Karnataka Budget: ಹಂಪಿಯ ಪ್ರವಾಸೋದ್ಯಮ ಕಡೆಗಣಿಸಿದ ಸಿಎಂ ಬೊಮ್ಮಾಯಿ

By Kannadaprabha News  |  First Published Mar 5, 2022, 5:52 AM IST

*  ಬಜೆಟ್‌ನಲ್ಲಿ ಗೈಡ್‌ಗಳಿಗೆ 2 ಸಾವಿರ ರು. ಮಾಸಾಶನ/ ಹಂಪಿಯ ಪ್ರಸ್ತಾಪವೇ ಇಲ್ಲ
*  ಹಂಪಿ ಕನ್ನಡ ವಿವಿ ಬಲವರ್ಧನೆ
*  ಆನಂದ ಸಿಂಗ್‌ ಮನವಿಗೆ ಪ್ರಸಕ್ತ ಬಜೆಟ್‌ನಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ


ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಮಾ.05): ನೂತನ ವಿಜಯನಗರ(Vijayanagara) ಜಿಲ್ಲೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ಅನುದಾನ ಮೀಸಲಿಡದೇ ಕಡೆಗಣಿಸಲಾಗಿದೆ. ಹಂಪಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಅಲ್ಲದೇ ವಿಜಯನಗರ ಜಿಲ್ಲೆಗಾಗಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ರಾಜಕೀಯ ಭವಿಷ್ಯವನ್ನು ಪಣಕ್ಕೊಡ್ಡಿದ್ದ ಆನಂದ ಸಿಂಗ್‌ ಅವರ ಮನವಿಗೆ ಪ್ರಸಕ್ತ ಬಜೆಟ್‌ನಲ್ಲಿ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Tap to resize

Latest Videos

undefined

ವಿಜಯನಗರ ಜಿಲ್ಲೆಯನ್ನು 2021ರ ಫೆಬ್ರವರಿ 8ರಂದು ಆಗಿನ ಸಿಎಂ ಬಿ.ಎಸ್‌. ಯಡಿಯೂರಪ್ಪ(BS Yediyurappa) ಘೋಷಿಸಿದ್ದರು. ಬಳಿಕ ಬಜೆಟ್‌ನಲ್ಲೂ ವಿಜಯನಗರ ಜಿಲ್ಲೆಯ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದೂ ಘೋಷಿಸಿದ್ದರು. ಆದರೆ, ಜಿಲ್ಲೆ ಅಸ್ತಿತ್ವಕ್ಕೆ ಬಂದ ಬಳಿಕ 2021ರ ಅಕ್ಟೋಬರ್‌ 2ರಂದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ವಿಜಯನಗರ ಜಿಲ್ಲೆಗೆ ಅಧಿಕೃತ ಚಾಲನೆ ನೀಡಿ, ಜಿಲ್ಲೆ ಅಭಿವೃದ್ಧಿಗೆ ಸರ್ಕಾರ ಒತ್ತಾಸೆಯಾಗಿ ನಿಲ್ಲಲಿದೆ ಎಂದು ಆಶ್ವಾಸನೆ ನೀಡಿದ್ದರು. ಅಲ್ಲದೇ, ಫೆ. 4ರಂದು ವಿಜಯನಗರ ಜಿಲ್ಲೆಯ ಕುಂದುಕೊರತೆ ಬಗ್ಗೆ ಸಭೆ ಕೂಡ ಮಾಡಿದ್ದರು. ಆದರೂ ಜಿಲ್ಲೆ ಕಟ್ಟಲು ಈ ಬಜೆಟ್‌ನಲ್ಲಿ(Budget) ಕಡೆಗಣಿಲಾಗಿದೆ.

Karnataka Budget 2022-23: ತವರಿನ ಋುಣ ತೀರಿಸಿದ ಬೊಮ್ಮಾಯಿ

ಹಂಪಿಯಲ್ಲಿ ಹೆಲಿಪೋರ್ಟ್‌:

ರಾಜ್ಯದ(Karnataka) ವಾಯು ಮಾರ್ಗದ ಉತ್ತೇಜನಕ್ಕೆ ಮಡಿಕೇರಿ, ಹಂಪಿಯಲ್ಲಿ(Hampi) 30 ಕೋಟಿ ವೆಚ್ಚದಲ್ಲಿ ಹೆಲಿಪೋರ್ಟ್‌(Heliport) ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಇನ್ನೂ ಹಂಪಿ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ವಿಜಯಪುರ ಪ್ರವಾಸಿ ವಲಯವನ್ನು ಪಿಪಿಪಿ ಯೋಜನೆಯಡಿ ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ ಅವರು ಘೋಷಿಸಿದ್ದಾರೆ.

