ಇಶಾ, ಅನಂತ್‌, ಆಕಾಶ್‌ ಅಂಬಾನಿ ಮಾತ್ರವಲ್ಲ ಈ ಯಶಸ್ವೀ ಉದ್ಯಮಿ ಕೂಡಾ ಅಂಬಾನಿ ಕುಟುಂಬದ ಕುಡಿ!

By Vinutha Perla  |  First Published Oct 26, 2023, 2:24 PM IST

ಅಂಬಾನಿ ಕುಟುಂಬದ ಇಶಾ ಅಂಬಾನಿ, ಆಕಾಶ್ ಅಂಬಾನಿ, ಅನಂತ್ ಅಂಬಾನಿಯ ಲಕ್ಸುರಿಯರಸ್ ಲೈಫ್‌ಸ್ಟೈಲ್ ಸಹ ಆಗಾಗ ಸುದ್ದಿಯಾಗುತ್ತದೆ. ಇವರಿಷ್ಟೇ ಅಲ್ಲದೆ ಅಂಬಾನಿ ಫ್ಯಾಮಿಲಿಯ ಹೆಚ್ಚು ಪ್ರಸಿದ್ಧಿಯಲ್ಲದ ಈ ವ್ಯಕ್ತಿಯ ಬಗ್ಗೆಯೂ ತಿಳಿದುಕೊಳ್ಳಿ.


ಅಂಬಾನಿ ಕುಟುಂಬ ಎಂದಾಕ್ಷಣ ಎಲ್ಲರಿಗೂ ತಕ್ಷಣಕ್ಕೆ ನೆನಪಿಗೆ ಬರುವ ಹೆಸರು ರಿಲಯನ್ಸ್‌ಗೆ ಅಡಿಪಾಯ ಹಾಕಿದ ಧೀರೂಭಾಯಿ ಅಂಬಾನಿ. ಜೊತೆಗೆ ಜಗತ್ತಿನ ಅತೀ ಶ್ರೀಮಂತರಲ್ಲಿ ಒಬ್ಬರಾದ ಮುಕೇಶ್ ಅಂಬಾನಿ. ತಮ್ಮ ಐಷಾರಾಮಿ ಬಂಗಲೆ, ಕಾರುಗಳು, ಪಾರ್ಟಿ, ಜೀವನಶೈಲಿಯಿಂದಲೇ ಆಗಾಗ ಸುದ್ದಿಯಲ್ಲಿರುತ್ತಾರೆ. ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಸಹ ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ, ಅನಂತ್ ಅಂಬಾನಿಯ ಲಕ್ಸುರಿಯರಸ್ ಲೈಫ್‌ಸ್ಟೈಲ್ ಸಹ ಆಗಾಗ ಸುದ್ದಿಯಾಗುತ್ತದೆ. ಇವರಿಷ್ಟೇ ಅಲ್ಲದೆ ಅಂಬಾನಿ ಫ್ಯಾಮಿಲಿಯ ಹೆಚ್ಚು ಪ್ರಸಿದ್ಧಿಯಲ್ಲದ ಈ ವ್ಯಕ್ತಿಯ ಬಗ್ಗೆಯೂ ತಿಳಿದುಕೊಳ್ಳಿ.

ಇಶಾ ಅಂಬಾನಿ, ಆಕಾಶ್ ಅಂಬಾನಿ, ಅನಂತ್ ಅಂಬಾನಿಯ ಸಹೋದರ ವಿಕ್ರಮ್ ಸಲ್ಗಾಂವ್ಕರ್. ದೀಪ್ತಿ ಸಲ್ಗಾಂವ್ಕರ್ ಮತ್ತು ನೀನಾ ಕೊಠಾರಿ ಮುಖೇಶ್ ಮತ್ತು ಅನಿಲ್ ಅಂಬಾನಿ ಅವರ ಸಹೋದರಿಯರು ಎಂದು ಕೆಲವೇ ಜನರಿಗೆ ತಿಳಿದಿದೆ. ದೀಪ್ತಿ ಮತ್ತು ದತ್ತರಾಜ್ ಸಲಗಾಂವ್ಕರ್ ಅವರ ಪುತ್ರ ವಿಕ್ರಮ್ ಸಲಗಾಂವ್ಕರ್ ಧೀರೂಭಾಯಿ ಅಂಬಾನಿ ಮೊಮ್ಮಗ. ಆದರೆ, ವಿಕ್ರಮ್ ಸಲಗಾಂವ್ಕರ್, ಅಂಬಾನಿ ಕುಟುಂಬ ಕುಡಿ ಎಂಬುದು ಬಹುತೇಕರಿಗೆ ತಿಳಿದಿಲ್ಲ.

