೋಜನೆಯನ್ನು (Plan) ಸ್ಥಗಿತಗೊಳಿಸಿತು.
ಬಿಲಿಯನೇರ್ ಆದ್ರೂ ಭಾರತದ ಅತೀ ದೊಡ್ಡ ದಾನಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಅಲ್ಲ..ಮತ್ಯಾರು?
ನ್ಯಾಯಾಲಯದಲ್ಲಿ ಅಮೆಜಾನ್ ಮತ್ತು ರಿಲಯನ್ಸ್ ಜಟಾಪಟಿ
ಅಮೆಜಾನ್ ಪ್ಯೂಚರ್ ಗ್ರೂಪ್‌ನ ಮಾರಾಟವನ್ನು ಯಶಸ್ವಿಯಾಗಿ ನಿಲ್ಲಿಸಲು ಸಿಂಗಾಪುರ್ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ (SIAC) ನಲ್ಲಿ ಪ್ರಕರಣವನ್ನು ದಾಖಲಿಸಿತು. ಅಮೆಜಾನ್ ಮತ್ತು ಫ್ಯೂಚರ್ ಗ್ರೂಪ್ ಸಹ ಸುಪ್ರೀಂ ಕೋರ್ಟ್ ಸೇರಿದಂತೆ ಭಾರತೀಯ ನ್ಯಾಯಾಲಯಗಳಲ್ಲಿ ಪರಸ್ಪರರ ವಿರುದ್ಧ ಮೊಕದ್ದಮೆಗಳನ್ನು ಹೂಡಿದವು.
ಈ ಬಗ್ಗೆ ಮಾತನಾಡಿದ ಕಿಶೋರ್ ಬಿಯಾನಿ, 'ನಾವು ಮೂರು ತಿಂಗಳಲ್ಲಿ 7,000 ಕೋಟಿ ರೂಪಾಯಿಗಳ ವ್ಯವಹಾರವನ್ನು ಕಳೆದುಕೊಂಡಿದ್ದೇವೆ. ಅದರಿಂದ ಚೇತರಿಸಿಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಹೀಗಾಗಿ ನಾವು ಇದನ್ನು ಮಾರಲು ನಿರ್ಧರಿಸಿದೆವು' ಎಂದು ಕಿಶೋರ್ ಬಿಯಾನಿ ಹೇಳಿದರು.
ಮುಕೇಶ್ ಅಂಬಾನಿ ಮೊದಲ ಬಾಸ್ ಮಗ, ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಹೈಯೆಸ್ಟ್ ಸ್ಯಾಲರಿ ಪಡೆಯೋ ಉದ್ಯೋಗಿ!
ರಿಲಯನ್ಸ್ ಮತ್ತು ಅಮೆಜಾನ್ ನಡುವಿನ ಜಗಳದ ಬಗ್ಗೆ ಮಾತನಾಡಿದ ಬಿಯಾನಿ, 'ಇದು ಕಂಪನಿಗೆ ಸಮಸ್ಯೆಯನ್ನು ಹೆಚ್ಚಿಸಿದೆ ಎಂದು ಹೇಳಿದರು. 'ಎಲ್ಲಾ ಹೊಣೆಗಾರಿಕೆಗಳನ್ನು ಖರೀದಿಸಲು ಸಿದ್ಧರಿರುವ ಉದ್ಯಮಿಗಳನ್ನು ನಾವು ಕಂಡುಕೊಂಡಿದ್ದೆವು. ಆದರೆ ನಂತರ ಆ ಒಪ್ಪಂದವು ಕಾನೂನು ಸಮಸ್ಯೆಗಳಿಗೆ ಸಿಲುಕಿತು. ನಾವು ಬಯಸಿದ ರೀತಿಯಲ್ಲಿ ಕೆಲಸಗಳು ನಡೆಯಲಿಲ್ಲ. ನಾವು ವಿಶ್ವದ ಇಬ್ಬರು ದಿಗ್ಗಜ ಕಂಪೆನಿಗಳ ಜಗಳದಲ್ಲಿ ಸಿಲುಕಿಹಾಕಿಕೊಂಡೆವು' ಎಂದಿದ್ದಾರೆ.
ಕಿಶೋರ್ ಬಿಯಾನಿ ಯಾರು?
ಕಿಶೋರ್ ಬಿಯಾನಿ, ಫ್ಯೂಚರ್ ಗ್ರೂಪ್‌ನ ಸಂಸ್ಥಾಪಕ ಮತ್ತು ಸಿಇಒ. 2001ರಲ್ಲಿ ಬಿಗ್ ಬಜಾರ್‌ನ್ನು ಸ್ಥಾಪಿಸಿದರು. ಕಿಶೋರ್ ಬಿಯಾನಿ ಕಂಪನಿಯ ಮಂಡಳಿಯ ಕಾರ್ಯನಿರ್ವಾಹಕ, ಉಪಾಧ್ಯಕ್ಷ ಸ್ಥಾನವನ್ನು ಹೊಂದಿದ್ದಾರೆ. ಫ್ಯೂಚರ್ ಗ್ರೂಪ್‌ನ ಸಿಇಒ ಮತ್ತು ಫ್ಯೂಚರ್ ರೀಟೈಲ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾರೆ. ಈ ಸಮೂಹವು ಈಸಿಡೇ, ಫುಡ್ ಹಾಲ್ ಮತ್ತು ಹೈಪರ್‌ಮಾರ್ಕೆಟ್ ಬ್ರಾಂಡ್ ಬಿಗ್ ಬಜಾರ್‌ನ್ನು ಒಳಗೊಂಡಿದೆ.