Save Money: ಖರ್ಚು ಮಾಡೋದೆ ಆಯ್ತು, ಸೇವಿಂಗ್ ಮಾಡೋಕಾಗ್ತಿಲ್ಲ ಅನ್ನೋ ಚಿಂತೇನಾ ? ಇಷ್ಟು ಮಾಡಿ ಸಾಕು

Suvarna News   | Asianet News
Published : Feb 07, 2022, 06:36 PM ISTUpdated : Feb 07, 2022, 06:56 PM IST
Save Money: ಖರ್ಚು ಮಾಡೋದೆ ಆಯ್ತು, ಸೇವಿಂಗ್ ಮಾಡೋಕಾಗ್ತಿಲ್ಲ ಅನ್ನೋ ಚಿಂತೇನಾ ? ಇಷ್ಟು ಮಾಡಿ ಸಾಕು

ಸಾರಾಂಶ

ತಿಂಗಳು ಪೂರ್ತಿ ದುಡಿಯೋದು, ಖರ್ಚು ಮಾಡೋದು, ಮಂತ್ ಎಂಡ್‌ (Month End)ನಲ್ಲಿ ದುಡ್ಡಿಲ್ಲದೆ ಒದ್ದಾಡೋದು. ಥತ್ತೇರಿಕೆ ಫುಲ್ ಜೀವ್ನಾನೇ ಇದೇ ಆಯ್ತಪ್ಪಾ ಒಂದ್ ರೂಪಾಯಿ ಸೇವ್ (Save) ಮಾಡಿಲ್ಲ. ಇದು ಹಲವರ ಬಾಯಲ್ಲಿ ಕೇಳಿ ಬರೋ ಮಾತು. ನಿಮ್ ಲೈಫ್‌ನಲ್ಲೂ ಇದೇ ಪ್ರಾಬ್ಲೆಮ್. ಡೋಂಟ್ ವರಿ ದುಡ್ಡು (Money) ಉಳಿಸೋಕೆ ಏನ್ ಮಾಡ್ಬೇಕು ನಾವ್ ಹೇಳ್ತೀವಿ.

ಜೀವನದಲ್ಲಿ ಭವಿಷ್ಯಕ್ಕಾಗಿ ಹಣ (Money)ವನ್ನು ಉಳಿಸುವುದು, ಕೂಡಿಡುವುದು ಮುಖ್ಯವಾಗಿದೆ. ಆದರೆ ದಿನನಿತ್ಯದ ಖರ್ಚು, ಕಮಿಟ್‌ಮೆಂಟ್ ಹೀಗೆ ಹಲವು ಕಾರಣಗಳಿಂದ ಹಲವರಿಗೆ ಇದು ಸಾಧ್ಯವಾಗುವುದಿಲ್ಲ. ಹಾಗಿದ್ದರೆ ಹಣವನ್ನು ಉಳಿಸಲು ಈಗಲೇ ಯಾಕೆ ಪ್ರಾರಂಭಿಸಬಾರದು. ಬಜೆಟ್‌ (Budget)ನಲ್ಲಿ ಜೀವನ ನಡೆಸುತ್ತಾ, ಹಣವನ್ನು ಉಳಿಸುವುದು ಹೇಗೆ ? ಇಲ್ಲಿದೆ ಕೆಲವೊಂದು ಸಲಹೆಗಳು.

