Karnataka Budget 2022-23: ವಿಜಯಪುರ ಜಿಲ್ಲೆಗೆ ಸಿಹಿ-ಕಹಿ ಉಣಬಡಿಸಿದ ಬೊಮ್ಮಾಯಿ ಬಜೆಟ್‌

By Kannadaprabha News  |  First Published Mar 5, 2022, 7:04 AM IST

*   ಜಿಲ್ಲೆಗೆ ಕೈ ತಪ್ಪಿದ ಸರ್ಕಾರಿ ವೈದ್ಯಕೀಯ ಕಾಲೇಜ್‌
*   ವಿಜಯಪುರ ಜಿಲ್ಲೆಗೆ ಸಿಕ್ತು ಮೆಗಾ ಟೆಕ್ಸಟೈಲ್‌ ಪಾರ್ಕ್
*   ಈ ಭಾಗದ ರೈತರಲ್ಲಿ ಅಸಮಾಧಾನದ 


ರುದ್ರಪ್ಪ ಆಸಂಗಿ

ವಿಜಯಪುರ(ಮಾ.05): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಶುಕ್ರವಾರ ವಿಧಾನಸಭೆಯಲ್ಲಿ ಚೊಚ್ಚಲ ಬಜೆಟ್‌ ಮಂಡಿಸಿದ್ದು, ಜಿಲ್ಲೆಯ ಜನರಿಗೆ ಅದು ಕಹಿ-ಸಿಹಿಗಳ ಮಿಶ್ರಣವಾಗಿದೆ.

Tap to resize

Latest Videos

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕರ್ನಾಟಕ(North Karnataka) ಭಾಗದವರಾಗಿದ್ದಾರೆ. ಬರಪೀಡಿತ, ಹಿಂದುಳಿದ ಹಾಗೂ ಮಹಾರಾಷ್ಟ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ವಿಜಯಪುರ(Vijayapura) ಜಿಲ್ಲೆಯ ಜನರು ಬಹುನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಕೆಲವು ಬೇಡಿಕೆಗಳು ಮಾತ್ರ ಬಜೆಟ್‌ನಲ್ಲಿ(Budget) ಈಡೇರಿವೆ. ನಿರೀಕ್ಷೆ ಆಗಸದಷ್ಟು, ಕೊಟ್ಟಿದ್ದು ಬೊಗಸೆಯಷ್ಟು ಎನ್ನುವಂತಾಗಿದೆ ಜಿಲ್ಲೆಯ ಮಟ್ಟಿಗೆ. ಇನ್ನು ಬೃಹತ್‌ ಯೋಜನೆಗಳನ್ನು ವಿಜಯಪುರ ಜಿಲ್ಲೆಗೆ ಮಂಜೂರು ಮಾಡಿಲ್ಲ. ಹಾಗಾಗಿ ಜಿಲ್ಲೆಯ ಜನರಿಗೆ ಈ ಬಜೆಟ್‌ ಬರೀ ಸಮಾಧಾನಕರ ಬಹುಮಾನ ಎನ್ನುವ ಮಾತು ಜನರಿಂದ ಬರುತ್ತಿದೆ.

Karnataka Budget: ಹಂಪಿಯ ಪ್ರವಾಸೋದ್ಯಮ ಕಡೆಗಣಿಸಿದ ಸಿಎಂ ಬೊಮ್ಮಾಯಿ

ಹುಸಿಯಾದ ನಿರೀಕ್ಷೆಗಳು:

