
ಜೇಬಿನಲ್ಲಿ ಅನೇಕ ಕಾರ್ಡ್ ಇರುತ್ತೆ. ಅದ್ರಲ್ಲಿ ಮುಖ್ಯವಾದ ಕಾರ್ಡ್ ಗಳಲ್ಲಿ ಪ್ಯಾನ್ ಕಾರ್ಡ್ (PAN card) ಒಂದು. ಇದು ಬರೀ ಪ್ಲಾಸ್ಟಿಕ್ ಕಾರ್ಡ್ ಅಲ್ವೇ ಅಲ್ಲ. ಇದು ನಿಮ್ಮ ಹಣಕಾಸಿನ ಗುರುತಿನ ಚೀಟಿ. ಇದನ್ನು ಪ್ರಾಥಮಿಕವಾಗಿ ಹಣಕಾಸಿನ ವ್ಯವಹಾರಕ್ಕೆ ಬಳಕೆ ಮಾಡ್ತೇವೆ. ಬ್ಯಾಂಕ್ ಕೆಲ್ಸಕ್ಕೆ ಪ್ಯಾನ್ ಕಾರ್ಡ್ ಅತ್ಯಗತ್ಯ. ಪ್ಯಾನ್ ಕಾರ್ಡ್ ನಲ್ಲಿ ಪರ್ಮನೆಂಟ್ ಅಕೌಂಟ್ ನಂಬರ್ ದಾಖಲಾಗಿರುತ್ತೆ. ಇದ್ರಲ್ಲಿ ಸಾಕಷ್ಟು ಮಾಹಿತಿ ಇರೋದ್ರಿಂದ ಆದಾಯ ಇಲಾಖೆಗೆ ಇದು ಸಾಕಷ್ಟು ಮಾಹಿತಿ ಒದಗಿಸುತ್ತದೆ. ಇದು 10 ಅಂಕಿಯ ಸಂಖ್ಯೆಯನ್ನು ಹೊಂದಿದೆ. ಇದ್ರಲ್ಲಿ ಕೆಲವು ಇಂಗ್ಲಿಷ್ ಅಕ್ಷರಗಳು ಮತ್ತು ಕೆಲವು ಸಂಖ್ಯೆ ಇರುತ್ತದೆ. ಪ್ಯಾನ್ ಅಗತ್ಯ ಎನ್ನುವ ಕಾರಣಕ್ಕೆ ಪ್ರತಿಯೊಬ್ಬರೂ ಇದನ್ನು ಪಡೆಯುತ್ತಾರೆ. ಆದ್ರೆ ಪ್ಯಾನ್ ಕಾರ್ಡ್ ನಲ್ಲಿರುವ ನಂಬರ್ ಹಾಗೂ ಅಕ್ಷರದ ಬಗ್ಗೆ ಯಾರೂ ಗಮನ ನೀಡೋದಿಲ್ಲ. ನಾವಿಂದು ಪ್ಯಾನ್ ಕಾರ್ಡ್ ನಲ್ಲಿರು 10 ಅಂಕೆಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಪ್ಯಾನ್ ಕಾರ್ಡ್ ಸಂಖ್ಯೆಯ ಮೊದಲ ಮೂರು ಅಂಕೆಗಳು AAA ನಿಂದ ZZZ ವರೆಗಿನ ಇಂಗ್ಲಿಷ್ ಅಕ್ಷರಗಳಾಗಿವೆ. ಈ ಮೂರು ಅಂಕೆಗಳಲ್ಲಿ ಯಾವುದು ನಿಮ್ಮ ಪ್ಯಾನ್ನಲ್ಲಿರುತ್ತದೆ ಎಂಬುದನ್ನು ಆದಾಯ ತೆರಿಗೆ ಇಲಾಖೆ ನಿರ್ಧರಿಸುತ್ತದೆ. ಪ್ಯಾನ್ನ ನಾಲ್ಕನೇ ಅಕ್ಷರ ಇಂಗ್ಲಿಷ್ನಲ್ಲಿರುತ್ತದೆ. ಇದು ತೆರಿಗೆದಾರರ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಅದು P, C, H, A, T ಅಕ್ಷರಗಳಲ್ಲಿ ಯಾವುದಾದರೂ ಆಗಿರಬಹುದು. ಪ್ಯಾನ್ ಕಾರ್ಡ್ ನಲ್ಲಿ ನಾಲ್ಕನೇ ಅಕ್ಷರ ಮುಖ್ಯವಾಗಿದೆ. ನಾಲ್ಕನೇ ಅಕ್ಷರವು ಕಾರ್ಡ್ ಹೊಂದಿರುವವರ ಗುರುತನ್ನು ಸೂಚಿಸುತ್ತದೆ. ಇದನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ :
P - ಒಬ್ಬ ವ್ಯಕ್ತಿಗೆ
C - ಕಂಪನಿಗೆ
