
ಲಂಡನ್(ಜೂ.09): ಭಾರತೀಯ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚಿಸಿ ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ, ಭಾರತ-ಆಸ್ಟ್ರೆಲೀಯಾ ನಡುವಿನ ವಿಶ್ವಕಪ್ ಪಂದ್ಯ ವಿಕ್ಷೀಸಲು ಓವಲ್ ಮೈದಾನಕ್ಕೆ ಬಂದಿದ್ದಾರೆ.
ಓವಲ್ ಮೈದಾನಕ್ಕೆ ಆಗಮಿಸಿದ ವಿಜಯ್ ಮಲ್ಯ ಅವರನ್ನು ಮಾಧ್ಯಮದ ಪ್ರತಿನಿಧಿಗಳು ಸುತ್ತುವರೆದಾಗ, ತಾವು ಕೇವಲ ಪಂದ್ಯ ವೀಕ್ಷಣೆಗೆ ಬಂದಿರುವುದಾಗಿ ತಿಳಿಸಿದ್ದಾರೆ.
ಬಹುಕೋಟಿ ರೂ. ವಂಚನೆ ಪ್ರಕರಣದಲ್ಲಿ ಭಾರತದಲ್ಲಿ ಮಲ್ಯ ವಿರುದ್ಧ ಹಲವು ಪ್ರಕರಣಗಳ ದಾಖಲಾಗಿದ್ದು, ಈಗಾಗಲೇ ಬ್ರಿಟನ್ ಕೋರ್ಟ್ ಮಲ್ಯ ಗಡಿಪಾರು ಮಾಡುವ ಸಂಬಂಧ ಪ್ರಕರಣದ ವಿಚಾರಣೆ ನಡೆಸುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.