ವಿಜಯಪುರ ನಗರದಲ್ಲಿ ಬಹಳ ವರ್ಷಗಳಿಂದ ವೈದ್ಯಕೀಯಕಾಲೇಜ್‌(Medical College) ಸ್ಥಾಪನೆ ಕನಸು ಕಂಡಿದ್ದರು. ಈ ಬಜೆಟ್‌ನಲ್ಲಿಯೂ ಅದು ಈಡೇರಲಿಲ್ಲ. ಆದರೆ ಜಿಲ್ಲೆಯ ಜನರ ಈ ನಿರೀಕ್ಷೆ ಹುಸಿಯಾಗಿದೆ. ಈ ಬಾರಿಯೂ ಯಾವುದೇ ಪ್ರಸ್ತಾಪ ಮಾಡದೆ ಜಿಲ್ಲೆಯ ಜನರ ಆಸೆಗೆ ತಣ್ಣೀರು ಎರಚಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಅಪಾರ ಪ್ರಮಾಣದ ಹಣ ಒದಗಿಸಿ ನಿರ್ದಿಷ್ಟಅವಧಿಯಲ್ಲಿ ಯುಕೆಪಿ-3ನೇ ಹಂತದ ಕಾಮಗಾರಿ ಪೂರೈಸಬೇಕು ಎಂಬುವುದು ಜಿಲ್ಲೆಯ ಜನರ ನಿರೀಕ್ಷೆಯಾಗಿತ್ತು. ಆದರೆ ಈ ನಿರೀಕ್ಷೆಗೂ ಎಳ್ಳು ನೀರು ಬಿಟ್ಟಂತಾಗಿದೆ. ಕೇವಲ .5,000 ಕೋಟಿ ಹಣವನ್ನು ಪ್ರಸಕ್ತ ಬಜೆಟ್‌ನಲ್ಲಿ ಸರ್ಕಾರ ಘೋಷಣೆ ಮಾಡಿದೆ. ಆದರೆ ಅದು ತೀರಾ ಅತ್ಯಲ್ಪ ಹಣವಾಗಿದೆ. ಇದು ಈ ಬಾರಿಯೂ 3ನೇ ಹಂತದ ಕಾಮಗಾರಿಗಳು ನನೆಗುದಿಗೆ ಬಿದ್ದಂತಾಗಿದೆ.

ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಈ ನಿರೀಕ್ಷೆ ಕೂಡ ನನಸಾಗಲಿಲ್ಲ. ಇಂಡಿ ತಾಲೂಕಿನ ಮಹತ್ವಾಕಾಂಕ್ಷಿ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯೂ ಬಜೆಟ್‌ನಲ್ಲಿ ಮಂಜೂರಾಗಿಲ್ಲ. ಹೀಗಾಗಿ ಈ ಭಾಗದ ರೈತರು ಈ ಯೋಜನೆ ಸಲುವಾಗಿ ಮಾಡಿದ ಹೋರಾಟ ಈಗ ನಿರರ್ಥಕವಾಗಿದೆ. ಈ ಭಾಗದ ರೈತರಲ್ಲಿ ಅಸಮಾಧಾನದ ಹೊಗೆಯಾಡಿದೆ.

ವಿಶ್ವ ವಿಖ್ಯಾತ ಗೋಳಗುಮ್ಮಟ ಸ್ಮಾರಕವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಪೂರಕ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರ ಬಜೆಟ್‌ನಲ್ಲಿ ಹಣ ಕಾಯ್ದಿಡುತ್ತದೆ ಎಂದು ಜನರು ಬಹಳಷ್ಟುನಂಬಿದ್ದರು. ಈ ನಂಬಿಕೆಯೂ ಈಗ ಸುಳ್ಳಾಗಿದೆ. ರಾಜ್ಯದ(Karnataka) ಏಕೈಕ ಅಕ್ಕಮಹಾದೇವಿ ಮಹಿಳಾ ವಿವಿ ಅಭಿವೃದ್ಧಿಗೆ ವಿಶೇಷ ಅನುದಾನ ಕೂಡಾ ನೀಡಿಲ್ಲ. ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ತಗ್ಗಿಸಲು ಬೃಹತ್‌ ಕೈಗಾರಿಕೆಗಳನ್ನು ಕೈಗೊಳ್ಳಲು ಸರ್ಕಾರ ಬಜೆಟ್‌ನಲ್ಲಿ ಹಣ ಒದಗಿಸುತ್ತದೆ ಎಂಬ ನಂಬಿಕೆಗೆ ದ್ರೋಹ ಬಗೆದಂತಾಗಿದೆ. ಬಸವಣ್ಣನವರ ಜನ್ಮ ಸ್ಥಳ ಇಂಗಳೇಶ್ವರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಘೋಷಿಸಿಲ್ಲ. ಇದು ಬಸವಾಭಿಮಾನಿಗಳಿಗೆ ಮತ್ತಷ್ಟುನಿರಾಸೆ ಮೂಡಿಸಿದೆ.