ಒಟಿಟಿ ಸಬ್ ಸ್ಕ್ರಿಪ್ಶನ್ ಶೇರ್ ಮಾಡಿ
ಮೊಬೈಲ್, ಟಿವಿಗೆ ರೀಚಾರ್ಜ್ (Recharge) ಮಾಡದೆ ಜೀವನವೇ ಮುಂದೆ ಹೋಗುವುದಿಲ್ಲ. ಟಿವಿ ರೀಜಾರ್ಜ್ ಮುಗಿದರೆ ಟಿವಿಯಲ್ಲಿ ನ್ಯೂಸ್ ನೋಡಲಾಗದು, ಮಹಿಳೆಯರು ಸೀರಿಯಲ್ ನೋಡಲಾಗುವುದಿಲ್ಲ. ಇನ್ನು ಇವಾಗಿನ ಜನರೇಷನ್ ಅಂತೂ ರೀಜಾರ್ಜ್ ಮುಗಿದರೆ ಒಂದು ಕ್ಷಣ ಜೀವವೇ ಹೋದಂತೆ ವರ್ತಿಸುತ್ತಾರೆ. ಎರಡೆರಡು ಮೊಬೈಲ್‌ಗೆ ರೀಜಾರ್ಜ್ ಮಾಡಿ ಸೋಷಿಯಲ್ ಮೀಡಿಯಾ ಜಾಲಾಡಿದ್ದು ಸಾಲ್ದು ಅಂತ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೂ ರೀಚಾರ್ಜ್ ಮಾಡಿಸುತ್ತಾರೆ. ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್‌ಗಳಿಗೆ ತಿಂಗಳಿಗೆ, ವರ್ಷಕ್ಕೆ ಇಂತಿಷ್ಟು ಪೇ ಮಾಡಿ ಸಬ್ ಸ್ಕ್ರಿಪ್ಶನ್ (Subscription) ಪಡೆದುಕೊಳ್ಳುತ್ತಾರೆ. 

Women Retirement Plan: ಪುರುಷರಿಗಿಂತ ಹೆಚ್ಚು ಉಳಿಸೋದು ಹೆಣ್ಮಕ್ಕಳು!

ಆದರೆ ಹೀಗೆ ಚಂದಾದಾರರಾಗಿದ್ದವರು ಅದನ್ನು ನೋಡುವುದು ಕಡಿಮೆ. ಹೀಗಾಗಿಯೇ ಹಲವಾರು ಸಂದರ್ಭಗಳಲ್ಲಿ ಈ ದುಡ್ಡು ವೇಸ್ಟ್ ಆಗಿಬಿಡುತ್ತದೆ. ಹೀಗಾಗಿ ಈ ರೀತಿಯ ಸಬ್ ಸ್ಕ್ರಿಪ್ಶನ್ ಮಾಡಿಕೊಳ್ಳುವಾಗ ಯೋಚಿಸಿ. ಕಡಿಮೆ ದರದ ಪ್ಯಾಕ್ ಹಾಕಿಕೊಳ್ಳಿ. ಅಥವಾ ಫ್ರೆಂಡ್ಸ್ ಜತೆ ಸಬ್ ಸ್ಕ್ರಿಪ್ಶನ್ ಶೇರಿಂಗ್ ಮಾಡುವುದು ಸಹ ಹಣವನ್ನು ಉಳಿತಾಯ ಮಾಡುವ ಮಾರ್ಗವಾಗಿದೆ.

ಮನೆಯಲ್ಲೇ ಅಡುಗೆ ಮಾಡಿ
ಬಿಝಿ ಲೈಫ್‌ಸ್ಟೈಲ್‌ನಲ್ಲಿ ಹೊರಗಿನಿಂದ ಫುಡ್ (Food) ಆರ್ಡರ್ ಮಾಡಿ ತಿನ್ನುವುದು ಹಲವರಿಗೆ ಅಭ್ಯಾಸವಾಗಿಬಿಟ್ಟಿದೆ. ಈಗಂತೂ ಫುಡ್ ಡೆಲಿವರಿ ಕಂಪೆನಿಗಳಾದ ಸ್ವಿಗ್ಗಿ, ಜೊಮೇಟೋ ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಆಹಾರವನ್ನು ಮನೆ ಮುಂದೆ ತಂದು ನೀಡುವ ಕಾರಣ ಹಲವರು ಮನೆಯಲ್ಲಿ ಅಡುಗೆ ಮಾಡುವ ಗೋಜಿಗೇ ಹೋಗುವುದಿಲ್ಲ. ಆದರೆ ನಿಮಗೆ ಗೊತ್ತಾ, ನೀವು ಆರ್ಡರ್ ಮಾಡಿ ಒಂದು ಹೊತ್ತು ಫುಡ್ ತಿನ್ನುವ ಆ ಬಿಲ್‌ನ ಮೊತ್ತದಲ್ಲಿ ನೀವು ಇಡೀ ದಿನ ಆಹಾರ ತಯಾರಿಸಲು ಬೇಕಾಗುವಷ್ಟು ದಿನಸಿ ಖರೀದಿಸಬಹುದು. ಹೀಗಾಗಿ ಆಹಾರಕ್ಕಾಗಿ ವ್ಯಯಿಸುವ ಈ ಫುಡ್ ಕಂಪ್ಲೀಂಟ್ ವೇಸ್ಟ್. ಸಾಲದ್ದಕ್ಕೆ ಸೋಡಾ, ಹೆಚ್ಚಿನ ಎಣ್ಣೆ ಸೇರಿಸಿದ ಹೊರಗಿನ ಆಹಾರ ಸೇವಿಸುವುದು ಆರೋಗ್ಯಕ್ಕೂ ಹಾಳು.