Tap to resize

Latest Videos

ರಿಲಯನ್ಸ್ ಇಂಡಸ್ಟ್ರೀಸ್‌ ಮೀಟಿಂಗ್‌ ಹಾಜರಾಗಲು ನೀತಾ ಅಂಬಾನಿ ಪಡೆಯೋ ಸ್ಯಾಲರಿ ಎಷ್ಟು ಗೊತ್ತಾ?

ಅಂಬಾನಿ ಕುಟುಂಬದ ಕುಡಿ ವಿಕ್ರಮ್‌ ಸಲಗಾಂವ್ಕರ್
ಇಶಾ, ಅನಂತ್ ಮತ್ತು ಆಕಾಶ್ ಅಂಬಾನಿಯವರ ಹಿರಿಯ ಸೋದರ ಸಂಬಂಧಿ ವಿಕ್ರಮ್ ಕೂಡ ಧೀರೂಭಾಯಿ ಅಂಬಾನಿಯವರ ಮೊಮ್ಮಗ. ಅವರು ಇಷೆಟಾ ಸಲಗಾಂವ್ಕರ್ ಅವರ ಸಹೋದರ. ವಿ.ಎಂ. ಸಲಗಾಂವ್ಕರ್ ಗ್ರೂಪ್ ಆಫ್ ಕಂಪನೀಸ್ ಅವರ ತಂದೆಯ ಒಡೆತನದಲ್ಲಿದೆ. ಕಬ್ಬಿಣದ ಅದಿರು, ಕಲ್ಲಿದ್ದಲು ಮತ್ತು ಗಾಳಿ ಶಕ್ತಿಯು ಕಂಪನಿಯ ಪ್ರಾಥಮಿಕ ಉತ್ಪನ್ನವಾಗಿದೆ.

ವಿಕ್ರಮ್‌ ಸಲಗಾಂವ್ಕರ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಿಂದ ಬಿಬಿಎ ಮಾಡಿದರು. ವಿಕ್ರಮ್ 2007 ರಲ್ಲಿ ಮೆಕಿನ್ಸೆ ಮತ್ತು ಕಂಪನಿಯೊಂದಿಗೆ ಸಹವರ್ತಿಯಾಗಿ ತನ್ನ ವೃತ್ತಿಜೀವನವನ್ನು (Professional life) ಪ್ರಾರಂಭಿಸಿದರು. ನಂತರ ರಿಲಯನ್ಸ್ ಎಂಟರ್ಟೈನ್ಮೆಂಟ್‌ನಲ್ಲಿ ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕರಾಗಿ ಸೇರಿದರು. ಪ್ರಸ್ತುತ ವಿ.ಎನ್ ಸಲಗೋಕರ್ ಹೊಟೇಲ್ ಮತ್ತು ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ. ವಿಕ್ರಮ್‌ ಸಲಗಾಂವ್ಕರ್ ತುಂಬಾ ರಿಸರ್ವ್ಡ್ ವ್ಯಕ್ತಿ ಮತ್ತು ಜನಮನದಿಂದ ದೂರ ಉಳಿಯುತ್ತಾರೆ. ವಾಸ್ತವವಾಗಿ, ಅವರ ಇಡೀ ಕುಟುಂಬ (Family) ಸಾಮಾಜಿಕವಾಗಿ ಹೆಚ್ಚು ಸಕ್ರಿಯವಾಗಿಲ್ಲ. ಅವರು ಅಂಬಾನಿ ಕುಟುಂಬದ ಯಾವುದೇ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದು ಕಡಿಮೆ.

ಅಂಬಾನಿ, ಅದಾನಿ ಸಂಪತ್ತು ವರ್ಷದಿಂದ ವರ್ಷ ಹೆಚ್ಚಳ; ಬಿಲಿಯನೇರ್ ಉದ್ಯಮಿಗಳ ರಾಶಿ ಯಾವುದು?

ದೀಪ್ತಿ ಅವರ ಪತಿ ದತ್ತರಾಜ್ ಸಲಗಾಂವ್ಕರ್ ಅವರು ಗೋವಾದ ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡುವ ಉದ್ದೇಶದಿಂದ ಸುನಪರಂತವನ್ನು ಸ್ಥಾಪಿಸಿದರು. ದೀಪ್ತಿ ಅವರು ಸಂಸ್ಥೆಯ ಉಪಾಧ್ಯಕ್ಷರು ಮತ್ತು ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ.

click me!