ಇಟ್ಟಂಗಿಹಾಳ ಬಳಿ ಪುಡ್‌ ಪಾರ್ಕ್ ಸ್ಥಾಪನೆ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಿಲ್ಲ. ಹಾಗಾಗಿ ಈ ಯೋಜನೆಗೂ ಎಳ್ಳು ನೀರು ಬಿಟ್ಟಂತಾಗಿದೆ.ವಿಜಯಪುರ ಜಿಲ್ಲೆಯಲ್ಲಿ ಹೊಸದಾಗಿ ಯಾವುದೇ ರೈಲು ಮಾರ್ಗಗಳ ಘೋಷಣೆಯೂ ಆಗಿಲ್ಲ. ವಿಮಾನ ನಿಲ್ದಾಣಕ್ಕೂ ಹೆಚ್ಚಿನ ಹಣ ಒದಗಿಸುವ ಬಗ್ಗೆಯೂ ಚಕಾರ ಎತ್ರಿಲ್ಲ. ಐತಿಹಾಸಿಕ ವಿಜಯಪುರ ನಗರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಕೂಡಾ ಘೋಷಣೆಯಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್‌ ಜಿಲ್ಲೆಯ ಜನರಿಗೆ ಸಂತಸಕ್ಕಿಂತ ನಿರಾಸೆಯನ್ನೇ ಹೆಚ್ಚಿಸಿದೆ.

ಜಿಲ್ಲೆಗೆ ಸಿಕ್ಕಿದ್ದೇನು?

-ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿ ಮೂಲಕ ತೊರವಿ ಗ್ರಾಮದಲ್ಲಿ .35 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಶೈತ್ಯ ಸಂಗ್ರಹ ಸೌಲಭ್ಯವುಳ್ಳ ಪಿಪಿಪಿ ಆಧಾರ ಮೇಲೆ ನಿರ್ಮಿಸಿ ದ್ರಾಕ್ಷಾ ಬೆಳೆ ಸಂಗ್ರಹಣೆ, ಸಂಸ್ಕರಣೆ ಮತ್ತು ಸಾಗಣೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಶೀಥಲಿಕೃತ ಸರಕು ಸಾಗಣೆ ವಾಹನಗಳನ್ನು ಒದಗಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ.

Karnataka Budget 2022 ಬೊಮ್ಮಾಯಿ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳಿಗೆ ಸಿಕ್ಕಿದ್ದೇನು?

-ಕೃಷ್ಣಾ ಮೇಲ್ದಂಡೆ ಯೋಜನೆ-3ನೇ ಹಂತದ ಅನುಷ್ಠಾನಕ್ಕೆ ಪ್ರಸಕ್ತ ಬಜೆಟ್‌ನಲ್ಲಿ .5,000 ಕೋಟಿ ಒದಗಿಸಿದ್ದು, ಈ ಹಣದಲ್ಲಿ ಭೂಸ್ವಾಧೀನ, ಪುನರ್ವಸತಿ ಹಾಗೂ ಪುನರ್‌ ನಿರ್ಮಾಣ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಯೋಜನೆಗಳ ಅನುಷ್ಠಾನ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

-ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪೀರಾಪೂರ-ಬೂದಿಹಾಳ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಕೇಂದ್ರದ ಅನುದಾನದ ನೆರವಿನಿಂದ ಕೈಗೊಳ್ಳಲು ನಿಧÜರ್‍ರಿಸಲಾಗಿದೆ.

- ದೇವರ ಹಿಪ್ಪರಗಿಯಲ್ಲಿ ಮಡಿವಾಳ ಮಾಚಿದೇವರ ಎಲ್ಲ ಕುರುಹುಗಳನ್ನು ಅಭಿವೃದ್ಧಿಗೊಳಿಸಿ ಸಾರ್ವಜನಿಕ ಯಾತ್ರಾ ಸ್ಥಳವನ್ನಾಗಿ ಮಾಡುವುದಾಗಿ ಘೋಷಿಸಲಾಗಿದೆ.

- ವಿಜಯಪುರದಲ್ಲಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಮೆಗಾ ಟೆಕ್ಸಟೈಲ್‌ ಪಾರ್ಕ್ ಕೇಂದ್ರ ಸರ್ಕಾರದ ನೆರವಿನಿಂದ ಸ್ಥಾಪನೆಗೆ ಒತ್ತು.

- ಪ್ರವಾಸೋದ್ಯಮ ಉತ್ತೇಜಿಸಲು ಹಂಪಿ-ಬಾದಾಮಿ-ಐಹಳೆ-ಪಟ್ಟದಕಲ್ಲ- ವಿಜಯಪುರ ಪ್ರವಾಸಿ ವೃತ್ತವನ್ನಾಗಿ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಮುಂದಾಗಿರುವುದು.

- ವಿಜಯಪುರದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥವನ್ನು ರಸ್ತೆ ಸುರಕ್ಷತಾ ನಿಧಿ ಅಡಿ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಒತ್ತು
 

click me!