Multiple Bank Accounts: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇವೆಯಾ? ಈಗಲೇ ಎಚ್ಚೆತ್ತುಕೊಳ್ಳಿ

ಹೀಗಾಗಿ ಹೊರಗಿನಿಂದ ಆಹಾರವನ್ನು ಆರ್ಡರ್ ಮಾಡುವ ಬದಲು ಅಡುಗೆ ಮನೆಯಲ್ಲಿಯೇ ರುಚಿಕರವಾದ ಆಹಾರ ಸಿದ್ಧಪಡಿಸಿ. ಯಾಕೆಂದರೆ ದಿನಕ್ಕೆ ಒಂದು ಹೊತ್ತಿನ ಫುಡ್ ಆರ್ಡರ್ ಮಾಡೋದಲ್ವಾ ಪರ್ವಾಗಿಲ್ಲ ಎಂದು ವ್ಯಯಿಸುವ ಮೊತ್ತ ತಿಂಗಳಾಂತ್ಯಕ್ಕೆ ದೊಡ್ಡ ಲಿಸ್ಟ್ ಆಗಿರುತ್ತದೆ. ವೃಥಾ ಇಷ್ಟೊಂದು ದುಡ್ಡು ವ್ಯಯಿಸಿಬಿಟ್ಟೆ ಎಂದು ಅಂದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಮನೆಯಲ್ಲೇ ಅಡುಗೆ ಮಾಡಿ. ಆರೋಗ್ಯ (Health)ವಾಗಿರಿ ಮತ್ತು ದುಡ್ಡನ್ನು ಸಹ ಉಳಿಸಿ.

ಬೇಕಾಬಿಟ್ಟಿ ಶಾಪಿಂಗ್ ಮಾಡಬೇಡಿ
ಶಾಪಿಂಗ್ (Shopping) ವಿಷಯಕ್ಕೆ ಬಂದಾಗ ಹೆಚ್ಚಿನವರು ಬೇಕಾಬಿಟ್ಟಿ ಖರ್ಚು ಮಾಡುತ್ತಾರೆ. ದುಡಿದ ಅರ್ಧಕರ್ಧ ದುಡ್ಡು ಬಟ್ಟೆ, ಚಪ್ಪಲಿ, ಮೇಕಪ್ ಗೆಂದೇ ವ್ಯಯಿಸಿ ಬಿಡುತ್ತಾರೆ. ಅದರಲ್ಲೂ ಈಗಂತೂ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ಹಬ್ಬಹರಿದಿನ ಎಂದು ದಿನಕ್ಕೊಂದು ಡಿಸ್ಕೌಂಟ್ ಹಾಕುವ ಕಾರಣ ಶಾಪಿಂಗ್ ಮಾಡ್ತಾ ಜೇಬು ಖಾಲಿಯಾಗಿದ್ದೇ ಗೊತ್ತಾಗುವುದಿಲ್ಲ. ಡಿಸ್ಕೌಂಟ್ (Discount) ಹೆಸರಿನಲ್ಲಿ ದುಡ್ಡಂತೂ ಫುಲ್ ಖಾಲಿಯಾಗಿ ಬಿಟ್ಟಿರುತ್ತದೆ. ಹೀಗಾಗಿ ಶಾಪಿಂಗ್ ಮಾಡುವಾಗ ಯಾವಾಗಲೂ ಹುಷಾರಾಗಿರಿ. ಅರ್ಥವಾಗದ ಡಿಸ್ಕೌಂಟ್‌ಗಳನ್ನು ನೋಡಿ ಮಾರು ಹೋಗದಿರಿ.