H - ಹಿಂದೂ ಅವಿಭಜಿತ ಕುಟುಂಬಕ್ಕೆ
A - ವ್ಯಕ್ತಿಗಳ ಗುಂಪಿಗೆ
B - ವ್ಯಕ್ತಿಗಳ ಸಂಸ್ಥೆಗೆ (BOI)
G - ಸರ್ಕಾರಿ ಸಂಸ್ಥೆಗೆ
J - ಕೃತಕ ನ್ಯಾಯಾಂಗ ವ್ಯಕ್ತಿಗೆ
L - ಸ್ಥಳೀಯ ಸಂಸ್ಥೆಗಳಿಗೆ
F - ಸಂಸ್ಥೆ/ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (LLP)
T - ಟ್ರಸ್ಟ್ ಗೆ
ಡಿಜಿಟಲ್ ಗೋಲ್ಡ್, ಇ ಚಿನ್ನದ ಮೇಲೆ ಹೂಡಿಕೆ ಅಪಾಯ, ಹಗರಣ ಕುರಿತು ಸೆಬಿ ಎಚ್ಚರಿಕೆ
ಪ್ಯಾನ್ ಕಾರ್ಡ್ನ ಐದನೇ ಅಕ್ಷರವು ಇಂಗ್ಲಿಷ್ನಲ್ಲಿರುತ್ತದೆ. ಇದು ಕಾರ್ಡ್ ಹೊಂದಿರುವವರ ಉಪನಾಮ (ಜಾತಿ) ನಿರ್ಧರಿಸುತ್ತದೆ. ಇದರ ನಂತರ, ಪ್ಯಾನ್ ಕಾರ್ಡ್ನಲ್ಲಿ ನಾಲ್ಕು ಅಂಕೆಗಳನ್ನು (ಸಂಖ್ಯೆಗಳು) ಬರೆಯಲಾಗುತ್ತದೆ. ಈ ಸಂಖ್ಯೆಗಳು 0001 ರಿಂದ 9999 ರವರೆಗೆ ಯಾವುದಾದ್ರೂಇರಬಹುದು. ಪ್ಯಾನ್ ಕಾರ್ಡ್ನಲ್ಲಿರುವ ಈ ಸಂಖ್ಯೆಗಳು ಆದಾಯ ತೆರಿಗೆ ಇಲಾಖೆಯು ಬಳಸುತ್ತಿರುವ ಪ್ರಸ್ತುತ ಸರಣಿಯನ್ನು ಪ್ರತಿನಿಧಿಸುತ್ತವೆ. ಹತ್ತು-ಅಂಕಿಯ ಸಂಖ್ಯೆಯು ವರ್ಣಮಾಲೆಯ ಚೆಕ್ ಅಂಕಿಯೊಂದಿಗೆ ಕೊನೆಗೊಳ್ಳುತ್ತದೆ. ಅದು ಯಾವುದೇ ಅಕ್ಷರವಾಗಿರಬಹುದು.
ಚಿನ್ನ ಖರೀದಿಸುವ ಪ್ಲಾನ್ ಇದೆಯಾ? ಪಾನ್-ಆಧಾರ್ ಕಡ್ಡಾಯ; ಏನಿದು ನಿಯಮ?
ಎಲ್ಲೆಲ್ಲಿ ಪ್ಯಾನ್ ಕಾರ್ಡ್ ಅಗತ್ಯವಿದೆ? :
ಪ್ಯಾನ್ ಕಾರ್ಡ್ ಇಂದು "ಮಾಸ್ಟರ್ ಕೀ" ಆಗಿ ಮಾರ್ಪಟ್ಟಿದೆ. ಕೆಲವು ಕೆಲಸಗಳನ್ನು ಅದಿಲ್ಲದೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ, ಬ್ಯಾಂಕ್ ಅಕೌಂಟ್ ಓಪನ್ ಸೇರಿದಂತೆ 50,000 ಕ್ಕಿಂತ ಹೆಚ್ಚಿನ ಹಣಕಾಸಿನ ವ್ಯವಹಾರಕ್ಕೆ ನೀವು ಪ್ಯಾನ್ ಕಾರ್ಡ್ ಹೊಂದಿರಬೇಕು. ಡಿಮ್ಯಾಟ್ ಖಾತೆ ತೆರೆಯುವುದು ಕೂಡ ಅಸಾಧ್ಯ. ಆಸ್ತಿ ಖರೀದಿಸುವುದು ಅಥವಾ ಮಾರಾಟ ಮಾಡಲು, ಕಾರು ಖರೀದಿಸಲು ಇಲ್ಲವೆ ಮಾರಾಟ ಮಾಡಲು ನೀವು ಪ್ಯಾನ್ ಕಾರ್ಡ್ ನೀಡ್ಬೇಕಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.