ರಸ್ತೆ ಸುರಕ್ಷತಾ ನಿಧಿಯಡಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣಕ್ಕೆ . 80 ಕೋಟಿ ಮೀಸಲಿರಿಸಲಾಗಿದ್ದು, ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲೂ ಪರೀಕ್ಷಾ ಪಥ ನಿರ್ಮಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ.

ಪ್ರತಿ ಜಿಲ್ಲೆಯಲ್ಲೂ ಮಹಿಳಾ ಸ್ವ-ಸಹಾಯ ಗುಂಪುಗಳ ಬಲವರ್ಧನೆಗೆ ಸರ್ಕಾರಿ ಕಚೇರಿಯಲ್ಲಿ ಕ್ಯಾಂಟೀನ್‌ ಮತ್ತು ಮಾರಾಟ ಮಳಿಗೆ ತೆರೆಯಲಾಗುವುದು ಎಂದು ಸಿಎಂ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಹಾಗಾಗಿ ವಿಜಯನಗರ ಜಿಲ್ಲೆಯ ಸ್ವ-ಸಹಾಯ ಗುಂಪುಗಳಿಗೆ ಅನುಕೂಲ ಆಗಲಿದೆ.

ಹಂಪಿ ಕನ್ನಡ ವಿವಿ ಬಲವರ್ಧನೆ:

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಜನ್ಮತಳೆದಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ(Hampi Kannada University) ಬಲವರ್ಧನೆಪಡಿಸುವ ಪ್ರಸ್ತಾಪವನ್ನು ಈ ಸಲದ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಕನ್ನಡ ವಿವಿಯ ಬಲವರ್ಧನೆಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಹೇಳಲಾಗಿದ್ದು, ಕನ್ನಡ ವಿವಿಗೆ ಅನುದಾನ ಹರಿದು ಬರಲಿದೆ.

ರಾಜ್ಯದ 400 ಪ್ರವಾಸಿ ಮಾರ್ಗದರ್ಶಿಗಳಿಗೆ ಮಾಸಿಕ 2000 ಮಾಸಾಶನವನ್ನು ಸರ್ಕಾರ ಘೋಷಿಸಿದೆ. ಇದರಿಂದ ಹಂಪಿ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ. 400 ಗೈಡ್‌ಗಳಲ್ಲಿ ಹಂಪಿಯಲ್ಲೇ 151 ಗೈಡ್‌ಗಳಿದ್ದಾರೆ. ಈ ಯೋಜನೆ ಸಿಂಹಪಾಲು ಹಂಪಿ ಗೈಡ್‌ಗಳಿಗೆ ದೊರೆಯಲಿದೆ.

ಚುನಾವಣೆ(Election) ಗಿಮಿಕ್‌ ಸಿದ್ದರಾಮಯ್ಯ ಸರ್ಕಾರದಲ್ಲಿ 5,800 ಕೋಟಿ ಡಿಪಿಆರ್‌ಗೆ ಇಟ್ಟಿದ್ದರು. ಈಗಿನ ಸಿಎಂ ಬರೀ . 1000 ಕೋಟಿ ಮೀಸಲಿಟ್ಟಿದ್ದಾರೆ. ಈ ಜಲಾಶಯ ನಿರ್ಮಾಣಕ್ಕೆ 18000 ಕೋಟಿ ರು. ಇಡಬೇಕಿತ್ತು. ಬರೀ ಸಾವಿರ ಕೋಟಿ ರು. ಏತಕ್ಕೆ ಸಾಲುತ್ತದೆ. ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಸಿಎಂಗಳ ಜತೆಗೆ ಚರ್ಚಿಸಿ ಸಮನಾಂತರ ಜಲಾಶಯ ನಿರ್ಮಾಣ ಮಾಡಲಿ. ಬಜೆಟ್‌ನಲ್ಲಿ ವಿಜಯನಗರ ಜಿಲ್ಲೆ ಕಡೆಗಣಿಸಿರುವುದು ಸರಿಯಲ್ಲ ಅಂತ ರಾಜ್ಯ ರೈತ ಸಂಘದ ಪ್ರ. ಕಾರ್ಯದರ್ಶಿ ಜೆ. ಕಾರ್ತಿಕ್‌ ತಿಳಿಸಿದ್ದಾರೆ. 