ಶಾಪಿಂಗ್ ಮಾಡುವಾಗ ಡಿಸ್ಕೌಂಟ್, ಆಫರ್ ಎಲ್ಲವನ್ನೂ ಬಿಟ್ಟು ಸದ್ಯಕ್ಕೆ ಇದು ನಿಮಗೆ ಬೇಕಾಗಿದೆಯೇ ಎಂಬುದನ್ನು ಮರುಪರಿಶೀಲಿಸಿ. ಕಡಿಮೆ ಬೆಲೆಯಿದೆ, ಇನ್ನೊಂದು ಸಾರಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಖರೀದಿಸಲು ಹೋಗಬೇಡಿ. ನಿಮಗೆ ಸದ್ಯ ಅದರ ಅಗತ್ಯತೆಯಿದ್ದರೆ ಮಾತ್ರ ಖರೀರಿಸಿ.

ಕ್ರೆಡಿಟ್ ಕಾರ್ಡ್ ಬಳಸುವುದನ್ನು ಬಿಟ್ಟು ಬಿಡಿ
ಅನಾವಶ್ಯಕ ಖರ್ಚಾಗಲು ಮುಖ್ಯ ಕಾರಣ ಕ್ರೆಡಿಟ್ ಕಾರ್ಡ್ (Credit Card) ಬಳಕೆ. ಹೀಗಾಗಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಬಳಸುವುದನ್ನು ಕಡಿಮೆ ಮಾಡಿ. ಇದು ಅನಗತ್ಯ ಖರೀದಿಯನ್ನು ಹೆಚ್ಚಿಸುತ್ತದೆ. ಕ್ರೆಡಿಟ್ ಕಾರ್ಡ್ ಇದ್ದಾಗ ಕೈಯಲ್ಲಿ ದುಡ್ಡಿಲ್ಲ ಎಂಬ ಸಮಸ್ಯೆಯಿಲ್ಲ. ಆಮೇಲೆ ಇನ್‌ಸ್ಟಾಲ್‌ಮೆಂಟ್ ಕಟ್ಟಿದರಾಯಿತು ಎಂದುಕೊಂಡು ಖರೀದಿಸುತ್ತಾ ಕೂತಾಗ ಬಿಲ್ ಹೆಚ್ಚುತ್ತಾ ಹೋಗುತ್ತದೆ. ಬಿಲ್ ಕಟ್ಟುವಾಗಲಷ್ಟೇ ಇಷ್ಟೊಂದು ಖರ್ಚು ಬೇಡವಾಗಿತ್ತು ಅನಿಸೋದು. ಇಂಥಹಾ ಅನಾವಶ್ಯಕ ಖರ್ಚುಗಳಿಂದ ದೂರವಿರಿ.

ಅಗ್ಗದ ಪರ್ಯಾಯಗಳನ್ನು ನೋಡಿ
ಜೀವನವು ಬಜೆಟ್ ಮೇಲೆ ಅವಲಂಬಿತವಾಗಿರುವಾಗ ಕೆಲವು ಖರ್ಚುಗಳನ್ನು ಕಡಿತಗೊಳಿಸುವುದು ಮುಖ್ಯವಾಗಿದೆ. ಹೀಗಾಗಿ ಎಲ್ಲವೂ ಬ್ರ್ಯಾಡೆಂಡ್ ಆಗಬೇಕೆಂಬ ಗೀಳಿನಿಂದ ಹೊರಬನ್ನಿ. ಅಗ್ಗದ ಪರ್ಯಾಯಗಳನ್ನು ಹುಡುಕಿ ಬಳಸಿ. ಈ ಮೇಲಿನ ಟ್ರಿಕ್ಸ್ ಫಾಲೋ ಮಾಡಿದ್ರೆ ನೀವು ಖರ್ಚು ಕಡಿಮೆ ಮಾಡಿ ಒಂದಷ್ಟು ಸೇವಿಂಗ್ಸ್ ಮಾಡೋಕೆ ಸಾಧ್ಯವಾಗೋದು ಖಂಡಿತ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?