ವಿಜಯನಗರ ಜಿಲ್ಲೆಯನ್ನು ಬಜೆಟ್‌ನಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಜಿಲ್ಲಾ ಉದ್ಘಾಟನೆ ವೇಳೆ ನೀಡಿದ್ದ ಭರವಸೆ ಹುಸಿಯಾಗಿದೆ. ನೂತನ ವಿಜಯನಗರ ಜಿಲ್ಲೆ ಅಭಿವೃದ್ಧಿಗೆ . 5000 ಕೋಟಿ ಕೊಡಬೇಕಿತ್ತು. ಆದರೆ, ಸಿಎಂ ಬಜೆಟ್‌ನಲ್ಲಿ ಜಿಲ್ಲೆ ಕಟ್ಟಲು ನಯಾ ಪೈಸೆ ನೀಡಿಲ್ಲ. ಈಗಲೂ ಬಹುತೇಕ ಇಲಾಖೆಗಳು ಬಳ್ಳಾರಿಯಲ್ಲೇ ಇವೆ ಅಂತ ಹೊಸಪೇಟೆ ಕಾಂಗ್ರೆಸ್‌ ಮುಖಂಡ ಗುಜ್ಜಲ ನಾಗರಾಜ ಹೇಳಿದ್ದಾರೆ. 

Karnataka Budget 2022 ಬೊಮ್ಮಾಯಿ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳಿಗೆ ಸಿಕ್ಕಿದ್ದೇನು?

ಪ್ರವಾಸಿ ಗೈಡ್‌ಗಳಿಗೆ ಸರ್ಕಾರ . 2000 ಮಾಸಾಶನ ನೀಡಿರುವುದು ಖುಷಿ ವಿಷಯವಾಗಿದೆ. ಹಂಪಿಯ 151 ಗೈಡ್‌ಗಳಿಗೆ ಈ ಯೋಜನೆಯಿಂದ ಲಾಭವಾಗಲಿದೆ ಅಂತಾರೆ ಹಂಪಿ, ಪ್ರ. ಕಾರ್ಯದರ್ಶಿ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘ ವಿರುಪಾಕ್ಷಿ ವಿ. ತಿಳಿಸಿದ್ದಾರೆ. 

ವಿಜಯನಗರ ಜಿಲ್ಲೆಗೆ ನಿರೀಕ್ಷಿತ ಯೋಜನೆಗಳು ಹುಸಿಯಾಗಿವೆ. ಪ್ರವಾಸೋದ್ಯಮ ಇಲಾಖೆಯಡಿ ಹಂಪಿಗೆ ಹೆಚ್ಚಿನ ಅಭಿವೃದ್ಧಿ ಹಾಗೂ ಸ್ಮಾರಕಗಳ ದತ್ತು ಇವುಗಳನ್ನು ಹೊರತುಪಡಿಸಿ ಯಾವುದೇ ವಿಶೇಷ ಯೋಜನೆಗಳನ್ನು ಘೋಷಣೆ ಮಾಡಿಲ್ಲ ಅಂತ ವಿಜಯನಗರ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಅಶ್ವಿನ್‌ ಕೊತ್ತಂಬ್ರಿ ಹೇಳಿದ್ದಾರೆ. 

ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕಿತ್ತು. ಆದರೆ, ಸರ್ಕಾರ ಕಡೆಗಣಿಸಿರುವುದು ಸರಿಯಲ್ಲ. ಸರ್ಕಾರ ಪೂರಕ ಬಜೆಟ್‌ನಲ್ಲಾದರೂ ಅಲೆಮಾರಿ ಸಮುದಾಯಗಳಿಗೆ ಆದ್ಯತೆ ನೀಡಲಿ ಅಂತ ವಿಜಯನಗರ ಅಲೆಮಾರಿ ಸಮಾಜದ ಮುಖಂಡ ಸಣ್ಣಮಾರೆಪ್ಪ ತಿಳಿಸಿದ್ದಾರೆ. 
 

click me!